ನಿಮ್ಮ ಊರಲ್ಲೂ ನೀವೇ ಶುರು ಮಾಡಿ ಜಿಯೋ ಪೆಟ್ರೋಲ್ ಬಂಕ್; ಲಕ್ಷ ಲಕ್ಷ ಹಣ ಗಳಿಸಿ!
Petrol Bunk Business : ತಮ್ಮದೇ ಆಗಿರುವ ಸ್ವ ಉದ್ಯೋಗ (Own business) ಮಾಡಬೇಕು ಎನ್ನುವ ಕನಸು ಹಲವರಲ್ಲಿ ಇರುತ್ತದೆ, ಆದರೆ ಒಂದು ಉದ್ಯಮ ಆರಂಭಿಸಬೇಕು ಅಂದ್ರೆ ಅದಕ್ಕೆ ಬಂಡವಾಳವು ಕೂಡ ಅಷ್ಟೇ ಮುಖ್ಯ. ಅದಕ್ಕಾಗಿ ಕೆಲವರು ಬ್ಯುಸಿನೆಸ್ ಲೋನ್ (Business Loan) ಕೂಡ ಪಡೆಯಲು ಮುಂದಾಗುತ್ತಾರೆ.
ಆದರೆ ಮನಸ್ಸಿದ್ದರೆ ಮಾರ್ಗ ಎನ್ನುವಂತೆ ನೀವು ಪ್ರಯತ್ನಪಟ್ಟು ಒಂದು ಹೆಜ್ಜೆ ಮುಂದೆ ಹೋದರೆ ಎಂತಹ ಉದ್ಯಮವೆ ಆಗಿದ್ದರು ಕೂಡ ಸಕ್ಸಸ್ (success) ಕಾಣಬಹುದಾಗಿದೆ. ಹೀಗೆ ನೀವು ಸುಲಭವಾಗಿ ಲಕ್ಷಾಂತರ ಹಣ ಗಳಿಸಬಹುದಾದ ಒಂದು ಉದ್ಯಮ ಅಂದರೆ ಪೆಟ್ರೋಲ್ ಪಂಪ್ (petrol bunk) ಸ್ಥಾಪನೆ ಮಾಡುವುದು.
ಇತ್ತೀಚಿನ ದಿನಗಳಲ್ಲಿ ವಾಹನ ಖರೀದಿ ಮತ್ತು ಮಾರಾಟ ಹೆಚ್ಚಾಗುತ್ತಿದೆ, ಅದಕ್ಕೆ ತಕ್ಕ ಹಾಗೆ ಪೆಟ್ರೋಲ್, ಡೀಸೆಲ್, ಗ್ಯಾಸ್ (Petrol, Diesel, Gas) ಮೊದಲಾದವುಗಳನ್ನು ಸಪ್ಲೈ ಮಾಡುವ ಬಂಕ್ ಗಳು ಕೂಡ ಅಷ್ಟೇ ಮುಖ್ಯ.
ಸ್ವಲ್ಪ ಜಾಗ ಇದ್ರೆ ಸಾಕು! ಈ ಕಪ್ಪು ಮೇಕೆ ಸಾಕಿದ್ರೆ ಗಳಿಸಬಹುದು ಲಕ್ಷ ಲಕ್ಷ ಹಣ; ಇದರ ಹಾಲಿಗೆ ಭಾರೀ ಡಿಮ್ಯಾಂಡ್
ಪೆಟ್ರೋಲ್ ಪಂಪ್ ಉದ್ಯಮ – Petrol Bunk Business
ಇಂಡಿಯನ್ ಆಯಿಲ್ (IOCL), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಮೊದಲಾದ ಆಯಿಲ್ ಕಂಪನಿಗಳು ಡೀಲರ್ ಶಿಪ್ ಕೊಡುತ್ತವೆ, ಅದರ ಜೊತೆಗೆ ಈಗ ರಿಲಯನ್ಸ್ ಕಂಪನೀ (Reliance jio) ಕೂಡ Jio BP Petrol Pump Dealership ಅನ್ನು ನೀಡುತ್ತಿದೆ.
ಜಿಯೋ ಪೆಟ್ರೋಲ್ ಬಂಕ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
ರಿಲಯನ್ಸ್ ಜಿಯೋ ಈಗ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾಲಿಟ್ಟಿದ್ದು ಎಲ್ಲ ಕ್ಷೇತ್ರದಲ್ಲಿಯೂ ಸಕ್ಸಸ್ ಕಾಣುತ್ತಿದೆ, ಈ ಹಿನ್ನೆಲೆಯಲ್ಲಿ ಜನರಿಂದ ಕೆಲಸ ಪಡೆದುಕೊಂಡು ಅವರಿಗೆ ಅದರ ಲಾಭ ಸಿಗುವಂತೆ ಮಾಡುವ ಪೆಟ್ರೋಲ್ ಪಂಪ್ ಡೀಲರ್ಶಿಪ್ ಕೂಡ ನೀಡುತ್ತಿದೆ
ಇದಕ್ಕೆ ಅರ್ಜಿ ಸಲ್ಲಿಸಲು ಬಯಸುವವರು https://partners.jiobp.in/ ಈ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ನೀಡಬೇಕು, ಹೆಸರು ವಿಳಾಸ, ಆಧಾರ್ ಕಾರ್ಡ್ ಸಂಖ್ಯೆ (Aadhaar card), ಮೊಬೈಲ್ ಸಂಖ್ಯೆ ಮೊದಲಾದ ಮಾಹಿತಿಗಳನ್ನು ಭರ್ತಿ ಮಾಡಬೇಕು.
ದೇಶದ ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ ಸಿಗುವ ಯೋಜನೆ; ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ
ಡೀಲರ್ ಶಿಪ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು;
ಈ ಡೀಲರ್ಶಿಪ್ ಪಡೆದುಕೊಳ್ಳಲು 800 ಚದರ್ ಮೀಟರ್ ವಿಸ್ತೀರ್ಣದ ಜಾಗ ಬೇಕು 3 ಪಂಪ್ ಮ್ಯಾನೇಜರ್ ಹಾಗೂ ಶೌಚಾಲಯ ಇರಬೇಕಾಗಿರುವುದು ಕಡ್ಡಾಯ. ಅರ್ಜಿ ಸಲ್ಲಿಸಬೇಕಾದರೆ 70 ಸಾವಿರ ರೂಪಾಯಿಗಳನ್ನು ಡೆಪಾಸಿಟ್ (deposit) ಮಾಡಬೇಕು.
ಪೆಟ್ರೋಲ್ ಪಂಪ್ ಡೀಲರ್ ಶಿಪ್ ಮಾಡಲು ಯಾವುದೇ ಏಜೆಂಟ್ ನಿರ್ಮಿಸಿಕೊಳ್ಳುವುದಿಲ್ಲ ಎಂದು ಜಿಯೋ ತಿಳಿಸಿದೆ. ಹಾಗಾಗಿ ನೀವು ನೇರವಾಗಿ ಜಿಯೋದಿಂದಲೇ ಪೆಟ್ರೋಲ್ ಪಂಪ್ ಉದ್ಯಮ ಆರಂಭಿಸಲು ಪಡೆದುಕೊಳ್ಳಬಹುದಾಗಿದೆ.
ಲಾಭ ಎಷ್ಟು?
ಪೆಟ್ರೋಲ್ ಪಂಪ್ ಸ್ಥಾಪನೆ ಮಾಡಿದರೆ ನೀವು ಹೆಚ್ಚಿನ ಲಾಭ ಗಳಿಸಲು ಅವಕಾಶವಿದೆ, ಒಂದು ಲೀಟರ್ ಪೆಟ್ರೋಲ್ ಮೇಲೆ ಎರಡರಿಂದ ಐದು ರೂಪಾಯಿಗಳ ವರೆಗೆ ಕಮಿಷನ್ ಪಡೆದುಕೊಳ್ಳಬಹುದು, ಹಾಗಾಗಿ ಈ ಪೆಟ್ರೋಲ್ ಪಂಪ್ ಉದ್ಯಮ ಆರಂಭಿಸಿದರೆ ಲಕ್ಷಾಂತರ ಹಣ ಗಳಿಸಬಹುದಾಗಿದೆ.
Start a Jio petrol Bunk Business in your town, Know how to get Dealership