India NewsBusiness News

ದೇಶದ ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ ಸಿಗುವ ಯೋಜನೆ; ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರ (Central government) ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಅದರಲ್ಲೂ ರೈತರಿಗೆ (farmers) ಹಾಗೂ ಹಿರಿಯ ನಾಗರಿಕರಿಗೆ (senior citizen) ಕೂಡ ಆರ್ಥಿಕವಾಗಿ (financial stability) ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗಬಾರದು ಎನ್ನುವ ಕಾರಣಕ್ಕೆ ಹಲವು ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳ ಅಡಿಯಲ್ಲಿ ರೈತರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಸ್ವಂತ ಮನೆ ಇಲ್ಲದವರಿಗೆ ಮನೆ; ಫಲಾನುಭವಿಗಳ ಹೊಸ ಪಟ್ಟಿ ಬಿಡುಗಡೆ! ನೀವು ಅರ್ಜಿ ಹಾಕಿಲ್ವಾ

Loan

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 15ನೇ ಕಂತು ಬಿಡುಗಡೆ:

ದೇಶದ ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಯೋಜನೆ (pradhanmantri Kisan Yojana) ಯನ್ನು ಜಾರಿಗೆ ತರಲಾಗಿತ್ತು, ಈ ಮೂಲಕ ಪ್ರತಿ ಫಲಾನುಭವಿ ರೈತರ ಖಾತೆಗೆ (Bank Account) ಮೂರು ತಿಂಗಳಿಗೆ 2000 ಜಮಾ ಮಾಡಲಾಗುತ್ತದೆ

ಈಗಾಗಲೆ 14 ಕಂತು ಜಮಾ ಆಗಿದ್ದು 15ನೇ ಕಂತಿನ ಹಣವನ್ನು ರೈತರು ನಿರೀಕ್ಷೆ ಮಾಡುತ್ತಿದ್ದಾರೆ. ಈ ನಡುವೆ ರೈತರಿಗೆ ಇನ್ನೊಂದು ಯೋಜನೆಯನ್ನು ಸರ್ಕಾರ ಪರಿಚಯಿಸಿದ್ದು ರೈತರು ಕೂಡ ತಮ್ಮ ವೃದ್ಧಾಪ್ಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆಯನ್ನು ಅನುಭವಿಸದೆ ಸುಲಭವಾಗಿ ಪಿಂಚಣಿ ಪಡೆದುಕೊಳ್ಳುವ ಯೋಜನೆ (Pension Scheme) ಇದಾಗಿದೆ.

ಗೃಹಿಣಿಯರು ಪ್ರತಿ ತಿಂಗಳು 20 ಸಾವಿರ ಗಳಿಸುವ ಅವಕಾಶ! ಕೇಂದ್ರ ಸರ್ಕಾರದ ಬಂಪರ್ ಯೋಜನೆ

ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ:(pradhanmantri man dhan Yojana)

Pension Schemeಯೋಜನೆಯ ಅಡಿಯಲ್ಲಿ 18 ವರ್ಷದಿಂದ 40 ವರ್ಷ ರೈತರು ಅರ್ಜಿ ಸಲ್ಲಿಸಬಹುದು. ಆರ್ಥಿಕವಾಗಿ ರೈತರನ್ನು ಸದೃಢರನ್ನಾಗಿ ಮಾಡುವ ಯೋಜನೆ ಇದಾಗಿದೆ, ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಂಡಿರಬೇಕು.

ಮನ್ ಧನ್ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡುವುದು ಹೇಗೆ?

ಯಾವ ವಯಸ್ಸಿನಲ್ಲಿ ಈ ಯೋಜನೆಯನ್ನು ಆಯ್ದುಕೊಳ್ಳುತ್ತಿರೋ ಆ ವಯಸ್ಸಿಗೆ ತಕ್ಕ ಹಾಗೆ ಹೂಡಿಕೆ ಮಾಡಬೇಕಾಗುತ್ತದೆ, ಉದಾಹರಣೆಗೆ 18 ವರ್ಷ ವಯಸ್ಸಿನಲ್ಲಿ ನೀವು ಹೂಡಿಕೆ ಮಾಡುವುದಾದರೆ 55 ರೂಪಾಯಿಗಳನ್ನು ಹೂಡಿಕೆ ಮಾಡಬೇಕು.

ಇದೆ ರೀತಿ 30 ವರ್ಷಗಳ ವಯಸ್ಸಿನಲ್ಲಿ ಹೂಡಿಕೆ ಮಾಡಿದರೆ 110 ರೂಪಾಯಿಗಳನ್ನು ಹಾಗೂ 40 ವರ್ಷಗಳಲ್ಲಿ ಹೂಡಿಕೆ ಮಾಡಿದರೆ 220ಗಳನ್ನು ತಿಂಗಳ ಹೂಡಿಕೆ ಮಾಡಬೇಕು. ಈ ರೀತಿ ಹೂಡಿಕೆ ಮಾಡುತ್ತಾ ಬಂದರೆ ನಿಮ್ಮ ವಯಸ್ಸು 60 ದಾಟುತ್ತಿದ್ದಂತೆ ಪ್ರತಿ ತಿಂಗಳು 3000 ಪಿಂಚಣಿ (pension) ಪಡೆದುಕೊಳ್ಳಬಹುದು.

ನಿಮ್ಮ ಮಗಳ ಮದುವೆ ವಯಸ್ಸಿಗೆ 25 ಲಕ್ಷ ಸಿಗುವ ಈ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

ಪ್ರತಿ ತಿಂಗಳು ಪಡೆಯಿರಿ 3000 ಪಿಂಚಣಿ:

ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭದಾಯಕವಾಗಿರುತ್ತದೆ, ಯಾಕೆಂದರೆ ಅರವತ್ತು ವರ್ಷ ದಾಟಿದ ನಂತರ ಪ್ರತಿ ತಿಂಗಳು 3000ಗಳನ್ನು ಪಡೆಯಬಹುದು. ಅಂದರೆ ವಾರ್ಷಿಕವಾಗಿ (yearly) 36,000 ನಿಮಗೆ ಸಿಗುತ್ತವೆ.

ಇಷ್ಟು ಹಣವನ್ನು ಪಡೆದುಕೊಳ್ಳಲು ನೀವು ವಾರ್ಷಿಕವಾಗಿ ಕನಿಷ್ಠ 660 ಹಾಗೂ ಗರಿಷ್ಟ 24,00 ರೂಪಾಯಿಗಳನ್ನು ಅಷ್ಟೇ ಹೂಡಿಕೆ ಮಾಡಬೇಕು. ಪ್ರತಿ ವರ್ಷ ನಿಮ್ಮ ಖಾತೆಯಿಂದ (Bank Account) ಇಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ

ನಂತರ 60 ವರ್ಷದ ಬಳಿಕ ಪ್ರತಿ ತಿಂಗಳು 3 ಸಾವಿರ ರೂಪಾಯಿಗಳನ್ನು ಕಿಸಾನ್ ಖಾತೆಗೆ ಜಮಾ ಮಾಡಲಾಗುತ್ತದೆ. ಹಾಗಾದ್ರೆ ಇನ್ಯಾಕೆ ತಡ ಪ್ರಧಾನ ಮಂತ್ರಿ ಮನ್ ಧನ್ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿ ಭವಿಷ್ಯದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆಯೂ ಬಾರದಂತೆ ನೋಡಿಕೊಳ್ಳಿ.

3000 pension Scheme every month to the farmers

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories