Business News

ಕೆನರಾ ಬ್ಯಾಂಕ್​​ನಲ್ಲಿ ಬಂಪರ್ ಉದ್ಯೋಗಾವಕಾಶ, ಬ್ಯಾಂಕಿಂಗ್ ವಲಯದ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

Canara Bank Recruitment : ಒಂದು ವೇಳೆ ನೀವು ಕೆಲಸಕ್ಕಾಗಿ ಹುಡುಕುತ್ತಿದ್ದು, ಬ್ಯಾಂಕಿಂಗ್ ವಲಯದಲ್ಲಿ (Banking Sector) ಕೆಲಸ ಮಾಡಲು ಬಯಸಿದರೆ, ನಿಮಗಾಗಿ ಒಂದು ಉತ್ತಮವಾದ ಕೆಲಸದ ಖಾಲಿ ಇದ್ದು, ಈ ಕೆಲಸಕ್ಕೆ ನೀವು ಅರ್ಜಿ ಸಲ್ಲಿಸಬಹುದು. ಕೆಲಸ ಖಾಲಿ ಇರುವುದು ಕೆನರಾ ಬ್ಯಾಂಕ್ ನಲ್ಲಿ.

ಈ ಕೆಲಸಕ್ಕೆ ಅರ್ಜಿ ಸಲ್ಲಿಸುವುದಕ್ಕೇ ಇಂದೇ ಕೊನೆಯ ದಿನಾಂಕ. ಜುಲೈ 28 ಕೊನೆಯ ದಿನಾಂಕ ಆಗಿದ್ದು, ಆಸಕ್ತಿ ಇರುವವರು ಇಂದು ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ನಲ್ಲಿ (Bank Job) ಕೆಲಸ ಸಿಕ್ಕರೆ ಜೀವನ ಸೆಟ್ಲ್ ಆದ ಹಾಗೆ, ಒಳ್ಳೆಯ ಆದಾಯದ ಜೊತೆಗೆ ಕೆಲಸ ಕೂಡ ಸೆಕ್ಯೂರ್ ಆಗಿರುತ್ತದೆ.

Canara Bank Recruitment, interested in banking sector apply today

ಕೆನರಾ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆ ಯಾವುದು ಎಂದರೆ, 1 ಮುಖ್ಯ ಅರ್ಥಶಾಸ್ತ್ರಜ್ಞ (Chief Economist) ಹುದ್ದೆ ಖಾಲಿ ಇದೆ, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಿರುವ ಅರ್ಹತೆಗಳು ಏನೇನು ಎಂದು ಸಂಪೂರ್ಣವಾಗಿ ತಿಳಿಸುತ್ತೇವೆ ನೋಡಿ…

ಆಸಕ್ತಿ ಮತ್ತು ಅರ್ಹತೆ ಇದ್ದರೆ ನೀವು ಈ ಕೆಲಸಕ್ಕೆ ಅಪ್ಲೈ ಮಾಡಿ..

ಆಗಸ್ಟ್ ತಿಂಗಳಿನಲ್ಲಿ 14 ದಿನಗಳ ಕಾಲ ಬ್ಯಾಂಕ್ ರಜೆ, ಎಲ್ಲಾ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿಕೊಳ್ಳಿ!

ವಿದ್ಯಾರ್ಹತೆ:

ಈ ಹುದ್ದೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಯು, ಸರ್ಕಾರದ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಲ್ಲಿ ಎಕನಾಮಿಕ್ಸ್/ಎಕನಾಮೆಟ್ರಿಕ್ಸ್ ವಿಷಯದಲ್ಲಿ ಮಾಸ್ಟರ್ಸ್ ಮಾಡಿರಬೇಕು. ಅಥವಾ ಪಿ.ಹೆಚ್.ಡಿ ಮಾಡಿಕೊಂಡಿರಬೇಕು. ಇದು ಕಡ್ಡಾಯವಾಗಿ ಇರಲೇಬೇಕಾದ ವಿದ್ಯಾರ್ಹತೆ ಆಗಿದೆ..

ವಯಸ್ಸಿನ ಮಿತಿ:

ಈ ಹುದ್ದೆಯ ಬಗ್ಗೆ ಕೆನರಾ ಬ್ಯಾಂಕ್ ವತಿಯಿಂದ ಇಂದ ಬಿಡುಗಡೆ ಆಗಿರುವ ಅಧಿಸೂಚನೆ ನೋಡಿದರೆ, ಅರ್ಜಿ ಸಲ್ಲಿಸುವ ಅಭರ್ಥಿಯ ವಯಸ್ಸು 55 ವರ್ಷಗಳ ಒಳಗಿರಬೇಕು ಎಂದು ತಿಳಿಸಲಾಗಿದೆ. ಆದರೆ ಜಾತಿಯ ಮೀಸಲಾತಿಯ ಅನುಸಾರ ವಯೋಮಿತಿ ಸಡಿಲಿಕೆ ಇರಲಿದೆ.

ಅರ್ಜಿ ಶುಲ್ಕ:

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಬೇಕಾಗುವುದಿಲ್ಲ.

ತಿಂಗಳ ಸಂಬಳ:

ಇನ್ನು ಈ ಕೆಲಸಕ್ಕೆ ಸಂಬಳ ಎಷ್ಟು ಎಂದು ಫಿಕ್ಸ್ ಆಗಿಲ್ಲ. ಕೆಲಸಕ್ಕೆ ಆಯ್ಕೆಯಾಗುವ ವ್ಯಕ್ತಿಯ ಅರ್ಹತೆ, ಅನುಭವ ಮತ್ತು ಅವರ ಪರ್ಫಾರ್ಮೆನ್ಸ್ ಮೇಲೆ ಸಂಬಳವನ್ನು ನಿಗದಿ ಮಾಡಲಾಗುತ್ತದೆ.

ಟ್ರಾಕ್ಟರ್ ಚಿತ್ರ ಇರೋ ಈ 5 ರೂಪಾಯಿ ಹಳೆಯ ನೋಟು ನಿಮ್ಮತ್ರ ಇದ್ರೆ ಸಾಕು, 2 ಲಕ್ಷ ನಿಮ್ಮದಾಗಿಸಿಕೊಳ್ಳಿ!

Canara Bank Jobಕೆಲಸದ ಸ್ಥಳ:

ಬೆಂಗಳೂರು (Bengaluru)

ಆಯ್ಕೆ ಪ್ರಕ್ರಿಯೆ:

*ಸ್ಕ್ರೀನಿಂಗ್
*ಶಾರ್ಟ್ ಲಿಸ್ಟಿಂಗ್
*ಇಂಟರಾಕ್ಷನ್
*ಇಂಟರ್ವ್ಯೂ

ಪೆಟ್ರೋಲ್ ಬಂಕ್ ಶುರು ಮಾಡೋಕೆ ಎಷ್ಟು ಹಣ ಬೇಕಾಗುತ್ತೆ? 1 ಲೀಟರ್ ಪೆಟ್ರೋಲ್‌ಗೆ ಎಷ್ಟು ಲಾಭ ಗೊತ್ತಾ?

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಈ ಹುದ್ದೆಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಆಸಕ್ತಿ ಇರುವ ಅಭ್ಯರ್ಥಿಗಳು, https://canarabank.com/pages/Recruitment-Project-2-2024

ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜುಲೈ 28 ಆಗಿರುತ್ತದೆ.

Canara Bank Recruitment, interested in banking sector apply today

Our Whatsapp Channel is Live Now 👇

Whatsapp Channel

Related Stories