ಪೆಟ್ರೋಲ್ ಬಂಕ್ ಶುರು ಮಾಡೋಕೆ ಎಷ್ಟು ಹಣ ಬೇಕಾಗುತ್ತೆ? 1 ಲೀಟರ್ ಪೆಟ್ರೋಲ್‌ಗೆ ಎಷ್ಟು ಲಾಭ ಗೊತ್ತಾ?

ಪೆಟ್ರೋಲ್ ಪಂಪ್ ತೆರೆಯಲು ಎಷ್ಟು ಹಣ ಬೇಕಾಗುತ್ತದೆ? ಲೈಸೆನ್ಸ್ ಸಿಗೋದು ಎಲ್ಲಿಂದ? 1 ಲೀಟರ್ ಪೆಟ್ರೋಲ್ ಗೆ ಎಷ್ಟು ಲಾಭ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್

Bengaluru, Karnataka, India
Edited By: Satish Raj Goravigere

ಈಗ ಹೆಚ್ಚಿನ ಜನರಿಗೆ ತಮ್ಮದೇ ಆದ ಸ್ವಂತ ಬ್ಯುಸಿನೆಸ್ ಶುರು (Own Business) ಮಾಡಬೇಕು ಎಂದು ಆಸೆ ಇರುತ್ತದೆ. ಅಂಥವರು ಉತ್ತಮವಾದ ಆದಾಯ ತರುವಂಥ ಬ್ಯುಸಿನೆಸ್ ಶುರು ಮಾಡಿ, ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋದರೆ, ನೀವು ಯಶಸ್ಸು ಮತ್ತು ಲಾಭ ಎರಡನ್ನು ಗಳಿಸುವುದಕ್ಕೆ ಸಾಧ್ಯವಾಗುತ್ತದೆ.

ಹೀಗೆ ಉತ್ತಮವಾದ ಬ್ಯುಸಿನೆಸ್ ಮಾಡುವುದಕ್ಕೆ ಪೆಟ್ರೋಲ್ ಪಂಪ್ ಶುರು (Petrol Bunk Business) ಮಾಡುವುದು ಒಳ್ಳೆಯ ಐಡಿಯಾ ಆಗಿದ್ದು, ಇದರಿಂದ ಹೆಚ್ಚಿನ ಲಾಭ ಗಳಿಸಬಹುದು. ಈ ಬ್ಯುಸಿನೆಸ್ ಶುರು ಮಾಡುವುದು ಹೇಗೆ ಎಂದು ತಿಳಿಯೋಣ..

How much money is needed to start a petrol Bunk station business

ಪೋಸ್ಟ್ ಆಫೀಸ್‌ ಯೋಜನೆಯಲ್ಲಿ ಫಿಕ್ಸೆಡ್ ಹಣಕ್ಕೆ ಸಿಗುತ್ತೆ ಡಬಲ್‌ ಬಡ್ಡಿ! 1 ಲಕ್ಷ ಇಟ್ರೆ ಎಷ್ಟು ಸಿಗುತ್ತೆ ಗೊತ್ತಾ?

ನೀವು ಪೆಟ್ರೋಲ್ ಪಂಪ್ ತೆರೆಯಲು ಆಸಕ್ತಿ ಹೊಂದಿದ್ದರೆ, ಇಂಡಿಯನ್ ಆಯಿಲ್ ಇಂದ ಪೆಟ್ರೋಲ್ ಪಂಪ್ ತೆರೆಯುವುದಕ್ಕೆ ಡೀಲರ್ಶಿಪ್ (Petrol Bunk Dealership) ಪಡೆಯಬಹುದು. ಇದು ಅತಿದೊಡ್ಡ ಕಂಪನಿ ಆಗಿದ್ದು, ಇಲ್ಲಿಂದ ನೀವು ಪೆಟ್ರೋಲ್ ಪಂಪ್ ಶುರು ಮಾಡಬಹುದು.

ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ (Petrol and Diesel) ಬಳಕೆ ಮಾಡುವವರ ಸಂಖ್ಯೆ ಜಾಸ್ತಿ ಆಗುತ್ತಿದೆ ಹೊರತು, ಕಡಿಮೆ ಆಗುವ ಹಾಗೆ ಕಾಣುತ್ತಿಲ್ಲ. ಹಾಗಾಗಿ ನೀವು ಈ ಬ್ಯುಸಿನೆಸ್ ಶುರು ಮಾಡಿದರೆ, ಉತ್ತಮವಾಗಿ ಬ್ಯುಸಿನೆಸ್ ಮಾಡಿಕೊಂಡು ಹೋಗುವುದು ನಿಮಗೆ ಗೊತ್ತಿದ್ದರೆ, ಈ ಬ್ಯುಸಿನೆಸ್ ನಲ್ಲಿ ಒಳ್ಳೆಯ ಲಾಭ ಗಳಿಸಬಹುದು.

ಪೆಟ್ರೋಲ್ ಪಂಪ್ ಶುರು ಮಾಡುವುದಕ್ಕೆ ಎಷ್ಟು ಹಣ ಬೇಕು?

ಒಂದು ವೇಳೆ ನೀವು ಇಂಡಿಯನ್ ಆಯಿಲ್ ಇಂದ ಡೀಲರ್ಶಿಪ್ ಪಡೆದು, ಪೆಟ್ರೋಲ್ ಪಂಪ್ ಶುರು ಮಾಡಬೇಕು ಎಂದುಕೊಂಡರೆ, ಹಳ್ಳಿಯಲ್ಲಿ ಪೆಟ್ರೋಲ್ ಪಂಪ್ ಶುರು ಮಾಡಿದರೆ, 10 ರಿಂದ 15 ಲಕ್ಷ ರೂಪಾಯಿ ಬೇಕಾಗುತ್ತದೆ.

ಹಾಗೆಯೇ ಸಿಟಿಯಲ್ಲಿ ಪೆಟ್ರೋಲ್ ಪಂಪ್ ಶುರು ಮಾಡುತ್ತೀರಿ ಎಂದರೆ 20 ರಿಂದ 25 ಲಕ್ಷ ರೂಪಾಯಿ ಬೇಕಾಗುತ್ತದೆ. ಇಷ್ಟು ಹೂಡಿಕೆಯಲ್ಲಿ ಪೆಟ್ರೋಲ್ ಪಂಪ್ ಶುರು ಮಾಡಬಹುದು.

ಪ್ಯಾನ್ ಕಾರ್ಡ್ ಇಲ್ಲದೆ ನೀವು ಎಷ್ಟು ಚಿನ್ನ ಖರೀದಿ ಮಾಡಬಹುದು ಗೊತ್ತಾ? ಅದಕ್ಕೂ ಇದೆ ರೂಲ್ಸ್

Petrol bunk dealershipಇಂಡಿಯನ್ ಆಯಿಲ್ ನಲ್ಲಿ ಪೆಟ್ರೋಲ್ ಪಂಪ್ ಡೀಲರ್ಶಿಪ್ ಪಡೆಯಲು ನೀವು ಆನ್ಲೈನ್ ಮೂಲಕ (Apply in Online) ಅರ್ಜಿ ಸಲ್ಲಿಸಬಹುದು. ಅಥವಾ ಆಫ್ಲೈನ್ ಮೂಲಕ ಇಂಡಿಯನ್ ಆಯಿಲ್ ಆಫೀಸ್ ಗೆ ಭೇಟಿ ನೀಡಿ, ಅಪ್ಲಿಕೇಶನ್ ಅನ್ನು ಕೇಳಿಪಡೆದು, ಅರ್ಜಿ ಸಲ್ಲಿಸಬಹುದು.

ಇನ್ನು ಈ ಡೀಲರ್ಶಿಪ್ ಪಡೆಯಲು ಬೇಕಾಗುವ ಅರ್ಹತೆಗಳು ಏನೇನು ಎಂದು ನೋಡುವುದಾದರೆ, 21 ರಿಂದ 60 ವರ್ಷಗಳ ಒಳಗಿರುವವರು ಡೀಲರ್ಶಿಪ್ ಪಡೆಯುವುದಕ್ಕೆ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸುವ ವ್ಯಕ್ತಿ ಕನಿಷ್ಠ 10ನೇ ತರಗತಿ ಪಾಸ್ ಮಾಡಿರಬೇಕು.

ಬ್ಯಾಂಕ್ ಅಕೌಂಟ್‌ನಲ್ಲಿ ಹಣವಿಟ್ಟು, 10 ವರ್ಷ ಆದ್ರೂ ಬಳಕೆ ಮಾಡದೇ ಇದ್ರೆ ಏನಾಗುತ್ತೆ? ಹೊಸ ರೂಲ್ಸ್

https://iocl.com/download/Brochure-24112018-Eng.pdf ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಸಂಪೂರ್ಣ ಮಾಹಿತಿ ಪಡೆಯಬಹುದು. ನಿಮ್ಮ ಹತ್ತಿರ ಜಾಗ ಮತ್ತು ಅದಕ್ಕೆ ಸಂಬಂಧಿಸಿದ ಹಾಗೆ ಎಲ್ಲಾ ಮಾಹಿತಿ ಇದ್ದರೆ, ಎರಡನೇ ಬಾರಿ ಯೋಚಿಸದೇ ಇಂಡಿಯನ್ ಆಯಿಲ್ (Indian Oil) ಇಂದ ಅರ್ಜಿ ಸಲ್ಲಿಸಬಹುದು.

ಡೀಲರ್ಶಿಪ್ ಪಡೆಯುವವರಿಗೆ 1 ಲೀಟರ್ ಪೆಟ್ರೋಲ್ ಗೆ 2 ರಿಂದ 5 ರೂಪಾಯಿ ಕಮಿಷನ್ ಸಿಗುತ್ತದೆ. ಇಷ್ಟು ಉತ್ತಮವಾಗಿ ಲಾಭ ಸಿಗಲಿದ್ದು, ಒಳ್ಳೆಯ ಆದಾಯ ಗಳಿಸುವುದಕ್ಕೆ ಈ ಪೆಟ್ರೋಲ್ ಪಂಪ್ ಬ್ಯುಸಿನೆಸ್ (Petrol Station Business) ಶುರು ಮಾಡಬಹುದು.

How much money is needed to start a petrol Bunk station business