ಪೋಸ್ಟ್ ಆಫೀಸ್ ಯೋಜನೆಯಲ್ಲಿ ಫಿಕ್ಸೆಡ್ ಹಣಕ್ಕೆ ಸಿಗುತ್ತೆ ಡಬಲ್ ಬಡ್ಡಿ! 1 ಲಕ್ಷ ಇಟ್ರೆ ಎಷ್ಟು ಸಿಗುತ್ತೆ ಗೊತ್ತಾ?
ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದಕ್ಕೆ ಅನೇಕ ಉತ್ತಮವಾದ ಯೋಜನೆಗಳಿವೆ, ಅವುಗಳಲ್ಲಿ ಹೂಡಿಕೆ ಮಾಡಿ ಒಳ್ಳೆಯ ಲಾಭ ಪಡೆಯಬಹುದು. ಇದಕ್ಕೆ ಒಂದು ಒಳ್ಳೆಯ ಆಯ್ಕೆ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ಆಗಿದೆ. ಇದೊಂದು Fixed Deposit ಸ್ಕೀಮ್ ಆಗಿದ್ದು, ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ 1 ಲಕ್ಷ ಹೂಡಿಕೆ ಮಾಡಿದರೆ, ನಿಮ್ಮ ಹಣ ಡಬಲ್ ಆಗುತ್ತದೆ.
ಈ ಯೋಜನೆಯಲ್ಲಿ (Post Office Scheme) ಬರುವ ಬಡ್ಡಿಯನ್ನು ತ್ರೈಮಾಸಿಕ ಅವಧಿಗೆ ಲೆಕ್ಕ ಹಾಕಿ, ವಾರ್ಷಿಕವಾಗಿ ಬಡ್ಡಿಯನ್ನು ಅಕೌಂಟ್ ಗೆ ವರ್ಗಾವಣೆ ಮಾಡಲಾಗುತ್ತದೆ.
ಪ್ಯಾನ್ ಕಾರ್ಡ್ ಇಲ್ಲದೆ ನೀವು ಎಷ್ಟು ಚಿನ್ನ ಖರೀದಿ ಮಾಡಬಹುದು ಗೊತ್ತಾ? ಅದಕ್ಕೂ ಇದೆ ರೂಲ್ಸ್
ಹೆಚ್ಚುವರಿ ಮೆಚ್ಯುರಿಟಿ ಆಯ್ಕೆ ಸೌಲಭ್ಯ:
ಪೋಸ್ಟ್ ಆಫೀಸ್ ನ ಈ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ (Time Deposit Scheme) ಹೂಡಿಕೆ ಮಾಡಿದರೆ, 4 ವಿವಿಧ ಮೆಚ್ಯುರಿಟಿ ಆಯ್ಕೆಗಳು ಲಭ್ಯವಿದೆ. 1 ವರ್ಷದಿಂದ 5 ವರ್ಷದವರೆಗಿನ ಮೆಚ್ಯುರಿಟಿ ಆಯ್ಕೆ ಇದಾಗಿದೆ.
ಇಲ್ಲಿ ನಿಮಗೆ ವಾರ್ಷಿಕ ಆದಾಯ 6.9% ಇಂದ 7.5% ವರೆಗು ಬಡ್ಡಿದರ ಸಿಗಲಿದ್ದು, ತ್ರೈಮಾಸಿಕ ಆದಾಯ ಇದಾಗಿದೆ. ಈ ಒಂದು ಯೋಜನೆಯಲ್ಲಿ ನೀವು 1 ಸಾವಿರ ಇಂದ 1 ಲಕ್ಷದವರೆಗೂ ಹೂಡಿಕೆ ಮಾಡಬಹುದು. ₹1100 ರೂಪಾಯಿ, ₹9,900 ರೂಪಾಯಿಗಳನ್ನು ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಬಹುದು.
ಎಷ್ಟು ವರ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತದೆ?
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ಎಷ್ಟು ವರ್ಷಕ್ಕೆ ಹಣ ಹೂಡಿಕೆ ಮಾಡಿದರೆ, ಎಷ್ಟು ಬಡ್ಡಿ ಸಿಗುತ್ತದೆ ಎಂದು ನೋಡುವುದಾದರೆ, 1 ವರ್ಷದ ಟೈಮ್ ಡೆಪಾಸಿಟ್ ಹೂಡಿಕೆಗೆ 6.9% ಬಡ್ಡಿ ಸಿಗುತ್ತದೆ, 2 ವರ್ಷಕ್ಕೆ 7.0% ಬಡ್ಡಿ ಸಿಗುತ್ತದೆ, 3 ವರ್ಷಕ್ಕೆ 7.1% ಬಡ್ಡಿ ಸಿಗುತ್ತದೆ, 5 ವರ್ಷಕ್ಕೆ 7.5% ಬಡ್ಡಿ ಸಿಗುತ್ತದೆ.
ಬಡ್ಡಿ ಇಷ್ಟು ಸಿಗಲಿದ್ದು, 1 ಲಕ್ಷವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ಸ್ ಬರುತ್ತದೆ ಎಂದು ತಿಳಿಯೋಣ. 1 ಲಕ್ಷ ರೂಪಾಯಿಯನ್ನು 1 ವರ್ಷಕ್ಕೆ ಹೂಡಿಕೆ ಮಾಡಿದರೆ, ₹7,081 ರೂಪಾಯಿ ಬಡ್ಡಿ ಸಿಗುತ್ತದೆ. ₹1,07,081 ರೂಪಾಯಿ ರಿಟರ್ನ್ಸ್ ಬರುತ್ತದೆ.
ಎಟಿಎಂ ಇಲ್ಲದೆ ಇದ್ರೂ ಪರವಾಗಿಲ್ಲ, ಆಧಾರ್ ಕಾರ್ಡ್‌ನಿಂದಲೇ ಫೋನ್ ಪೇ ಆಕ್ಟಿವೇಟ್ ಮಾಡಿಕೊಳ್ಳಿ!
2 ವರ್ಷಕ್ಕೆ 1 ಲಕ್ಷ ಹೂಡಿಕೆ ಮಾಡಿದರೆ, ₹14,888 ರೂಪಾಯಿ ಬಡ್ಡಿ ಸಿಗಲಿದ್ದು, ₹1,14,888 ರೂಪಾಯಿ ರಿಟರ್ನ್ಸ್ ಬರುತ್ತದೆ. 3 ವರ್ಷಕ್ಕೆ 1 ಲಕ್ಷ ಹೂಡಿಕೆ ಮಾಡಿದರೆ, ₹23,507 ರೂಪಾಯಿ ಬಡ್ಡಿ ಸಿಗಲಿದ್ದು, ₹1,23,507 ರೂಪಾಯಿ ರಿಟರ್ನ್ಸ್ ಬರುತ್ತದೆ.
5 ವರ್ಷಕ್ಕೆ 1 ಲಕ್ಷ ಹೂಡಿಕೆ ಮಾಡಿದರೆ, ₹44,995 ರೂಪಾಯಿ ಬಡ್ಡಿ ಸಿಗುತ್ತದೆ, ₹1,44,995 ರೂಪಾಯಿ ರಿಟರ್ನ್ಸ್ ಬರುತ್ತದೆ. 1 ಲಕ್ಷ ಹೂಡಿಕೆ ಮಾಡಿದರೆ, ಇಷ್ಟು ಲಾಭ ಪಡೆಯುತ್ತೀರಿ. ಇದೇ ಯೋಜನೆಯಲ್ಲಿ ₹20,000 ಹೂಡಿಕೆ ಮಾಡಿದರೆ ನಿಮಗೆ ಎಷ್ಟು ಲಾಭ ಸಿಗುತ್ತದೆ ಎಂದು ತಿಳಿಯೋಣ..
ಬ್ಯಾಂಕ್ ಅಕೌಂಟ್‌ನಲ್ಲಿ ಹಣವಿಟ್ಟು, 10 ವರ್ಷ ಆದ್ರೂ ಬಳಕೆ ಮಾಡದೇ ಇದ್ರೆ ಏನಾಗುತ್ತೆ? ಹೊಸ ರೂಲ್ಸ್
1 ವರ್ಷಕ್ಕೆ 20,000 ಹೂಡಿಕೆ ಮಾಡಿದರೆ, ₹1,416 ರೂಪಾಯಿ ಬಡ್ಡಿ ಸಿಗುತ್ತದೆ. ₹21,416 ರೂಪಾಯಿ ರಿಟರ್ನ್ಸ್ ಬರುತ್ತದೆ. 2 ವರ್ಷಕ್ಕೆ 20 ಸಾವಿರ ಹೂಡಿಕೆ ಮಾಡಿದರೆ, ₹2,978 ರೂಪಾಯಿ ಬಡ್ಡಿ ಸಿಗುತ್ತದೆ. ₹22,978 ರೂಪಾಯಿ ರಿಟರ್ನ್ಸ್ ಬರುತ್ತದೆ.
3 ವರ್ಷಕ್ಕೆ 20 ಸಾವಿರ ಹೂಡಿಕೆ ಮಾಡಿದರೆ, ₹4,701 ರೂಪಾಯಿ ಬಡ್ಡಿ ಬರುತ್ತದೆ. ₹24,701 ರೂಪಾಯಿ ರಿಟರ್ನ್ಸ್ ಪಡೆಯುತ್ತೀರಿ. 5 ವರ್ಷಕ್ಕೆ 20 ಸಾವಿರ ಹೂಡಿಕೆ ಮಾಡಿದರೆ, ₹8,999 ರೂಪಾಯಿ ಬಡ್ಡಿ ಸಿಗಲಿದ್ದು, ₹28,999 ರೂಪಾಯಿ ರಿಟರ್ನ್ಸ್ ಪಡೆಯುತ್ತೀರಿ.
Fixed Deposit money in post office Scheme will get double interest
Our Whatsapp Channel is Live Now 👇