ಬ್ಯಾಂಕ್ ಅಕೌಂಟ್‌ನಲ್ಲಿ ಹಣವಿಟ್ಟು, 10 ವರ್ಷ ಆದ್ರೂ ಬಳಕೆ ಮಾಡದೇ ಇದ್ರೆ ಏನಾಗುತ್ತೆ? ಹೊಸ ರೂಲ್ಸ್
ಸಾಮಾನ್ಯವಾಗಿ ನಮ್ಮೆಲ್ಲರ ಬಳಿ ಕೂಡ ಬ್ಯಾಂಕ್ ಅಕೌಂಟ್ (Bank Account) ಇದ್ದೇ ಇರುತ್ತದೆ. ಸೇವಿಂಗ್ಸ್ ಅಕೌಂಟ್, ಕರೆಂಟ್ ಅಕೌಂಟ್, ಸ್ಯಾಲರಿ ಅಕೌಂಟ್ ಹೀಗೆ ವಿವಿಧ ಕಾರಣಗಳಿಗೆ ನಾವು ಬ್ಯಾಂಕ್ ನಲ್ಲಿ ಅಕೌಂಟ್ ಓಪನ್ ಮಾಡುತ್ತೇವೆ. ಆದರೆ ಕಾರಣಾಂತರಗಳಿಂದ ಕೆಲವೊಮ್ಮೆ ಬ್ಯಾಂಕ್ ಅಕೌಂಟ್ ನಿರ್ವಹಿಸಲು ಸಾಧ್ಯ ಆಗಿರುವುದಿಲ್ಲ.
ಅಂಥ ಸಮಯದಲ್ಲಿ ಒಂದು ವೇಳೆ ನೀವು ಬ್ಯಾಂಕ್ ಅಕೌಂಟ್ ನಲ್ಲಿ ಇಟ್ಟಿರುವ ಹಣವನ್ನು 10 ವರ್ಷವಾದರೂ ಬಳಸದೇ ಹೋದರೆ ಆ ಹಣ ಏನಾಗುತ್ತದೆ ಗೊತ್ತಾ?
ನೀವು ಬ್ಯಾಂಕ್ ಅಕೌಂಟ್ ಮಾಡಿ, ಸೇವಿಂಗ್ಸ್ ಅಕೌಂಟ್ (Savings Account), Fixed Deposit ಅಕೌಂಟ್, RD ಅಕೌಂಟ್ ಯಾವುದನ್ನೇ ಶುರು ಮಾಡಿ, 2 ವರ್ಷಗಳಾದರೂ ಆ ಅಕೌಂಟ್ ಅನ್ನು ಬಳಸದೇ ಹಾಗೆಯೇ ಬಿಟ್ಟುಬಿಟ್ಟರೆ, ಅಂಥ ಅಕೌಂಟ್ ಅನ್ನು ಡೀಆಕ್ಟಿವೇಟ್ ಮಾಡಲಾಗುತ್ತದೆ.
ನಿಮ್ಮ ಜಮೀನು, ಮನೆ ಅಥವಾ ಸೈಟ್ ಪ್ರಸ್ತುತ ಎಷ್ಟು ಬೆಲೆಬಾಳುತ್ತೆ, ಈಗಿನ ಬೆಲೆ ಎಷ್ಟು? ಚೆಕ್ ಮಾಡಿಕೊಳ್ಳಿ
ಇನ್ನು ನೀವು ಹಣ ಇರುವ ಬ್ಯಾಂಕ್ ಅಕೌಂಟ್ ಅನ್ನು 10 ವರ್ಷವಾದರೂ ಬಳಸದೇ ಹಾಗೆಯೇ ಬಿಟ್ಟುಬಿಟ್ಟರೆ, ಅಂಥ ಅಕೌಂಟ್ ನಲ್ಲಿರುವ ಹಣವನ್ನು ಕ್ಲೇಮ್ ಮಾಡಿಲ್ಲದ ಹಣ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಆ ಹಣವನ್ನು ಸ್ಟೂಡೆಂಟ್ ಸ್ಕಾಲರ್ಶಿಪ್ ಗಾಗಿ (Student Scholarship) ಮತ್ತು ಜಾಗೃತಿ ನಿಧಿಗಾಗಿ ತೆಗೆದುಕೊಳ್ಳಲಾಗುತ್ತದೆ..
ಕ್ಲೇಮ್ ಮಾಡದ ಹಣವನ್ನು ವಾಪಸ್ ಪಡೆಯಬಹುದಾ?
ಬ್ಯಾಂಕ್ ನಲ್ಲಿ ಅಕೌಂಟ್ (Bank Account) ಹೊಂದಿರುವ ವ್ಯಕ್ತಿ ಮರಣ ಹೊಂದಿದರೆ, ಅಂಥ ವ್ಯಕ್ತಿಯ ಅಕೌಂಟ್ ಅನ್ನು ಕ್ಲೇಮ್ ಮಾಡದೇ ಇರುವ ಹಣ ಎಂದು ಪರಿಗಣಿಸಲಾಗುತ್ತದೆ. ಆದರೆ ಆ ವ್ಯಕ್ತಿಗೆ ನಾಮಿನಿ ಇದ್ದಾರೆ ಎಂದಾದರೆ, ಅಂಥವರು ಬಂದು ಬ್ಯಾಂಕ್ ನಲ್ಲಿ ಹಣ ಪಡೆಯುವ ಬಗ್ಗೆ ಅರ್ಜಿ ಸಲ್ಲಿಸಿ, ಮರಣ ಹೊಂದಿರುವ ವ್ಯಕ್ತಿಯ ಮನೆಯವರು ಈ ಹಣವನ್ನು ಬ್ಯಾಂಕ್ ಇಂದ ಹಿಂಪಡೆದುಕೊಳ್ಳಬಹುದು. ಈ ರೀತಿಯಾಗಿ ಸುಲಭವಾಗಿ ಕ್ಲೇಮ್ ಆದ ಮೊತ್ತವನ್ನು ಹಿಂಪಡೆಯಬಹುದು.
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಸಿಗುತ್ತೆ ಪ್ರತಿ ತಿಂಗಳು ₹5000, ಅರ್ಜಿ ಹಾಕಲು ಜನರ ನೂಕುನುಗ್ಗಲು
ನಾಮಿನಿ ಹೆಸರು ಇಲ್ಲದೇ ಇದ್ದರೆ ಹೇಗೆ?
ಒಂದು ವೇಳೆ ಬ್ಯಾಂಕ್ ಅಕೌಂಟ್ ಹೊಂದಿದ್ದ ವ್ಯಕ್ತಿ ನಿಧನರಾಗಿ, ಅವರು ನಾಮಿನಿ ಆಗಿ ಯಾರ ಹೆಸರನ್ನು ಕೂಡ ಸೂಚಿಸಿಲ್ಲ ಎಂದಾದರೆ, ಆ ವ್ಯಕ್ತಿಯ ಕುಟುಂಬದವರು ಉತ್ತರಾಧಿಕಾರಿ ಎಂದು ಸರ್ಟಿಫಿಕೇಟ್ ನೀಡಿ, ಅಕೌಂಟ್ ನಲ್ಲಿರುವ ಹಣವನ್ನು ತಮಗೆ ಕೊಡಬೇಕು ಎಂದು, ಬ್ಯಾಂಕ್ ಗೆ ಮನವಿ ಮಾಡಿಕೊಳ್ಳಬೇಕಾಗುತ್ತದೆ.
ಆಗ ಬ್ಯಾಂಕ್ ಸಿಬ್ಬಂದಿಗಳು ಆ ವ್ಯಕ್ತಿಯ ಮಾಹಿತಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ, ಹಣವನ್ನು ನೀಡುತ್ತದೆ. ಈ ಪ್ರೊಸಿಜರ್ ಪೂರ್ತಿ ಆಗುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತದೆ.
ಗೋಲ್ಡ್ ಲೋನ್ ತಗೊಂಡು ಕಟ್ಟದೇ ಇದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ಅಪ್ಡೇಟ್
ನೀವೇ ಆ ವ್ಯಕ್ತಿಯ ಉತ್ತರಾಧಿಕಾರಿ ಎನ್ನುವುದಕ್ಕೆ ನೀವು ಕೊಡುವ ದಾಖಲೆಗಳು ಸರಿಯಾಗಿರಬೇಕು. ನೀವೇ ಅವರ ಉತ್ತರಾಧಿಕಾರಿ ಎನ್ನುವುದು ಕೂಡ ಬ್ಯಾಂಕ್ ನವರಿಗೆ ಸಾಬೀತಾಗಬೇಕು. ಆಗ ಮಾತ್ರ ನೀವು ಹಣವನ್ನು ಕ್ಲೇಮ್ ಮಾಡಿ, ಕ್ಯಾಶ್ ಪಡೆದುಕೊಳ್ಳಬಹುದು ಅಥವಾ ನಿಮ್ಮ ಅಕೌಂಟ್ ಗೆ ಹಣವನ್ನು ವರ್ಗಾವಣೆ ಮಾಡಿಕೊಳ್ಳಬಹುದು.
ಒಂದು ವೇಳೆ ವ್ಯಕ್ತಿಯ ಮರಣ ಹೊಂದಿದ 10 ವರ್ಷವಾದರೂ ನೀವು ಈ ಕೆಲಸ ಮಾಡಿಲ್ಲ ಎಂದರೆ, ಆಗ ಹಣವನ್ನು ಜಾಗೃತಿ ನಿಧಿ ಅಥವಾ ಸ್ಕಾಲರ್ಶಿಪ್ ಗಾಗಿ (Student Scholarship) ಬಳಸಲಾಗುತ್ತದೆ.
What happens if you put money in a bank account and don’t use it for 10 years