Business News

ಎಟಿಎಂ ಇಲ್ಲದೆ ಇದ್ರೂ ಪರವಾಗಿಲ್ಲ, ಆಧಾರ್ ಕಾರ್ಡ್‌ನಿಂದಲೇ ಫೋನ್ ಪೇ ಆಕ್ಟಿವೇಟ್ ಮಾಡಿಕೊಳ್ಳಿ!

ಆಧಾರ್ ಕಾರ್ಡ್ ಭಾರತೀಯರಾದ ನಮ್ಮೆಲ್ಲರ ಬಳಿ ಇರಲೇಬೇಕಾದ ಪ್ರಮುಖವಾದ ದಾಖಲೆ ಆಧಾರ್ ಕಾರ್ಡ್ (Aadhaad Card) ಆಗಿದೆ. ಮಕ್ಕಳು, ದೊಡ್ಡವರು, ವೃದ್ಧರು ಎಲ್ಲರ ಬಳಿ ಕೂಡ ಆಧಾರ್ ಕಾರ್ಡ್ ಇರಲೇಬೇಕು. ಆಧಾರ್ ಕಾರ್ಡ್ ಮಾಡಿಸುವುದು ಸರ್ಕಾರ ಜಾರಿಗೆ ತಂದಿರುವ ನಿಯಮ ಆಗಿದೆ.

ಆಧಾರ್ ಕಾರ್ಡ್ ಅನ್ನು ಬೇರೆ ಎಲ್ಲಾ ಪ್ರಮುಖ ದಾಖಲೆಗಳ ಜೊತೆಗೆ ಲಿಂಕ್ ಮಾಡಬೇಕು ಎನ್ನುವುದು ಕೂಡ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ. ಈಗ ಯಾವುದೇ ಒಂದು ಕೆಲಸ ಮಾಡುವುದಕ್ಕೂ ಆಧಾರ್ ಕಾರ್ಡ್ ಬೇಕೇ ಬೇಕು..

It doesn't matter if you don't have an ATM, activate PhonePe from Aadhaar Card

ಆಧಾರ್ ಕಾರ್ಡ್ ಅನ್ನು ನಾವು ಬ್ಯಾಂಕ್ ಖಾತೆಗೆ (Bank Account) ಸಂಬಂಧಿಸಿದ ಎಲ್ಲಾ ಕೆಲಸಗಳಿಗೆ ಕೊಡಬೇಕು, ಒಂದು ಕೆಲಸಕ್ಕೆ ಅಪ್ಲೈ ಮಾಡುವುದಕ್ಕೆ ಆಧಾರ್ ಕಾರ್ಡ್ ಬೇಕು, ಸರ್ಕಾರದ ಕೆಲಸಗಳಿಗೆ ಆಧಾರ್ ಕಾರ್ಡ್ ಬೇಕೇ ಬೇಕು.

ಬ್ಯಾಂಕ್ ಅಕೌಂಟ್‌ನಲ್ಲಿ ಹಣವಿಟ್ಟು, 10 ವರ್ಷ ಆದ್ರೂ ಬಳಕೆ ಮಾಡದೇ ಇದ್ರೆ ಏನಾಗುತ್ತೆ? ಹೊಸ ರೂಲ್ಸ್

ಇನ್ನು ಒಂದು ಹೊಸ ಸಿಮ್ ಖರೀದಿ ಮಾಡುವುದಕ್ಕೆ ಕೂಡ ಆಧಾರ್ ಕಾರ್ಡ್ ಇರಲೇಬೇಕು. ಹೀಗೆ ಎಲ್ಲಾ ಕೆಲಸಗಳಿಗೂ ಆಧಾರ್ ಕಾರ್ಡ್ ಬೇಕು.. ಹಾಗೆಯೇ ಆಧಾರ್ ಕಾರ್ಡ್ ಬಳಸಿ ನಾವು ದಿನನಿತ್ಯ ಬಳಕೆ ಮಾಡುವ ಫೋನ್ ಪೇ ಅಪ್ಲಿಕೇಶನ್ (Phonepe App) ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು ಎನ್ನುವ ವಿಷಯ ಹಲವರಿಗೆ ಗೊತ್ತಿಲ್ಲ. ಅದರ ಬಗ್ಗೆ ಇಂದು ತಿಳಿದುಕೊಳ್ಳೋಣ..

ಒಂದು UPI App ಅನ್ನು ಆಕ್ಟಿವೇಟ್ ಮಾಡಬೇಕು ಎಂದರೆ ಅದಕ್ಕೆ ಒಂದು ನಿಯಮ ಇದೆ. ಆಧಾರ್ ಕಾರ್ಡ್ ನ UIDAI ಇಂದ ಒಂದು ಓಟಿಪಿ ಬರುತ್ತದೆ, ಹಾಗೆಯೇ ಬ್ಯಾಂಕ್ ಅಕೌಂಟ್ ಗೆ ಸಂಬಂಧಪಟ್ಟ ಹಾಗೆ ಒಂದು ಯುಪಿಐ ಬರುತ್ತದೆ.

ಇದೆಲ್ಲವನ್ನು ಸರಿಯಾಗಿ ಎಂಟರ್ ಮಾಡುವ ಮೂಲಕ ಜನರು ತಮ್ಮ ಯುಪಿಐ ಖಾತೆಯನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು. ಯುಪಿಐ ಅಕೌಂಟ್ (UPI Account) ಆಕ್ಟಿವೇಟ್ ಮಾಡಿಕೊಳ್ಳುವ ಪ್ರಮುಖ ವಿಧಾನ ಇದಾಗಿದೆ ಎನ್ನುವುದು ನಿಮಗೆ ಗೊತ್ತಿರಲಿ.

ಗೋಲ್ಡ್ ಲೋನ್ ತಗೊಂಡು ಕಟ್ಟದೇ ಇದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ಅಪ್ಡೇಟ್

ಆಧಾರ್ ಓಟಿಪಿ ಬಳಸಿ:

ನೀವು ನಿಮ್ಮ ಯುಪಿಐ ಖಾತೆಯನ್ನು ಆಕ್ಟಿವೇಟ್ ಮಾಡಬೇಕು ಎಂದರೆ, ಆಧಾರ್ ಕಾರ್ಡ್ ಇಂದ OTP ಪಡೆದು, ಅದನ್ನು ದೃಢೀಕರಿಸಿ, ಫೋನ್ ಪೇ ಅಕೌಂಟ್ (Phonepe UPI Account) ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದು. ಮೊದಲಿನ ಹಾಗೆ ಯುಪಿಐ ಅಕೌಂಟ್ ಆಕ್ಟಿವೇಟ್ ಮಾಡಲು ಡೆಬಿಟ್ ಕಾರ್ಡ್ ಇರಲೇಬೇಕು ಎನ್ನುವ ನಿಯಮವೇನು ಇಲ್ಲ.

ಆಧಾರ್ ಕಾರ್ಡ್ ನ ಇಕೆವೈಸಿ ಮಾಡುವುದು ಅಗತ್ಯವಾಗುತ್ತದೆ. ಈ ರೀತಿಯ ಪ್ರೊಸಿಜರ್ ಫಾಲೋ ಮಾಡುವ ಮೂಲಕ, ಡಿಜಿಟಲ್ ವ್ಯವಹಾರವನ್ನು ಮಾಡಿಕೊಳ್ಳಬಹುದು. ಈ ರೀತಿಯಾಗಿ UPI ಸ್ಪೆಷಾಲಿಟಿ ಪಡೆಯಬಹುದು.

PhonePe Activationಈ ಕೆಲಸ ಮಾಡುವುದು ಹೇಗೆ?

ಫೋನ್ ಪೇ ಆಪ್ ಓಪನ್ ಮಾಡಿ, ಇಲ್ಲಿ ಪ್ರೊಫೈಲ್ ನಲ್ಲಿ ಪೇಮೆಂಟ್ ಇನ್ಸ್ಟ್ರುಮೆಂಟ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಇಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಸೆಲೆಕ್ಟ್ ಮಾಡಿ, ಬಳಿಕ OTP ವೆರಿಫಿಕೇಶನ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಬಳಿಕ ಫೋನ್ ಪೇ ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ಚೆಕ್ ಮಾಡುತ್ತದೆ. ಹಾಗೆಯೇ UPI ಪಿನ್ ಪಡೆಯಬೇಕು ಎಂದರೆ, ಡೆಬಿಟ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಮಾಹಿತಿ ಬೇಕಾಗುತ್ತದೆ.

ಹಳೆಯ ಕೆನರಾ ಬ್ಯಾಂಕ್ ಅಕೌಂಟ್ ಗ್ರಾಹಕರಿಗೆ ಮಾತ್ರ ಸಿಗಲಿದೆ 10 ಲಕ್ಷ ತನಕ ಲೋನ್! ಇಲ್ಲಿದೆ ಡೀಟೇಲ್ಸ್

ಇದಕ್ಕಾಗಿ ಆಧಾರ್ ಕಾರ್ಡ್ ಸೆಲೆಕ್ಟ್ ಮಾಡಿ, ಆಧಾರ್ ಕಾರ್ಡ್ ಕೊನೆಯ 6 ನಂಬರ್ ಗಳನ್ನು ಎಂಟರ್ ಮಾಡಿ, ಬಳಿಕ ರಿಜಿಸ್ಟರ್ ಆಗಿರುವ ಫೋನ್ ನಂಬರ್ ಗೆ ಓಟಿಪಿ ಬರುತ್ತದೆ. ಓಟಿಪಿ ಎಂಟರ್ ಮಾಡುವ ಮೂಲಕ UPI ಪಿನ್ ಆಕ್ಟಿವೇಟ್ ಮಾಡಿಕೊಳ್ಳಬಹುದು.

It doesn’t matter if you don’t have an ATM, activate PhonePe from Aadhaar Card

Our Whatsapp Channel is Live Now 👇

Whatsapp Channel

Related Stories