ಪ್ಯಾನ್ ಕಾರ್ಡ್ ಇಲ್ಲದೆ ನೀವು ಎಷ್ಟು ಚಿನ್ನ ಖರೀದಿ ಮಾಡಬಹುದು ಗೊತ್ತಾ? ಅದಕ್ಕೂ ಇದೆ ರೂಲ್ಸ್

Story Highlights

ಒಂದು ವೇಳೆ ನೀವು ಚಿನ್ನ ಖರೀದಿ (Gold Purchase) ಮಾಡಬೇಕು ಎಂದರೆ, ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ (Pan Card) ಯಾವುದೇ ಪ್ರೂಫ್ ನೀಡದೇ ಎಷ್ಟು ಚಿನ್ನ ಖರೀದಿ ಮಾಡಬಹುದು? ಇಲ್ಲಿದೆ ಸಂಪೂರ್ಣ ವಿವರ

ನಮ್ಮ ದೇಶದ ಮಹಿಳೆಯರಿಗೆ ಹಬ್ಬ, ಹರಿದಿನ, ಮನೆಯಲ್ಲಿ ವಿಶೇಷ ಹೀಗೇನಾದರು ನಡೆದಾಗ ಚಿನ್ನ ಖರೀದಿ (Buy Gold) ಮಾಡುವುದು ಬಹಳ ಇಷ್ಟದ ಕೆಲಸ. ಒಂದು ವೇಳೆ ನೀವು ಚಿನ್ನ ಖರೀದಿ (Gold Purchase) ಮಾಡಬೇಕು ಎಂದರೆ, ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ (Pan Card) ಯಾವುದೇ ಪ್ರೂಫ್ ನೀಡದೇ ಎಷ್ಟು ಚಿನ್ನ ಖರೀದಿ ಮಾಡಬಹುದು?

ಇದಕ್ಕೆ ಸರ್ಕಾರ ನಿಗದಿ ಪಡಿಸಿರುವ ಲಿಮಿಟ್ ಎಷ್ಟು? ಒಂದು ವೇಳೆ ನೀವು ಪ್ಯಾನ್ ಕಾರ್ಡ್ ಕೊಟ್ಟರೂ, ಆಗ ಎಷ್ಟು ಚಿನ್ನ ಖರೀದಿ ಮಾಡಬಹುದು? ಈ ಲಿಮಿಟ್ ಬಗ್ಗೆ ಇಂದು ಪೂರ್ತಿ ಮಾಹಿತಿ ತಿಳಿಯೋಣ..

ಎಟಿಎಂ ಇಲ್ಲದೆ ಇದ್ರೂ ಪರವಾಗಿಲ್ಲ, ಆಧಾರ್ ಕಾರ್ಡ್‌ನಿಂದಲೇ ಫೋನ್ ಪೇ ಆಕ್ಟಿವೇಟ್ ಮಾಡಿಕೊಳ್ಳಿ!

Money Laundering Rules:

ನೀವು ಗೋಲ್ಡ್ ಖರೀದಿ ಮಾಡುವುದಕ್ಕೆ 2002ರಲ್ಲಿ ಸರ್ಕಾರವು Prevention of Money Laundering Act ಅನ್ನು ಜಾರಿಗೆ ತಂದಿದೆ. ಈ ರೂಲ್ಸ್ ನಲ್ಲಿ ಕ್ಯಾಶ್ ಬಳಸಿ ಎಷ್ಟು ಚಿನ್ನ ಖರೀದಿ ಮಾಡಬಹುದು ಎನ್ನುವ ರೂಲ್ಸ್ ಜಾರಿಗೆ ತಂದಿದೆ.

ಈ ಬಗ್ಗೆ 2020ರ ಡಿಸೆಂಬರ್ 28ರಂದು ನೋಟಿಸ್ ಕೂಡ ಜಾರಿಗೆ ತರಲಾಯಿತು. ಈ ಕಾನೂನಿನ ನಿಯಮದ ಅನುಸಾರ ಒಬ್ಬ ವ್ಯಕ್ತಿ 10 ಲಕ್ಷ ಮೌಲ್ಯದಷ್ಟು ಚಿನ್ನವನ್ನು ಕ್ಯಾಶ್ ಕೊಟ್ಟು ಖರೀದಿ ಮಾಡುತ್ತಾರೆ ಎಂದರೆ, ಆಭರಣಗಳನ್ನು ಮಾರಾಟ ಮಾಡುವವರು ಖರೀದಿ ಮಾಡುವವರ Kyc ಪಡೆಯಬೇಕು, ಬಿಲ್ (Gold Purchase Bill) ಜೊತೆಗೆ ಖರೀದಿ ಮಾಡುವವರ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಕಾಪಿಯನ್ನು ಕೂಡ ಅಟ್ಯಾಚ್ ಮಾಡಿರಬೇಕು.

ತೆರಿಗೆ ಇಲಾಖೆ ಜಾರಿಗೆ ತಂದಿರುವ ನಿಯಮ ಏನು?

ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಕೂಡ ಆಭರಣ ಖರೀದಿ ಬಗ್ಗೆ ಕೆಲವು ನಿಯಮಗಳನ್ನ ಜಾರಿಗೆ ತಂದಿದೆ. ಆ ನಿಯಮಗಳ ಅನುಸಾರ ಒಬ್ಬ ವ್ಯಕ್ತಿ ಒಂದು ದಿನಕ್ಕೆ ಇಷ್ಟು ಗ್ರಾಮ್ ಅಥವಾ ಇಷ್ಟು ಮೊತ್ತಕ್ಕೆ ಮಾತ್ರ ಚಿನ್ನ ಖರೀದಿ ಮಾಡಬೇಕು ಎನ್ನುವ ಲಿಮಿಟ್ ಇದೆ.

1961ರ ಸೆಕ್ಷನ್ 269ST ಅನುಸಾರ 2 ಲಕ್ಷ ರೂಪಾಯಿ ಬೆಲೆ ಬಾಳುವಷ್ಟು ಚಿನ್ನವನ್ನು ಮಾತ್ರ ಖರೀದಿ ಮಾಡಬಹುದು. ಅದಕ್ಕಿಂತ ಹೆಚ್ಚು ಚಿನ್ನವನ್ನು ಖರೀದಿ ಮಾಡುವ ಹಾಗಿಲ್ಲ. ನಿಯಮದ ಅನುಸಾರ ಒಬ್ಬ ವ್ಯಕ್ತಿ ಕ್ಯಾಶ್ ಕೊಟ್ಟು ಚಿನ್ನ ಖರೀದಿ ಮಾಡುತ್ತಾರೆ ಎಂದರೆ, 2 ಲಕ್ಷಕ್ಕಿಂತ ಹೆಚ್ಚು ಚಿನ್ನವನ್ನು ಖರೀದಿ ಮಾಡುವ ಹಾಗಿಲ್ಲ.

ಬ್ಯಾಂಕ್ ಅಕೌಂಟ್‌ನಲ್ಲಿ ಹಣವಿಟ್ಟು, 10 ವರ್ಷ ಆದ್ರೂ ಬಳಕೆ ಮಾಡದೇ ಇದ್ರೆ ಏನಾಗುತ್ತೆ? ಹೊಸ ರೂಲ್ಸ್

ಒಂದು ವೇಳೆ ಚಿನ್ನ ಖರೀದಿ ಮಾಡುತ್ತಿರುವ ವ್ಯಕ್ತಿ ಒಂದೇ ದಿನಕ್ಕೆ 2 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಚಿನ್ನದ ಆಭರಣಗಳನ್ನು ಖರೀದಿ ಮಾಡಿದರೆ, ಅದು ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಜಾರಿಗೆ ತಂದಿರುವ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಗಣನೆಗೆ ತೆಗದುಕೊಳ್ಳಲಾಗುತ್ತದೆ.

ಇದರಿಂದ ಸೆಕ್ಷನ್ 271ಡಿ ಕಾಯ್ದೆಯ ಅನುಸಾರ ಆ ವ್ಯಕ್ತಿ ಸರ್ಕಾರಕ್ಕೆ ದಂಡ ಪಾವತಿ ಮಾಡಬೇಕಾಗುತ್ತದೆ. ಇದು ಸರ್ಕಾರದ ನಿಯಮ ಆಗಿದ್ದು, ಈ ನಿಯಮವನ್ನು ಎಲ್ಲರೂ ಕೂಡ ಪಾಲಿಸಬೇಕು.

Gold Purchase2 ಲಕ್ಷಕ್ಕಿಂತ ಹೆಚ್ಚು ಚಿನ್ನ ಖರೀದಿ ಮಾಡಬೇಕು ಎಂದರೆ ಏನು ಮಾಡಬೇಕು?

ಒಂದು ವೇಳೆ ನೀವು 2 ಲಕ್ಷಕ್ಕಿಂತ ಹೆಚ್ಚು ಮೌಲ್ಯ ಇರುವಷ್ಟು ಚಿನ್ನ ಖರೀದಿ ಮಾಡಬೇಕು ಎಂದರೆ, ಆಗ ನೀವು ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಅನ್ನು ಕೊಡಬೇಕಾಗುತ್ತದೆ.

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಸಿಗುತ್ತೆ ಪ್ರತಿ ತಿಂಗಳು ₹5000, ಅರ್ಜಿ ಹಾಕಲು ಜನರ ನೂಕುನುಗ್ಗಲು

ಇದು 1962 ನ 114 ಕಾಯ್ದೆಯ ನಿಯಮ ಆಗಿದೆ, ಇದರ ಅನುಸಾರ ಯಾವುದೇ ವ್ಯಕ್ತಿ 2 ಲಕ್ಷಕ್ಕಿಂತ ಹೆಚ್ಚು ಬೆಲೆ ಬಾಳುವ ಚಿನ್ನ ಖರೀದಿ ಮಾಡಬೇಕು ಎಂದರೆ, ಅದಕ್ಕಾಗಿ ಪ್ಯಾನ್ ಕಾರ್ಡ್ ಮಾಹಿತಿಯನ್ನು ಕೊಡಲೇಬೇಕು, ಜೊತೆಗೆ PMLA ನಿಯಮಗಳು ಸಹ ಜಾರಿಗೆ ಬಂದಿದ್ದು, ಆ ನಿಯಮಗಳು ಕೂಡ ಚಿನ್ನ ಖರೀದಿ ಮಾಡುವುದಕ್ಕೆ ಲಿಮಿಟ್ ಇಟ್ಟಿದೆ.

Do you know how much gold you can buy without pan card

Related Stories