ಕೆನರಾ ಬ್ಯಾಂಕ್‌ ಗ್ರಾಹಕರಿಗೆ ಸಿಹಿ ಸುದ್ದಿ! ಇನ್ಮುಂದೆ ಮಿನಿಮಮ್‌ ಬ್ಯಾಲೆನ್ಸ್‌ ಬೇಕಿಲ್ಲ

ಜೂನ್ 1ರಿಂದ ಕೆನರಾ ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಇರಿಸುವ ನಿಯಮ ಕೈಬಿಟ್ಟಿದ್ದು, ಗ್ರಾಹಕರಿಗೆ ದಂಡದ ತೊಂದರೆ ಇಲ್ಲದೆ ಹೊಸ ರಿಲೀಫ್‌ ಸಿಗಲಿದೆ.

  • ಮಿನಿಮಮ್‌ ಬ್ಯಾಲೆನ್ಸ್‌ ಕಾಯ್ದಿರಿಸುವ ಅಗತ್ಯವಿಲ್ಲ
  • ಎಲ್ಲಾ ಕೆನರಾ ಬ್ಯಾಂಕ್‌ ಎಸ್‌ಬಿ ಖಾತೆಗಳಿಗೆ ಈ ನಿಯಮ ಅನ್ವಯ
  • ಜೂನ್ 1 ರಿಂದ ನೂತನ ಕ್ರಮ ಜಾರಿಗೆ

ಜೂನ್ 1ರಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದ್ದು, ಗ್ರಾಹಕರಿಗೆ ನಿಜವಾದ ಆರ್ಥಿಕ ರಿಲೀಫ್ (relief) ಸಿಗಲಿದೆ. ಅಂದರೆ ಇನ್ನು ಮುಂದೆ ಕೆನರಾ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ (Canara Bank Savings Account) ಹೊಂದಿರುವ ಗ್ರಾಹಕರು ತಮ್ಮ ಖಾತೆಯಲ್ಲಿ ನಿಗದಿತ ಕನಿಷ್ಠ ಮೊತ್ತವಿರಿಸಬೇಕಾದ ಒತ್ತಡವಿಲ್ಲ. ಈ ನಿರ್ಧಾರದಿಂದ ಹಲವರು ಲಾಭ ಪಡೆಯಲಿದ್ದಾರೆ.

ಈಗಾಗಲೇ ಇದುವರೆಗೆ ಕೆನರಾ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯ ಪ್ರಕಾರ ಸರಾಸರಿ ಮಾಸಿಕ ಬ್ಯಾಲೆನ್ಸ್ (Monthly Average Balance) ನ್ನು ರೂ. 1,000 ರೂಪಾಯಿಗಳಷ್ಟು ಇಡಬೇಕಾಗಿತ್ತು. ಈ ನಿಯಮವನ್ನು ಪಾಲಿಸದವರಿಗೆ ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಆ ದಂಡವೂ ಇಲ್ಲ, ನಿಯಮವೂ ಇಲ್ಲ!

ಇದನ್ನೂ ಓದಿ: ಯಾವುದೇ ಬ್ಯಾಂಕಿನಲ್ಲಿ ಮನೆ, ಕಾರು, ಪರ್ಸನಲ್ ಲೋನ್ ಇದ್ದೋರಿಗೆ ಭರ್ಜರಿ ಸುದ್ದಿ

ಬ್ಯಾಂಕ್‌ನ ಅಧಿಕೃತ ಪ್ರಕಟಣೆಯ ಪ್ರಕಾರ, ಉಳಿತಾಯ ಖಾತೆಗಳು, ಸಂಬಳ ಖಾತೆಗಳು (Salary Accounts), ಹಾಗೂ ಎನ್‌ಆರ್‌ಐ ಎಸ್‌ಬಿ ಖಾತೆಗಳನ್ನೂ ಈ ಮಾರ್ಪಾಡು ಒಳಗೊಂಡಿದೆ.

ಎಲ್ಲಾ ರೀತಿಯ ಎಸ್‌ಬಿ ಖಾತೆಗಳಿಗೆ ಮಿನಿಮಮ್ ಬ್ಯಾಲೆನ್ಸ್ (Minimum Balance) ಕಾನೂನು ತೆರವಿಗೆ ಬರುವ ಮೂಲಕ, ಎಲ್ಲಾ ತರದ ಗ್ರಾಹಕರಿಗೆ ಸಮಾನ ಬಲ ನೀಡಲಾಗಿದೆ.

Canara Bank

ಕೆನರಾ ಬ್ಯಾಂಕ್ ಈ ಹೊಸ ನಿಯಮ ಜಾರಿ ಮಾಡುವ ಮೂಲಕ ಸಾರ್ವಜನಿಕ ವಲಯದ (Public Sector Bank) ಬ್ಯಾಂಕ್‌ಗಳ ಪೈಕಿ ಗ್ರಾಹಕಪರ ನಿಲುವು ತೋರುತ್ತಿರುವ ಕ್ರಮವಿದು. ಈ ನಿರ್ಧಾರದಿಂದ ಜನತೆಗೆ ಸಹಕಾರಿಯಾಗಲಿದೆ.

ಇದನ್ನೂ ಓದಿ: ಬರಿ ₹100 ರೂಪಾಯಿ ಕಟ್ಟಿದ್ರೆ, ಪೋಸ್ಟ್ ಆಫೀಸ್ ನೀಡುತ್ತೆ 8 ಲಕ್ಷ! ಬಂಪರ್ ಯೋಜನೆ

ಬ್ಯಾಂಕ್‌ ಇತರ ಬ್ಯಾಂಕ್‌ಗಳೊಂದಿಗೆ (competitive edge) ಹೊಂದಾಣಿಕೆಯಿಂದ ಸಾಗಲು ಈ ರೀತಿಯ ಗ್ರಾಹಕಪರ ನಿಯಮಗಳನ್ನು ಜಾರಿಗೆ ತಂದಿದೆ. ಇದರಿಂದ ಗ್ರಾಹಕರು ಬ್ಯಾಂಕ್‌ ಬಗ್ಗೆ ಹೆಚ್ಚು ನಂಬಿಕೆ ಹೊಂದುವ ಸಾಧ್ಯತೆ ಇದೆ.

Canara Bank Removes Minimum Balance Rule

Related Stories