ಕೇವಲ 5 ನಿಮಿಷದಲ್ಲಿ ಆಧಾರ್ ಕಾರ್ಡ್ ಲಿಂಕ್ ಆಗಿರೋ ಫೋನ್ ನಂಬರ್ ಚೇಂಜ್ ಮಾಡಿ! ಸುಲಭ ವಿಧಾನ
ಭಾರತ ದೇಶದ ನಾಗರೀಕರಿಗೆ ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯವಾದ ದಾಖಲೆ. ಒಂದು ರೀತಿ ನಮ್ಮ ಬಳಿ ಇರಬೇಕಾದ ಬಹಳ ಮುಖ್ಯವಾದ ಗುರುತಿನ ಚೀಟಿ ಇದು ಎಂದು ಹೇಳಿದರೆ ತಪ್ಪಲ್ಲ. ಸಣ್ಣ ಮಗುವಿನಿಂದ ಹಿಡಿದು ವೃದ್ಧರವರೆಗು ಎಲ್ಲರೂ ಸಹ ಆಧಾರ್ ಕಾರ್ಡ್ ಮಾಡಿಸಿರುತ್ತಾರೆ.
ಸರ್ಕಾರದ ನಿಯಮದ ಅನುಸಾರ ಆಧಾರ್ ಕಾರ್ಡ್ ಇಲ್ಲದೇ ಯಾವ ಒಂದು ಕೆಲಸ ಕೂಡ ಆಗುವುದಿಲ್ಲ. ಆಧಾರ್ ಕಾರ್ಡ್ ಅನ್ನು ನಮ್ಮ ಬೇರೆ ದಾಖಲೆಗಳಿಗೆ ಲಿಂಕ್ ಮಾಡಬೇಕು.
ಹೌದು, ಆಧಾರ್ ಅನ್ನು ಪ್ಯಾನ್ ಕಾರ್ಡ್ (Pan Card), ಬ್ಯಾಂಕ್ ಅಕೌಂಟ್ (Bank Account), ರೇಷನ್ ಕಾರ್ಡ್ ಇದೆಲ್ಲದಕ್ಕೂ ಲಿಂಕ್ ಮಾಡಬೇಕು ಎಂದು ಸರ್ಕಾರ ನಿಯಮವನ್ನು ಜಾರಿಗೆ ತಂದಿದೆ. ಹಾಗೆಯೇ ಒಂದು ಸಿಮ್ ಖರೀದಿ ಮಾಡುವುದರಿಂದ ಹಿಡಿದು, ಬ್ಯಾಂಕ್ ವ್ಯವಹಾರಗಳಿಗೆ, ಶಾಲೆಗೆ ಸೇರಿಕೊಳ್ಳಲು, ಒಂದು ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಲು ಇದೆಲ್ಲದಕ್ಕೂ ಕೂಡ ಆಧಾರ್ ಕಾರ್ಡ್ ಬೇಕೇ ಬೇಕು. ಹಾಗಾಗಿ ನಮ್ಮ ಬಳಿ ಇರಲೇಬೇಕಾದ ಬಹಳ ಮುಖ್ಯವಾದ ದಾಖಲೆ ಇದಾಗಿದೆ.
ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಬಂಪರ್ ಕೊಡುಗೆ! ಫಿಕ್ಸೆಡ್ ಹಣಕ್ಕೆ ಸಿಗುತ್ತೆ ಭಾರೀ ಬಡ್ಡಿ
ಆಧಾರ್ ಕಾರ್ಡ್ ನಲ್ಲಿ ನಮ್ಮ ಬಗ್ಗೆ ಇರಬೇಕಾದ ಎಲ್ಲಾ ಮಾಹಿತಿಗಳು ಕೂಡ ಸರಿಯಾಗಿರಬೇಕು. ಹೆಸರು, ಹುಟ್ಟಿದ ದಿನಾಂಕ, ವಿಳಾಸ ಇದೆಲ್ಲವೂ ಕೂಡ ಸರಿಯಾಗಿರಬೇಕು, ಹಾಗೆಯೇ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಆಕ್ಟಿವ್ ಆಗಿರಬೇಕು.
ಇಲ್ಲವಾದರೆ ಮುಂದೆ ನೀವೇ ಸಮಸ್ಯೆ ಎದುರಿಸಬೇಕಾಗಿ ಇರುತ್ತದೆ. ಹಾಗಾಗಿ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಬಗ್ಗೆ ಇರುವ ಮಾಹಿತಿಯನ್ನು ಗಮನಿಸಿ, ಹಾಗೆಯೇ ಒಂದು ವೇಳೆ ಮಾಹಿತಿ ತಪ್ಪಿದ್ದರೆ, ಅದನ್ನು ನೀವು ಸರಿಪಡಿಸಬಹುದು.
UIDAI ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಆಧಾರ್ ಕಾರ್ಡ್ ನಲ್ಲಿ ಇರುವ ಮಾಹಿತಿಯನ್ನು ಸರಿಪಡಿಸಬಹುದು. ಕೆಲವೊಮ್ಮೆ ನಾವು ಫೋನ್ ನಂಬರ್ (Mobile Number) ಬದಲಾಯಿಸಿದಾಗ ಆಧಾರ್ ಕಾರ್ಡ್ ನಲ್ಲಿ ಕೂಡ ಹೊಸ ಫೋನ್ ನಂಬರ್ ಲಿಂಕ್ ಮಾಡಬೇಕಾಗುತ್ತದೆ. ಈ ಕೆಲಸವನ್ನು ಸುಲಭವಾಗಿ ಕೇವಲ 5 ನಿಮಿಷಗಳಲ್ಲಿ ಮಾಡಬಹುದು. ಅದು ಹೇಗೆ ಎಂದು ತಿಳಿಯೋಣ..
ಈ ಬ್ಯಾಂಕ್ ಗಳಲ್ಲಿ ನಿಮ್ಮ ಫಿಕ್ಸೆಡ್ ಹಣಕ್ಕೆ ಸಿಗಲಿದೆ ಅತಿಹೆಚ್ಚು ಬಡ್ಡಿ! ಇದು ಹಣ ಡಬಲ್ ಆಗೋ ಚಾನ್ಸ್!
ಆಧಾರ್ ಕಾರ್ಡ್ ಗೆ ಹೊಸ ಫೋನ್ ನಂಬರ್ ಲಿಂಕ್ ಮಾಡುವ ವಿಧಾನ:
*ನಿಮ್ಮ ಮನೆಗೆ ಹತ್ತಿರ ಇರುವ ಆಧಾರ್ ಇ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
*ಆಧಾರ್ ನಲ್ಲಿರುವ ಮಾಹಿತಿ ತಿದ್ದುಪಡಿ ಮಾಡುವುದಕ್ಕೆ ಒಂದು ಫಾರ್ಮ್ ಇರುತ್ತದೆ, ಅದನ್ನು ಪಡೆದು, ಹೊಸ ನಂಬರ್ ಬಗ್ಗೆ ಮಾಹಿತಿಯನ್ನು ನಮೂದಿಸಿ.
*ಬಳಿಕ ನಿಮ್ಮ ಫಿಂಗರ್ ಪ್ರಿಂಟ್ ಮತ್ತು ಐ ಸ್ಕ್ಯಾನ್ ಮಾಡಲಾಗುತ್ತದೆ.
*ನಂತರ ಫಿಲ್ ಮಾಡಿರುವ ಫಾರ್ಮ್ ಅನ್ನು ಇ ಸೇವಾ ಕೇಂದ್ರಕ್ಕೆ ಸಬ್ಮಿಟ್ ಮಾಡಿ.
*ಈ ಬದಲಾವಣೆ ಮಾಡಲು 50 ರೂಪಾಯಿ ಹಣ ಪಾವತಿ ಮಾಡಬೇಕು.
*90 ದಿನಗಳ ಒಳಗೆ ನಿಮ್ಮ ಫೋನ್ ನಂಬರ್ ಅಪ್ಡೇಟ್ ಆಗುತ್ತದೆ.
ಎಟಿಎಂ ಕಾರ್ಡ್ ಬೇಕಿಲ್ಲ, ಗೂಗಲ್ ಪೇ ಇದ್ರೆ ಸಾಕು ಹಣ ವಿತ್ ಡ್ರಾ ಮಾಡೋಕೆ! ಇಲ್ಲಿದೆ ಬಿಗ್ ಅಪ್ಡೇಟ್
ನೆನಪಿರಲಿ ಆನ್ಲೈನ್ ಹಾಗೂ ಮನೆಯಲ್ಲೇ ಫೋನ್ ನಂಬರ್ ಬದಲಾಯಿಸಲು ಸಾಧ್ಯವಿಲ್ಲ. ಇದನ್ನು ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಮಾಡಿಸಬೇಕಾಗುತ್ತದೆ.
Change Aadhaar card linked phone number in just 5 minutes