ರೀಚಾರ್ಜ್ ಕಡಿಮೆ ಅಂತ BSNL ಗೆ ಪೋರ್ಟ್ ಆಗೋ ಮುಂಚೆ ನಿಮ್ಮ ಏರಿಯಾದಲ್ಲಿ ನೆಟ್ವರ್ಕ್ ಹೇಗಿದೆ ಚೆಕ್ ಮಾಡಿ
ಈಗ ಏರ್ಟೆಲ್ (Airtel) ಹಾಗೂ ಜಿಯೋ ನೆಟ್ವರ್ಕ್ (Jio Network) ನಲ್ಲಿ ರೀಚಾರ್ಜ್ ಪ್ಲಾನ್ ಗಳ (Recharge Plans) ಬೆಲೆ ಏರಿಕೆ ಆಗಿದೆ ಎನ್ನುವ ಕಾರಣಕ್ಕೆ ಹೆಚ್ಚಿನ ಜನರು ಬಿ.ಎಸ್.ಎನ್. ಎಲ್ ಗೆ ಪೋರ್ಟ್ (BSNL Network) ಮಾಡಿಕೊಳ್ಳುವ ಪ್ಲಾನ್ ಮಾಡುತ್ತಿದ್ದಾರೆ. ಈಗಾಗಲೇ ಏರ್ಟೆಲ್ ಮತ್ತು ಜಿಯೋನಲ್ಲಿ 10 ರಿಂದ 15% ವರೆಗು ರೀಚಾರ್ಜ್ ಪ್ಲಾನ್ ಗಳು ಹೈಕ್ ಆಗಿದೆ.
ಇದು ಗ್ರಾಹಕರಿಗೆ ರೀಚಾರ್ಜ್ ಪ್ಲಾನ್ ಗಳು (Pre Paid Recharge) ಹೊರೆ ಆಗುವ ಹಾಗೆ ಮಾಡಿದೆ ಎಂದರೆ ತಪ್ಪಲ್ಲ. ಹಾಗಾಗಿ ಬೇರೆ ನೆಟ್ವರ್ಕ್ ಗೆ ಹೋಗಲು ಬಯಸುತ್ತಿದ್ದಾರೆ. ಬಿ.ಎಸ್.ಎನ್.ಎಲ್ ನ ಪ್ಲಾನ್ ಗಳೇನೋ ತುಂಬಾ ಚೆನ್ನಾಗಿದೆ. ಕಡಿಮೆ ಬೆಲೆಗೆ ಉತ್ತಮವಾದ ಪ್ಲಾನ್ ಗಳು, ಜೊತೆಗೆ ವ್ಯಾಲಿಡಿಟಿ ಕೂಡ ಹೆಚ್ಚು ದಿನಗಳಿವೆ, ಎಂದು ಎಲ್ಲರೂ ಬಿ.ಎಸ್.ಎನ್.ಎಲ್ ಗೆ ಪೋರ್ಟ್ ಮಾಡಿಕೊಳ್ಳುತ್ತಿದ್ದಾರೆ.

ಆದರೆ ಆ ಕೆಲಸ ಮಾಡುವುದಕ್ಕಿಂತ ಮೊದಲು, ನಿಮ್ಮ ಏರಿಯಾದಲ್ಲಿ BSNL ನೆಟ್ವರ್ಕ್ ಚೆನ್ನಾಗಿದ್ಯಾ ಎಂದು ಚೆಕ್ ಮಾಡಿಕೊಳ್ಳುವುದು ಮುಖ್ಯ. ಹಾಗಿದ್ದಲ್ಲಿ ನಿಮ್ಮ ಏರಿಯಾದಲ್ಲಿ BSNL ನೆಟ್ವರ್ಕ್ ಹೇಗಿದೆ ಎಂದು ತಿಳಿಯುವ ವಿಧಾನ ಹೇಗೆ ಎಂದು ನೋಡೋಣ..
ಗ್ಯಾಸ್ ಸಿಲಿಂಡರ್, ಕ್ರೆಡಿಟ್ ಕಾರ್ಡ್, ಲೋನ್ ಇಎಂಐ ಸೇರಿದಂತೆ ಆಗಸ್ಟ್ 1ರಿಂದ ಹೊಸ ಹೊಸ ರೂಲ್ಸ್
ನೀವು ಈಗ ಬಿ.ಎಸ್.ಎನ್. ಎಲ್ ಗೆ ಪೋರ್ಟ್ ಮಾಡಿಕೊಳ್ಳುವುದಕ್ಕಿಂತ ಮೊದಲು ನಿಮ್ಮ ಏರಿಯಾದಲ್ಲಿ ಆ ನೆಟ್ವರ್ಕ್ ಸಿಗುತ್ತಾ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಇಲ್ಲದೇ ಹೋದರೆ, ಪೋರ್ಟ್ ಮಾಡಿಸುವುದು ವ್ಯರ್ಥ ಆಗುತ್ತದೆ.
ಒಂದು ವೇಳೆ ನೀವು ಪೋರ್ಟ್ ಮಾಡಿಸಿಕೊಂಡರೆ, 3 ತಿಂಗಳು ಇನ್ಯಾವುದೇ ನೆಟ್ವರ್ಕ್ ಗು ಪೋರ್ಟ್ ಮಾಡಿಸಿಕೊಳ್ಳಲು ಸಾಧ್ಯ ಆಗೋದಿಲ್ಲ. ಹಾಗಾಗಿ ಪೋರ್ಟ್ ಮಾಡಿಸಿಕೊಳ್ಳುವ ಮೊದಲು ಈ ಮುಖ್ಯವಾದ ವಿಷಯವನ್ನು ತಿಳಿದುಕೊಳ್ಳುವುದು ಒಳ್ಳೆಯದು.. ಹಾಗಿದ್ದರೆ ಬಿ.ಎಸ್.ಎನ್. ಎಲ್ ನೆಟ್ವರ್ಕ್ ಬಗ್ಗೆ ತಿಳಿಯುವುದು ಹೇಗೆ ಎಂದು ನೋಡೋಣ..
*ಮೊದಲಿಗೆ ನೀವು NPerf.Com ಈ ಲಿಂಕ್ ಓಪನ್ ಮಾಡಿ, ಇದರಲ್ಲಿ my account ಎನ್ನುವ ಆಪ್ಶನ್ ತೆರೆದು, ಹೊಸದಾಗಿ ಅಕೌಂಟ್ ಓಪನ್ ಮಾಡುವುದಕ್ಕೆ ಏನೆಲ್ಲಾ ಮಾಹಿತಿ ಕೇಳುತ್ತದೆಯೋ ಅದೆಲ್ಲವನ್ನು ಕೂಡ ಸರಿಯಾಗಿ ನಮೂದಿಸಿ.
*ಇಲ್ಲಿ ನಿಮ್ಮ ಅಕೌಂಟ್ ಕ್ರಿಯೆಟ್ ಆದ ನಂತರ 3G ಅಥವಾ 4G ಯಾವ ನೆಟ್ವರ್ಕ್ ಚೆಕ್ ಮಾಡಬೇಕು ಎನ್ನುವುದನ್ನ ಆಯ್ಕೆ ಮಾಡಿ.
*ಈಗ ಮ್ಯಾಪ್ ಆಪ್ಶನ್ ಆಯ್ಕೆ ಮಾಡಿ, ಬಳಿಕ ನಿಮ್ಮ ಏರಿಯಾ ಗೆ ಸಂಬಂಧಿಸಿದ ಪೂರ್ತಿ ಮಾಹಿತಿಯನ್ನು ಶೇರ್ ಮಾಡಿ.
*ಇಷ್ಟು ಪ್ರೊಸೆಸ್ ಮುಗಿಸಿ, ನಿಮ್ಮ ಏರಿಯಾದಲ್ಲಿ ಬಿ.ಎಸ್.ಎನ್. ಎಲ್ ನೆಟ್ವರ್ಕ್ ಚೆನ್ನಾಗಿದ್ಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ..
ಕೆನರಾ ಬ್ಯಾಂಕ್ನಲ್ಲಿ ಬಂಪರ್ ಉದ್ಯೋಗಾವಕಾಶ, ಬ್ಯಾಂಕಿಂಗ್ ವಲಯದ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ
ಈ ರೀತಿಯಾಗಿ ನೆಟ್ವರ್ಕ್ ಚೆನ್ನಾಗಿ ಸಿಗುತ್ತಾ ಎನ್ನುವುದನ್ನು ನೋಡಿಕೊಂಡು, ನಂತರ ಬಿ.ಎಸ್.ಎನ್. ಎಲ್ ನೆಟ್ವರ್ಕ್ ಗೆ ಪೋರ್ಟ್ ಮಾಡಿಸಿಕೊಳ್ಳಿ. ಪೋರ್ಟ್ ಮಾಡಿಕೊಳ್ಳಲು, ಮೊದಲಿಗೆ 1900 ನಂಬರ್ ಗೆ ಪೋರ್ಟ್ ಮೆಸೇಜ್ ಕಳಿಸಬೇಕು. ಬಳಿಕ ಬಿ.ಎಸ್.ಎನ್. ಎಲ್ ಆಫೀಸ್ ಗೆ ಹೋಗಿ, kyc ಪ್ರಕ್ರಿಯೆ ಮುಗಿಸಿಕೊಂಡು, ಪೋರ್ಟ್ ಮಾಡಿಸಿಕೊಳ್ಳಬಹುದು.
ಆಗಸ್ಟ್ ತಿಂಗಳಿನಲ್ಲಿ 14 ದಿನಗಳ ಕಾಲ ಬ್ಯಾಂಕ್ ರಜೆ, ಎಲ್ಲಾ ಕೆಲಸಗಳನ್ನು ಆದಷ್ಟು ಬೇಗ ಮುಗಿಸಿಕೊಳ್ಳಿ!
Check the network condition in your area before porting to BSNL