ಕ್ರೆಡಿಟ್ ಕಾರ್ಡ್ ಹೊಸ ರೂಲ್ಸ್: SBI, IDFC ಫಸ್ಟ್ ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್!
Credit Card : ಎಪ್ರಿಲ್ 1, 2025 ರಿಂದ Club Vistara ಕ್ರೆಡಿಟ್ ಕಾರ್ಡ್‌ಗಳಿಗೆ ಹೊಸ ನಿಯಮ. ಟಿಕೆಟ್ ವೋಚರ್‌ಗಳು, ಮೈಲೇಜ್ ಪಾಯಿಂಟ್ಸ್ ಸೇರಿದಂತೆ ಪ್ರಮುಖ ಪ್ರಯೋಜನಗಳು ರದ್ದುಗೊಳ್ಳಲಿವೆ!
- SBI, IDFC First ಕ್ರೆಡಿಟ್ ಕಾರ್ಡ್‌ಗಳ ನಿಯಮ ಎಪ್ರಿಲ್ 1, 2025 ರಿಂದ ಬದಲಾಗಲಿದೆ!
- Club Vistara ಕಾರ್ಡ್‌ಗಳು ನೀಡುತ್ತಿದ್ದ ಪ್ರಯೋಜನಗಳು ಕ್ಯಾನ್ಸಲ್
- ವಿಮಾನ ಪ್ರಯಾಣಿಕರಿಗೆ ವಿಶೇಷ ಸೌಲಭ್ಯ ರದ್ದು
ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಗ್ ಅಪ್ಡೇಟ್
Credit Cards : ಹೌದು, SBI Cards ಹಾಗೂ IDFC First Bank ನವೀಕರಿಸಿದ Club Vistara ಕ್ರೆಡಿಟ್ ಕಾರ್ಡ್‌ಗಳ ನಿಯಮಗಳು ಗ್ರಾಹಕರಿಗೆ ಆಘಾತ ಉಂಟುಮಾಡಿವೆ. ಏಪ್ರಿಲ್ 1, 2025 ರಿಂದ, ಈ ಕಾರ್ಡ್‌ಗಳಲ್ಲಿನ ಉಚಿತ ಟಿಕೆಟ್ ವೋಚರ್ (Ticket Voucher) ಸೌಲಭ್ಯಗಳು ಕಡಿತಗೊಳ್ಳಲಿವೆ.
ಈ Credit Card ಬಳಕೆದಾರರಿಗೆ ಹಿಂದೆ ಒದಗಿಸುತ್ತಿದ್ದ ಮೈಲೇಜ್ ಪಾಯಿಂಟ್ಸ್ (Mileage Points) ಹಾಗೂ ಇತರ ಪ್ರಯೋಜನಗಳು ಲಭ್ಯವಿರುವುದಿಲ್ಲ.
ಇದನ್ನೂ ಓದಿ: ನಿಮ್ಮತ್ರ ಪ್ಯಾನ್ ಕಾರ್ಡ್ ಇದ್ದು ಈ ತಪ್ಪು ಮಾಡಿದ್ರೆ 10,000 ದಂಡ! ಎಚ್ಚರ
Club Vistara ಕಾರ್ಡ್‌ಗಳಿಗೆ ಏನು ಬದಲಾವಣೆ?
SBI Cards ಮತ್ತು IDFC First Bank ಜಂಟಿಯಾಗಿ Club Vistara ಕ್ರೆಡಿಟ್ ಕಾರ್ಡ್‌ಗಳನ್ನು ಪರಿಚಯಿಸಿದ್ದವು. ಈ ಕಾರ್ಡ್‌ನಿಂದ ವಿಮಾನ ಪ್ರಯಾಣಿಕರು (Frequent Flyers) ಟಿಕೆಟ್ ಡಿಸ್ಕೌಂಟ್ (Flight Ticket Discount), ಉಚಿತ ಲಗೇಜ್ ಹಾಗೂ ಲಾಂಜ್ ಪ್ರವೇಶದಂತಹ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಿದ್ದರು. ಆದರೆ ಹೊಸ ನಿಯಮದಡಿ, ಈ ಸೌಲಭ್ಯಗಳು ಕಡಿತಗೊಳ್ಳಲಿದ್ದು, ಮೇಜರ್ ಬದಲಾವಣೆಗಳು ಜಾರಿಗೆ ಬರಲಿವೆ.
ಟಿಕೆಟ್ ವೋಚರ್ ಮತ್ತು ಪಾಯಿಂಟ್‌ಗಳ ಕೊನೆ!
Club Vistara SBI ಪ್ರೈಮ್ ಕ್ರೆಡಿಟ್ ಕಾರ್ಡ್‌ನ ಪ್ರಿಮಿಯಂ ಎಕಾನಮಿ (Premium Economy) ಟಿಕೆಟ್ ವೋಚರ್ ಸೌಲಭ್ಯವನ್ನು ರದ್ದು ಮಾಡಲಾಗಿದೆ. ಅಲ್ಲದೇ, 1.25 ಲಕ್ಷ, 2.5 ಲಕ್ಷ, 5 ಲಕ್ಷ ರೂ. ವಾರ್ಷಿಕ ಖರ್ಚುಗಳನ್ನು ಪೂರೈಸಿದರೂ ಮೈಲೇಜ್ ಪಾಯಿಂಟ್‌ಗಳ ಲಾಭ ಪಡೆಯಲು ಸಾಧ್ಯವಿಲ್ಲ.
ಇದನ್ನೂ ಓದಿ: ಸ್ಟನ್ನಿಂಗ್ ಲುಕ್, ಅಡ್ವಾನ್ಸ್ ಫೀಚರ್! ಟಿವಿಎಸ್ ಜೂಪಿಟರ್ 110 ಸ್ಕೂಟರ್ ಬಿಡುಗಡೆ
IDFC First ಕ್ರೆಡಿಟ್ ಕಾರ್ಡ್ ಬಳಕೆದಾರರಿಗೂ ಬದಲಾವಣೆ!
Club Vistara IDFC First ಕ್ರೆಡಿಟ್ ಕಾರ್ಡ್‌ಗಳಲ್ಲೂ 2025 ಮಾರ್ಚ್ 31 ನಂತರ ಈ ವಿಶೇಷ ಪ್ಯಾಕೇಜ್‌ಗಳ ಲಾಭಗಳು ಇರುವುದಿಲ್ಲ. ಆದರೆ, 2026 ಮಾರ್ಚ್ 31 ವರೆಗೆ ಮಹಾರಾಜಾ ಪಾಯಿಂಟ್ (Maharaja Points) ಗಳಿಸುವ ಅವಕಾಶ ನೀಡಲಾಗಿದೆ. ಇದರಿಂದಾಗಿ, ಬಳಕೆದಾರರು ಶೇಖರಿಸಿರುವ ಪಾಯಿಂಟ್‌ಗಳನ್ನು ಮುಕ್ತಾಯವಾಗುವ ಮೊದಲು ಬಳಸಿಕೊಳ್ಳಲು ಅನುಕೂಲವಾಗಲಿದೆ.
ಬೆಸ್ಟ್ ಮೈಲೇಜ್ ಕೊಡುವ ಪೆಟ್ರೋಲ್ ಕಾರುಗಳು, ಬೆಲೆ 4 ಲಕ್ಷದಿಂದ ಪ್ರಾರಂಭ
ಈ ಕಾರ್ಡ್‌ಗಳು ಏಕೆ ಪ್ರಾಮಖ್ಯತೆ ಪಡೆದವು?
Club Vistara SBI ಮತ್ತು IDFC First ಕ್ರೆಡಿಟ್ ಕಾರ್ಡ್‌ಗಳು ವಿಶೇಷವಾಗಿ ವಿಮಾನ ಪ್ರಯಾಣಿಕರು (Flight Journey) ಗಾಗಿ ವಿನ್ಯಾಸಗೊಳಿಸಲಾಗಿತ್ತು. Vistara Airlines (ವಿಸ್ತಾರ ಏರ್‌ಲೈನ್ಸ್) ಜೊತೆ SBI ಮತ್ತು IDFC First Bank ಈ ಕಾರ್ಡ್‌ಗಳನ್ನು ಜಾರಿ ಮಾಡಿತ್ತು.
ಕ್ರೆಡಿಟ್ ಕಾರ್ಡ್‌ನೊಂದಿಗೆ ಪ್ರತಿ ಖರ್ಚಿನ ಮೇಲೆ Club Vistara Points (CV Points) ಗಳಿಸುವ ಅವಕಾಶ ನೀಡಲಾಗುತ್ತಿತ್ತು. ಈ ಪಾಯಿಂಟ್‌ಗಳನ್ನು ಪ್ರಯಾಣ ಟಿಕೆಟ್ ಬುಕಿಂಗ್‌ಗಾಗಿ (Flight Ticket Booking) ಬಳಸಬಹುದಾಗಿತ್ತು.
Credit Card Rule Change, SBI, IDFC First Make Major Updates
Our Whatsapp Channel is Live Now 👇