ತಾಯಿ ಮನೆ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಇದೆಯಾ? ಅಷ್ಟಕ್ಕೂ ಕಾನೂನು ಹೇಳೋದೇನು ಗೊತ್ತಾ?

ಮಕ್ಕಳಿಗೆ ತಂದೆ ಮನೆಯ ಪಿತ್ರಾರ್ಜಿತ ಆಸ್ತಿಯ ಮೇಲೆ ಹಕ್ಕು ಇರುತ್ತದೆ. ಆದರೆ ತಾಯಿ ಆಸ್ತಿಯ ಮೇಲೆ ಮಕ್ಕಳಿಗೆ ಹಕ್ಕು ಎಷ್ಟಿರುತ್ತೆ? ಈ ಕುರಿತ ಹಾಗೆ ನಿಯಮಗಳು ಏನೇನು? ಎಲ್ಲವನ್ನು ಇಂದು ತಿಳಿದುಕೊಳ್ಳೋಣ

ಈಗಿನ ಕಾಲದಲ್ಲಿ ಆಸ್ತಿ ವಿಚಾರಕ್ಕೆ (Property) ಸಂಬಂಧಿಸಿದ ಹಾಗೆ ಕುಟುಂಬಗಳ ನಡುವೆ ವೈಮನಸ್ಸು ಹೆಚ್ಚಾಗುತ್ತದೆ. ಹಾಗಾಗಿ ಮೊದಲಿಗೆ ನಾವು ಕಾನೂನಿಗೆ ಸಂಬಂಧಿಸಿದ ಹಾಗೆ ಇರುವ ನಿಯಮಗಳನ್ನು ತಿಳಿದುಕೊಂಡಿರಬೇಕು.

ಮಕ್ಕಳಿಗೆ ತಂದೆ ಮನೆಯ ಪಿತ್ರಾರ್ಜಿತ ಆಸ್ತಿಯ ಮೇಲೆ ಹಕ್ಕು ಇರುತ್ತದೆ. ಆದರೆ ತಾಯಿ ಆಸ್ತಿಯ (Mother’s Property) ಮೇಲೆ ಮಕ್ಕಳಿಗೆ ಹಕ್ಕು ಎಷ್ಟಿರುತ್ತೆ? ಈ ಕುರಿತ ಹಾಗೆ ನಿಯಮಗಳು ಏನೇನು? ಎಲ್ಲವನ್ನು ಇಂದು ತಿಳಿದುಕೊಳ್ಳೋಣ..

Property Rules

ಒಂದು ಕುಟುಂಬದಲ್ಲಿ ಹೆಣ್ಣುಮಗಳಿಗೆ ಮದುವೆಯಾಗಿ ಆಕೆ ಗಂಡನ ಮನೆಗೆ ಹೋದಮೇಲೆ ಸಹ, ಅವಳ ತಂದೆಯ ಮನೆಯ ಆಸ್ತಿಯನ್ನು ಭಾಗ ಮಾಡುವಾಗ, ಮನೆಯ ಮಗಳಿಗೆ ಸಮಪಾಲು ಕೊಡಲೇಬೇಕು.

ಈ ರೀತಿ ಕೊಡುವ ಆಸ್ತಿಯನ್ನು ಸ್ರೀಧನ ಎಂದು ಕರೆಯುತ್ತಾರೆ. ಈ ರೀತಿ ಒಂದು ಹೆಣ್ಣುಮಗಳು ತನ್ನ ತಂದೆಯ ಮನೆಯಿಂದ ಪಡೆದ ಆಸ್ತಿಯ ಮೇಲೆ ಆಕೆಯ ಮಕ್ಕಳಿಗೆ ಎಷ್ಟು ಹಕ್ಕು ಇರುತ್ತದೆ. ಮಕ್ಕಳಿಗೆ ಈ ಆಸ್ತಿಯನ್ನು ಸ್ತ್ರೀಧನ ಎಂದು ಕರೆಯುತ್ತಾರಾ? ಈ ಬಗ್ಗೆ ತಿಳಿಯೋಣ..

ಚಿನ್ನಾಭರಣ ಪ್ರಿಯರಿಗೆ ನಿರಾಳ! ಗಗನಮುಖಿಯಾಗಿದ್ದ ಚಿನ್ನದ ಬೆಲೆ ಇಳಿಕೆ; ಇಲ್ಲಿದೆ ಬೆಲೆಗಳ ವಿವರ

ಹೆಣ್ಣಿಗೆ ತಾಯಿ ಆಸ್ತಿಯ ಪಾಲು ಸಿಗುತ್ತಾ?

ತಾಯಿಗೆ ತನ್ನ ತಂದೆ ಮನೆಯಿಂದ ಬರುವ ಆಸ್ತಿ ಅವರದ್ದೇ ಆಗಿರುತ್ತದೆ. ತಾಯಿಯೇ ಆ ಅಸ್ತಿಗೆ ಸಂಪೂರ್ಣ ಹಕ್ಕುದಾರಳಾಗಿರುತ್ತಾಳೆ. ತನಗೆ ಸಿಕ್ಕಿರುವ ಆಸ್ತಿಯನ್ನು ಆಕೆ ಮಾರಬಹುದು ಅಥವಾ ಗಂಡನ ಹೆಸರಿಗೆ ಬರೆಯಬಹುದು ಅಥವಾ ಮಕ್ಕಳ ಹೆಸರಿಗೆ ಬರೆಯಬಹುದು ಅಥವಾ ಇನ್ಯಾರಿಗಾದರು ಬರೆಯಬಹುದು. ಅದು ತಾಯಿಯ ನಿರ್ಧಾರವೇ ಆಗಿರುತ್ತದೆ. ಆದರೆ ತಂದೆಯ ಕಡೆಯಿಂದ ಬರುವ ಪೂರ್ವಾರ್ಜಿತ ಆಸ್ತಿಯ ಮೇಲೆ ಮಕ್ಕಳಿಗೆ ನೇರ ಹಕ್ಕು ಇರುತ್ತದೆ.

ನಿಮ್ಮ ಆಧಾರ್ ಕಾರ್ಡ್ ಫೋಟೋ ಚನ್ನಾಗಿಲ್ವಾ? ಮೊಬೈಲಿನಲ್ಲೇ ಈ ರೀತಿ ಚೇಂಜ್ ಮಾಡಿಕೊಳ್ಳಿ

Property Documentsಒಂದು ವೇಳೆ ತಾಯಿ ಮರಣ ಹೊಂದಿದರೆ?

ಈಗಿನ ಪ್ರಪಂಚದಲ್ಲಿ ಯಾರು ಯಾವಾಗ ಹೇಗೆ ಮರಣ ಹೊಂದುತ್ತಾರೆ ಎಂದು ಹೇಳಲು ಸಾಧ್ಯ ಆಗೋದಿಲ್ಲ. ಆ ರೀತಿ ಆಗಿ, ತಾಯಿ ತನ್ನ ತಂದೆ ಮನೆಯಿಂದ ಬಂದ ಆಸ್ತಿಯನ್ನು ಪಾಲು ಮಾಡುವುದಕ್ಕಿಂತ ಮೊದಲೇ ತಾಯಿ ಮರಣ ಹೊಂದಿದರೆ, ಆಗ ಆ ಆಸ್ತಿಗೆ ನೇರವಾಗಿ ಮಕ್ಕಳೇ ವಾರಸುದಾರರಾಗುತ್ತಾರೆ. ಆಗ ತಾಯಿಯ ಆಸ್ತಿಯ ಮೇಲೆ ಮಕ್ಕಳಿಗೆ ಅಥವಾ ಗಂಡನಿಗೆ ನೇರವಾಗಿ ಅಧಿಕಾರ ಸಿಗುತ್ತದೆ.

ಕ್ಲೋಸ್ ಆಗಲಿದೆ ಈ ಬ್ಯಾಂಕಿನ ಸಾವಿರಾರು ಗ್ರಾಹಕರ ಬ್ಯಾಂಕ್ ಅಕೌಂಟ್! ಗ್ರಾಹಕರಿಗೆ ಬಿಗ್ ಅಲರ್ಟ್

ಮಕ್ಕಳು ಮತ್ತು ಗಂಡನಿಗೆ ಮಾತ್ರವಲ್ಲ ಆ ತಾಯಿಯ ಮಕ್ಕಳು ಮತ್ತು ಮೊಮ್ಮಕ್ಕಳು ಇಬ್ಬರು ಕೂಡ ಆಸ್ತಿಯಲ್ಲಿ ಪಾಲು ಪಡೆಯುತ್ತಾರೆ. ಆದರೆ ತಾಯಿಯ ಆಸ್ತಿಯನ್ನು ಮೋಸ ಮಾಡಿ ಪಡೆಯುವ ಹಾಗಿಲ್ಲ, ಹಾಗೆಯೇ ಒತ್ತಾಯ ಮಾಡಿ ಪಡೆಯುವ ಹಾಗಿಲ್ಲ. ಒಂದು ವೇಳೆ ತಾಯಿಯಿಂದ ಆಸ್ತಿ ಬರೆಸಿಕೊಂಡಿದ್ದರೆ, ಅದಕ್ಕೆ ಸರಿಯಾದ ಸಾಕ್ಷಿ ಇದ್ದರೆ, ಆಗ ಮಾತ್ರ ಆ ಆಸ್ತಿ ಮಕ್ಕಳು ಅಥವಾ ಮೊಮ್ಮಕ್ಕಳಿಗೆ ಸಿಗುತ್ತದೆ.

Do children have share in mother’s property, know what the law says

English Summary : Children have rights over the inherited property of the father’s. But what is the right of children on mother’s property? What are the rules for this? Let’s know everything today