ಮನೆ ಕಟ್ಟಿ ನೋಡು ಮದುವೆ ಆಗಿ ನೋಡು ಎನ್ನುವ ಮಾತೇ ಇದೆ. ಅಂದ್ರೆ ಇವೆರಡೂ ಕೂಡ ಬಹಳ ಕಷ್ಟದ ಕೆಲಸ, ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟುವ ಕನಸು ಈಡೇರಿಸಿಕೊಳ್ಳುವುದಕ್ಕೆ ಜನ ಪರದಾಡುತ್ತಿದ್ದಾರೆ.
ಯಾಕೆಂದರೆ ಮನೆ ಕಟ್ಟುವ (Own House) ಕಾರ್ಯ ಅಷ್ಟು ಸುಲಭವಲ್ಲ ಅದರಲ್ಲೂ ಈ ದುಬಾರಿ ದುನಿಯಾದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗಿದೆ. ಹಾಗಾಗಿ ಮನೆಯಲ್ಲಿ ಕಟ್ಟಲು ಬೇಕಾಗಿರುವ ವಸ್ತುಗಳ ಖರೀದಿ ಕೂಡ ಬಹಳ ದೊಡ್ಡ ಆರ್ಥಿಕ ಹೊರೆಯಾಗಿದೆ.
ಕೇವಲ 22,000ಕ್ಕೆ ಹೀರೋ ಡಿಲಕ್ಸ್ ಬೈಕ್ ಖರೀದಿಸಿ! 65km ಮೈಲೇಜ್, ಸಿಂಗಲ್ ಓನರ್
ಮನೆ ಕಟ್ಟಲು ಬೇಕು ಪರವಾನಗಿ! (You need government permission to build a house)
ನಾವು ನಮ್ಮ ಜಾಗ ಇದೆ ಎನ್ನುವ ಕಾರಣಕ್ಕೆ ಸುಲಭವಾಗಿ ಮನೆ ನಿರ್ಮಾಣ ಮಾಡಲು ಸಾಧ್ಯವಲ್ಲ. ಒಂದು ಮನೆ ನಿರ್ಮಾಣವಾಗಲು ಸರ್ಕಾರದಿಂದ ಬೇರೆ ಬೇರೆ ರೀತಿಯ ಪರವಾನಗಿ ಕೂಡ ಪಡೆದುಕೊಳ್ಳಬೇಕು. ಇಲ್ಲವಾದರೆ ಕೆಲವು ಕಾನೂನಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದ್ರೆ ಮನೆ ನಿರ್ಮಾಣಕ್ಕೆ ಯಾರ ಪರವಾಗಿ ಬೇಕು ಯಾವ ರೀತಿ ತೆಗೆದುಕೊಳ್ಳುವುದು ಮೊದಲಾದ ವಿಷಯದ ಬಗ್ಗೆ ಇಲ್ಲಿದೆ ವಿವರ!
ಮನೆ ನಿರ್ಮಾಣ ಮಾಡುವುದಿದ್ದರೆ ಮೊದಲಿಗೆ ಬೆಂಗಳೂರು ನಗರವಾಗಿದ್ದರೆ ಬಿಬಿಎಂಪಿ ಪ್ಲಾನ್ ಸೆಕ್ಷನ್ ಅನ್ನು, ಕನಿಷ್ಠ ಮನೆ ನಿರ್ಮಾಣದ ಎರಡು ತಿಂಗಳಿಗಿಂತ ಮೊದಲು ತೆಗೆದುಕೊಳ್ಳಬೇಕು ನೀವು ಸಬ್ಮಿಟ್ ಮಾಡುವ ದಾಖಲೆಗಳು ಸರಿಯಾಗಿದ್ದರೆ, ಕೇವಲ 20 ದಿನಗಳಲ್ಲಿ ಪರವಾನಗಿ ಪಡೆಯಬಹುದು. ಒಂದು ವೇಳೆ ದಾಖಲೆಗಳು ಸರಿಯಾಗಿ ಇಲ್ಲದೆ ಇದ್ರೆ ಈ ಪ್ರೋಸೆಸ್ ಇನ್ನಷ್ಟು ದಿನ ಮುಂದಕ್ಕೆ ಹೋಗಬಹುದು.
ಎ ಖಾತಾ ಅಥವಾ ಕನ್ವರ್ಷನ್ ಮಾಡುವ ಸೈಟ್ ಆಗಿದ್ದರೆ ಬಿಬಿಎಂಪಿ ಪರವಾನಿಗೆ ಬಿ – ಖಾತಾ ಅಥವಾ ರೆವೆನ್ಯೂ ಸೈಟ್ ಆಗಿದ್ರೆ, ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿರುವ ಸೈಟ್ ಆಗಿದ್ದರೆ ಗ್ರಾಮ ಪಂಚಾಯತ್ ಪರವಾನಿಗೆ ಪಡೆದುಕೊಳ್ಳಬೇಕು.
ಈ ಹಳೆಯ 100 ರೂಪಾಯಿ ನೋಟು ನಿಮ್ಮತ್ರ ಇದ್ರೆ ಸಿಗುತ್ತೆ 40 ಲಕ್ಷ ರೂಪಾಯಿ!
ಅಷ್ಟೇ ಅಲ್ಲ ನೀವು ನಿಮ್ಮ ಹಳೆಯ ಮನೆಯನ್ನ ಡೆಮಾಲಿಶ್ ಮಾಡುವುದಿದ್ದರೆ ಡೆಮಾಲಿಸಿ ಮಾಡುವುದಕ್ಕೂ ಮೊದಲು ಬಿಬಿಎಂಪಿ ಅಥವಾ ಗ್ರಾಮ ಪಂಚಾಯತ್ ಗೆ ಮಾಹಿತಿಯನ್ನು ನೀಡಬೇಕು. ಬೇರೆಯವರಿಗೆ ತೊಂದರೆಯಾಗದ ರೀತಿಯಲ್ಲಿ ಸರ್ಕಾರ ಗಮನ ವಹಿಸುತ್ತದೆ.
ಹಾಗಾಗಿ ಡೆಮಾಲಿಶ್ ಮಾಡುವ ಮೊದಲ ದಿನವೇ ಮಾಹಿತಿ ನೀಡುವುದು ಒಳ್ಳೆಯದು. ಡೆಮಾಲಿಶ್ ಮಾಡಿಕೊಳ್ಳುವ ಸಂದರ್ಭದಲ್ಲಿ ಬೇರೆಯವರಿಗೆ ತೊಂದರೆ ಆಗದಂತೆ ರಕ್ಷಣೆ ಒದಗಿಸಲು ನೀವು ಪೊಲೀಸ್ ಪರವಾನಗಿ ಪಡೆದುಕೊಳ್ಳುವುದು ಕೂಡ ಒಳ್ಳೆಯದು.
ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಸಿಗಲಿದೆ 25,000 ಸ್ಕಾಲರ್ಶಿಪ್; ಅರ್ಜಿ ಸಲ್ಲಿಸಿ
ಎಷ್ಟು ಜನ ಡೆಮಾಲಿಶ್ ಮಾಡಲು ಪರ್ಮಿಷನ್ ತೆಗೆದು ಕೊಂಡು ಡೆಮೊಲಿಶ ಮಾಡದೆ ಅದೇ ಬಿಲ್ಡಿಂಗ್ ಮೇಲೆ ಮತ್ತೆ ಬಿಲ್ಡಿಂಗ್ ಕಟ್ಟಬಹುದು. ಅಂತ ಸಂದರ್ಭದಲ್ಲಿ ಹಳೆಯ ಕಟ್ಟಡದ ಸ್ಟ್ರಕ್ಚರ್ ನ್ನು ಹೊಸ ಕಟ್ಟಡ ಹೊಂದಿರುವುದರಿಂದ, ಇದು ಮುಂದೆ ಯಾವುದೇ ರೀತಿಯಲ್ಲಿ ಕಾನೂನಾತ್ಮಕ ಸಮಸ್ಯೆಯನ್ನು ತಂದಿಡಬಹುದು. ಹಾಗಾಗಿ ಡೆಮೋನಿಶ್ ಮಾಡದೆ ಇರುವ ಕಟ್ಟಡದ ಮೇಲೆ ಕಟ್ಟಡ ನಿರ್ಮಾಣ ಮಾಡುವುದು ಸೂಕ್ತವಲ್ಲ.
ಇನ್ನು ಕಟ್ಟಡ ನಿರ್ಮಾಣಕ್ಕೆ ಮತ್ತು ಡೆಮೋಲಿಷ್ ಮಾಡಿಕೊಳ್ಳಲು ಎಷ್ಟು ಅವಧಿಯವರೆಗೆ ಪರ್ಮಿಷನ್ ಇರುತ್ತದೆಯೋ ಅಷ್ಟರಲ್ಲಿ ಕೆಲಸ ಮುಗಿಸಬೇಕು. ಇಲ್ಲವಾದರೆ ಮತ್ತೆ ಹೊಸ ಅರ್ಜಿ ಸಲ್ಲಿಸಿ ಅದು ಅಪ್ರೂವ್ ಆಗಿ ನಂತರ ಮತ್ತೆ ಕೆಲಸ ಆರಂಭಿಸಬೇಕಾಗುತ್ತದೆ.
ಇಷ್ಟು ಮಾತ್ರವಲ್ಲದೆ ನೀವು ಮನೆ ನಿರ್ಮಾಣ ಮಾಡಿಕೊಳ್ಳಲು ಕೊಳ ಚರಂಡಿ ವ್ಯವಸ್ಥೆ ಗಾಗಿ, ರೈನ್ಸ್ ಮ್ಯಾಟರ್ ಹಾರ್ವೆಸ್ಟಿಂಗ್ ಗಾಗಿ, ಕೆಪಿಟಿಸಿಎಲ್ ಸೇವೆಗಾಗಿ ಪರವಾನಗಿ ಬೇಕು.
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ 9250 ರೂಪಾಯಿ
ನೀವು ನಿರ್ಮಾಣ ಮಾಡಿಕೊಳ್ಳುತ್ತಿರುವ ಮನೆ ಅರಣ್ಯ ಪ್ರದೇಶದಲ್ಲಿ ಇದೆಯೋ ಕೈಗಾರಿಕಾ ವಲಯದಲ್ಲಿದೆಯೂ ಎನ್ನುವುದರ ಬಗ್ಗೆ ಮಾಹಿತಿ ನೀಡಿ ಎಲ್ಲದಕ್ಕೂ ಎನ್ ಓ ಸಿ ತೆಗೆದುಕೊಳ್ಳಬೇಕಾಗುತ್ತದೆ. ಇಷ್ಟೆಲ್ಲ ಪರವಾನಿಗೆ ಇದ್ದಾಗ ಮಾತ್ರ ನೀವು ಕಟ್ಟಡ ನಿರ್ಮಾಣ ಮಾಡಲು ಸಾಧ್ಯ ಇಲ್ಲವಾದರೆ ಮುಂದೆ ಎಂದಾದರೂ ಕಾನೂನಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಎಚ್ಚರದಿಂದಿರಿ.
Do you know what permission is required while building a new house
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.