ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ 9250 ರೂಪಾಯಿ
Post Office Scheme : ಪತಿ ಪತ್ನಿ ಹೂಡಿಕೆಗೆ ಅಂಚೆ ಕಚೇರಿಯ ಈ ಯೋಜನೆ ಬೆಸ್ಟ್ ; ಪಡೆಯಬಹುದು ಪ್ರತಿ ತಿಂಗಳು 9250!
Post Office Scheme : ಸುಮಾರು 13ಕ್ಕೂ ಹೆಚ್ಚಿನ ಉಳಿತಾಯ ಯೋಜನೆ (savings scheme) ಗಳನ್ನು ಜನರಿಗೆ ಕೊಟ್ಟಿರುವ ಭಾರತೀಯ ಅಂಚೆ ಕಚೇರಿ (Indian post office) ಅತ್ಯಂತ ಸುರಕ್ಷಿತವಾದ ಹಾಗೂ ಅಪಾಯ ಮುಕ್ತ ಹೂಡಿಕೆಯ ಭರವಸೆಯನ್ನು ಗ್ರಾಹಕರಿಗೆ ನೀಡುತ್ತದೆ.
ಸರ್ಕಾರದ ಬೆಂಬಲದೊಂದಿಗೆ ನಡೆಯುವ ಅಂಚೆ ಕಚೇರಿ ಜನರಿಗೆ ಉತ್ತಮ ರೀತಿಯ ಉಳಿತಾಯ ಯೋಜನೆಗಳನ್ನು ಪರಿಚಯಿಸಿದ್ದು, ಇತ್ತೀಚಿಗೆ ಬ್ಯಾಂಕಿನಲ್ಲಿ ಠೇವಣಿ (deposit) ಇಡುವುದಕ್ಕಿಂತಲೂ ಅಂಚೆ ಕಚೇರಿಯಲ್ಲಿ ಠೇವಣಿ ಇಟ್ಟರೆ ಹೆಚ್ಚಿನ ಬಡ್ಡಿ ದರವನ್ನು ಕೂಡ ಪಡೆದುಕೊಳ್ಳಬಹುದು.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚಿನ ಹಣ ಇದ್ರೆ ಕಟ್ಟಬೇಕು ಹೆಚ್ಚಿನ ತೆರಿಗೆ!
ದಂಪತಿಗಳಿಗೆ ವಿಶೇಷ ಯೋಜನೆಯ ಪರಿಚಯಿಸಿದ ಅಂಚೆ ಕಚೇರಿ!
ಭವಿಷ್ಯದ ದೃಷ್ಟಿಯಿಂದ ದಂಪತಿಗಳು ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ ಜೀವನ ನಡೆಸುವ ಸಲುವಾಗಿ ಅಂಚೆ ಕಚೇರಿಯ ಈ ಪ್ರಮುಖ ಯೋಜನೆಯೆಲ್ಲಿ ಹೂಡಿಕೆ ಮಾಡಬಹುದು. ಜಂಟಿಯಾಗಿ ಖಾತೆ (joint account) ತೆರೆಯುವುದರ ಮೂಲಕ ಪ್ರತಿ ತಿಂಗಳು 9250ಗಳನ್ನು ಪಿಂಚಣಿ (pension) ರೂಪದಲ್ಲಿ ಪಡೆಯಲು ಸಾಧ್ಯವಿದೆ. ಹಾಗಾದರೆ ಇದಕ್ಕೆ ಎಷ್ಟು ಠೇವಣಿ ಇಡಬೇಕು ಎನ್ನುವುದನ್ನು ನೋಡೋಣ.
ಅಂಚೆ ಕಚೇರಿಯ ಮಾಸಿಕ ಠೇವಣಿ ಯೋಜನೆ! (Post office monthly income scheme)
POMIS ಯೋಜನೆಯನ್ನು ಅಂಚೆ ಕಚೇರಿ ಪರಿಚಯಿಸಿದ್ದು, ಇದರಲ್ಲಿ ಗಂಡ ಹೆಂಡತಿ ಜಂಟಿಯಾಗಿ ಖಾತೆ ತೆರೆಯುವುದರ ಮೂಲಕ ಪಿಂಚಣಿ ರೂಪದಲ್ಲಿ ಹಣವನ್ನು ಹಿಂಪಡೆಯಬಹುದು. ನೀವು ಹೂಡಿಕೆ ಮಾಡುವ ಮೊತ್ತದ ಆಧಾರದ ಮೇಲೆ 9250ಗಳನ್ನು ಪ್ರತಿ ತಿಂಗಳು ಪಡೆದುಕೊಳ್ಳಲು ಸಾಧ್ಯ. ಇದೊಂದು ಬಹಳ ಉತ್ತಮವಾಗಿರುವ ಯೋಜನೆ ಆಗಿದ್ದು, ಇದರಲ್ಲಿ ಹೂಡಿಕೆ ಮಾಡಿದರೆ ಉತ್ತಮ ಆದಾಯವನ್ನು ಗಳಿಸಬಹುದು.
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ 5000 ಹೂಡಿಕೆ ಮಾಡಿದ್ರೆ 5 ಲಕ್ಷ ನಿಮ್ಮ ಕೈ ಸೇರುತ್ತೆ!
ಈ ಯೋಜನೆಯಲ್ಲಿ ಗಂಡ ಹೆಂಡತಿ ಜಂಟಿಯಾಗಿ ಖಾತೆ ತೆರೆದು 15 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಇದಕ್ಕೆ ಅಂಚೆ ಕಚೇರಿ 7.4% ಬಡ್ಡಿ ದರವನ್ನು ನೀಡುವುದರಿಂದ ವಾರ್ಷಿಕ 1,11,000 ರೂಪಾಯಿಗಳನ್ನು ಬಡ್ಡಿ ಆಗಿಯೇ ಪಡೆಯುತ್ತೀರಿ. ನಿಮ್ಮ ಹೂಡಿಕೆಯ ಮೊತ್ತ ಹಾಗೂ ಬಡ್ಡಿಯನ್ನು ಡಿವೈಡ್ ಮಾಡಿ ನಿಮಗೆ ಪ್ರತಿ ತಿಂಗಳು 9250ಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ.
ಮತ್ತೆ ಬರ್ತಾ ಇದೆ Yamaha RX 100, ಯುವಕರ ಫೇವರೆಟ್ ಬೈಕ್ ರೀ ಎಂಟ್ರಿ
ಮಾಸಿಕ ಠೇವಣಿಯ ನಿಯಮ!
POMIS ನಲ್ಲಿ ನೀವು ಹಣವನ್ನು ಠೇವಣಿ ಮಾಡುವುದಾದರೆ, ಈ ನಿಯಮ ನೆನಪಿನಲ್ಲಿ ಇರಲಿ ನೀವು ಠೇವಣಿ ಇಟ್ಟ ಹಣವನ್ನು ಒಂದು ವರ್ಷಗಳ ಬಳಿಕ ಪಡೆಯಬಹುದು. ಆದರೆ ಮೂರು ವರ್ಷಗಳ ಅವಧಿಯ ಒಳಗೆ ನೀವು ನಿಮ್ಮ ಠೇವಣಿ ಹಣವನ್ನು ಹಿಂಪಡೆಯುವುದಾದರೆ 2% ನಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ.
ಈ ಯೋಜನೆಯ ಮುಕ್ತಾಯದ ಅವಧಿ ಐದು ವರ್ಷಗಳು ನೀವು ಮೂರು ವರ್ಷಗಳ ನಂತರ ಠೇವಣಿ ಹಿಂಪಡೆಯುವುದಾದರೆ 1% ಅನ್ನು ನಿಮ್ಮ ಠೇವಣಿಯಲ್ಲಿ ಕಡಿತಗೊಳಿಸಲಾಗುವುದು.
ನಿಮ್ಮ ಮಗುವಿನ ಹೆಸರಿನಲ್ಲಿ 500ರೂ. ಹೂಡಿಕೆ ಮಾಡಿದ್ರೆ, ಲಕ್ಷಕ್ಕೂ ಹೆಚ್ಚು ಬೆನಿಫಿಟ್!
In this post office scheme both husband and wife get 9250 rupees