ಮತ್ತೆ ಬರ್ತಾ ಇದೆ Yamaha RX 100, ಯುವಕರ ಫೇವರೆಟ್ ಬೈಕ್ ರೀ ಎಂಟ್ರಿ

Story Highlights

Yamaha RX 100 Bike : ಇದೀಗ ಮತ್ತೆ 225.9 ಸಿಸಿ ಎಂಜಿನ್ ಹೊಂದಿರುವ ಯಮಹಾ RX 100 Bike ಮಾರುಕಟ್ಟೆಗೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Yamaha RX 100 Bike : ಇದಕ್ಕೆ ನಾವು “ಹಳೆಯ ಪ್ರೀತಿ ಹೊಸ ರೀತಿಯಲ್ಲಿ* ಎನ್ನುವ ಟ್ಯಾಗ್ ಲೈನ್ ಕೊಟ್ಟರೆ ಹೆಚ್ಚು ಸೂಕ್ತ ಎನಿಸಬಹುದು. ಖಂಡಿತವಾಗಿಯೂ ನಾವು ಹೇಳುವ ವಿಚಾರ ತಿಳಿದರೆ ನಿಮಗೆ ನಿಮ್ಮ ಹಳೆಯ ಪ್ರೀತಿ ಸಿಕ್ಕಷ್ಟೇ ಖುಷಿ ಆಗಬಹುದು.

ನಿಮಗೆಲ್ಲಾ ನೆನಪಿದೆಯಾ ಯಮಹಾ RX 100 ? ಇದು ಒಂದು ಕಾಲದಲ್ಲಿ ಅಪಾರ ಜನರ ಪ್ರೀತಿಯಾಗಿತ್ತು. ಕೆಲವು ವರ್ಷಗಳ ನಂತರ ಯಮಹ ಈ ಬೈಕ್ ಉತ್ಪಾದನೆಯನ್ನು ನಿಲ್ಲಿಸಿದ ಕಾರಣ, ಸಾಕಷ್ಟು ಜನ ತಮ್ಮ ಪ್ರೀತಿಯನ್ನು ಕಳೆದುಕೊಂಡರು ಎನ್ನಬಹುದು. ಈಗ ಹೊಸ ರೂಪದಲ್ಲಿ ಮತ್ತೆ ನಿಮ್ಮ ಪ್ರೀತಿಯ ಯಮಹಾ RX 100 ರೋಡಿಗಿಳಿಯಲಿದೆ.

ನಿಮ್ಮ ಮಗುವಿನ ಹೆಸರಿನಲ್ಲಿ 500ರೂ. ಹೂಡಿಕೆ ಮಾಡಿದ್ರೆ, ಲಕ್ಷಕ್ಕೂ ಹೆಚ್ಚು ಬೆನಿಫಿಟ್!

ಯಮಹಾ RX 100 ಮತ್ತೆ ಬಿಡುಗಡೆ!

1990ರಲ್ಲಿ ಸಾಕಷ್ಟು ಜನ ಈ ಬೈಕ್ ಆರಂಭವಾದ ನಂತರ ಖರೀದಿ ಮಾಡಿದ್ದರು. 1996 ರಲ್ಲಿ ಯಮಹಾ ಈ ಬೈಕ್ ಉತ್ಪಾದನೆಯನ್ನು ಸ್ಥಗಿತಗೊಳಿಸಿತು. ಇದೀಗ ಮತ್ತೆ 225.9 ಸಿಸಿ ಎಂಜಿನ್ ಹೊಂದಿರುವ ಯಮಹಾ RX 100 Bike ಮಾರುಕಟ್ಟೆಗೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇಂಜಿನ್ ನಲ್ಲಿ ಬದಲಾವಣೆ!

ಯಮಹಾ RX 100 ಬೈಕ್ ಹಿಂದಿಗಿಂತಲೂ ಹೆಚ್ಚು ಶಕ್ತಿಶಾಲಿ ಇಂಜಿನ್ ಅನ್ನು ಹೊಂದಿರಲಿದೆ. BS-6 ಹಂತ 2 ಹೊರಸುವಿಕೆಯ ಮಾನದಂಡಗಳ ಆಧಾರದ ಮೇಲೆ ಇಂಜಿನ್ ವಿನ್ಯಾಸ ಮಾಡಲಾಗಿದ್ದು, ಹಿಂದೆಂದಿಗಿಂತಲೂ ಪವರ್ ಫುಲ್ ಆಗಿ ಹಾಗೂ ಕೆಲವು ಬದಲಾವಣೆಗಳ ಜೊತೆಗೆ ಯಮಹಾ RX 100 ರೋಡಿಗಿಳಿಯಲಿದೆ.

ಸ್ವಂತ ಆಸ್ತಿ, ಜಮೀನು ಇರೋರಿಗೆ ವಿಶೇಷ ತೆರಿಗೆ ನಿಯಮ; ಏಪ್ರಿಲ್ 1ರಿಂದಲೇ ಜಾರಿಗೆ

Yamaha RX100 bike Re Launchನಯವಾದ ವಿನ್ಯಾಸ!

ಹೊಸದಾಗಿ ಮಾರುಕಟ್ಟೆಗೆ ಬರಲಿರುವ ಯಮಹಾ RX 100 Bike  ನಲ್ಲಿ ನೀವು ಖಂಡಿತವಾಗಿಯೂ ಹೊಸದಾಗಿರುವುದನ್ನೇನಾದರೂ ನಿರೀಕ್ಷೆ ಮಾಡಬಹುದು. ಸಿಗ್ನೇಚರ್ ಸ್ಟೈಲಿಂಗ್ ನೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಟಿಯರ್ ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಸ್ಲಾಟ್ ಆಗಿರುವ ಸೀಟ್, ದೊಡ್ಡ ಹ್ಯಾಂಡಲ್ ಬಾರ್, ದೊಡ್ಡ ರೌಂಡ್ ಹೆಡ್ ಲೈಟ್, ಸೆಮಿ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ನೀಡಲಾಗಿದ್ದು ರೆಟ್ರೋ ಲುಕ್ ಹೊಂದಿದ್ದರು ಕೂಡ ಸಂಪೂರ್ಣ ಆಧುನಿಕತೆಯನ್ನು ಅಳವಡಿಸಲಾಗಿದೆ ಎನ್ನಬಹುದು.

ಪತ್ನಿ ಹೆಸರಿನಲ್ಲಿ ಆಸ್ತಿ ಖರೀದಿ ಮಾಡೋರಿಗೆ ಹೊಸ ರೂಲ್ಸ್! ಇಲ್ಲಿದೆ ಮಹತ್ವದ ಮಾಹಿತಿ

ಅತ್ಯುತ್ತಮ ಎಂಜಿನ್!

ಯಮಹಾ RX 100 ಬೈಕ್ ನಿಮಗೆ ನೆನಪಿದ್ದರೆ, ಅದರಲ್ಲಿ ಕೇವಲ 80 cc ಎಂಜಿನ್ ಅಳವಡಿಸಲಾಗಿತ್ತು. ಅದು ಎರಡು ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಮಾದರಿಯ ಎಂಜಿನ್ ಅನ್ನು ಅಳವಡಿಸಲಾಗಿತ್ತು. ಆದರೆ ಈಗ ಆಗಲೆ ಹೇಳಿರುವ ಹಾಗೆ ಯಮಹಾ RX 100 ಹೆಚ್ಚು ಪವರ್ ಫುಲ್ ಆಗಿರುವ ಎಂಜಿನ್ ನೊಂದಿಗೆ ಮಾರುಕಟ್ಟೆಗೆ ಬರಲಿದೆ.

ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ, ಈ ಬೈಕ್, 225.9 ಸಿಸಿ ಕೆಪ್ಯಾಸಿಟಿ ಹೊಂದಿದ್ದು, ನಾಲ್ಕು ಸ್ಟ್ರೋಕ್ ಎಂಜಿನ್ ನೊಂದಿಗೆ ಬರುತ್ತದೆ. ಈ ಎಂಜಿನ್ 20.1 ಬಿಎಚ್‌ಪಿ ಪವರ್ ಹಾಗೂ 19.93 ಎನ್ ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮನೆ, ಆಸ್ತಿ, ಜಮೀನಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ! ಇಲ್ಲಿದೆ ಮಹತ್ವದ ಮಾಹಿತಿ

ಇನ್ನು ಹೊಸದಾಗಿ ಮಾರುಕಟ್ಟೆಗೆ ಹೊಸ ವಿನ್ಯಾಸದೊಂದಿಗೆ ಬರಲಿರುವ ಯಮಹಾ RX 100 ಆರಂಭಿಕ ಎಕ್ಸ್ ಶೋರೂಮ್ ಬೆಲೆ 1.25 ಲಕ್ಷ ರೂಪಾಯಿಗಳು ಇರಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಯಾವಾಗ ಈ ಬೈಕ್ ಬಿಡುಗಡೆ ಆಗಲಿದೆ ಎನ್ನುವ ಅಧಿಕೃತ ಮಾಹಿತಿಯನ್ನು ಸದ್ಯದಲ್ಲಿಯೇ ಯಮಹಾ ಕಂಪನಿ ಬಹಿರಂಗಪಡಿಸುವ ಸಾಧ್ಯತೆ ಇದೆ.

Yamaha RX 100 Bike is back, re-entry of the youth favorite bike

Related Stories