ಪತ್ನಿ ಹೆಸರಿನಲ್ಲಿ ಆಸ್ತಿ ಖರೀದಿ ಮಾಡೋರಿಗೆ ಹೊಸ ರೂಲ್ಸ್! ಇಲ್ಲಿದೆ ಮಹತ್ವದ ಮಾಹಿತಿ
ಭಾರತದಲ್ಲಿ ಆಸ್ತಿ ಖರೀದಿ (property purchase) ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಆದರೆ ಯಾವುದೇ ರೀತಿಯ ಆಸ್ತಿ ಖರೀದಿ (Property) ಮಾಡುವುದಿದ್ದರೂ ಕೂಡ ಅದಕ್ಕೆ ಅದರದ್ದೇ ಆದ ನೀತಿ ನಿಯಮಗಳು ಇವೆ.
ನೀವು ಯಾವ ರೀತಿಯ ಆಸ್ತಿ ಖರೀದಿ ಮಾಡುತ್ತೀರಿ ಮತ್ತು ಎಷ್ಟಕ್ಕೆ ಖರೀದಿ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ನೀವು ತೆರಿಗೆ (Tax) ಯನ್ನು ಕೂಡ ಪಾವತಿ ಮಾಡಬೇಕಾಗುತ್ತದೆ. ಹಾಗಾಗಿ ಯಾವುದೇ ರೀತಿಯ ಆಸ್ತಿ ಖರೀದಿ ಮಾಡುವುದಕ್ಕೂ ಮೊದಲು ತೆರಿಗೆ ನಿಯಮಗಳನ್ನ ತಿಳಿದುಕೊಳ್ಳುವುದು ಹಾಗೂ ಅದನ್ನು ಪಾಲಿಸುವುದು ಬಹಳ ಮುಖ್ಯ.
ಮನೆ, ಆಸ್ತಿ, ಜಮೀನಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ! ಇಲ್ಲಿದೆ ಮಹತ್ವದ ಮಾಹಿತಿ
ಸಾಮಾನ್ಯವಾಗಿ ಆಸ್ತಿ ಖರೀದಿ ಮಾಡುವವರು ತಮ್ಮ ಹೆಸರಿನಲ್ಲಿ ಮಾತ್ರವಲ್ಲದೆ ಕುಟುಂಬದ ಇತರ ಸದಸ್ಯರ ಹೆಸರಿನಲ್ಲಿಯೂ ಕೂಡ ಕೆಲವು ಆಸ್ತಿ ಖರೀದಿ ಮಾಡುವ ಸಾಧ್ಯತೆ ಇರುತ್ತದೆ. ಈ ರೀತಿ ಬೇರೆ ಬೇರೆ ರೀತಿಯ ಆಸ್ತಿ ಖರೀದಿಯ ಮೇಲೆ ಟ್ಯಾಕ್ಸ್ ವಿನಾಯಿತಿ (tax deduction) ಕೂಡ ಪಡೆದುಕೊಳ್ಳಬಹುದು.
ಇದೀಗ ಹೆಂಡತಿಯ ಹೆಸರಿನಲ್ಲಿ ಪತಿ ಆಸ್ತಿ ಖರೀದಿ ಮಾಡಿದರೆ, ಆ ಆಸ್ತಿಯ ನಿಜವಾದ ಹಕ್ಕುದಾರರು ಯಾರಾಗಿರುತ್ತಾರೆ ಎನ್ನುವ ಬಗ್ಗೆ ಹೈಕೋರ್ಟ್ ತನ್ನ ತೀರ್ಪನ್ನು ನೀಡಿದೆ.
ಪ್ರಕರಣದ ಹಿನ್ನೆಲೆ!
ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಅಲಹಾಬಾದ್ ಹೈಕೋರ್ಟ್ (Allahabad High court) ಈ ಮಹತ್ವವಾದ ತೀರ್ಪನ್ನು ನೀಡಿದೆ. ಪತಿ ತನ್ನ ಪತ್ನಿಯ ಹೆಸರಿನಲ್ಲಿ ಆಸ್ತಿ ಖರೀದಿ (Buy Property) ಮಾಡಿದರೆ ಆ ಆಸ್ತಿಯ ವಾರಸುದಾರರು ಯಾರು ಎನ್ನುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ವ್ಯಕ್ತಿ ಖರೀದಿಸಿದ ಆಸ್ತಿಗೆ ನಿಜವಾಗಿ ಪತ್ನಿ ಮಾತ್ರ ಹಕ್ಕುದಾರಳಾಗಿರುತ್ತಾಳೆಯೇ ಅಥವಾ ಕುಟುಂಬದ ಇತರ ಸದಸ್ಯರಿಗೂ ಅದರಲ್ಲಿ ಪಾಲು ಇದೆಯೇ ? ಎನ್ನುವ ಬಗ್ಗೆ ಕೇಸ್ ಒಂದು ಕೋರ್ಟ್ ಮೆಟ್ಟಿಲೇರಿತ್ತು.
ಆಧಾರ್ ಕಾರ್ಡ್ ಕಳೆದು ಹೋಗಿದ್ಯಾ? ಟೆನ್ಶನ್ ಬೇಡ, ಹೀಗೆ ಇನ್ನೊಂದು ಕಾರ್ಡ್ ಪಡೆಯಿರಿ
ಇದೀಗ ಹೈಕೋರ್ಟ್ ಈ ಬಗ್ಗೆ ಮಹತ್ವದ ತೀರ್ಮಾನ ನೀಡಿದ್ದು, ಕುಟುಂಬದಲ್ಲಿ ಪತಿ ಪತ್ನಿಯ (husband and wife) ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿದರೆ ಅದು ಕುಟುಂಬಕ್ಕೆ ಸೇರಿದ ಆಸ್ತಿ ಎನಿಸಿಕೊಳ್ಳುತ್ತದೆ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಮೃತ ತಂದೆಯ ಹೆಸರಿನಲ್ಲಿ ಇರುವ ಆಸ್ತಿಯ ಸಹ ಮಾಲೀಕತ್ವವನ್ನು ಪಡೆದುಕೊಳ್ಳಲು ಮಗ ಅರ್ಜಿ ಸಲ್ಲಿಸಿರುವ ಬಗ್ಗೆ ಕೋರ್ಟ್ ವಾದ ವಿವಾದವನ್ನು ಆಲಿಸಿದೆ. ಭಾರತೀಯ ಸಾಕ್ಷಿಯ ಕಾಯ್ದೆ 114ರ ಅಡಿಯಲ್ಲಿ ಈ ರೀತಿಯ ಆಸ್ತಿಯನ್ನು ತಡೆಹಿಡಿಯಲು ಅವಕಾಶ ಇದೆ.
ಸಾಮಾನ್ಯವಾಗಿ ಹಿಂದೂ ಧರ್ಮಕ್ಕೆ ಸೇರಿದ ಪತಿ ಪತ್ನಿಯ ಹೆಸರಿನಲ್ಲಿ ಆಸ್ತಿ ಖರೀದಿ ಮಾಡುವ ಸಾಧ್ಯತೆ ಇರುತ್ತದೆ. ಆದರೆ ಆತ ಮನೆಯ ಹಿತಾಸಕ್ತಿಯ ದೃಷ್ಟಿಯಿಂದ ಮನೆಯಲ್ಲಿಯೇ ಇರುವ ಗೃಹಿಣಿ ಪತ್ನಿ ಹೆಸರಿಗೆ ಆಸ್ತಿ ಖರೀದಿ ಮಾಡಿರಬಹುದು ಇಂತಹ ಸಂದರ್ಭದಲ್ಲಿ ಆ ಆಸ್ತಿಯ ಹಕ್ಕು ಮನೆಯ ಇತರ ಸದಸ್ಯರಿಗೂ ಇರುತ್ತದೆ ಎಂದು ತಿಳಿಸಲಾಗಿದೆ.
ಪೋಸ್ಟ್ ಆಫೀಸ್ ಬಂಪರ್ ಆಫರ್! 25 ಸಾವಿರ ಹೂಡಿಕೆಗೆ ಸಿಗುತ್ತೆ 18 ಲಕ್ಷ ರೂಪಾಯಿ
ನ್ಯಾಯಾಲಯದ ತೀರ್ಪು ಏನು?
ಒಬ್ಬ ವ್ಯಕ್ತಿ ತನ್ನ ಗೃಹಿಣಿ ಪತ್ನಿಯ ಹೆಸರಿನಲ್ಲಿ ಆಸ್ತಿಯನ್ನು ಖರೀದಿ ಮಾಡಿದರೆ ಅದು ಆತನ ಸ್ವಂತ ಆದಾಯ ಎಂದು ಪರಿಗಣಿಸಲಾಗುತ್ತದೆ. ಹಾಗೂ ಹಿಂದೂ ಅವಿಭಕ್ತ ಕುಟುಂಬದಲ್ಲಿ ಈ ರೀತಿಯ ಆಸ್ತಿಯ ಹಕ್ಕನ್ನು ಕುಟುಂಬದ ಸದಸ್ಯರು ಕೂಡ ಪಡೆದುಕೊಳ್ಳುತ್ತಾರೆ.
ಸರಳವಾಗಿ ಹೇಳುವುದಾದರೆ ಹೆಂಡತಿಯ ಹೆಸರಿನಲ್ಲಿ ಪ್ರತಿ ಆಸ್ತಿಯನ್ನು ಖರೀದಿ ಮಾಡಿದರು ಕೂಡ ಆ ಆಸ್ತಿಯ ಹಕ್ಕು ಆಕೆಯ ಮಕ್ಕಳಿಗೆ ಹಾಗೂ ಕುಟುಂಬದಲ್ಲಿ ಇರುವ ಅತ್ತೆ ಮಾವ ಮೊದಲಾದ ಸದಸ್ಯರಿಗೂ ಸೇರಬೇಕು ಹೊರತು ಆಕೆ ಮಾತ್ರ ಇದು ತನ್ನ ಹಕ್ಕು ಎಂದು ಹೇಳಲು ಸಾಧ್ಯವಿಲ್ಲ.
ಸದ್ಯ ಈ ಬಗ್ಗೆ ಅಲಹಾಬಾದ್ ಹೈಕೋರ್ಟ್ ಪತ್ನಿಯ ಹೆಸರಿನಲ್ಲಿ ತೆಗೆದುಕೊಂಡ ಆಸ್ತಿ ಕುಟುಂಬದ ಆಸ್ತಿ ಎಂದು ಪರಿಗಣಿಸಬೇಕು ಎನ್ನುವ ತೀರ್ಮಾನವನ್ನು ಹೊರಡಿಸಿದೆ.
ಪ್ರತಿ ಮನೆಗೂ ಸಿಗುತ್ತೆ 300 ಯೂನಿಟ್ ಉಚಿತ ವಿದ್ಯುತ್; ಸರ್ಕಾರದ ಹೊಸ ಯೋಜನೆ!
New rules for property buyers in the name of wife