ಪ್ರತಿ ಮನೆಗೂ ಸಿಗುತ್ತೆ 300 ಯೂನಿಟ್ ಉಚಿತ ವಿದ್ಯುತ್; ಸರ್ಕಾರದ ಹೊಸ ಯೋಜನೆ!

ಉಚಿತ ವಿದ್ಯುತ್ (free electricity) ಪಡೆದುಕೊಳ್ಳುವುದು ಮಾತ್ರವಲ್ಲದೆ ಸೋಲಾರ್ ಪ್ಯಾನೆಲ್ (solar panel) ಅಳವಡಿಕೆಗೆ ಸಬ್ಸಿಡಿ ಕೂಡ ಸಿಗುತ್ತದೆ.

ರಾಜ್ಯ ಸರ್ಕಾರ ಈಗಾಗಲೇ ಗೃಹಜ್ಯೋತಿ (Gruha Jyothi scheme) ಗ್ಯಾರಂಟಿ ಯೋಜನೆಯನ್ನು ಆರಂಭಿಸಿ, ಅರ್ಹ ಫಲಾನುಭವಿಗಳಿಗೆ 200 ಯೂನಿಟ್ ಗಳವರೆಗೆ ಪ್ರತಿ ತಿಂಗಳು ಉಚಿತ ವಿದ್ಯುತ್ ವಿತರಣೆ ಮಾಡುತ್ತಿದೆ.

ಇದೀಗ ಕೇಂದ್ರ ಸರ್ಕಾರ (Central government) ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, 200 ಯೂನಿಟ್ ಮಾತ್ರವಲ್ಲ, 300 ಯೂನಿಟ್ ವರೆಗೆ ನೀವು ಉಚಿತ ವಿದ್ಯುತ್ ಪಡೆದುಕೊಳ್ಳಲು ಸಾಧ್ಯ ಇದೆ ಎಂದು ತಿಳಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಹೊಸ ಯೋಜನೆ ಒಂದನ್ನು ಪರಿಚಯಿಸಿದೆ.

ಇಂತಹ ರೈತರಿಗೆ ಪ್ರತಿ ತಿಂಗಳು ಸಿಗುತ್ತೆ ₹3000 ಪಿಂಚಣಿ; ಸರ್ಕಾರದ ಹೊಸ ಯೋಜನೆ

ಪ್ರತಿ ಮನೆಗೂ ಸಿಗುತ್ತೆ 300 ಯೂನಿಟ್ ಉಚಿತ ವಿದ್ಯುತ್; ಸರ್ಕಾರದ ಹೊಸ ಯೋಜನೆ! - Kannada News

ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆ!

ಸುಮಾರು ಒಂದು ಕೋಟಿ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸುವ ಯೋಜನೆ ಇದಾಗಿದ್ದು ಯೋಜನೆಯ ಸಂಪೂರ್ಣ ಯಶಸ್ವಿಗಾಗಿ ಕೇಂದ್ರ ಸರ್ಕಾರ 75,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ (free electricity) ಪಡೆದುಕೊಳ್ಳುವುದು ಮಾತ್ರವಲ್ಲದೆ ಸೋಲಾರ್ ಪ್ಯಾನೆಲ್ (solar panel) ಅಳವಡಿಕೆಗೆ ಸಬ್ಸಿಡಿ ಕೂಡ ಸಿಗುತ್ತದೆ. ಹೆಚ್ಚು ಕಡಿಮೆ ಯೋಜನೆಯಲ್ಲಿ ಒಂದು ರೂಪಾಯಿ ಖರ್ಚು ಇಲ್ಲದೆ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸುವುದು ಮಾತ್ರವಲ್ಲದೆ ಉಚಿತವಾಗಿ 300 ಯೂನಿಟ್ ವರೆಗೆ ವಿದ್ಯುತ್ ಪಡೆಯಬಹುದು.

ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆ (pradhanmantri Surya Ghar muft bijali scheme) ಅಡಿಯಲ್ಲಿ ಒಂದು ಕೋಟಿಗೂ ಹೆಚ್ಚಿನ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ ಸರ್ಕಾರ ಸಂಪೂರ್ಣ ಆರ್ಥಿಕ ನೆರವು ನೀಡುತ್ತದೆ.

ಸ್ವಂತ ಉದ್ಯೋಗಕ್ಕೆ ಸರ್ಕಾರವೇ ನಿಮಗೆ ನೀಡುತ್ತೆ 1 ಲಕ್ಷ ಸಹಾಯಧನ; ಅರ್ಜಿ ಸಲ್ಲಿಸಿ

ಈ ಯೋಜನೆಯ ಅಡಿಯಲ್ಲಿ ಪ್ರತಿ ಮನೆಯ ಮೇಲ್ಭಾಗದಲ್ಲಿ ಅಂದರೆ ಮೇಲ್ಚಾವಣಿಯ ಮೇಲೆ 10 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಅಗತ್ಯ ಇರುವ ಸೋಲಾರ್ ಪ್ಯಾನೆಲ್ ಅಳವಡಿಸಲು ಸರ್ಕಾರ ನೆರವು ನೀಡುತ್ತದೆ.

ಮೂರು ಕಿಲೋ ವ್ಯಾಟ್ ಸಾಮರ್ಥ್ಯದ ಯೂನಿಟ್ ಸ್ಥಾಪನೆಗೆ ಶೇಕಡ 40% ಹಾಗೂ ಅದಕ್ಕಿಂತ ಕಡಿಮೆ ಯೂನಿಟ್ ಸ್ಥಾಪನೆಗೆ 20% ನಷ್ಟು ಸರ್ಕಾರದಿಂದ ಸಹಾಯಧನ ಪಡೆಯಬಹುದು. ಮುಂದಿನ ಐದು ವರ್ಷಗಳವರೆಗೆ ಯಾವುದೇ ಸಮಸ್ಯೆ ಇಲ್ಲದೆ ಉಚಿತ ವಿದ್ಯುತ್ ಪಡೆಯಬಹುದು ಮಾತ್ರವಲ್ಲದೆ ಹೆಚ್ಚುವರಿ ಉತ್ಪಾದನೆಯಾದ ವಿದ್ಯುತ್ ಅನ್ನು ಮಾರಾಟ ಮಾಡಿ ಹಣ ಗಳಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ? (How to apply)

Solar Panelಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜಿಲಿ ಯೋಜನೆಯ ಅಡಿಯಲ್ಲಿ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಿಕೊಳ್ಳಲು https://pmsuryaghar.gov.in/ ಈ ವೆಬ್ಸೈಟ್ಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ.

* ನಿಮ್ಮ ರಾಜ್ಯ ಮತ್ತು ವಿತರಣಾ ಸಂಸ್ಥೆಯ ಹೆಸರನ್ನು ಆಯ್ಕೆ ಮಾಡಬೇಕು ನಂತರ ನಿಮ್ಮ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ನಮೂದಿಸಬೇಕು

*ನೀವು ಲಾಗಿನ್ ಆದ ನಂತರ ಸೌರ ಫಲಕ ಅಳವಡಿಕೆಗೆ ಬೇಕಾಗಿರುವ ಸಾಕಷ್ಟು ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ. ನಂತರ ಅಗತ್ಯ ಇರುವ ಮಾಹಿತಿಗಳನ್ನು ಭರ್ತಿ ಮಾಡಿ.

ಮಹಿಳೆಯರಿಗೆ ಸಿಹಿ ಸುದ್ದಿ; ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ 32000 ರೂ. ಬಡ್ಡಿ

* ನೀವು ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಿದ 30 ದಿನಗಳ ನಂತರ ನಿಮಗೆ ಸಬ್ಸಿಡಿ ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.

ದೇಶದ ಸುಸ್ಥಿರ ಅಭಿವೃದ್ಧಿ ಮತ್ತು ಜನರ ಕಲ್ಯಾಣಕ್ಕಾಗಿ ಈ ಯೋಜನೆಯ ಆರಂಭಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ತಿಳಿಸಿದ್ದಾರೆ. ಕೋಟ್ಯಾಂತರ ಮನೆಗಳಿಗೆ ಉಚಿತವಾಗಿ ಸೋಲಾರ್ ವಿದ್ಯುತ್ ಒದಗಿಸುವ ಯೋಜನೆ ಇದಾಗಿದೆ.

ಸೋಲಾರ್ ಪ್ಯಾನೆಲ್ ಅಳವಡಿಸಿ ಮನೆಯ ಖರ್ಚಿಗೆ ಬೇಕಾಗಿರುವ ವಿದ್ಯುತ್ ಬಳಸಿಕೊಂಡು ಉಳಿದ ವಿದ್ಯುತ್ ಅನ್ನು SPV ಮಾರಾಟ ಮಾಡಬಹುದು. ಇದೇ ಹಣದಿಂದ ಸೋಲಾರ್ಗೆ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಬಹುದು. ಸಾಲ ತೀರಿಸಲು 10 ವರ್ಷಗಳ ಅವಧಿ ಇರುತ್ತದೆ. ನಂತರ ಸೌರಫಲಕವನ್ನು ಫಲಾನುಭವಿಗಳ ಹೆಸರಿಗೆ ಸರ್ಕಾರ ವರ್ಗಾಯಿಸಿಕೊಡುತ್ತದೆ.

ಆಧಾರ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್! ಮಾರ್ಚ್ 14ರ ತನಕ ಗಡುವು; ಇಲ್ಲಿದೆ ಮಾಹಿತಿ

Every house gets 300 units of free electricity, government New Scheme

Follow us On

FaceBook Google News

Every house gets 300 units of free electricity, government New Scheme