ಮಹಿಳೆಯರಿಗೆ ಸಿಹಿ ಸುದ್ದಿ; ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ 32000 ರೂ. ಬಡ್ಡಿ

Post Office Scheme : ಆರ್ಡಿ (RD Scheme) ಹಾಗೂ ಎಫ್ಡಿ ಯೋಜನೆಯಲ್ಲಿ (Fixed Deposit) ಹೂಡಿಕೆ ಮಾಡಲು ಇಷ್ಟ ಇಲ್ಲದ ಮಹಿಳೆಯರು ಈ ಮಹಿಳಾ ಸಮ್ಮಾನ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು

Post Office Scheme : ನಮ್ಮ ದೇಶದಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಹಣ ಉಳಿತಾಯ ಮಾಡುವ ಮನೋಭಾವ ಹೊಂದಿರುತ್ತಾರೆ. ಎಲ್ಲಿಯಾದರೂ ಕಾರ್ಯಕ್ರಮಕ್ಕೆ ಕೊಟ್ಟಾಗ ಉಡುಗೊರೆ ರೂಪದಲ್ಲಿ ಕೊಟ್ಟ ಹಣ, ಪತಿ, ತಂದೆ ಖರ್ಚಿಗಾಗಿ ಕೊಟ್ಟ ಹಣವನ್ನು ಅವರು ಸ್ವಲ್ಪವೇ ಖರ್ಚು ಮಾಡಿ ಅದರಲ್ಲಿ ಉಳಿತಾಯ ಮಾಡಿರುತ್ತಾರೆ.

ಹೀಗೆ ಉಳಿತಾಯ ಮಾಡಿದ ಹಣವನ್ನು ಅವರು ಮನೆಯ ಡಬ್ಬದಲ್ಲೋ ಅಥವಾ ತಮ್ಮ ಬಿರುವಿನಲ್ಲೋ ಇಟ್ಟುಕೊಳ್ಳುತ್ತಾರೆ. ಈ ರೀತಿ ಇಟ್ಟುಕೊಳ್ಳುವುದರಿಂದ ಹಣ ಭದ್ರವಾಗಿರುತ್ತದೆ ನಿಜ. ಆದರೆ ಆ ಹಣ ಹೆಚ್ಚಾಗುವುದಿಲ್ಲ.

ಆಧಾರ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್! ಮಾರ್ಚ್ 14ರ ತನಕ ಗಡುವು; ಇಲ್ಲಿದೆ ಮಾಹಿತಿ

ಮಹಿಳೆಯರಿಗೆ ಸಿಹಿ ಸುದ್ದಿ; ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ 32000 ರೂ. ಬಡ್ಡಿ - Kannada News

ಅದೇ ಹಣವನ್ನು ಅಂಚೆ ಕಚೇರಿಯಲ್ಲಿ (Post Office) ಈಗ ನಾವು ತಿಳಿಸುವ ಯೋಜನೆಯಲ್ಲಿ ಹೂಡಿಕೆ ಮಾಡಿದಲ್ಲಿ ಹಣ ಭದ್ರವಾಗಿಯೂ ಇರುತ್ತದೆ. ಅದಕ್ಕೆ ಬಡ್ಡಿಯೂ ಬರುತ್ತದೆ. ಹಾಗಾಗಿ ಉಳಿತಾಯ ಮಾಡಿದ ಹಣವನ್ನು ಸುರಕ್ಷಿತ ಜಾಗದಲ್ಲಿ ಹೂಡಿಕೆ ಮಾಡಿ ಹೆಚ್ಚಿಗೆ ಮಾಡಿಕೊಳ್ಳುವುದು ಬುದ್ದಿವಂತರ ಲಕ್ಷಣವಾಗಿದೆ. ಹಾಗಾದರೆ ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು? ಇಲ್ಲಿದೆ ನೋಡಿ ಆ ಯೋಜನೆಯ ಮಾಹಿತಿ.

ಸದ್ಯ ಅಂಚೆ ಕಚೇರಿಯಲ್ಲಿ ಭಾರತೀಯ ಪ್ರಜೆಗಳಿಗಾಗಿ 13 ಕ್ಕೂ ಅಧಿಕ ಉಳಿತಾಯ ಯೋಜನೆಗಳನ್ನು (Savings Scheme) ಜಾರಿಗೆ ತರಲಾಗಿದೆ. ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಅಂಚೆ ಕಚೇರಿಯಲ್ಲಿ ಮಹಿಳಾ ಸಮ್ಮಾನ್ ಯೋಜನೆ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.

ಚೆಕ್ ಬರೆಯುವಾಗ ಅಪ್ಪಿತಪ್ಪಿ ಈ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಖಾಲಿ!

ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆ

Post office Schemeಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫೀಕೇಟ್ ಯೋಜನೆಯು ಹೆಸರೇ ಹೇಳುವಂತೆ ಮಹಿಳೆಯರಿಗಾಗಿ ಜಾರಿಗೆ ತಂದ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಮಹಿಳೆಯರು ಮಾತ್ರ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಈವರೆಗೂ ನೀಡಲಾರದ ಬಡ್ಡಿದರವನ್ನು ನೀಡಲಾಗುತ್ತಿದೆ.

ಈ ಯೋಜನೆಗೆ ಸರ್ಕಾರವು ಬಹಳ ಕಡಿಮೆ ಸಮಯಾವಕಾಶ ನೀಡಿದೆ. ಹಾಗಾಗಿ ಉಳಿತಾಯ ಯೋಜನೆ ಮಾಡಬಯಸುವವರು ಆದಷ್ಟು ಶೀಘ್ರ ಆರಂಭಿಸುವುದು ಒಳಿತು. ಅಂಚೆ ಕಚೇರಿಯಲ್ಲಿ 1೦ ವರ್ಷದ ಒಳಗಿನ ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಲ್ಲಿ ಶೇ.8 ರಷ್ಟು ಬಡ್ಡಿ ನೀಡಲಾಗುತ್ತದೆ.

ಇನ್ಮುಂದೆ ಈ 10 ಲಕ್ಷ ಆದಾಯಕ್ಕೂ ಯಾವುದೇ ತೆರಿಗೆ ಕಟ್ಟುವ ಅಗತ್ಯವಿಲ್ಲ! ಇಲ್ಲಿದೆ ಮಾಹಿತಿ

ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆಯಲ್ಲಿ ವಾರ್ಷಿಕವಾಗಿ ಶೇ.7.5 ರಷ್ಟು ಬಡ್ಡಿದರ ನೀಡಲಾಗುತ್ತದೆ. ಗರಿಷ್ಟ 2 ಲಕ್ಷ ರೂ.ಗಳ ವರೆಗೆ ಹೂಡಿಕೆ ಮಾಡಬಹುದಾಗಿದೆ. ಅಲ್ಲದೆ ಎರಡು ವರ್ಷಗಳಿಗೆ ಮಾತ್ರ ಹೂಡಿಕೆ ಮಾಡಬೇಕು.

ಅಂಚೆ ಕಚೇರಿಯಲ್ಲಿ ಈಗಾಗಲೇ ಇರುವ ಆರ್ಡಿ (RD Scheme) ಹಾಗೂ ಎಫ್ಡಿ ಯೋಜನೆಯಲ್ಲಿ (Fixed Deposit) ಹೂಡಿಕೆ ಮಾಡಲು ಇಷ್ಟ ಇಲ್ಲದ ಮಹಿಳೆಯರು ಈ ಮಹಿಳಾ ಸಮ್ಮಾನ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು 2 ಲಕ್ಷ ರೂ. ಹೂಡಿಕೆ ಮಾಡಿದರೆ ನಿಮಗೆ ಬಡ್ಡಿಯ ರೂಪದಲ್ಲಿ 32,೦44 ರೂ. ನಿಮಗೆ ಸಿಗುತ್ತದೆ.

If you invest in this post office Scheme, you will get 32000 Rupees interest

Follow us On

FaceBook Google News

If you invest in this post office Scheme, you will get 32000 Rupees interest