ಚೆಕ್ ಬರೆಯುವಾಗ ಅಪ್ಪಿತಪ್ಪಿ ಈ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಖಾಲಿ!
Bank Cheque Book : ನೇರವಾಗಿ ಆನ್ಲೈನ್ ಪೋರ್ಟಲ್ (online portal) ಮೂಲಕ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಬಹುದು.
Bank Cheque Book : ನಾವು ಇಂದು ಹಣಕಾಸಿನ ವ್ಯವಹಾರಕ್ಕಾಗಿ ಬ್ಯಾಂಕ್ (Bank) ಅನ್ನು ಅವಲಂಬಿಸುತ್ತೇವೆ, ಆದರೆ ಎಲ್ಲಾ ಬ್ಯಾಂಕ್ ಗಳು ಕೂಡ ಆನ್ಲೈನ್ ಸೇವೆ (online services)ಯನ್ನು ಒದಗಿಸುವುದರಿಂದ ನಾವು ಆ ಬ್ಯಾಂಕಿಗೆ ಹೋಗಿ ಯಾವುದೇ ರೀತಿಯ ವ್ಯವಹಾರ ಮಾಡಬೇಕಾಗಿಲ್ಲ.
ಅದರ ಬದಲು ನೇರವಾಗಿ ಆನ್ಲೈನ್ ಪೋರ್ಟಲ್ (online portal) ಮೂಲಕ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡಬಹುದು.
ಉದಾಹರಣೆಗೆ ಯಾವುದೇ ಪೇಮೆಂಟ್ ಮಾಡುವದಿದ್ದರೆ ಅಥವಾ ಬ್ಯಾಂಕ್ ನಲ್ಲಿ ಎಫ್ ಡಿ (Fixed Deposit), ಆರ್ ಡಿ ಗಳಂತಹ ಡಿಪಾಸಿಟ್ (deposit) ಇಡುವುದಾದರೆ, ಯಾವುದೇ ಇನ್ಸೂರೆನ್ಸ್ ನಲ್ಲಿ ಹೂಡಿಕೆ ಮಾಡುವುದಿದ್ದರೆ ಹೀಗೆ ಬೇರೆ ಬೇರೆ ಕೆಲಸಕ್ಕೆ ನಾವು ಆನ್ಲೈನ್ ಮೂಲಕವೇ ವ್ಯವಹಾರ ಮಾಡಬಹುದು.
ಇನ್ಮುಂದೆ ಈ 10 ಲಕ್ಷ ಆದಾಯಕ್ಕೂ ಯಾವುದೇ ತೆರಿಗೆ ಕಟ್ಟುವ ಅಗತ್ಯವಿಲ್ಲ! ಇಲ್ಲಿದೆ ಮಾಹಿತಿ
ಅಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಸಾಲ ಸೌಲಭ್ಯವನ್ನು (Bank Loan) ಕೂಡ ಬ್ಯಾಂಕ್ ಗೆ ಹೋಗದೆ ಮನೆಯಲ್ಲಿಯೇ ಕುಳಿತು ಕ್ಷಣಮಾತ್ರದಲ್ಲಿ ಪಡೆದುಕೊಳ್ಳುವಂತಹ ವ್ಯವಸ್ಥೆಯು ಇದೆ. ಇಷ್ಟೆಲ್ಲಾ ಡಿಜಿಟಲ್ ಆಗಿ ಮುಂದುವರೆದ ನಮಗೆ ಬ್ಯಾಂಕ್ ನ ಚೆಕ್ ಯಾಕೆ ಬೇಕು ಎನ್ನುವ ಪ್ರಶ್ನೆ ಮೂಡಬಹುದು.
ಬ್ಯಾಂಕ್ ನಲ್ಲಿ ಚೆಕ್ (bank cheque) ಮೂಲಕ ವ್ಯವಹಾರ ಮಾಡುವುದು ಕೂಡ ಸಾಕಷ್ಟು ಮುಖ್ಯವಾಗಿರುವ ವಿಚಾರ. ಯಾಕಂದರೆ ದೊಡ್ಡ ದೊಡ್ಡ ವ್ಯಾಪಾರಸ್ಥರು (businessman) ಅಥವಾ ದೊಡ್ಡ ವ್ಯವಹಾರ ಮಾಡುವವರು ಬ್ಯಾಂಕ್ ಚೆಕ್ ಮೂಲಕವೇ ಅವರ ವ್ಯವಹಾರವನ್ನು ನಡೆಸುತ್ತಾರೆ.
ಇದು ಒಂದು ಸುಭದ್ರ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುತ್ತದೆ. ದೊಡ್ಡ ಡೀಲ್ ಗಳನ್ನು ಮಾಡುವಾಗ ಅಥವಾ ದೊಡ್ಡ ವಸ್ತುಗಳನ್ನು ಖರೀದಿ ಮಾಡುವಾಗ ಒಂದು ಕಂಪನಿ ಇನ್ನೊಂದು ಕಂಪನಿಗೆ ಚೆಕ್ ಅನ್ನು ನೀಡಿ ಪೇಮೆಂಟ್ (payment) ಮಾಡಬಹುದು. ಅಥವಾ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಚೆಕ್ ಮೂಲಕವೇ ಪೇಮೆಂಟ್ ಮಾಡಬಹುದು. ಆದರೆ ಇಲ್ಲಿ ಒಂದು ವಿಚಾರ ನೆನಪಿಟ್ಟುಕೊಳ್ಳಿ. ನೀವು ಚೆಕ್ ಬರೆಯುವಾಗ ಎಷ್ಟು ಮುತುವರ್ಜಿಯಿಂದ ಇರುತ್ತೀರೋ ಅಷ್ಟು ನಿಮಗೆ ಒಳ್ಳೆಯದು.
ನಿಮ್ಮತ್ರ ಕೇವಲ ಆಧಾರ್ ಕಾರ್ಡ್ ಇದ್ರೆ, ಸರ್ಕಾರದಿಂದಲೇ ಸಿಗುತ್ತೆ 50,000 ರೂಪಾಯಿ
ಚೆಕ್ ಬರೆಯುವಾಗ ಈ ತಪ್ಪುಗಳನ್ನು ಮಾಡಬೇಡಿ!
*ಹೌದು, ಇದು ಬಹಳ ಮುಖ್ಯವಾಗಿರುವ ವಿಚಾರ. ಚೆಕ್ ಬರೆಯುವಾಗ ಅರ್ಜೆಂಟ್ ಆಗಿ ಚೆಕ್ ಬರೆಯುವುದಕ್ಕೆ ಹೋಗಬೇಡಿ ಇದಕ್ಕೆ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ. ಯಾಕೆಂದರೆ ಬ್ಯಾಂಕ್ ಚೆಕ್ ನಲ್ಲಿ ಯಾವುದೇ ಒಂದು ಸಣ್ಣ ತಪ್ಪು ಆಗಿದ್ದರು ಕೂಡ ಆ ಚೆಕ್ ವೆಸ್ಟ್ ಆಗುತ್ತದೆ. ಬ್ಯಾಂಕ್ ಅದನ್ನು ಪರಿಗಣಿಸುವುದಿಲ್ಲ.
*ತಪ್ಪಾಗಿ ಸಹಿಯನ್ನು ಮಾಡಬೇಡಿ. ಬ್ಯಾಂಕ್ ಚೆಕ್ ನಲ್ಲಿ ಸಹಿ ಅನ್ನುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ನೀವು ಮುಂಭಾಗದಲ್ಲಿ ಸಹಿ ಮಾಡುವುದು ಮಾತ್ರವಲ್ಲದೆ ಚೆಕ್ ನ ಹಿಂಭಾಗದಲ್ಲಿಯೂ ಕೂಡ ಸಹಿ ಮಾಡಬೇಕು ಆಗ ನಿಮ್ಮ ಯಾರು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ.
*ಚೆಕ್ ಬೌನ್ಸ್ ಪ್ರಕರಣಗಳ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಇದು ಅಪರಾಧ ಆಗಿರುತ್ತದೆ. ಹಾಗಾಗಿ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆಯೋ ಅದಕ್ಕಿಂತ ಹೆಚ್ಚಿಗೆ ಮೊತ್ತಕ್ಕೆ ಚೆಕ್ ಅನ್ನು ನೀಡಲೇಬಾರದು. ಒಂದು ವೇಳೆ ಆ ರೀತಿ ಮಾಡಿದರೆ ನಿಮ್ಮಿಂದ ಚೆಕ್ ತೆಗೆದುಕೊಂಡಿರುವ ವ್ಯಕ್ತಿ ಬ್ಯಾಂಕ್ ಗೆ ಹಣ ವಿಥ್ ಡ್ರಾ ಮಾಡಲು ಹೋಗಿ ನಿಮ್ಮ ಖಾತೆಯಲ್ಲಿ ಅಷ್ಟು ಹಣ ಇಲ್ಲದೆ ಇದ್ದಾಗ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಬಹುದು.
ನಿಮ್ಮ 3 ಲಕ್ಷಕ್ಕೆ ಪ್ರತಿ ತಿಂಗಳು 30 ಸಾವಿರ ಬಡ್ಡಿ ಸಿಗುವ ಬಂಪರ್ ಯೋಜನೆ ಇದು
*ಚೆಕ್ ಬರೆಯುವಾಗ ಮುಖ್ಯವಾಗಿ ನೀವು ಮಾಡಬೇಕಾಗಿರುವ ಕೆಲಸ ಸಹಿ ಮಾಡುವುದರ ಜೊತೆಗೆ ಅಂದಿನ ಡೇಟ್ (Date) ಕೂಡ ನಮೋದಿಸಬೇಕು. ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಸಹಿ ಮಾಡುವಾಗ ಚೆಕ್ ನ ದಿನಾಂಕವನ್ನು ಹಾಕುವುದು ಮರೆಯಬೇಡಿ ಹೀಗಿರುವಾಗ ನೀವು ಕಳೆದುಕೊಂಡು ಅದು ಇನ್ಯಾರದೋ ಕೈ ಸೇರಿ, ಆ ವ್ಯಕ್ತಿ ಬ್ಯಾಂಕಿಗೆ ಚೆಕ್ ಹಾಕುವ ಸಮಯದಲ್ಲಿ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಬಹಳ ದಿನ ಆಗಿದ್ದರೆ ಬ್ಯಾಂಕ್ ಕುಲಂಕುಶವಾಗಿ ಪರಿಶೀಲಿಸುತ್ತದೆ.
*ಚೆಕ್ ಬರೆಯುವಾಗ ಪರ್ಮನೆಂಟ್ ಆಗಿರುವ ಇಂಕ್ ಅಥವಾ ಬಾಲ್ ಪೆನ್ ಬಳಸಿ. ಹಾಗಾಗಿ ಯಾವುದೇ ವಂಚಕರು ಅಕ್ಷರಗಳನ್ನ ತಿದ್ದಲು ಸಾಧ್ಯವಿಲ್ಲ.
*ಚೆಕ್ ನಲ್ಲಿ only ಹಾಗೂ ಕನ್ನಡದಲ್ಲಿ ಆದರೆ ಮಾತ್ರ ಎಂದು ನೀವು ಮೊತ್ತವನ್ನು ಬರೆದು ನಂತರ ಅದರ ಕೊನೆಯಲ್ಲಿ ಬರೆಯುವುದು ಬಹಳ ಮುಖ್ಯ. ಆಗ ಯಾರೂ ಕೂಡ ನಿಮ್ಮ ಚೆಕ್ ನಲ್ಲಿ ಇರುವ ಮೊತ್ತವನ್ನು ಬದಲಾಯಿಸಿ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ.
*ಯಾರಿಗೂ ಬ್ಲಾಂಕ್ ಚೆಕ್ ಕೊಡಬೇಡಿ. ಇಂದಿನ ಕಾಲದಲ್ಲಿ ನಂಬಿಕೆ ಎನ್ನುವುದು ಬಹಳ ಸೂಕ್ಷ್ಮವಾದ ವಿಚಾರ. ಯಾರನ್ನು ಕೂಡ ಅಷ್ಟು ಸುಲಭವಾಗಿ ನಂಬಲು ಸಾಧ್ಯವಿಲ್ಲ ಇಂತಹ ಸಂದರ್ಭದಲ್ಲಿ ಯಾರನ್ನು ನಂಬಿ ಬ್ಲಾಂಕ್ ಚೆಕ್ ಗೆ ಸಹಿ ಮಾಡಿ ಕೊಡುವುದಕ್ಕೆ ಹೋಗಬೇಡಿ. ಈ ರೀತಿ ಮಾಡುವುದರಿಂದ ನಿಮ್ಮ ಖಾತೆಯ ಸಂಪೂರ್ಣ ಹಣವನ್ನು ವಂಚಕರು ಲಪಟಾಯಿಸಬಹುದು.
ಪ್ರತಿದಿನ ಕೇವಲ 87 ರೂಪಾಯಿ ಉಳಿತಾಯ ಮಾಡಿದ್ರೆ 11 ಲಕ್ಷ ನಿಮ್ಮದಾಗುತ್ತೆ!
*ಇನ್ನು ಕೆಲವು ಸಂದರ್ಭಗಳಲ್ಲಿ ಚೆಕ್ ಅನ್ನು ನೀವು ಭದ್ರತೆಗಾಗಿ ಕೊಡುವುದಾದರೆ ಬ್ಲಾಂಕ್ ಗೆ ಸಹಿ ಮಾಡಿ ಕೊಡುವ ಸಂದರ್ಭ ಇರಬಹುದು ಹಾಗಿದ್ದಾಗ ಆ ಚೆಕ್ ನಲ್ಲಿ ರದ್ದು ಪಡಿಸಿ ಎಂದು ಬರೆದು ಸಹಿ ಮಾಡಿ ದಿನಾಂಕ ಬರೆದು ಕೊಡಬೇಕು.
*ಬ್ಯಾಂಕ್ ಗಳು ಪೋಸ್ಟ್ dated cheque ಅನ್ನು ಈಗ ಸ್ವೀಕರಿಸುವುದಿಲ್ಲ. ಹಾಗಾಗಿ ನೀವು ಯಾರಿಗೂ ಕೂಡ ಮುಂದಿನ ದಿನಾಂಕವನ್ನು ಹಾಕಿ ಚೆಕ್ ವಿತರಣೆ ಮಾಡಬೇಡಿ.
If you make this mistake while writing a cheque, your bank account will be empty