ಇಂತಹ ರೈತರಿಗೆ ಪ್ರತಿ ತಿಂಗಳು ಸಿಗುತ್ತೆ ₹3000 ಪಿಂಚಣಿ; ಸರ್ಕಾರದ ಹೊಸ ಯೋಜನೆ

ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ನೀವು 55 ರೂ. ಹೂಡಿಕೆ ಮಾಡಿದಲ್ಲಿ 6೦ ವರ್ಷದ ನಂತರ ನಿಮಗೆ ಪ್ರತಿ ತಿಂಗಳು 3000 ರೂ. ಸಿಗಲಿದೆ (Pension Scheme)

ಯಾವುದೇ ಸರ್ಕಾರವಿರಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಬೇಕು. ಪ್ರತಿಯೊಬ್ಬರು ಸುಖವಾಗಿ ಹಾಗೂ ನೆಮ್ಮದಿಯ ಜೀವನ ಸಾಗಿಸಲು ಅವಶ್ಯ ಇರುವ ಸೌಲಭ್ಯಗಳನ್ನು ಒದಗಿಸಬೇಕು. ಹಾಗಾಗಿ ಸರ್ಕಾರಗಳು ನಾನಾ ಯೋಜನೆಗಳನ್ನು ತಂದು ಬಡವರನ್ನು, ರೈತರನ್ನು ಆರ್ಥಿಕವಾಗಿ ಸಬಲಗೊಳಿಸಲು ಪ್ರಯತ್ನಿಸುತ್ತಿದೆ.

ಇದೀಗ ಕೇಂದ್ರ ಸರ್ಕಾರವು ರೈತರಿಗೆ ಹೊಸ ಯೋಜನೆಯೊಂದನ್ನು ಘೋಷಣೆ ಮಾಡಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ನೀವು 55 ರೂ. ಹೂಡಿಕೆ ಮಾಡಿದಲ್ಲಿ 6೦ ವರ್ಷದ ನಂತರ ನಿಮಗೆ ಪ್ರತಿ ತಿಂಗಳು 3000 ರೂ. ಸಿಗಲಿದೆ (Pension Scheme). ಹಾಗಾದರೆ ಇದು ಯಾವ ಯೋಜನೆ? ಈ ಯೋಜನೆಯಲ್ಲಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂದು ತಿಳಿದುಕೊಳ್ಳೋಣ.

ಮಹಿಳೆಯರಿಗೆ ಸಿಹಿ ಸುದ್ದಿ; ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ 32000 ರೂ. ಬಡ್ಡಿ

ಇಂತಹ ರೈತರಿಗೆ ಪ್ರತಿ ತಿಂಗಳು ಸಿಗುತ್ತೆ ₹3000 ಪಿಂಚಣಿ; ಸರ್ಕಾರದ ಹೊಸ ಯೋಜನೆ - Kannada News

ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ:

ಕೇಂದ್ರ ಸರ್ಕಾರವು ಆರ್ಥಿಕವಾಗಿ ಬಡವರಾಗಿರುವ ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ 18 ವರ್ಷದಿಂದ 4೦ ವರ್ಷದ ಒಳಗಿನ ರೈತರು ಅರ್ಜಿ ಸಲ್ಲಿಸಬಹುದಾಗಿದೆ.

ಈ ಯೋಜನೆಯಲ್ಲಿ ರೈತರು ಹೂಡಿಕೆ ಮಾಡುವುದರಿಂದ ವೃದ್ಧಾಪ್ಯದಲ್ಲಿ ತಮ್ಮ ಜೀವನವನ್ನು ನೆಮ್ಮದಿಯಿಂದ ಕಳೆಯಬಹುದಾಗಿದೆ. ಕೆಲವೊಂದು ಕುಟುಂಬದಲ್ಲಿ ಮಕ್ಕಳು ತಮ್ಮ ತಂದೆ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿಬಿಡುತ್ತಾರೆ. ಈ ಸಮಯದಲ್ಲಿ ಯಾವ ಆರ್ಥಿಕ ಬಲವೂ ಇಲ್ಲದಿದ್ದರೆ ವೃದ್ಧಾಪ್ಯವನ್ನು ಕಳೆಯುವುದು ಕಷ್ಟವಾಗುತ್ತದೆ.

ನಿಮ್ಮತ್ರ ಕೇವಲ ಆಧಾರ್ ಕಾರ್ಡ್ ಇದ್ರೆ, ಸರ್ಕಾರದಿಂದಲೇ ಸಿಗುತ್ತೆ 50,000 ರೂಪಾಯಿ

Pension Schemeಈ ಸಂದರ್ಭಕ್ಕಾಗಿ ಈಗಿನಿಂದಲೇ ಹೂಡಿಕೆ ಅಥವಾ ಒಂದಿಷ್ಟು ಹಣವನ್ನು ಉಳಿಸಿಕೊಳ್ಳುವುದು ಅಗತ್ಯ. ಹೀಗೆ ಮಾಡುವುದರಿಂದ ನಿವೃತ್ತಿಯ ನಂತರ ಅಥವಾ ವೃದ್ದಾಪ್ಯದಲ್ಲಿಯೂ ಸ್ವಾಭಿಮಾನಿ ಜೀವನವನ್ನು ಸಾಗಿಸಬಹುದಾಗಿದೆ.

ಆಧಾರ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್! ಮಾರ್ಚ್ 14ರ ತನಕ ಗಡುವು; ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಮನ್ ಧನ್ ಯೋಜನೆ ಅಡಿಯಲ್ಲಿ 18 ರಿಂದ 4೦ ವರ್ಷದ ಒಳಗಿನ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು. ವಯಸ್ಸಿಗೆ ಅನುಗುಣವಾಗಿ ಕಂತು ಕಟ್ಟುವುದು ಇರುತ್ತದೆ. 18 ವರ್ಷಕ್ಕೆ ಈ ಯೋಜನೆಯಲ್ಲಿ ಹೂಡಿಕೆ ಶುರು ಮಾಡಿದರೆ ಪ್ರತಿ ತಿಂಗಳು 55 ರೂಪಾಯಿ, 3೦ ವರ್ಷದ ನಂತರ 11೦ ರೂ., ಹಾಗೂ 4೦ ವರ್ಷಕ್ಕೆ ಆರಂಭಿಸಿದರೆ 22೦ ರೂ, ಪ್ರತಿ ತಿಂಗಳು ಕಟ್ಟಬೇಕಾಗುತ್ತದೆ.

ನಿಮಗೆ 6೦ ವರ್ಷ ಆದಾಗ ಪ್ರತಿ ತಿಂಗಳು 3000 ರೂ.ವನ್ನು ಸರ್ಕಾರ ನಿಮಗೆ ನೀಡುತ್ತದೆ. ನೀವು ಇರುವವರೆಗೂ ನೀಡುತ್ತದೆ. ಇದರಿಂದ ನಿಮ್ಮ ಕುಟುಂಬಕ್ಕೂ ಅನುಕೂಲವಾಗುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 3000 ರೂ. ಪಿಂಚಣಿ (Pension) ನೀಡಲಾಗುತ್ತದೆ. ಅಂದರೆ ವಾರ್ಷಿಕವಾಗಿ 36,000 ರೂ.ನೀಡಲಾಗುತ್ತದೆ. ಈ ಹಣ ನೇರವಾಗಿ ಫಲಾನುಭವಿ ರೈತರ ಖಾತೆಗೆ (Bank Account) ಜಮಾ ಆಗುತ್ತದೆ. ಅರ್ಹ ರೈತರು ಕೂಡಲೇ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.

ಚೆಕ್ ಬರೆಯುವಾಗ ಅಪ್ಪಿತಪ್ಪಿ ಈ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಖಾಲಿ!

Such farmers get 3000 pension every month, New scheme of Govt

Follow us On

FaceBook Google News

Such farmers get 3000 pension every month, New scheme of Govt