Kannada News Karnataka News

ಸ್ವಂತ ಉದ್ಯೋಗಕ್ಕೆ ಸರ್ಕಾರವೇ ನಿಮಗೆ ನೀಡುತ್ತೆ 1 ಲಕ್ಷ ಸಹಾಯಧನ; ಅರ್ಜಿ ಸಲ್ಲಿಸಿ

You will get a loan of up to 2 lakhs to start your own business

Story Highlights

ಹೆಚ್ಚಿನವರು ವಿದ್ಯಾಭ್ಯಾಸದ ಬಳಿಕ ಸ್ವ-ಉದ್ಯೋಗದತ್ತ (Own Business) ಗಮನ ಹರಿಸಿದ್ದಾರೆ.

ಇಂದಿನ ದಿನದಲ್ಲಿ ಯುವಕರು ಕಂಪನಿಗಳಲ್ಲಿ ಕೆಲಸ ಮಾಡುವುದಕ್ಕಿಂತ ಹೆಚ್ಚು ಸ್ವಂತ ಉದ್ಯೋಗ ಆರಂಭಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಕಂಪನಿಯಲ್ಲಿ ೧೨ ಗಂಟೆಗೂ ಅಧಿಕ ಸಮಯ ದುಡಿದರೂ ಅವರು ಕಡಿಮೆ ಪ್ರಮಾಣದ ವೇತನ ನೀಡುತ್ತಾರೆ. ಅಲ್ಲದೆ ಮಾನಸಿಕ ನೆಮ್ಮದಿಯೂ ಇರುವುದಿಲ್ಲ.

ಇದರ ಜೊತೆ ಕೋವಿಡ್ ಸಮಯದಲ್ಲಿ ಕಂಪನಿಗಳು ನಷ್ಟದ ನೆಪ ನೀಡಿ ಲಕ್ಷಾಂತರ ಜನರು ಉದ್ಯೋಗ ಇಲ್ಲದಂತೆ ಮಾಡಿವೆ. ಹಾಗಾಗಿ ಕೋವಿಡ್ ನಂತರವಂತೂ ಹೆಚ್ಚಿನವರು ವಿದ್ಯಾಭ್ಯಾಸದ ಬಳಿಕ ಸ್ವ-ಉದ್ಯೋಗದತ್ತ (Own Business) ಗಮನ ಹರಿಸಿದ್ದಾರೆ.

ಮಹಿಳೆಯರಿಗೆ ಸಿಹಿ ಸುದ್ದಿ; ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ 32000 ರೂ. ಬಡ್ಡಿ

ಸರ್ಕಾರವೂ ಸಹ ಸ್ವ-ಉದ್ಯೋಗ ಮಾಡುವವರ ಬೆನ್ನೆಲುಬಾಗಿ ನಿಂತಿದೆ ಎಂದರೆ ತಪ್ಪಾಗಲಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳ ರೂಪದಲ್ಲಿ ಸಹಾಯ ಮಾಡುತ್ತಿವೆ. ಆರ್ಥಿಕವಾಗಿ ಶಕ್ತಿ ಇಲ್ಲದವರು ಈ ಯೋಜನೆ ಲಾಭ ಪಡೆದು ಸ್ವಂತ ಉದ್ಯೋಗ ಶುರು ಮಾಡಿ ಲಾಭ ಗಳಿಸಿ ಜೀವನ ಕಟ್ಟಿಕೊಳ್ಳಬಹುದಾಗಿದೆ.

ಇದೀಗ ರಾಜ್ಯ ಸರ್ಕಾರವು ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತ ಸಮುದಾಯವರಿಗಾಗಿ ಸ್ವ-ಉದ್ಯೋಗ ಮಾಡಲು ಇಚ್ಚಿಸುವವರಿಗೆ ಸಹಾಯ ಧನ ನೀಡಲು ನಿರ್ಧರಿಸಿದೆ. ಇದಕ್ಕಾಗಿ ಅಲ್ಪ ಸಂಖ್ಯಾತ ಸಮುದಾಯದವರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಫೆ.೨೯ ಕೊನೆಯ ದಿನವಾಗಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.

ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್, ಪಾರ್ಸಿ, ಸಿಕ್ ಹಾಗೂ ಆಂಗ್ಲೋ ಇಂಡಿಯನ್ ಸಮುದಾಯಕ್ಕೆ ಸೇರಿದವರು ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ಸಣ್ಣ ಪ್ರಮಾಣದ ಕಿರಾಣಿ ಅಂಗಡಿ, ಗ್ಯಾರೇಜ್, ಗುಡಿ ಕೈಗಾರಿಕೆ, ಹೂ, ಹಣ್ಣು, ತರಕಾರಿ ಮಾರಾಟ ಸೇರಿದಂತೆ ಸಣ್ಣ ಪ್ರಮಾಣದ ಉದ್ಯಮ ಶುರು ಮಾಡಬಹುದಾಗಿದೆ.

ಆಧಾರ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್! ಮಾರ್ಚ್ 14ರ ತನಕ ಗಡುವು; ಇಲ್ಲಿದೆ ಮಾಹಿತಿ

Loan Schemeಕೃಷಿ ಆಧರಿತ ಉದ್ಯಮ ಶುರು ಮಾಡಲು ಸಹ ಈ ಯೋಜನೆ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಶೇ.೩೩ ಘಟಕ ವೆಚ್ಚ ಅಥವಾ ೧ ಲಕ್ಷ ರೂ.ಗಳ ವರೆಗೆ ಸಹಾಯ ಧನ ಸಿಗಲಿದೆ.

ಈ ಯೋಜನೆಯನ್ನು ರಾಜ್ಯದ ಅಲ್ಪಸಂಖ್ಯಾತ ಸಮುದಾಯದವರ ಏಳ್ಗೆಗಾಗಿ ಜಾರಿಗೆ ತರಲಾಗಿದೆ. ತಮಗೆ ಯಾವುದೇ ಉದ್ಯೋಗ ಸಿಗುವುದಿಲ್ಲ. ತಾವು ಹೆಚ್ಚಾಗಿ ವಿದ್ಯಾಭ್ಯಾಸ ಮಾಡಿಲ್ಲ ಎಂದು ಮನೆಯಲ್ಲಿ ನಿರುದ್ಯೋಗಿಯಾಗಿ ಕುಳಿತುಕೊಳ್ಳುವ ಬದಲು ಈ ಯೋಜನೆ ಅಡಿಯಲ್ಲಿ ಫಲಾನುಭವಿಯಾಗಿ ತನಗೆ ಆಸಕ್ತಿ ಇರುವ ಸ್ವಂತ ಉದ್ಯಮ ಸ್ಥಾಪನೆ ಮಾಡಬಹುದು. ಈ ಮೂಲಕ ಕುಟುಂಬ ನಿರ್ವಹಣೆ ಜೊತೆಗೆ ಸಮಾಜದಲ್ಲೂ ಒಂದು ಒಳ್ಳೆಯ ಸ್ಥಾನಮಾನ ಗಳಿಸಿಕೊಳ್ಳಬಹುದು.

ಚೆಕ್ ಬರೆಯುವಾಗ ಅಪ್ಪಿತಪ್ಪಿ ಈ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಖಾಲಿ!

ಅರ್ಹತೆಗಳು:

ಅರ್ಜಿದಾರರು ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.
ಅರ್ಜಿದಾರರ ವಯಸ್ಸು ೧೮ರಿಂದ ೫೫ ವರ್ಷದೊಳಗೆ ಇರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಭಾಗದಲ್ಲಿ ೮೧ ಸಾವಿರ ರೂ. ಹಾಗೂ ನಗರ ಪ್ರದೇಶದಲ್ಲಿ ೧.೩೦ ಲಕ್ಷ ರೂ. ಮೀರಿರಬಾರದು.
ಅರ್ಜಿದಾರರ ಕುಟುಂಬದವರು ಯಾರೂ ಕೂಡ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
ಈ ಎಲ್ಲ ಅರ್ಹತೆಗಳು ಇದ್ದಲ್ಲಿ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ಮುಂದೆ ಈ 10 ಲಕ್ಷ ಆದಾಯಕ್ಕೂ ಯಾವುದೇ ತೆರಿಗೆ ಕಟ್ಟುವ ಅಗತ್ಯವಿಲ್ಲ! ಇಲ್ಲಿದೆ ಮಾಹಿತಿ

Government will give you 1 lakh subsidy Loan for self employment