ಆಧಾರ್ ಕಾರ್ಡ್ ಕಳೆದು ಹೋಗಿದ್ಯಾ? ಟೆನ್ಶನ್ ಬೇಡ, ಹೀಗೆ ಇನ್ನೊಂದು ಕಾರ್ಡ್ ಪಡೆಯಿರಿ

Story Highlights

UIDAI ಅಧಿಕೃತ ವೆಬ್ಸೈಟ್ನಲ್ಲಿ ನೀವು ನಕಲಿ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ (UIDAI) ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ (Aadhaar card) ಅನ್ನು ನೀಡಿದೆ.

ಇದು ನಮ್ಮ ಪ್ರಮುಖ ಐಡೆಂಟಿಟಿ ಕಾರ್ಡ್ (identity card) ಆಗಿರುತ್ತದೆ, ಕೂಡ ನಾವು ಯಾರು ಎಂದು ಗುರುತಿಸುವಂತಹ ಒಂದು ಐಡಿ ಕಾರ್ಡ್ ಇದ್ರೆ ಅದು ಕೇವಲ ಆಧಾರ್ ಕಾರ್ಡ್ ಮಾತ್ರ.

ಪೋಸ್ಟ್ ಆಫೀಸ್ ಬಂಪರ್ ಆಫರ್! 25 ಸಾವಿರ ಹೂಡಿಕೆಗೆ ಸಿಗುತ್ತೆ 18 ಲಕ್ಷ ರೂಪಾಯಿ

ಈ ಆಧಾರ್ ಕಾರ್ಡ್ ನಲ್ಲಿ ನಮ್ಮ ಶಾಶ್ವತ ಹೆಸರು ವಿಳಾಸ, ಜನ್ಮ ದಿನಾಂಕ ಮೊದಲಾದ ಮಾಹಿತಿಗಳನ್ನು ಕೊಡಲಾಗಿರುತ್ತದೆ. ಇನ್ನು ಆಧಾರ್ ಕಾರ್ಡ್ ಬಳಕೆ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕು. ಇಲ್ಲವಾದರೆ ಎಷ್ಟೋ ಬಾರಿ ನಿಮ್ಮ ಆಧಾರ್ ಕಾರ್ಡ್ ಅನ್ನು ಮಿಸ್ ಯೂಸ್ ಮಾಡಿಕೊಳ್ಳವಂತವರ ಸಂಖ್ಯೆಯು ಜಾಸ್ತಿ ಇದೆ.

ಆಧಾರ್ ಕಾರ್ಡ್ ಕಳೆದು ಹೋದರೆ ಏನು ಮಾಡಬೇಕು ಗೊತ್ತಾ?

ಇನ್ನು ಎಷ್ಟೋ ಸಂದರ್ಭದಲ್ಲಿ ಆಧಾರ್ ಕಾರ್ಡ್ ಅನ್ನು ಎಷ್ಟೇ ಜೋಪಾನವಾಗಿ ಇಟ್ಟುಕೊಂಡರೂ ಕೂಡ ಎಲ್ಲಾದರೂ ಮಿಸ್ ಪ್ಲೇಸ್ ಆಗಿ ಕೈಗೆ ಸಿಗದೇ ಇರಬಹುದು, ಅಥವಾ ಕಳೆದು ಹೋಗಿರಬಹುದು ಅಥವಾ ಇನ್ಯಾರೋ ನಿಮ್ಮ ಆಧಾರ್ ಕಾರ್ಡ್ ಅನ್ನು ಕದ್ದಿರಬಹುದು

ಅಂತಹ ಸಂದರ್ಭದಲ್ಲಿ ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲ ಎಂದು ಟೆನ್ಶನ್ ಮಾಡಿಕೊಳ್ಳುವ ಅಗತ್ಯ ಇಲ್ಲ. UIDAI ಅಧಿಕೃತ ವೆಬ್ಸೈಟ್ನಲ್ಲಿ ನೀವು ನಕಲಿ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಿದೆ.

ಪ್ರತಿ ಮನೆಗೂ ಸಿಗುತ್ತೆ 300 ಯೂನಿಟ್ ಉಚಿತ ವಿದ್ಯುತ್; ಸರ್ಕಾರದ ಹೊಸ ಯೋಜನೆ!

Aadhaar Cardನಕಲಿ ಆಧಾರ್ ಕಾರ್ಡ್ ಅನ್ನು ಪಡೆದುಕೊಳ್ಳುವುದು ಹೇಗೆ?

ನೀವು ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಸಹಾಯದಿಂದ ಕೆಲವೇ ಕ್ಷಣಗಳಲ್ಲಿ ನಕಲಿ ಆಧಾರ್ ಕಾರ್ಡ್ (duplicate Aadhar Card reprint) ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

– ಮೊದಲಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ uidai.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ.

– ಮೈ ಆಧಾರ್ (my aadhaar) ಎನ್ನುವ ವಿಭಾಗಕ್ಕೆ ಹೋಗಿ.

– ರಿಪ್ರಿಂಟ್ ಮೈ ಆಧಾರ್ (reprint my Aadhaar) ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಮಹಿಳೆಯರಿಗೆ ಸಿಹಿ ಸುದ್ದಿ; ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ 32000 ರೂ. ಬಡ್ಡಿ

-ಇದು ನೀವು 12 ಅಂಕಿಯ ಆಧಾರ್ ಕಾರ್ಡ್ ಸಂಖ್ಯೆ, 14 ಅಂಕೆಗಳ ವರ್ಚುವಲ್ ಐಡಿ ಸಂಖ್ಯೆ ಹಾಗೂ ಭದ್ರತಾ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

– ಆಧಾರ್ ಕಾರ್ಡ್ ಸಂಖ್ಯೆ ಮತ್ತು ವರ್ಚುವಲ್ ಐಡಿ ಸಂಖ್ಯೆ ನಮೂದಿಸಿದ ನಂತರ ನಿಮ್ಮ ಮೊಬೈಲ್ ಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ.

– ಓಟಿಪಿ ನಮೂದಿಸಿದ ನಂತರ ನಿಮ್ಮ ಆಧಾರ್ ಕಾರ್ಡ್ ವಿವರ ಸರಿಯಾಗಿ ಇದಿಯೋ ಇಲ್ವೋ ಎಂದು ನೀವು ಮರು ಪರಿಶೀಲನೆ ಮಾಡಬಹುದು.

– ಈಗ ಆಧಾರ್ ಕಾರ್ಡ್ reprint ಕ್ಕಾಗಿ ನೀವು ಆನ್ಲೈನ್ ನಲ್ಲಿ ಶುಲ್ಕವನ್ನು ಪಾವತಿ ಮಾಡಬೇಕು.

– ಈಗ ನಿಮ್ಮ ಮೊಬೈಲ್ ಗೆ ದೃಢೀಕರಣ ಮೆಸೇಜ್ SRN ಸಂಖ್ಯೆ ಬರುತ್ತದೆ. ಈ ಸಂಖ್ಯೆಯ ಮೂಲಕ ನೀವು ನಿಮ್ಮ ಆಧಾರ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಬಹುದು.

-ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಆಧಾರ್ ನಕಲಿ ಪ್ರತಿ ನಿಮ್ಮ ಮನೆಗೆ ಪೋಸ್ಟ್ ಮೂಲಕ ಬಂದು ತಲುಪುತ್ತದೆ.

ಆಧಾರ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್! ಮಾರ್ಚ್ 14ರ ತನಕ ಗಡುವು; ಇಲ್ಲಿದೆ ಮಾಹಿತಿ

get another card like this if you Lost Aadhaar Card

Related Stories