ಸ್ವಂತ ಆಸ್ತಿ, ಜಮೀನು ಇರೋರಿಗೆ ವಿಶೇಷ ತೆರಿಗೆ ನಿಯಮ; ಏಪ್ರಿಲ್ 1ರಿಂದಲೇ ಜಾರಿಗೆ

ತೆರಿಗೆ ಸಂಬಂಧಪಟ್ಟ ಹಾಗೆ ಆದಾಯ ತೆರಿಗೆ ಇಲಾಖೆ (income tax department) ಕಾಲಕಾಲಕ್ಕೆ ತಕ್ಕಂತೆ ತೆರಿಗೆ ನಿಯಮದಲ್ಲಿ ಸಾಕಷ್ಟು ಬದಲಾವಣೆಗಳನ್ನು ಹಾಗೂ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ.

ಈ ನಿಯಮಗಳು ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಟ್ಯಾಕ್ಸ್ ಪೇಯರ್ (Tax player) ಗೂ ಕೂಡ ಅನ್ವಯವಾಗುತ್ತದೆ. ಅಂತಹ ಸಂದರ್ಭದಲ್ಲಿ ಇದೀಗ ಮತ್ತೊಂದು ಹೊಸ ನಿಯಮ ತರಲಾಗಿದ್ದು, ಇದರಿಂದ ಬಾಡಿಗೆದಾರರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಐ ಟಿ ಆರ್ ಸಲ್ಲಿಕೆಗೆ ಕೆಲವು ತಿಂಗಳು ಬಾಕಿ ಇದೆ. ಇನ್ನು ಕೇವಲ ಎರಡು ತಿಂಗಳುಗಳಲ್ಲಿ ಹೊಸ ಹಣಕಾಸು (financial year 2024) ವರ್ಷ ಅಂದರೆ 2023 – 24ರ ಹಣಕಾಸಿನ ವರ್ಷ ಆರಂಭವಾಗಲಿದೆ.

ಪತ್ನಿ ಹೆಸರಿನಲ್ಲಿ ಆಸ್ತಿ ಖರೀದಿ ಮಾಡೋರಿಗೆ ಹೊಸ ರೂಲ್ಸ್! ಇಲ್ಲಿದೆ ಮಹತ್ವದ ಮಾಹಿತಿ

ಇಂತಹ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಬೇರೆಬೇರೆ ನಿಯಮಗಳನ್ನು ಕೂಡ ಜನರಿಗೆ ಪರಿಚಯಿಸುತ್ತದೆ. ಈಗ ಬಿಬಿಎಂಪಿ (BBMP) ಆದಾಯ ತೆರಿಗೆ ಸಂಬಂಧಪಟ್ಟ ಹಾಗೆ ಹಣಕಾಸು ವರ್ಷದ ಆರಂಭಕ್ಕೂ ಮೊದಲೇ ಹೊಸ ನಿಯಮವನ್ನು ಹೊರಡಿಸಿದ್ದು ಇದರಿಂದ ಯಾರಿಗೆ ಹೊರೆ ಆಗಲಿದೆ ಅಥವಾ ಯಾರಿಗೆ ಲಾಭ ಆಗಲಿದೆ ಎನ್ನುವುದನ್ನು ನೋಡೋಣ.

ಹೊಸ ತೆರಿಗೆ ನಿಯಮ ಜಾರಿಗೆ ತರಲಿರುವ ಬಿಬಿಎಂಪಿ!

ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಬರುವ ವಸತಿ ಹಾಗೂ ವಾಣಿಜ್ಯ ಬಾಡಿಗೆದಾರರಿಗೆ ಹೊಸ ಆದಾಯ ತೆರಿಗೆ ನಿಯಮವನ್ನು ಹೊರಡಿಸಿದೆ. 2024ರ ಆರ್ಥಿಕ ಹಣಕಾಸು ವರ್ಷ ಆರಂಭವಾಗುತ್ತಿದ್ದ ಹಾಗೆ ಮೌಲ್ಯಾಧಾರಿತ ತೆರಿಗೆ ನಿಯಮವನ್ನು ಬಿಬಿಎಂಪಿ ಜಾರಿಗೆ ತರಲಿದೆ. ವಾರ್ಷಿಕವಾಗಿ ಬಹಳ ಹೆಚ್ಚಿನ ಮೊತ್ತದ ಬಾಡಿಗೆ ಪಾವತಿ ಮಾಡುತ್ತಿರುವವರಿಗೆ ಮೌಲ್ಯಾಧಾರಿತ ತೆರಿಗೆ ಮತ್ತಷ್ಟು ಹೊರೆ ಎನಿಸಬಹುದು.

ಈಗಾಗಲೇ ಬಾಡಿಗೆ ಪಡೆದ ಆಸ್ತಿಗಳು (Property) ಅಥವಾ ಸ್ವಯಂ ಆಕ್ರಮಿತ ಆಸ್ತಿಗಳ ಮೇಲೆ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವವರಿಗೆ ಬಿಬಿಎಂಪಿ ಮೌಲ್ಯಧಾರಿತ ತೆರಿಗೆ ಸಂಕಷ್ಟವನ್ನು ಉಂಟು ಮಾಡಲಿದೆ.

ಮನೆ, ಆಸ್ತಿ, ಜಮೀನಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ! ಇಲ್ಲಿದೆ ಮಹತ್ವದ ಮಾಹಿತಿ

Property documentsಆದರೆ ನಿಜಕ್ಕೂ ಇದರ ನೇರವಾದ ಪರಿಣಾಮ ಬೀರುವುದು ಬಾಡಿಗೆದಾರರ ಮೇಲೆ. ಅಂದರೆ ಮನೆ ಮಾಲೀಕರು ಅಧಿಕ ತೆರಿಗೆ ಪಾವತಿ ಮಾಡುವ ಪರಿಸ್ಥಿತಿ ಎದುರಾದಾಗ ಅದರ ಪರಿಣಾಮ ಬಾಡಿಗೆ ಹೆಚ್ಚು ಮಾಡಿ ಅದರಿಂದ ಬಾಡಿಗೆದಾರರಿಗೆ ತೊಂದರೆ ಉಂಟಾಗುತ್ತದೆ.

ಆದರೆ ಬಿಬಿಎಂಪಿ ಮೌಲ್ಯಧಾರಿತ ತೆರಿಗೆ ವ್ಯವಸ್ಥೆ ಜಾರಿಗೆ ತರಲಿದ್ದು, ಇನ್ನು ಮುಂದೆ ಬಾಡಿಗೆ ಪಾವತಿ ಮಾಡುವವರಿಗೆ ಬಾಡಿಗೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬಿಬಿಎಂಪಿ ಹೊಸ ತೆರಿಗೆ ವ್ಯವಸ್ಥೆಯ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ಆಧಾರ್ ಕಾರ್ಡ್ ಕಳೆದು ಹೋಗಿದ್ಯಾ? ಟೆನ್ಶನ್ ಬೇಡ, ಹೀಗೆ ಇನ್ನೊಂದು ಕಾರ್ಡ್ ಪಡೆಯಿರಿ

ಆಸ್ತಿ ತೆರಿಗೆ ಪಾವತಿ ಮಾಡದೇ ಇದ್ರೆ ಹೆಚ್ಚುವರಿ ದಂಡ!

2016 – 17ನೇ ಸಾಲಿನಿಂದಲೂ ಕೂಡ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಆಸ್ತಿ ಮಾಲೀಕರಿಗೆ (Property Owners) ಬಿಬಿಎಂಪಿ ಹೇಳುತ್ತಲೇ ಬಂದಿದೆ. ಅಷ್ಟೇ ಅಲ್ಲದೆ ದಂಡ ಹಾಗೂ ಹೆಚ್ಚುವರಿ ಶುಲ್ಕವನ್ನು ಕೂಡ ವಿಧಿಸಿ ತೆರಿಗೆ ವಸೂಲಿ ಮಾಡುತ್ತಿದೆ ಇನ್ನು ಡಿಮ್ಯಾಂಡ್ ನೋಟೀಸ್ ಕಳುಹಿಸಿ 15 ದಿನಗಳ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಜನರನ್ನ ಕೇಳಿದೆ.

ಇನ್ನು ಸದ್ಯದಲ್ಲಿ ಆಸ್ತಿ ತೆರಿಗೆ ಪಾವತಿಗೆ ಸಂಬಂಧಪಟ್ಟ ಹಾಗೆ ಹೊಸ ನಿಯಮಗಳು ಬರಲಿದ್ದು ಈಗ ನೋಟಿಸ್ ಬಂದ ತಕ್ಷಣ 50% ನಷ್ಟು ಹಣವನ್ನು ಪಾವತಿ ಮಾಡಿ ಮತ್ತೆ ಉಳಿದ ಹಣಕ್ಕೆ ಅಪಿಲ್ ಸಲ್ಲಿಸಬಹುದು. ಯಾವಾಗ ಹೊಸ ಕಾಯ್ದೆ ಬರುತ್ತದೆಯೋ ಆಗ ಉಳಿದ ಹಣವನ್ನು ಆಸ್ತಿ ವ್ಯಾಜ್ಯ ಇದ್ದವರಿಗೆ ಕಡಿತಗೊಳಿಸುವ ಸಾಧ್ಯತೆ ಇದೆ.

ಆದರೆ ಸದ್ಯಕ್ಕಂತೂ ಆಸ್ತಿ ಹೊಂದಿರುವವರು ಆಸ್ತಿ ತೆರಿಗೆ ಪಾವತಿ ಮಾಡುವುದು ಕಡ್ಡಾಯವಾಗಿದೆ. ಕೊನೆ ಪಕ್ಷ 50% ಅಷ್ಟಾದರೂ ತೆರಿಗೆ ಪಾವತಿ ಮಾಡಲೇಬೇಕು ಎಂದು ಬಿಬಿಎಂಪಿ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.

ಪೋಸ್ಟ್ ಆಫೀಸ್ ಬಂಪರ್ ಆಫರ್! 25 ಸಾವಿರ ಹೂಡಿಕೆಗೆ ಸಿಗುತ್ತೆ 18 ಲಕ್ಷ ರೂಪಾಯಿ

Special tax regime for own property, land Owners, Effective from April 1

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories