ನಾವು ಎಷ್ಟೇ ಹಣವನ್ನ ದುಡಿದರೂ ಕೂಡ ಕೈಯಲ್ಲಿ ಹಣ ಇದೆ ಅಂದ್ರೆ ಅದಕ್ಕೆ ಒಂದಲ್ಲ ಒಂದು ಖರ್ಚು ಬಂದೇ ಬರುತ್ತದೆ, ಆ ಹಣ ಖಾಲಿ ಆಗಿಯೇ ಆಗುತ್ತದೆ. ಹಾಗಾಗಿ ಸಾಕಷ್ಟು ಜನ ಬ್ಯಾಂಕ್ (Bank ) ನಲ್ಲಿ ಹಣವನ್ನು ಇಡುತ್ತಾರೆ.
ಯಾವುದೇ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ (savings account) ಯನ್ನು ಆರಂಭಿಸಿದ್ರೆ ಒಂದಿಷ್ಟು ಬಡ್ಡಿಯನ್ನು ಕೂಡ ಪಡೆದುಕೊಳ್ಳಬಹುದು. ಮನೆಯಲ್ಲಿ ನಗದು ಹಣವನ್ನು ಇಟ್ಟುಕೊಳ್ಳುವುದಕ್ಕಿಂತಲೂ ಬ್ಯಾಂಕ್ನಲ್ಲಿ ಹಣವನ್ನು ಇಡುವುದು ಹೆಚ್ಚು ಸೇಫ್ ಕೂಡ ಹೌದು.
ಎಟಿಎಂ (ATM) ಮೂಲಕ ಯುಪಿಐ (UPI) ಮೂಲಕ ಅಥವಾ ಬ್ಯಾಂಕಿಗೆ ನೇರವಾಗಿ ಹೋಗಿ ನೀವು ನಿಮ್ಮ ಖಾತೆಯಲ್ಲಿ ಇರುವ ಹಣವನ್ನು ಯಾವಾಗ ಬೇಕಾದರೂ ಹಿಂಪಡೆಯುವ ಸೌಲಭ್ಯ ಇದೆ.
ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ 5000 ಹೂಡಿಕೆ ಮಾಡಿದ್ರೆ 5 ಲಕ್ಷ ನಿಮ್ಮ ಕೈ ಸೇರುತ್ತೆ!
ಬ್ಯಾಂಕ್ ನಲ್ಲಿ ಹಣ ಇಡುವುದಕ್ಕೆ ಮಿತಿ!
ನಾವು ಇಲ್ಲಿ ನೇರವಾಗಿ ಬ್ಯಾಂಕಿನಲ್ಲಿ ಎಷ್ಟು ಹಣ ಇಟ್ಟರೆ ಅದಕ್ಕೆ ಮಿತಿಯನ್ನು ವಿಧಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಯಾಕೆಂದರೆ ಯಾವುದೇ ವ್ಯಕ್ತಿ ಯಾವುದೇ ಬ್ಯಾಂಕಿನಲ್ಲಿ ಎಷ್ಟು ಬೇಕಾದರೂ ಉಳಿತಾಯ ಖಾತೆಯನ್ನು (Bank Account) ಆರಂಭಿಸಬಹುದು. ಹಾಗೂ ಆ ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಬೇಕಾದರೂ ಇಡಬಹುದು. ಹಾಗಾದ್ರೆ ಮಿತಿ ಹೇರಿಕೆ ಯಾವುದರ ಮೇಲೆ ಎನ್ನುವ ಪ್ರಶ್ನೆ ಮೂಡುತ್ತದೆ.
ಮತ್ತೆ ಬರ್ತಾ ಇದೆ Yamaha RX 100, ಯುವಕರ ಫೇವರೆಟ್ ಬೈಕ್ ರೀ ಎಂಟ್ರಿ
ವಾರ್ಷಿಕವಾಗಿ ಮಾಡಬಹುದು ಇಷ್ಟು ವಹಿವಾಟು!
ಒಬ್ಬ ವ್ಯಕ್ತಿ ಒಂದು ಉಳಿತಾಯ ಖಾತೆಯಲ್ಲಿ ವರ್ಷಕ್ಕೆ 10 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ಹಣಕಾಸಿನ ವಹಿವಾಟು (money transaction) ನಡೆಸಿದರೆ ಅದಕ್ಕೆ ಸೂಕ್ತ ಪುರಾವೆ (legal documents) ಗಳನ್ನು ಕೂಡ ಹೊಂದಿರಬೇಕು ಉದಾಹರಣೆಗೆ ನೀವು ಈ ರೀತಿ ಹಣ ವ್ಯವಹಾರ ಮಾಡುವಾಗ ನಿಮ್ಮ ಬಳಿ ಸರಿಯಾದ ದಾಖಲೆ ಇಲ್ಲದೆ ಇದ್ದರೆ ಬ್ಯಾಂಕ್ ಮೂಲಕ ಆದಾಯ ತೆರಿಗೆ ಇಲಾಖೆಗೆ ಈ ವಿಚಾರ ತಿಳಿಯುತ್ತದೆ ಹಾಗೂ ನೀವು ಹೆಚ್ಚುವರಿ ತೆರಿಗೆ (Tax) ಪಾವತಿಸಬೇಕಾಗುತ್ತದೆ.
ಹತ್ತು ವರ್ಷಗಳ ಅವಧಿಯಲ್ಲಿ ಯಾವಾಗ ಬೇಕಾದರೂ ನಿಮ್ಮ ಈ ಒಂದು ತಪ್ಪಿಗೆ ಸರ್ಕಾರ ನೋಟಿಸ್ ಜಾರಿಗೆ ತರಬಹುದು ಹಾಗೂ ನೋಟೀಸ್ ಬಂದ ಯಾವುದೇ ಅವಧಿಯಲ್ಲಿ ನೀವು ಉತ್ತರ ನೀಡಬೇಕಾಗುತ್ತದೆ.
ನಿಮ್ಮ ಮಗುವಿನ ಹೆಸರಿನಲ್ಲಿ 500ರೂ. ಹೂಡಿಕೆ ಮಾಡಿದ್ರೆ, ಲಕ್ಷಕ್ಕೂ ಹೆಚ್ಚು ಬೆನಿಫಿಟ್!
ಎಲ್ಲರಿಗೂ ಈ ನಿಯಮ ಅನ್ವಯವೇ?
ಇನ್ನು ನೀವು ಐಟಿಆರ್ ಸಲ್ಲಿಕೆ (ITR filing) ಮಾಡುವವರಾಗಿದ್ದರೆ ನಿಮಗೆ ಈ ನಿಯಮ ಅನ್ವಯ ಆಗುವುದಿಲ್ಲ. ಹೌದು, ನಿಮ್ಮ ಉಳಿತಾಯ ಖಾತೆಯಲ್ಲಿ ನೀವು ಕೋಟಿ ರೂಪಾಯಿಗಳನ್ನು ಕೂಡ ಸೇವ್ ಮಾಡಿ ಇಡಬಹುದು. ಆದರೆ ಈ ಹಣಕ್ಕೆ ಪಡೆದುಕೊಳ್ಳುವ ಬಡ್ಡಿಯ ಆಧಾರದ ಮೇಲೆ ಟ್ಯಾಕ್ಸ್ ವಿಧಿಸಲಾಗುತ್ತದೆ ಹಾಗೂ ಅದನ್ನ ನೀವು ಸರಿಯಾದ ಸಮಯಕ್ಕೆ ಸರಿಯಾದ ಮೊತ್ತವನ್ನು ಪಾವತಿಸಬೇಕು.
ಸ್ವಂತ ಆಸ್ತಿ, ಜಮೀನು ಇರೋರಿಗೆ ವಿಶೇಷ ತೆರಿಗೆ ನಿಯಮ; ಏಪ್ರಿಲ್ 1ರಿಂದಲೇ ಜಾರಿಗೆ
ಬಡ್ಡಿ ಲಾಭದ ಮೇಲೆ ಟ್ಯಾಕ್ಸ್ ಪಾವತಿ! (Paying tax based on income)
ಪ್ರಸ್ತುತ ಉಳಿತಾಯ ಖಾತೆಯ ಮೇಲೆ 2.70% ಬಡ್ಡಿ ದರದಿಂದ 4% ವರೆಗೆ ಬಡ್ಡಿ ದರವನ್ನು ಬ್ಯಾಂಕ್ ಗಳು ನೀಡುತ್ತವೆ. ಆದಾಯ ತೆರಿಗೆ ನಿಯಮ 80TTA ಅಡಿಯಲ್ಲಿ ಹತ್ತು ಸಾವಿರ ರೂಪಾಯಿಗಳಷ್ಟು ಬಡ್ಡಿ ಲಾಭ ಪಡೆದುಕೊಂಡರೆ ತೆರಿಗೆ ಪಾವತಿಸುವ ಅಗತ್ಯ ಇಲ್ಲ. ಆದರೆ 10,000 ಗಿಂತ ಹೆಚ್ಚಿನ ಬಡ್ಡಿ ಪಡೆದುಕೊಂಡರೆ ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ.
ಉಳಿತಾಯ ಖಾತೆಯ ಹಣ ಮಾತ್ರವಲ್ಲದೆ, ನೀವು ಮ್ಯೂಚುವಲ್ ಫಂಡ್, ಬಾಂಡ್, FD, ಶೇರು ಯಾವುದರಲ್ಲಿ ಹೂಡಿಕೆ ಮಾಡಿದರು ಕೂಡ ಅದರಿಂದ ಪಡೆದುಕೊಳ್ಳುವ ಲಾಭವನ್ನು ಉಳಿತಾಯ ಎಂದು ಪರಿಗಣಿಸಿ ಅದರ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಹತ್ತು ಸಾವಿರಕ್ಕಿಂತ ಹೆಚ್ಚಿನ ಲಾಭ ಪಡೆದು ಕೊಂಡಾಗ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರಬೇಕು.
ಹಾಗೂ ಹೆಚ್ಚುವರಿ ಲಾಭಕ್ಕೆ ತೆರಿಗೆಯನ್ನು ಪಾವತಿಸಬೇಕು ಇನ್ನು ಕೆಲವು ಯೋಜನೆಗಳನ್ನು ತೆಗೆದುಕೊಂಡು ನೀವು ಅದರಲ್ಲಿ ಹೂಡಿಕೆ ಮಾಡಿದರೆ ತೆರಿಗೆ ವಿನಾಯಿತಿ ಕೂಡ ಲಭ್ಯವಿದೆ.
ಪತ್ನಿ ಹೆಸರಿನಲ್ಲಿ ಆಸ್ತಿ ಖರೀದಿ ಮಾಡೋರಿಗೆ ಹೊಸ ರೂಲ್ಸ್! ಇಲ್ಲಿದೆ ಮಹತ್ವದ ಮಾಹಿತಿ
If you have more money in your bank account than this, you have to pay more tax
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.