ಎಟಿಎಂನಲ್ಲಿ ನಕಲಿ ನೋಟು ಬರುತ್ತಾ? ಅಕಸ್ಮಾತ್ ಬಂತು ಅಂತ ಇಟ್ಕೊಳಿ, ಏನ್ ಮಾಡಬೇಕು ಗೊತ್ತಾ?
ನಮಗೆ ಕ್ಯಾಶ್ ಅವಶ್ಯಕತೆ ಬಂದಾಗ ತಕ್ಷಣವೇ ಬ್ಯಾಂಕ್ ಗೆ ಹೋಗಲು ಸಾಧ್ಯವಾಗದೇ ಇದ್ದಾಗ, ಹತ್ತಿರ ಇರುವ ATM ಗೆ ಹೋಗಿ ಹಣ ಡ್ರಾ ಮಾಡುತ್ತೇವೆ. ಸಾಮಾನ್ಯವಾಗಿ ನಾವೆಲ್ಲರೂ ಕೂಡ ಮಾಡುವ ಕೆಲಸ ಇದು. ಎಲ್ಲಾ ಬ್ಯಾಂಕ್ ಗಳು ಕೂಡ ATM ಹೊಂದಿವೆ, ಭಾರತದಲ್ಲಿ ಈಗ ಯಾವುದೇ ಜಾಗಕ್ಕೆ ಹತ್ತಿರದಲ್ಲಿ ಹಣ ಡ್ರಾ ಮಾಡುವುದಕ್ಕೆ ATM ಗಳು ಸಿಗುತ್ತದೆ.
ಹಾಗಾಗಿ ಜನರು ತಕ್ಷಣಕ್ಕೆ ಕ್ಯಾಶ್ ಪಡೆಯಬೇಕು ಎಂದು ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಎಟಿಎಂ ಗಳು ನಮ್ಮ ಬದುಕನ್ನು ಸುಲಭ ಆಗಿಸುವಲ್ಲಿ ಸಹಾಯ ಮಾಡಿವೆ ಎಂದರು ಕೂಡ ತಪ್ಪಲ್ಲ.

ಇದೀಗ ನಾವು ಎಟಿಎಂ ಗೆ ಸಂಬಂಧಿಸಿದ ಹಾಗೆ ಒಂದು ಪ್ರಮುಖವಾದ ವಿಚಾರವನ್ನು ತಿಳಿಸಲಿದ್ದೇವೆ, ಎಟಿಎಂ ನಲ್ಲಿ ಹಣವನ್ನೇನೋ ಪಡೆಯುತ್ತೇವೆ, ಆದರೆ ಎಟಿಎಂ ಕೂಡ ಒಂದು ಮಷಿನ್ ಅಷ್ಟೇ, ಅದರಲ್ಲಿ ಕೂಡ ತಪ್ಪುಗಳು ಸಂಭವಿಸಬಹುದು.
ನಿಮಗಿದು ಗೊತ್ತಾ? ಎಲ್ಲಾ ಸ್ಕೂಲ್‌ಬಸ್‌ಗಳು ಹಳದಿ ಬಣ್ಣ ಇರೋದು ಏಕೆ? ಶೇಕಡಾ 99% ಜನಕ್ಕೆ ಗೊತ್ತಿಲ್ಲ
ಒಂದು ವೇಳೆ ನೀವು ಎಟಿಎಂ ಇಂದ ಹಣ ಡ್ರಾ ಮಾಡಿದಾಗ ಅದರಲ್ಲಿ ಫೇಕ್ ನೋಟ್ (Fake Note) ಅಥವಾ ಹರಿದಿರುವಂಥ ನೋಟ್ ಗಳು ಬಂದುಬಿಟ್ಟರೆ, ಆಗ ಏನು ಮಾಡಬೇಕು? ಬ್ಯಾಂಕ್ ಇಂದ ನಿಮ್ಮ ಹಣ ವಾಪಸ್ ಸಿಗುತ್ತ? ಇದರ ಬಗ್ಗೆ ಪೂರ್ತಿ ಮಾಹಿತಿಗಳನ್ನು ತಿಳಿಯೋಣ..
ಹೌದು, ಕೆಲವು ಸಂದರ್ಭಗಳಲ್ಲಿ ಎಟಿಎಂ ಇಂದ ಹರಿದಿರುವ ನೋಟ್ ಗಳು ಅಥವಾ ಫೇಕ್ ಗಳು ಬಂದರೆ, ನೀವು ಗಾಬರಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಹಣ ನಿಮಗೆ ವಾಪಸ್ ಬಂದೆ ಬರುತ್ತದೆ. ಅದಕ್ಕಾಗಿ ನೀವು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ, ಆ ರೀತಿ ಮಾಡಿದರೆ, ಬ್ಯಾಂಕ್ ಇಂದ ನಿಮ್ಮ ಹಣ ನಿಮಗೆ ಸಿಗುತ್ತದೆ.
ಈ ಕೆಲಸವನ್ನು ಎಟಿಎಂ ನಲ್ಲಿ ಇರುವಾಗಲೇ ಮಾಡಬೇಕು. ಹಾಗಿದ್ದಲ್ಲಿ ನೀವು ಮಾಡಬೇಕಾಗಿರುವುದು ಏನು? ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ ನೋಡಿ..
ಮನೆ, ಜಮೀನು, ಸ್ವಂತ ಆಸ್ತಿ ಇದ್ದೋರಿಗೆ ಬಿಗ್ ಅಪ್ಡೇಟ್! ಇನ್ಮುಂದೆ ನಡೆಯೋದಿಲ್ಲ ಆಸ್ತಿ ಫೋರ್ಜರಿ
ತಕ್ಷಣವೇ ಈ ಕೆಲಸ ಮಾಡಿ:
ಒಂದು ವೇಳೆ ನಿಮಗೆ ಬ್ಯಾಂಕ್ ಇಂದ ನಕಲಿ ನೋಟ್ ಬಂದಿದೆ ಎಂದರೆ, ATM ನ ಬ್ಯಾಂಕ್ ಬ್ರಾಂಚ್ ಗೆ ಭೇಟಿ ನೀಡಿ, ಅಧಿಕಾರಿಗಳಿಗೆ ನಡೆದ ವಿಷಯ ತಿಳಿಸಿದರೆ, ಅವರು ನಿಮಗೆ ಒಂದು ಅಪ್ಲಿಕೇಶನ್ ಫಾರ್ಮ್ ಕೊಡುತ್ತಾರೆ.
ಅದರಲ್ಲಿ ಎಟಿಎಂ ವಹಿವಾಟಿನ ಬಗ್ಗೆ ಮಾಹಿತಿ ನೀಡಿ, ನಿಮ್ಮ ಮೊಬೈಲ್ ಗೆ ಬಂದಿರುವ ಮೆಸೇಜ್ ತೋರಿಸಬೇಕು, ಹಾಗೂ ಇನ್ಯಾವುದೇ ಮಾಹಿತಿ ಬೇಕಾದರೆ, ನೀಡಬೇಕು. ಈ ಕೆಲಸ ಮಾಡಿದ, 1 ಒಂದು ವಾರದ ಒಳಗೆ ಬ್ಯಾಂಕ್ ನಿಮ್ಮ ಅಪ್ಲಿಕೇಶನ್ ಚೆಕ್ ಮಾಡಿ, ಹಣವನ್ನು ವಾಪಸ್ ನಿಮ್ಮ ಖಾತೆಗೆ (Bank Account) ಕ್ರೆಡಿಟ್ ಮಾಡುತ್ತದೆ.
ಯಾವುದೇ ಬ್ಯಾಂಕ್ ಕೂಡ ಈ ಒಂದು ಕೆಲಸಕ್ಕೆ ನಿರಾಕರಣೆ ಮಾಡುವ ಹಾಗಿಲ್ಲ. ಎಟಿಎಂ ಇಂದ ಸಮಸ್ಯೆ ಆದರೆ ಬ್ಯಾಂಕ್ ಗಳೇ ಅದನ್ನು ಸರಿ ಮಾಡಬೇಕು. ಅಧಿಕಾರಿಗಳು ನಿಮಗೆ ಸಹಕಾರ ನೀಡಿಲ್ಲ ಎಂದರೆ, RBI ಗೆ ನೀವು ಬ್ಯಾಂಕ್ ಬಗ್ಗೆ ನೇರವಾಗಿ ದೂರು ಕೊಡಬಹುದು. RBI ಆಗ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ. ಈ ಒಂದು ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು, ಕೆಲಸ ಮಾಡಬೇಕಾಗುತ್ತದೆ..
Do you know what to do if you get a fake note at the ATM