ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದ್ರೆ ಏನ್ ಮಾಡಬೇಕು ಗೊತ್ತಾ? ಮಹತ್ವದ ಮಾಹಿತಿ
ಆಧಾರ್ ಕಾರ್ಡ್ (Aadhaar card) ಎನ್ನುವುದು ಬಹಳ ಪ್ರಮುಖವಾಗಿರುವ ದಾಖಲೆಯಾಗಿದೆ, ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ ಹೊಂದಿರಲೇಬೇಕು. ಐದು ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ಆಧಾರ್ ಕಾರ್ಡ್ ಹೊಂದಿರಬೇಕು.
ಆಧಾರ್ ಕಾರ್ಡ್ ನಲ್ಲಿ (Aadhaar card) ಒಬ್ಬ ವ್ಯಕ್ತಿಯ ವೈಯಕ್ತಿಕ ದಾಖಲೆಗಳು (personal information) ಅಡಕವಾಗಿರುತ್ತದೆ, ನೀವು ಪ್ರಪಂಚದ ಯಾವುದೇ ಮೂಲೆಯಲ್ಲಿ ಕುಳಿತು ವೆಬ್ಸೈಟ್ನಲ್ಲಿ (website) ಆಧಾರ್ ಕಾರ್ಡ್ ನಂಬರ್ ಹಾಕಿದ್ರೆ ಆ ಆಧಾರ ಕಾರ್ಡ್ ಯಾವ ವ್ಯಕ್ತಿಗೆ ಸಂಬಂಧಿಸಿದ್ದು ಹಾಗೂ ಆ ವ್ಯಕ್ತಿಯ ಸಂಪೂರ್ಣವಾದ ವಿವರವನ್ನು ತಿಳಿದುಕೊಳ್ಳಬಹುದು.
ಇಷ್ಟು ಮಹತ್ವದ ಆಧಾರ್ ಕಾರ್ಡ್ ಒಂದು ವೇಳೆ ಕಳೆದು ಹೋದರೆ ಏನಾಗುತ್ತೆ ಗೊತ್ತಾ? ಹೌದು ಆಧಾರ್ ಕಾರ್ಡ್ ಅನ್ನು ನೀವು ಕಳೆದುಕೊಂಡರೆ ಅದು ವಂಚಕರ ಕೈ ಸೇರಿದರೆ ದುರುಪಯೋಗವಾಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ.
ವ್ಯಕ್ತಿಯ ಎಲ್ಲ ವೈಯಕ್ತಿಕ ಮಾಹಿತಿಗಳು ಕೂಡ ಆಧಾರ್ ಕಾರ್ಡ್ ನಲ್ಲಿಯೇ ಇರುವುದರಿಂದ ಅದನ್ನು ಕಳೆದುಕೊಂಡರೆ ಆ ವ್ಯಕ್ತಿಯ ಹೆಸರಿನಲ್ಲಿ ವಂಚನೆ ಮಾಡುವ ಸಾಧ್ಯತೆ ಇರುತ್ತದೆ.
ಆಸ್ತಿ ಅಡವಿಟ್ಟು ಸಾಲ ಮಾಡಿರುವ ಎಲ್ಲರಿಗೂ ಹೊಸ ರೂಲ್ಸ್! ಡಿಸೆಂಬರ್ ಒಂದರಿಂದಲೇ ಜಾರಿ
ಆಧಾರ್ ಕಾರ್ಡ್ ಕಳೆದು ಹೋದರೆ ಹಿಂಪಡೆಯಬಹುದೇ? (How to get duplicate Aadhar card )
ಒಂದು ವೇಳೆ ನೀವು ಆಧಾರ್ ಕಾರ್ಡನ್ನು ಕಳೆದುಕೊಂಡರೆ ಮುಂದೆ ಯಾವ ಹಣಕಾಸಿನ (Banking) ವ್ಯವಹಾರವನ್ನ ಮಾಡಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ನಕಲಿ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. 1947 ಈ ಸಂಖ್ಯೆಗೆ ಕರೆ ಮಾಡಿ ಹೊಸ ಆಧಾರ್ ಕಾರ್ಡ್ (ನಿಮ್ಮ ಆಧಾರ್ ಕಾರ್ಡ್ ನ ನಕಲು ಪ್ರತಿ) ಪಡೆದುಕೊಳ್ಳಲು ಸಾಧ್ಯ. ಇದನ್ನು ಹೊರತುಪಡಿಸಿ UIDAI ನಿಂದ ಆಧಾರ್ ಕಾರ್ಡ್ ನಕಲು ಪ್ರತಿ ಪಡೆದುಕೊಳ್ಳಲು ಸಾಧ್ಯವಿದೆ.
ಕೋಳಿ ಸಾಕಾಣಿಕೆಗೂ ಬೇಕು ಅನುಮತಿ! ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
UIDAI ಅಧಿಕೃತ ವೆಬ್ಸೈಟ್ ನಿಂದ ಆಧಾರ್ ಕಾರ್ಡ್ ನಕಲು ಪ್ರತಿ ಪಡೆಯಿರಿ!
ಇದಕ್ಕಾಗಿ ನೀವು ಮೊದಲು ಯುಐಡಿಎಐ ಅಧಿಕೃತ ವೆಬ್ಸೈಟ್ ಪ್ರವೇಶಿಸಬೇಕು, ನಂತರ ಅಲ್ಲಿ ನಿಮ್ಮ ಆಧಾರ್ ನೋಂದಣಿ ಸಂಖ್ಯೆ ನಮೂದಿಸಿದರೆ ಆಧಾರ್ ಕಾರ್ಡ್ ನಕಲು ಪ್ರತಿ ಪಡೆಯಬಹುದು
ಆದರೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಿಂದ (mobile) ಮಾತ್ರ ನಕಲು ಪ್ರತಿ ಪಡೆದುಕೊಳ್ಳಲು ಸಾಧ್ಯ, ಯಾಕಂದ್ರೆ ಈ ಸಂಖ್ಯೆಗೆ ಓಟಿಪಿ ಬರುತ್ತದೆ, OTP ನಮೂದಿಸಿದಾಗ ಮಾತ್ರ ಆಧಾರ್ ಕಾರ್ಡ್ ಪ್ರತಿ ಪಡೆದುಕೊಳ್ಳಬಹುದು. ಇದಕ್ಕೆ 50 ರೂಪಾಯಿ ಶುಲ್ಕವನ್ನು ಪಾವತಿಸಬೇಕು.
ಯಾವುದೇ ಬಂಡವಾಳ ಇಲ್ಲದೆ ಕುರಿ ಮೇಕೆ ಸಾಕಾಣಿಕೆ ಮಾಡಿ; ಸರ್ಕಾರವೇ ಕೊಡುತ್ತೆ ಹಣ
ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ಲಾಕ್ ಮಾಡುವುದು ಹೇಗೆ ಗೊತ್ತಾ?
ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ದು ಅದನ್ನ ಬೇರೆಯವರು ದುರುಪಯೋಗಪಡಿಸಿಕೊಳ್ಳಬಹುದು ಎನ್ನುವ ಅನುಮಾನ ನಿಮಗೆ ಇದ್ದರೆ ತಕ್ಷಣವೇ ನಿಮ್ಮ ಆಧಾರ್ ಕಾರ್ಡ್ ಲಾಕ್ (Aadhar card lock) ಮಾಡಿಕೊಳ್ಳಿ, ನಂತರ ಮತ್ತೆ ಅನ್ಲಾಕ್ (unlock) ಮಾಡಿಸಬಹುದು.
https://resident.uidai.in/ ಈ ವೆಬ್ಸೈಟ್ಗೆ ಹೋಗಿ, ಆಧಾರ್ ಸರ್ವಿಸ್ ಅನ್ನು ಆಯ್ಕೆ ಮಾಡಿಕೊಳ್ಳಿ. ನಂತರ ಲಾಕ್ ಆನ್ ಬಯೋಮೆಟ್ರಿಕ್ (biometric) ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಎಸ್‌ಬಿಐ ಖಾತೆ ಇರೋರಿಗೆ ಹೊಸ ಸೇವೆ ಆರಂಭ, ಇನ್ಮುಂದೆ ಬ್ಯಾಂಕ್‌ಗೆ ಹೋಗಬೇಕಾಗಿಲ್ಲ
ಇಲ್ಲಿ 12 ಅಂಕಿಯ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಗೆ ಒಂದು ಓಟಿಪಿ ಬರುತ್ತದೆ, ಆ ಒಟಿಪಿಯನ್ನು ನಮೂದಿಸಿ ಕ್ಯಾಪ್ಚ ಸಂಖ್ಯೆಯನ್ನು ನಮೂದಿಸಿದರೆ ನಿಮ್ಮ ಆಧಾರ್ ಕಾರ್ಡ್ ಲಾಕ್ ಆಗುತ್ತದೆ.
ಇದನ್ನು ಅನ್ಲಾಕ್ ಮಾಡಲು ಆನ್ಲೈನ್ ನಲ್ಲಿ ಮಾಡಿಕೊಳ್ಳಬಹುದು ಅಥವಾ ಆಧಾರ್ ಕೇಂದ್ರಕ್ಕೆ (Aadhar centre) ಹೋಗಬೇಕು, ಇನ್ನು ಲಾಕ್ ಮಾಡುವ ಪ್ರಕ್ರಿಯೆಗೂ ಕೂಡ ನೀವು ಆಧಾರ್ ಕೇಂದ್ರಕ್ಕೆ ಹೋಗಬಹುದು.
Do you know what to do if you lose your Aadhaar card, Important information