ಕೋಳಿ ಸಾಕಾಣಿಕೆಗೂ ಬೇಕು ಅನುಮತಿ! ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸರ್ಕಾರ ಸಾಲ ಸೌಲಭ್ಯ (Govt Loan) ಹಾಗೂ ಸಬ್ಸಿಡಿಯನ್ನು (Subsidy Loan) ಕೂಡ ನೀಡುತ್ತದೆ, ಇನ್ನು ಕೋಳಿ ಸಾಕಾಣಿಕೆಗೆ ಅನುಮತಿ ಅಗತ್ಯವಿದ್ದು ಅದನ್ನು ಪಡೆದುಕೊಳ್ಳುವುದು ಹೇಗೆ ತಿಳಿಯೋಣ

ಕೋಳಿ ಸಾಕಾಣಿಕೆ (poultry farming) ಅತ್ಯಂತ ಹೆಚ್ಚು ಆದಾಯ ತರುವಂತ ಒಂದು ಕಸುಬು ಎನ್ನುಬಹುದು. ನಿಮಗೆ ಕೋಳಿ ಸಾಕಾಣಿಕೆಯ ಬಗ್ಗೆ ಸರಿಯಾದ ಮಾಹಿತಿ ಇದ್ದರೆ ಪ್ರತಿ ತಿಂಗಳು ಲಕ್ಷಗಟ್ಟಲೆ ಹಣ ಸಂಪಾದಿಸಲು ಸಾಧ್ಯವಿದೆ

ಇದಕ್ಕಾಗಿ ಸರ್ಕಾರ ಸಾಲ ಸೌಲಭ್ಯ (Govt Loan) ಹಾಗೂ ಸಬ್ಸಿಡಿಯನ್ನು (Subsidy Loan) ಕೂಡ ನೀಡುತ್ತದೆ, ಇನ್ನು ಕೋಳಿ ಸಾಕಾಣಿಕೆಗೆ ಅನುಮತಿ ಅಗತ್ಯವಿದ್ದು ಅದನ್ನು ಪಡೆದುಕೊಳ್ಳುವುದು ಹೇಗೆ ಹಾಗೂ ಸರ್ಕಾರದ ಯಾವ ಯೋಜನೆ ಕೋಳಿ ಸಾಕಾಣಿಕೆಗೆ ಹಣ ಸಹಾಯ ಮಾಡಬಲ್ಲದು ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

ಯಾವುದೇ ಬಂಡವಾಳ ಇಲ್ಲದೆ ಕುರಿ ಮೇಕೆ ಸಾಕಾಣಿಕೆ ಮಾಡಿ; ಸರ್ಕಾರವೇ ಕೊಡುತ್ತೆ ಹಣ

ಕೋಳಿ ಸಾಕಾಣಿಕೆಗೂ ಬೇಕು ಅನುಮತಿ! ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ - Kannada News

ಗ್ರಾಮೀಣ ಭಾಗದಲ್ಲಿ ರೈತರು ಬೆಳೆ ಬೆಳೆಯುವುದರ ಜೊತೆಗೆ ಹೈನುಗಾರಿಕೆ ಕೋಳಿ ಸಾಕಾಣಿಕೆ (poultry farming) ಮೇಕೆ ಸಾಕಾಣಿಕೆ ಅಂತಹ ಉಪ ಕಸುಬುಗಳನ್ನು ಕೂಡ ಮಾಡುತ್ತಾರೆ, ಇದರಿಂದ ಹೆಚ್ಚು ಲಾಭ ಪಡೆದುಕೊಳ್ಳಲು ಸಾಧ್ಯವಿದೆ.

ಸರ್ಕಾರವು ಕೂಡ ಸೂಕ್ತ ಆರ್ಥಿಕ ನೆರವು ಹಾಗೂ ತರಬೇತಿಯನ್ನು ನೀಡುತ್ತದೆ. ಕೋಳಿ ಸಾಕಾಣಿಕ ಕೇಂದ್ರಗಳಿಂದ ತರಬೇತಿಯನ್ನು ಪಡೆದುಕೊಂಡು ಇಂದಿನ ಯುವಕರು ಕೂಡ ಕೋಳಿ ಸಾಕಾಣಿಕೆ ಉದ್ಯಮವನ್ನು ಆರಂಭಿಸುತ್ತಿದ್ದಾರೆ.

ಕೋಳಿ ಸಾಕಾಣಿಕೆಗೆ ಬೇಕು ಅನುಮತಿ! (Permission for poultry farm)

ಕೋಳಿ ಸಾಕಾಣಿಕೆ ಮಾಡಲು ಕಟ್ಟಡ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅನುಮತಿ ಪಡೆದುಕೊಳ್ಳಬೇಕು. ಆದರೆ ಇದು ಕೃಷಿಯ ಒಂದು ಉಪಕಸಬು ಎಂದು ಪರಿಗಣಿಸಲಾಗಿದ್ದು, ಕರ್ನಾಟಕ ಭೂ ಸುಧಾರಣಾ ಕಾಯ್ದೆ 1981ರ ಅಡಿಯಲ್ಲಿ ಭೂ ಪರಿವರ್ತನೆ ಮಾಡಿಕೊಳ್ಳದೆ ಕೋಳಿ ಸಾಕಾಣಿಕೆ ಕಟ್ಟಡವನ್ನು ನಿರ್ಮಾಣ ಮಾಡಬಹುದು.

ಆದರೆ ಕಟ್ಟಡ ನಿರ್ಮಾಣ ಮಾಡುವುದಕ್ಕೂ ಮೊದಲು ರಾಜ್ಯದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎನ್ ಓ ಸಿ (no objection certificate) ಪಡೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ತಶಿಲ್ದಾರರ ನಿರಪೇಕ್ಷಣ ಪತ್ರ ಹಾಗೂ ಪಹಣಿ ಪತ್ರವನ್ನು ದಾಖಲೆಯಾಗಿ ನೀಡಬೇಕು.

ಈ ಯೋಜನೆ ಮೂಲಕ ಎಲ್ಲರಿಗೂ ಸಿಗಲಿದೆ 2 ಲಕ್ಷ ಉಚಿತ ಹಣ! ಕೇಂದ್ರ ಸರ್ಕಾರದ ಸ್ಕೀಮ್

ಕೋಳಿ ಸಾಕಾಣಿಕೆಗೆ ಯಾರಿಂದ ಪರವಾನಿಗೆ ಪಡೆದುಕೊಳ್ಳಬೇಕು?

Poultry Farming Loanಕೋಳಿ ಸಾಕಾಣಿಕೆ ಆರಂಭಿಸುವವರು ಗ್ರಾಮ ಪಂಚಾಯತ್ ನಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 64 ರಲ್ಲಿ ತಿಳಿಸಲಾಗಿದೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಶು ಸಂಗೋಪನೆ ನಿಯಮದ ಅನುಸಾರ ಕಟ್ಟಡ ನಿರ್ಮಾಣಕ್ಕೆ ಗ್ರಾಮ ಪಂಚಾಯತ್ ಅನುಮತಿ ನೀಡಬೇಕಾಗುತ್ತದೆ.

ಎಸ್‌ಬಿಐ ಖಾತೆ ಇರೋರಿಗೆ ಹೊಸ ಸೇವೆ ಆರಂಭ, ಇನ್ಮುಂದೆ ಬ್ಯಾಂಕ್‌ಗೆ ಹೋಗಬೇಕಾಗಿಲ್ಲ

ಕೋಳಿ ಫಾರಂ ಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳುವುದು ಹೇಗೆ? (Electricity connection for building)

Electricity Connectionತಹಶೀಲ್ದಾರರಿಂದ ನಿರಪೇಕ್ಷಣ ಪತ್ರ, ಕಟ್ಟಡ ನಿರ್ಮಾಣ ಅನುಮತಿ ಪತ್ರ, ಪಹಣಿ ಪತ್ರ ಹಾಗೂ ಕಂದಾಯ ರಶೀದಿ ಪತ್ರವನ್ನು ನೀಡಿ ಕೋಳಿ ಫಾರಂ ಕಟ್ಟಡಕ್ಕೆ ಅಗತ್ಯವಿರುವ ವಿದ್ಯುತ್ ಸಂಪರ್ಕವನ್ನು (Electricity connection) ಪಡೆದುಕೊಳ್ಳಬಹುದು.

ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ತರಬೇತಿ! (Training for poultry farming)

ಅಗ್ರಿ ಬ್ಯುಸಿನೆಸ್ ಯೋಜನೆಯ (Agri business scheme) ಎರಡು ತಿಂಗಳ ತರಬೇತಿ ಹಾಗೂ 35% ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯವನ್ನು (Business Loan) ಸರ್ಕಾರ ನೀಡುತ್ತದೆ. ಹೆಚ್ಚಿನ ಮಾಹಿತಿಗೆ https://www.agriclinics.net/ ಈ ವೆಬ್ಸೈಟ್ ಗೆ (website) ಭೇಟಿ ನೀಡಿ.

ಕೋಳಿ ಸಾಕಾಣಿಕೆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಸಹಾಯವಾಣಿ ಸಂಖ್ಯೆ (helpline number) 8277100200 ಗೆ ಕರೆಮಾಡಿ ಅಥವಾ https://www.ahvs.kar.nic.in/pdfs/notifications/Training_Mod_POULTRYFARMING.pdf ಈ ವೆಬ್ ಸೈಟ್ ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

How to get Permit for Poultry farming, Here is the complete information

Follow us On

FaceBook Google News

How to get Permit for Poultry farming, Here is the complete information