ಮನುಷ್ಯನಿಗೆ ಯಾವ ಸಮಯದಲ್ಲಿ ಯಾವ ಪರಿಸ್ಥಿತಿಯಲ್ಲಿ ಹಣದ ಅವಶ್ಯಕತೆ (money requirement) ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದೆಷ್ಟೋ ಬಾರಿ ನಾವು ದುಡಿದ ಹಣ ನಮಗೆ ಸಾಲುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಹಣಕ್ಕಾಗಿ ಸಾಲ ಮಾಡುವುದು ಅನಿವಾರ್ಯ.
ಮನೆ ಖರೀದಿಸುವ ಸಲುವಾಗಿ ಗೃಹ ಸಾಲ (home loan) ಕಾರು ಖರೀದಿಸುವ ಸಲುವಾಗಿ ವಾಹನ ಸಾಲ (Vehicle Loan) ಅಥವಾ ವೈಯಕ್ತಿಕ ಸಾಲವನ್ನು (personal loan) ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಪಡೆದುಕೊಳ್ಳುತ್ತೇವೆ.
ಕೋಳಿ ಸಾಕಾಣಿಕೆಗೂ ಬೇಕು ಅನುಮತಿ! ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಸಾಲ ಪಡೆದುಕೊಂಡವರಿಗೆ ಗುಡ್ ನ್ಯೂಸ್!
ಇನ್ನು ಬ್ಯಾಂಕುಗಳಲ್ಲಿ ಸಾಲ (bank loan) ಪಡೆದುಕೊಳ್ಳಬೇಕು ಅಂದ್ರೆ ಸುಖ ಸುಮ್ಮನೆ ಯಾರು ಸಾಲ ಕೊಡುವುದಿಲ್ಲ ಎಂಬುದು ನಿಮಗೂ ಗೊತ್ತಿರುವ ವಿಚಾರ. ಬ್ಯಾಂಕುಗಳಲ್ಲಿ ಸಾಲ ಪಡೆದುಕೊಳ್ಳುವುದಾದರೆ ನಾವು ಶೂರಿಟಿ (surety) ಅಥವಾ ನಂಬಿಕೆಗಾಗಿ ನಮ್ಮ ಬಳಿ ಇರುವ ಆಸ್ತಿ ಪತ್ರ (property documents) ಅಥವಾ ಇತರ ಯಾವುದೇ ಮೌಲ್ಯಯುತವಾದ ದಾಖಲೆಗಳನ್ನು ಅಡವಿಡಬೇಕು. ನಾವು ಯಾವ ಮೌಲ್ಯದ ಆಸ್ತಿ ಪತ್ರ ನೀಡುತ್ತೇವೆ ಅಷ್ಟು ಮೌಲ್ಯದ ಸಾಲ ಪಡೆದುಕೊಳ್ಳಲು ಸಾಧ್ಯವಿದೆ.
ಸಾಕಷ್ಟು ಬಾರಿ ಆಸ್ತಿ ಪತ್ರ ಅಡವಿಟ್ಟು ಸಾಲ ತೆಗೆದುಕೊಂಡ ನಂತರ ಪ್ರತಿ ತಿಂಗಳು ಸರಿಯಾಗಿ ಸಾಲ ಮರುಪಾವತಿ ಮಾಡಿದರು ಕೂಡ ಕೆಲವೊಮ್ಮೆ ಬ್ಯಾಂಕುಗಳು ಹೆಚ್ಚುವರಿ ಶುಲ್ಕವನ್ನು (extra fee) ಕೂಡ ಹಾಕುತ್ತವೆ.
ಯಾವುದೇ ಬಂಡವಾಳ ಇಲ್ಲದೆ ಕುರಿ ಮೇಕೆ ಸಾಕಾಣಿಕೆ ಮಾಡಿ; ಸರ್ಕಾರವೇ ಕೊಡುತ್ತೆ ಹಣ
ಸರಿ, ಈ ಶುಲ್ಕವನ್ನು ಕೂಡ ಪಾವತಿಸಿದ್ದೇವೆ ಎಂದುಕೊಳ್ಳಿ. ನಿಮ್ಮ ಸಾಲ ಸಂಪೂರ್ಣವಾಗಿ ಹಿಂತಿರುಗಿಸಿದ ನಂತರ ನಿಮ್ಮ ಆಸ್ತಿ ಪತ್ರ ನಿಮ್ಮ ಕೈ ಸೇರಬೇಕು ಆದರೆ ಕೆಲವು ಬ್ಯಾಂಕುಗಳು ಅಥವಾ ಸಣ್ಣ ಹಣಕಾಸು ಸಂಸ್ಥೆಗಳು (financial companies) ಸಾಲಗಾರರಿಗೆ ಸಲ್ಲ ಬೇಕಾಗಿರುವ ಅವರ ಆಸ್ತಿ ಪತ್ರವನ್ನು ಕೊಡುವಲ್ಲಿ ಹಿಂದೆಟು ಹಾಕುತ್ತಾರೆ ಅಥವಾ ಬೇಜವಾಬ್ದಾರಿ ತೋರಿಸುತ್ತಾರೆ.
ಆಸ್ತಿ ಪತ್ರ ಕಳೆದು ಹೋಗಿದೆ ಅಥವಾ ಇಂದು ಆಸ್ತಿ ಪತ್ರ ಹಿಂತಿರುಗಿಸಲು ಸಮಯವಿಲ್ಲ ಹೀಗೆ ಏನೇನೋ ನೆಪ ಒಡ್ಡಿ ಸಾಲಗಾರರು ಸಾಲ ತೀರಿಸಿದ ನಂತರವೂ ಕೂಡ ತಮ್ಮ ಆಸ್ತಿ ಪತ್ರ ಪಡೆದುಕೊಳ್ಳಲು ಬ್ಯಾಂಕ್ ಗೆ ಅಲೆದಾಡುವಂತೆ ಮಾಡುತ್ತಾರೆ.
ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಆರ್ ಬಿ ಐ ಹೊಸ ನಿಯಮ (RBI new rules) ಜಾರಿಗೆ ತಂದಿದ್ದು ಬ್ಯಾಂಕ್ ಗಳಾಗಿರಲಿ ಅಥವಾ ಹಣಕಾಸು ಸಂಸ್ಥೆಗಳಾಗಿರಲಿ ಅಥವಾ ಎಂ ಬಿ ಸಿ ಎಫ್ ಗಳಾಗಿರಲಿ, ಸಾಲಗಾರನ ಆಸ್ತಿ ಪತ್ರವನ್ನು ಆತ ಸಾಲ ಮರುಪಾವತಿಸಿದ ತಕ್ಷಣವೇ ಹಿಂತಿರುಗಿಸಲು ಆದೇಶ ಹೊರಡಿಸಿದೆ.
ಎಸ್‌ಬಿಐ ಖಾತೆ ಇರೋರಿಗೆ ಹೊಸ ಸೇವೆ ಆರಂಭ, ಇನ್ಮುಂದೆ ಬ್ಯಾಂಕ್‌ಗೆ ಹೋಗಬೇಕಾಗಿಲ್ಲ
ಗ್ರಾಹಕರಿಗೆ ಬ್ಯಾಂಕ್ ದಂಡ ನೀಡಬೇಕು!
ಇಲ್ಲಿಯವರೆಗೆ ಬ್ಯಾಂಕ್ ಒಂದಲ್ಲಾ ಒಂದು ಕಾರಣಕ್ಕೆ ಗ್ರಾಹಕರಿಗೆ ದಂಡ (penalty) ವಿಧಿಸಿರುವ ಬಗ್ಗೆ ನೀವು ಕೇಳಿರಬಹುದು ಆದರೆ ಇನ್ನು ಮುಂದೆ ಇದೊಂದು ತಪ್ಪನ್ನು ಮಾಡಿದರೆ ಬ್ಯಾಂಕ್ ಗ್ರಾಹಕರಿಗೆ ದಂಡ ಪಾವತಿಸಬೇಕು.
ಸಾಲ ಮಾಡಿದವನು ಸಾಲ ಮರುಪಾವತಿ ಮಾಡಿದ ನಂತರ 30 ದಿನಗಳ ಒಳಗೆ ಆತ ಅಡವಿಟ್ಟ ಆಸ್ತಿ ಪತ್ರವನ್ನು (Property Documents) ಆತನಿಗೆ ಹಿಂತಿರುಗಿಸಬೇಕು, ಒಂದು ವೇಳೆ ಬ್ಯಾಂಕ್ ಈ ಕೆಲಸ ಮಾಡದೆ ಇದ್ದಲ್ಲಿ, ದಿನಕ್ಕೆ 5000 ಗಳಂತೆ ಬ್ಯಾಂಕ್ ಗಳು ಗ್ರಾಹಕರಿಗೆ ದಂಡ ರೂಪದಲ್ಲಿ ಹಣವನ್ನು ಪಾವತಿ ಮಾಡಬೇಕು.
ಸ್ವಂತ ಮನೆ ಕಟ್ಟಿ ಕೊಳ್ಳಲು ಅತಿ ಕಡಿಮೆ ಬಡ್ಡಿಗೆ ಸಾಲ ನೀಡಲು ಮುಂದಾದ ಬ್ಯಾಂಕ್‌ಗಳು
ಬ್ಯಾಂಕುಗಳಲ್ಲಿ ಇಂತಹ ಸಮಸ್ಯೆ ನಿತ್ಯವೂ ಇರುತ್ತದೆ. ಹಳ್ಳಿಗಳಲ್ಲಿಯಂತು ರೈತರು ತಮ್ಮ ಆಸ್ತಿ ಪತ್ರ ಅಡವಿಟ್ಟು ಸಾಲ ತೆಗೆದುಕೊಂಡು, ಫಸಲು ಮಾರಾಟ ಮಾಡಿದ ನಂತರ ಸಾಲ ತೀರಿಸುತ್ತಾರೆ, ಆದರೆ ಅವರು ಅಡವಿಟ್ಟ ಆಸ್ತಿ ಪತ್ರ ಮಾತ್ರ ಅವರ ಕೈ ಸೇರುವುದಿಲ್ಲ. ಇಂತಹ ಪ್ರಕರಣಗಳು ಹೆಚ್ಚು ದಾಖಲಾಗಿದ್ದು ಆರ್ ಬಿ ಐ ಗ್ರಾಹಕರ ಪರವಾಗಿ ಈ ಹೊಸ ರೂಲ್ಸ್ ಜಾರಿಗೆ ತಂದಿದೆ.
New rules for all those who have mortgaged property, Effective from December 1
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.