ನಿಮಗೆ ಪ್ರತಿ ದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರಿಗಿನ ಕೆಲಸ ಮಾಡಿ ಬೋರ್ ಆಗಿದ್ದರೆ, ಬೇರೆ ಏನಾದರೂ ಸ್ವಂತ ಉದ್ಯೋಗ (Own business) ಮಾಡಬೇಕು ಎಂದುಕೊಂಡಿದ್ದರೆ ನೀವು ಇಲ್ಲಿ ನಾವು ನಿಮಗೆ ಒಂದು ಒಳ್ಳೆಯ ಉದ್ಯೋಗದ ಉಪಾಯವನ್ನು ನೀಡುತ್ತೇವೆ.
ಸ್ವಂತ ಉದ್ಯೋಗ ಆರಂಭಿಸುವ ವೇಳೆ ಮಾರ್ಕೆಟ್ನಲ್ಲಿ ಹೆಚ್ಚು ಜನರು ಬಳಸುವ ಹಾಗೂ ದಿನಾಲೂ ಬೇಕು ಎನ್ನುವಂತ ಉತ್ಪನ್ನಗಳನ್ನು ತಯಾರು ಮಾಡಬೇಕು. ಇದರಿಂದ ಲಾಭ ಗಳಿಸುವುದು ಸುಲಭ. ಇಂತಹ ಉದ್ಯೋಗ ಆರಂಭಿಸುವ ಕಡೆ ಹೆಚ್ಚಿನ ಗಮನ ಹರಿಸಬೇಕು. ಹಾಗಾದ್ರೆ ಯಾವ ಉದ್ಯೋಗ ಮಾಡಬೇಕು ಎಂದು ಕೇಳಿದರೆ ಒಂದು ಉತ್ತಮ ಐಡಿಯಾ ಇಲ್ಲಿದೆ ನೋಡಿ.
ನಿಮ್ಮ ಮನೆಗೆ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸಿಗಲಿದೆ ಸರ್ಕಾರದಿಂದ ಸಬ್ಸಿಡಿ!
ಈ ಉದ್ಯಮ ಮಾಡಿದ್ರೆ ಲಾಭ ಗ್ಯಾರಂಟಿ!
ಯಾವುದೇ ಸಂದರ್ಭದಲ್ಲೂ ಬೇಡಿಕೆ ಕುಗ್ಗದ ಹಾಗೂ ವರ್ಷದ ಎಲ್ಲ ದಿನವೂ ಬೇಡಿಕೆ ಇರುವ ಉದ್ಯೋಗದ ಬಗ್ಗೆ ನಾವು ಇಲ್ಲಿ ನಿಮಗೆ ತಿಳಿಸಿಕೊಡುತ್ತೇವೆ. ಪ್ರತಿಯೊಬ್ಬರು ಪ್ರತಿ ದಿನವೂ ಆಹಾರ ಸೇವನೆ ಮಾಡಲೇಬೇಕು. ಈ ವೇಳೆ ಪ್ಲೇಟ್ ಅವಶ್ಯ. ನೀವು ಸಹ ಇದನ್ನೇ ಆಧಾರವಾಗಿ ಇಟ್ಟುಕೊಂಡು ಪೇಪರ್ ಪ್ಲೇಟ್ (paper plate business) ತಯಾರಿಸುವ ಬಿಸಿನೆಸ್ ಆರಂಭಿಸುವುದು ಉತ್ತಮ. ಇದರಿಂದ ನೀವು ಸ್ವಲ್ಪ ಕಷ್ಟ ಪಟ್ಟರೆ ತಿಂಗಳಿಗೆ 75 ಸಾವಿರ ರೂ. ನಿಂದ 1 ಲಕ್ಷ ರೂ. ವರೆಗೂ ದುಡಿಯಬಹುದು.
ಇಂದಿನ ದಿನದಲ್ಲಿ ಯಾವುದೇ ಸಭೆಗಳಿರಲಿ, ಸಮಾರಂಭದ ಇರಲಿ ಅಲ್ಲಿ ಚಹ ತಿಂಡಿ ವ್ಯವಸ್ಥೆ ಇರುತ್ತದೆ. ಈ ವೇಳೆ ತಿಂಡಿಯನ್ನು ಪೇಪರ್ ಪ್ಲೇಟ್ನಲ್ಲಿ ಹಾಕಿಯೇ ಕೊಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಪೇಪರ್ ಪ್ಲೇಟ್ ತಯಾರು ಮಾಡುವುದು ಉತ್ತಮ ಉಪಾಯವಾಗಿದೆ.
ಇನ್ಮುಂದೆ ಜಮೀನು, ಭೂ ದಾಖಲೆಗಳಿಗಾಗಿ ಅಲೆದಾಡುವ ಅವಶ್ಯಕತೆ ಇಲ್ಲ! ಹೊಸ ಸೇವೆ
ಪೇಪರ್ ಪ್ಲೇಟ್ ಉದ್ಯಮ ಆರಂಭಿಸುವುದು ಹೇಗೆ? (How to start paper plate business?)
ಈ ಪೇಪರ್ ಪ್ಲೇಟ್ ಮಾಡುವುದು ಹೇಗೆ ಎನ್ನುವ ಚಿಂತೆ ನಿಮ್ಮನ್ನು ಕಾಡಬಹುದು. ಅದಕ್ಕಾಗಿ ನೀವು ಪೇಪರ್ ಪ್ಲೇಟ್ ತಯಾರಿಸುವ ಮಿಷನ್ ಖರೀದಿಸಬೇಕಾಗುತ್ತದೆ. ಇದರ ಜೊತೆ ಸ್ವಲ್ಪ ಕಚ್ಚಾ ಸಾಮಾಗ್ರಿಗಳನ್ನು ಕೊಂಡುಕೊಳ್ಳಬೇಕಾಗುತ್ತದೆ. ಈ ಪೇಪರ್ ಪ್ಲೇಟ್ ತಯಾರಿಸುವ ಮಷೀನ್ಗೆ (machine) ಮನೆ ಬಳಕೆಯ ವಿದ್ಯುತ್ ಸಾಕಾಗುತ್ತದೆ.
ಮನೆಯಲ್ಲಿ ನೀವು ಒಂದೆರಡು ಗಂಟೆ ಸಮಯ ನೀಡಿದರೆ ಸಾಕು. ಈ ಮಷೀನ್ ಒಂದೇ ಸಮಯದಲ್ಲಿ 10ಕ್ಕೂ ಅಧಿಕ ಪ್ಲೇಟ್ ತಯಾರಿಸುತ್ತದೆ. ಹೀಗೆ ಒಂದು ಗಂಟೆಗೆ ನೀವು ಸಾವಿರಾರು ಪ್ಲೇಟ್ ತಯಾರು ಮಾಡಬಹುದು. ತಯಾರು ಮಾಡಿದ ನಂತರ ನೇರವಾಗಿ ಗ್ರಾಹಕರಿಗೆ ನೀಡಬಹುದು. ಇಲ್ಲವೇ ಅಂಗಡಿಯವರಿಗೆ ಮಾರಾಟ ಮಾಡಬಹುದು. ಈಗ ಎಲ್ಲವೂ ಆನ್ಲೈನ್ ಆಗಿರುವುದರಿಂದ ಆನ್ಲೈನ್ ಮೂಲಕವೂ ಮಾರಾಟ ಮಾಡಬಹುದಾಗಿದೆ. ಈ ರೀತಿ ಮಾಡುವುದರಿಂದ ಶೀಘ್ರವಾಗಿ ನಿಮ್ಮ ವ್ಯಾಪಾರ ವೃದ್ಧಿಸಲಿದೆ.
ಹೊಸ ಮನೆ ಕಟ್ಟುವವರಿಗೆ ಕೇಂದ್ರದಿಂದ ಭರ್ಜರಿ ಸುದ್ದಿ! ಸಿಗಲಿದೆ ಆರ್ಥಿಕ ನೆರವು
ಪೇಪರ್ ಪ್ಲೇಟ್ ತಯಾರಿಸುವ ಮಷೀನ್ ಹುಬ್ಬಳ್ಳಿಯ ಅನ್ನಪೂರ್ಣ ಎಂಟರ್ಫ್ರೈಸಸ್ (Annapurna enterprises Hubli ) ಎನ್ನುವ ಸಂಸ್ಥೆಯವರು ಮಾರಾಟ ಮಾಡುತ್ತಿದ್ದಾರೆ. ಈ ಬಿಸಿನೆಸ್ ಆರಂಭಿಸಲು ಆಸಕ್ತಿ ಇರುವವರು ಅನ್ನಪೂರ್ಣ ಎಂಟರ್ಫ್ರೈಸಸ್ ಸಂಪರ್ಕಿಸಬಹುದಾಗಿದೆ.
ಸ್ವಂತ ಉದ್ಯಮ್ಮ ಮಾಡಲು ಆಸಕ್ತಿ ಇರುವವರಿಗೆ ಅವರು ಕಡಿಮೆ ಬೆಲೆಯಲ್ಲಿ ಮಷೀನ್ ಒದಗಿಸುವುದು ಮಾತ್ರವಲ್ಲದೆ ನಿಮ್ಮ ಸ್ಥಳಕ್ಕೆ ಬಂದು ಮಷೀನ್ ಫಿಟ್ ಮಾಡಿ ಕೊಡುತ್ತಾರೆ ಜೊತೆಗೆ ಮಷೀನ್ ಹೇಗೆ ಬಳಸಬೇಕು ಎನ್ನುವ ತರಬೇತಿಯನ್ನು ನೀಡುತ್ತಾರೆ.
ಇಂದು ಆನ್ಲೈನ್ ಮಾರ್ಕೆಟಿಂಗ್ ಕೂಡ ಹೆಚ್ಚು ಪ್ರಚಲಿತದಲ್ಲಿ ಇರುವ ಕಾರಣ ಸೋಶಿಯಲ್ ಮೀಡಿಯಾದ ಮೂಲಕ ಪ್ರಮೋಷನ್ ಮಾಡಿ, ಸುಲಭವಾಗಿ ಪೇಪರ್ ಪ್ಲೇಟ್ ಬಿಸಿನೆಸ್ ನಲ್ಲಿ ಯಶಸ್ಸು ಕಾಣಬಹುದು.
Earn 1 lakh per month sitting at home, Just 2 hours of work is enough
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.