ಹೊಸ ಮನೆ ಕಟ್ಟುವವರಿಗೆ ಕೇಂದ್ರದಿಂದ ಭರ್ಜರಿ ಸುದ್ದಿ! ಸಿಗಲಿದೆ ಆರ್ಥಿಕ ನೆರವು

Home Loan : ಬಜೆಟ್ ನಿಂದ ಸಿಕ್ತು ಗುಡ್ ನ್ಯೂಸ್; ಹೊಸ ಮನೆ ಕಟ್ಟಿಕೊಳ್ಳಲು ಸರ್ಕಾರದ ನೆರವು

ಹೊಸ ಮನೆ (own house) ಕಟ್ಟಿಕೊಳ್ಳುವವರಿಗೆ ಕೇಂದ್ರ ಬಜೆಟ್ (Central budget) ಪೂರಕವಾಗಿದೆ ಎಂದೇ ಹೇಳಬಹುದು. ಸುಮಾರು 2 ಗಂಟೆ 45 ನಿಮಿಷಗಳ ಕಾಲ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ (Nirmala sitaraman) ಫೆಬ್ರವರಿ ಒಂದು 2024ರಂದು ಮಧ್ಯಂತರ ಬಜೆಟ್ ಘೋಷಣೆ ಮಾಡಿದ್ದಾರೆ. ಈ ಸುಧೀರ್ಘವಾದ ಬಜೆಟ್ ನಲ್ಲಿ ಜನರಿಗೆ ಅನುಕೂಲವಾದ ಸಾಕಷ್ಟು ಯೋಜನೆಗಳನ್ನು ತರುವ ಬಗ್ಗೆ ಕೇಂದ್ರ ಸರ್ಕಾರ ಮುಂದಾಲೋಚನೆ ನಡೆಸಿದೆ.

5 ಸಾವಿರ ಹೂಡಿಕೆ ಮಾಡಿ 5 ಲಕ್ಷ ಪಡೆಯಿರಿ; ಉಳಿತಾಯ ಮಾಡೋಕೆ ಹೊಸ ಯೋಜನೆ

ಹೊಸ ಮನೆ ಕಟ್ಟಿಕೊಳ್ಳುವವರಿಗೆ ಬಜೆಟ್ ನಿಂದ ಗುಡ್ ನ್ಯೂಸ್!

ದೇಶದಲ್ಲಿ ತಮ್ಮದೇ ಆಗಿರುವ ಸ್ವಂತ ಮನೆ ಕಟ್ಟಿಕೊಳ್ಳಲು ಬಯಸುವವರು ಗೃಹ ಸಾಲ (home loan) ತೆಗೆದುಕೊಂಡರೆ ಅವರ ಸಾಲದ ಮೇಲಿನ ಬಡ್ಡಿ ದರ (date of interest) ವನ್ನು ಕಡಿತಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಬಾರಿ ಬಜೆಟ್ ನಲ್ಲಿ ಕೂಡ ವಸತಿ ಯೋಜನೆಗೆ ಹೆಚ್ಚು ಒತ್ತು ನೀಡಿದ್ದು ಕಂಡುಬಂದಿದೆ.

ಹೊಸ ಮನೆ ಕಟ್ಟುವವರಿಗೆ ಕೇಂದ್ರದಿಂದ ಭರ್ಜರಿ ಸುದ್ದಿ! ಸಿಗಲಿದೆ ಆರ್ಥಿಕ ನೆರವು - Kannada News

ತೆರಿಗೆ ಕಾಯ್ದೆ 1961ರ ಪ್ರಕಾರ ಮನೆ ನಿರ್ಮಾಣ ಮಾಡಿಕೊಳ್ಳಲು ಗೃಹ ಸಾಲ (home loan) ತೆಗೆದುಕೊಳ್ಳುವವರಿಗೆ ಆದಾಯ ತೆರಿಗೆ ಕಡಿತಗೊಳಿಸಲಾಗುವುದು. ತೆರಿಗೆ ವಿನಾಯಿತಿ (tax deduction) ನಿಬಂಧನೆಗಳು ಯಾವ ವರ್ಗದ ಜನರು ಎಷ್ಟು ಮೊತ್ತದ ಗೃಹ ಸಾಲ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಅವಲಂಬಿಸಿರುತ್ತದೆ.

ಹಳೆಯ ತೆರಿಗೆ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುತ್ತಿರುವವರಿಗೆ ಗೃಹ ಸಾಲ ತೆಗೆದುಕೊಂಡಿದ್ದರೆ ಗಣನೀಯ ಪ್ರಮಾಣದಲ್ಲಿ ಲಾಭ ಸಿಗಲಿದೆ. ಕಳೆದ ಕೆಲವು ವರ್ಷಗಳಲ್ಲಿ ಆದಾಯ ತೆರಿಗೆ (income tax) ವಿನಾಯಿತಿಯಲ್ಲಿ ಗೃಹ ಸಾಲಕ್ಕೆ (home loan) ಸಂಬಂಧಪಟ್ಟಂತೆ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿಲ್ಲ. ಹಾಗಾಗಿ ಈ ಬಾರಿಯ ಬಜೆಟ್ ನಲ್ಲಿ ಜನರಿಗೆ ನಿರೀಕ್ಷೆಗಳು ಹೆಚ್ಚಿದ್ದವು ಎನ್ನಬಹುದು.

ಸೈಟ್ ಖರೀದಿಗೂ ಸಿಗುತ್ತೆ ಸಾಲ? ಸಿಕ್ಕ ಸಾಲಕ್ಕೆ ಬಡ್ಡಿ ಎಷ್ಟು ಗೊತ್ತಾ? ಇಲ್ಲಿದೆ ಡೀಟೇಲ್ಸ್

Home Loanಬಜೆಟ್ ನಲ್ಲಿ ಪ್ರಸ್ತಾವನೆ!

ಮನೆ ತೆರಿಗೆ ಪಾವತಿ ಮಾಡುವವರ ಮುಖ್ಯವಾಗಿರುವ ಬೇಡಿಕೆ ಎಂದರೆ ಗೃಹ ಸಾಲದ ಮೇಲಿನ ಬಡ್ಡಿ ಮರುಪಾವತಿಯ ಮಿತಿಯನ್ನು ಹೆಚ್ಚಿಸಬೇಕು ಎನ್ನುವುದು. 2014ರಲ್ಲಿ ಬಡ್ಡಿ ಮರುಪಾವತಿಯ ಮಿತಿಯನ್ನು ಎರಡು ಲಕ್ಷ ರೂಪಾಯಿಗಳಿಗೆ ಸೀಮಿತಗೊಳಿಸಲಾಗಿತ್ತು. ಇದರಿಂದಾಗಿ ಗೃಹ ಸಾಲಕ್ಕೆ ಬರುವ ನಾಲ್ಕರಿಂದ ಐದು ಲಕ್ಷ ರೂಪಾಯಿಗಳ ಬಡ್ಡಿಯಲ್ಲಿ ಕೇವಲ ಎರಡು ಲಕ್ಷ ರೂಪಾಯಿಗಳಿಗೆ ಮಾತ್ರ ತೆರಿಗೆ ವಿನಾಯಿತಿ ಸಿಗುತ್ತದೆ ಹಾಗಾಗಿ ಇದು ಗ್ರಾಹಕರಿಗೆ ಬಹಳ ದೊಡ್ಡ ಹೊರೆಯಾಗಿ ಪರಿಣಮಿಸಿತ್ತು.

ಕಳೆದ 10 ವರ್ಷಗಳ ಲೆಕ್ಕಾಚಾರ ನೋಡಿದ್ರೆ, ಮನೆಯ ಬೆಲೆ ಅತಿ ಹೆಚ್ಚು ಏರಿಕೆಯಾಗಿದೆ ಎನ್ನಬಹುದು. ಎಲ್ಲಾ ವಸ್ತುಗಳು ದುಬಾರಿ ಆಗಿರುವುದರ ಜೊತೆಗೆ ಗೃಹ ಸಾಲದ ಮೇಲಿನ ಬಡ್ಡಿ ದರವು, ಕಳೆದ ಒಂದೆರಡು ವರ್ಷಗಳಲ್ಲಿ ಸಾಕಷ್ಟು ಹೆಚ್ಚಾಗಿದೆ.

ಮನೆ ಬಾಡಿಗೆ ನೀಡೋ ಮಾಲಿಕರೇ ರೆಂಟ್ ಅಗ್ರಿಮೆಂಟ್ ಬಗ್ಗೆ ತಿಳಿಯಿರಿ! ಮಹತ್ವದ ಮಾಹಿತಿ

ಈ ಬೆಲೆ ಏರಿಕೆ ಬಿಸಿಯನ್ನು ಗ್ರಾಹಕರು ತಡೆದುಕೊಳ್ಳಲು ಮುಖ್ಯವಾಗಿ ಬೇಕಾಗಿರುವುದೇ ಬಡ್ಡಿ ಮರುಪಾವತಿಯ ಮಿತಿಯನ್ನು ಹೆಚ್ಚಿಸುವುದು. ಕೊನೇ ಪಕ್ಷ ಗೃಹ ಸಾಲದ ಅಸಲು ಬಿಟ್ಟು ಬಡ್ಡಿಯ ಮಿತಿಯನ್ನಾದರೂ ಅಂದರೆ ತೆರಿಗೆ ವಿನಾಯಿತಿಯನ್ನು ನಾಲ್ಕು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದರೆ, ಹೊಸ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಹೆಚ್ಚು ಅನುಕೂಲವಾಗುತ್ತದೆ.

ಸೆಕ್ಷನ್ 80 ಸಿ ಅಡಿಯಲ್ಲಿ ಗೃಹ ಸಾಲದ ಅಸಲಿನ ಮೇಲೆ ತೆರಿಗೆ ಕಡಿತವನ್ನು ಪಡೆದುಕೊಳ್ಳಬಹುದು. ಈ ಮಿತಿಯನ್ನು 1.5 ಲಕ್ಷ ರೂಪಾಯಿಗಳಿಗೆ ಮೀಸಲಿಡಲಾಗಿದೆ. 2014 ರಿಂದ ಈ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಾಗಾಗಿ ಕೇಂದ್ರ ಬಜೆಟ್ ನ ಪ್ರಕಾರ ಇನ್ನು ಮುಂದೆ ತಮ್ಮ ಸ್ವಂತ ಸೂರು ನಿರ್ಮಾಣ ಮಾಡಿಕೊಳ್ಳುವ ಕನಸು ಕಾಣುತ್ತಿರುವವರಿಗೆ ಸಾಲ ಸೌಲಭ್ಯ ತೆಗೆದುಕೊಳ್ಳುವ ವಿಚಾರದಲ್ಲಿ ತುಸು ನೆಮ್ಮದಿ ಸಿಗಬಹುದು.

ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆಗೆ ಎಷ್ಟು ಬಾರಿ ಅವಕಾಶ ಇದೆ ಗೊತ್ತಾ?

Those building new houses will get financial assistance from the Centre

Follow us On

FaceBook Google News

Those building new houses will get financial assistance from the Centre