ಸೈಟ್ ಖರೀದಿಗೂ ಸಿಗುತ್ತೆ ಸಾಲ? ಸಿಕ್ಕ ಸಾಲಕ್ಕೆ ಬಡ್ಡಿ ಎಷ್ಟು ಗೊತ್ತಾ? ಇಲ್ಲಿದೆ ಡೀಟೇಲ್ಸ್
ಹೇಗೆ ವೈಯಕ್ತಿಕ ಸಾಲ (personal loan) , ಗೃಹ ಸಾಲ (Home loan) ಸಿಗುತ್ತದೆಯೋ ಅದೇ ರೀತಿ ಸೈಟ್ ಖರೀದಿಗೂ ಕೂಡ ಸಾಲ ಸಿಗುತ್ತಾ ಎನ್ನುವ ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ.
ಇತ್ತೀಚಿನ ದಿನಗಳಲ್ಲಿ ಹಣದುಬ್ಬರ (Inflation) ದ ಸಮಸ್ಯೆಯನ್ನ ಪ್ರತಿಯೊಬ್ಬ ನಾಗರಿಕರು ಕೂಡ ಅನುಭವಿಸುತ್ತಿದ್ದಾರೆ ಎನ್ನಬಹುದು. ಆದರೆ ಈ ದುಬಾರಿ ದುನಿಯಾದಲ್ಲಿಯೂ ಕೂಡ ತಮ್ಮದೇ ಆಗಿರುವ ಸ್ವಂತ ಮನೆ (Own house) ನಿರ್ಮಾಣ ಮಾಡಿಕೊಳ್ಳುವ ಕನಸು ಹಲವರಿಗೆ ಇರುತ್ತದೆ. ಯಾಕೆಂದರೆ ಒಂದೇ ಒಂದು ಮನೆ ಇದ್ದರೂ ಸಾಕು ಅದು ಒಬ್ಬ ವ್ಯಕ್ತಿಯ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಇರುವ ಆಸ್ತಿ ಆಗಿರುತ್ತದೆ.
ಎಲ್ಲಾ ವಸ್ತುಗಳ ದರ ಜಾಸ್ತಿ ಆಗುತ್ತಿದ್ದ ಹಾಗೆ, ಭೂಮಿ ಬೆಲೆ ಕೂಡ ಜಾಸ್ತಿ ಆಗಿದೆ. ಹಾಗಾಗಿ ನೀವು ಎಲ್ಲಿ ಸುಲಭವಾಗಿ ಕಡಿಮೆ ದರದಲ್ಲಿ ಸೈಟ್ ಖರೀದಿ (site purchase) ಮಾಡಲು ಅವಕಾಶ ಇದೆಯೋ ಅದರ ಮೇಲೆ ಹೂಡಿಕೆ ಮಾಡಿ ಸೈಟ್ ಖರೀದಿ ಮಾಡಿ ಇಟ್ಟುಕೊಂಡರೆ ಯಾವುದೇ ಸಮಯದಲ್ಲಿ ಅದನ್ನ ಹಣದ ರೂಪದಲ್ಲಿ ಬಳಸಿಕೊಳ್ಳಬಹುದು.
ಈ ಯೋಜನೆಯಲ್ಲಿ ಸಿಗುತ್ತೆ 2 ಲಕ್ಷ ರೂಪಾಯಿ ಸಾಲ! ಯಾವುದೇ ಗ್ಯಾರಂಟಿ ಬೇಕಿಲ್ಲ
ಸೈಟ್ ಖರೀದಿ ದುಬಾರಿ! (Buying a site is expensive)
ಒಂದು ಮನೆ ನಿರ್ಮಾಣ ಮಾಡಿಕೊಳ್ಳುವುದು ದುಬಾರಿ ಮಾತ್ರ ಅಲ್ಲ ಒಂದು ಸೈಟ್ ಖರೀದಿ ಮಾಡುವುದು ಕೂಡ ಈಗ ಸಾಕಷ್ಟು ದುಬಾರಿ ಆಗಿದೆ. ಸೈಟ್ನ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಅದರಲ್ಲೂ ಮುಖ್ಯ ಸ್ಥಳದಲ್ಲಿ ಮಾಡುವುದಾದರೆ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬ (middle class family) ದವರು ಇಂತಹ ಸೈಟ್ ಖರೀದಿ ಮಾಡಲು ಎಂದಿಗೂ ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.
ನೀವು ಸೈಟ್ ಖರೀದಿ ಮಾಡಬೇಕು ಅಂದ್ರೆ, ಅದಕ್ಕೆ ಯಾವುದಾದರೂ ಸಾಲ ಸೌಲಭ್ಯ (loan facility) ಇದೆಯಾ ಎನ್ನುವುದರ ಬಗ್ಗೆ ಯೋಚನೆ ಬರುವುದು ಸಹಜ. ಹೇಗೆ ಬ್ಯಾಂಕ್ಗಳಲ್ಲಿ ಸುಲಭವಾಗಿ ವೈಯಕ್ತಿಕ ಸಾಲ (personal loan) , ಗೃಹ ಸಾಲ (Home loan) ಸಿಗುತ್ತದೆಯೋ ಅದೇ ರೀತಿ ಸೈಟ್ ಖರೀದಿಗೂ ಕೂಡ ಸಾಲ ಸಿಗುತ್ತಾ ಎನ್ನುವ ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ.
5 ಸಾವಿರ ಹೂಡಿಕೆ ಮಾಡಿ 5 ಲಕ್ಷ ಪಡೆಯಿರಿ; ಉಳಿತಾಯ ಮಾಡೋಕೆ ಹೊಸ ಯೋಜನೆ
ಹೆಚ್ ಡಿ ಎಫ್ ಸಿ ಸೈಟ್ ಲೋನ್! (HDFC site loan)
ನೀವು ಪ್ರತಿ ತಿಂಗಳು 25,000 ಸಂಬಳ (salary) ಪಡೆದುಕೊಳ್ಳುವವರಾಗಿದ್ದರೆ, 15 ವರ್ಷಗಳ ಅವಧಿಗೆ ಮರುಪಾವತಿ ಮಾಡಬಹುದಾದ ಸಾಲ ತೆಗೆದುಕೊಳ್ಳಲು ಬಯಸಿದರೆ, 10,15,497 ರೂಪಾಯಿವರೆಗಿನ ಸಾಲ ಪಡೆದುಕೊಳ್ಳಬಹುದು. ಇದಕ್ಕೆ ಪ್ರತಿ ತಿಂಗಳು 10,000 ರೂ. ಗಳ EMI ಪಾವತಿಸಬೇಕು. ಈ ಸಾಲಕ್ಕೆ ಬಡ್ಡಿದರ 8.50% ನಿಂದ 9.15% ವರೆಗೆ ಇರುತ್ತದೆ.
ಮನೆ ಬಾಡಿಗೆ ನೀಡೋ ಮಾಲಿಕರೇ ರೆಂಟ್ ಅಗ್ರಿಮೆಂಟ್ ಬಗ್ಗೆ ತಿಳಿಯಿರಿ! ಮಹತ್ವದ ಮಾಹಿತಿ
ಸೈಟ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು! (Needed documents for site loan)
ನಿಮ್ಮ ಆದಾಯದ ಬಗ್ಗೆ ಮಾಹಿತಿ
ಸೈಟ್ ಬಗ್ಗೆ ಮಾಹಿತಿ
ವೇತನ ಪಡೆದುಕೊಳ್ಳುವ ಉದ್ಯೋಗಿಗಳು ಮೂರು ತಿಂಗಳ ಸ್ಯಾಲರಿ ಸ್ಲಿಪ್ (3 months salary slip) ಹಾಗೂ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ (6 months bank statement) ಒದಗಿಸಬೇಕು.
ಇತ್ತೀಚಿನ ಫಾರ್ಮ್ ನಂಬರ್ 16 ಭರ್ತಿ ಮಾಡಬೇಕು.
ಇನ್ನು ಸ್ವಂತ ಉದ್ಯಮ ಮಾಡುತ್ತಿರುವವರು ಸೈಟ್ ಗಾಗಿ ಸಾಲ ತೆಗೆದುಕೊಳ್ಳುವುದಿದ್ದರೆ ಕಳೆದ ಎರಡು ವರ್ಷಗಳ ಐಟಿಆರ್ (ITR) ರಿಟರ್ನ್ ಮಾಡಿರುವ ಮಾಹಿತಿ ನೀಡಬೇಕು. ಎರಡು ವರ್ಷಗಳ ಬ್ಯಾಲೆನ್ಸ್ ಶೀಟ್ ಹಾಗೂ ಒಂದು ವರ್ಷದ ಚಾಲ್ತಿ ಖಾತೆಯ ಸ್ಟೇಟ್ಮೆಂಟ್ ಒದಗಿಸಬೇಕು.
ಎಚ್ ಡಿ ಎಫ್ ಸಿ ಬ್ಯಾಂಕ್ ಮಾತ್ರವಲ್ಲದೆ ಇತರ ಖಾಸಗಿ ಬ್ಯಾಂಕುಗಳು ಹಾಗೂ ಫೈನಾನ್ಸ್ ಗಳು ಕೂಡ ಗೃಹ ಸಾಲದ ಜೊತೆಗೆ ಸೈಟ್ ಲೋನ್ ಕೂಡ ಒದಗಿಸುತ್ತವೆ. ಇಂತಹ ಸಾಲಕ್ಕೆ ಪ್ರೋಸೆಸಿಂಗ್ ಪೀ ಜಾಸ್ತಿ ಇರುವುದಿಲ್ಲ. ಕೈಗೆಟಿಕುವ ಬಡ್ಡಿ ದರದಲ್ಲಿ, ಪ್ರಿ ಪೇಮೆಂಟ್ ಪೆನಾಲ್ಟಿ ಇಲ್ಲದೆ ಸೈಟ್ ಲೋನ್ ಖರೀದಿ ಮಾಡಬಹುದು. ಮರುಪಾವತಿ ಮಾಡಲು ದೀರ್ಘಾವಧಿಯ ಸಮಯ ಇರುತ್ತದೆ. 18 ರಿಂದ 65 ವರ್ಷ ವಯಸ್ಸಿನವರು ಸೈಟ್ ಲೋನ್ ಖರೀದಿಸಬಹುದು.
ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆಗೆ ಎಷ್ಟು ಬಾರಿ ಅವಕಾಶ ಇದೆ ಗೊತ್ತಾ?
ಇನ್ನು ಬೇರೆ ಬೇರೆ ಬ್ಯಾಂಕ್ಗಳಲ್ಲಿ ಸೈಟ್ ಲೋನ್ ಖರೀದಿ ನಿಯಮಗಳು ಬೇರೆ ಬೇರೆ ರೀತಿ ಇರುವುದರಿಂದ ನೀವು ಬ್ಯಾಂಕ್ ಶಾಖೆಗೆ ಹೋಗಿ ಸೈಟ್ ಲೋನ್ ಪಡೆದುಕೊಳ್ಳುವುದಕ್ಕೆ ಮಾಹಿತಿ ತಿಳಿದುಕೊಳ್ಳಿ. ನಂತರ ಸಾಲಕ್ಕೆ ಅಪ್ಲೈ ಮಾಡಿ.
get a loan to buy a site, know the interest Rate on the loan