ಈ ಯೋಜನೆಯಲ್ಲಿ ಸಿಗುತ್ತೆ 2 ಲಕ್ಷ ರೂಪಾಯಿ ಸಾಲ! ಯಾವುದೇ ಗ್ಯಾರಂಟಿ ಬೇಕಿಲ್ಲ

Loan Scheme : ನೀವು ನಿಮ್ಮದೇ ಆಗಿರುವ ಸ್ವಂತ ಉದ್ಯಮ (Own business) ಆರಂಭಿಸಿ ಜವಾಬ್ದಾರಿಯುತವಾದ ಜೀವನ ಕಟ್ಟಿಕೊಳ್ಳಬೇಕು ಎಂದು ಬಯಸಿದರೆ ಬಂಡವಾಳ (investment) ಕ್ಕಾಗಿ ಚಿಂತೆ ಮಾಡುವ ಅಗತ್ಯವೇ ಇಲ್ಲ. ಇದರ ಬಗ್ಗೆ ಯೋಚನೆ ಮಾಡುವುದು ಬಿಟ್ಟು ನೀವು ನಿಮ್ಮದೇ ಆಗಿರುವ ಮಾಸ್ಟರ್ ಪ್ಲಾನ್ ತಯಾರಿಸಿಕೊಳ್ಳಿ.
ಹೌದು, ನಿಮಗೆ ಸ್ವಂತ ಉದ್ಯಮ ಮಾಡುವ ಯೋಜನೆ ಇದ್ರೆ ಸರ್ಕಾರದಿಂದ ಬಂಡವಾಳ ಹಾಕಿಸಿಕೊಂಡು ಉದ್ಯಮ ಆರಂಭಿಸಬಹುದು. ಅದು ಅಲ್ಲದೆ ಈಗ ಸರ್ಕಾರ ಕೊಡುತ್ತಿರುವ ಎರಡು ಲಕ್ಷ ರೂಪಾಯಿಗಳ ಸಾಲಕ್ಕೆ (Loan) ಯಾವುದೇ ರೀತಿಯ ಗ್ಯಾರಂಟಿಯನ್ನು ನೀವು ಕೊಡಬೇಕಾಗಿಲ್ಲ.
ಬೇಸಿಕ್ ದಾಖಲೆಗಳನ್ನು ಹೊರತುಪಡಿಸಿ ಬೇರೆ ಯಾವ ಹೆಚ್ಚಿನ ದಾಖಲೆಯನ್ನು ಕೂಡ ಕೇಳುವುದಿಲ್ಲ. ಅಂತ ಯೋಜನೆ ಯಾವುದು? ಸರ್ಕಾರ ಎಷ್ಟು ಮೊತ್ತದ ಸಾಲ ನೀಡುತ್ತದೆ ಈ ಎಲ್ಲಾ ವಿಚಾರದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
5 ಸಾವಿರ ಹೂಡಿಕೆ ಮಾಡಿ 5 ಲಕ್ಷ ಪಡೆಯಿರಿ; ಉಳಿತಾಯ ಮಾಡೋಕೆ ಹೊಸ ಯೋಜನೆ
ವಿಶ್ವ ಕರ್ಮ ಯೋಜನೆ 2024! (PM Vishwakarma Yojana)
ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಫಲಾನುಭವಿಗಳಿಗೆ ಕೇಂದ್ರ ಸರ್ಕಾರ (Central government) ಮಾತ್ರವಲ್ಲದೆ ರಾಜ್ಯ ಸರ್ಕಾರವು ಕೂಡ ಬೆಂಬಲ ನೀಡುತ್ತಿದೆ, ಯೋಜನೆ ಅಡಿಯಲ್ಲಿ ಬೇಕಾಗಿರುವ ಸಂಪೂರ್ಣ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರವೇ ಕೊಡುತ್ತದೆ. 18ಕ್ಕಿಂತ ಹೆಚ್ಚಿನ ಸಂಪ್ರದಾಯಿಕ ಕುಶಲ ಕೆಲಸಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಆರಂಭವಾಗಿದೆ.
ಯಾರು ತಮ್ಮ ಕುಲಕಸುಬು ಅಥವಾ ಸಾಂಪ್ರದಾಯಿಕ (traditional work) ಕುಶಲಕರ್ಮಿ ಕೆಲಸವನ್ನು ಮುಂದುವರಿಸಿಕೊಂಡು ಹೋಗಲು ಬಯಸುತ್ತಾರೋ, ಅಥವಾ ಸಾಂಪ್ರದಾಯಿಕ ಕುಶಲ ಕಲೆಗಳನ್ನು ಕಲಿತು ಸ್ವ ಉದ್ಯೋಗ ಆರಂಭಿಸಲು ಪ್ರಯತ್ನಿಸುತ್ತಾರೋ ಅಂತವರಿಗಾಗಿಯೇ ಜಾರಿಗೆ ಬಂದಿದೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ.
ಮನೆ ಬಾಡಿಗೆ ನೀಡೋ ಮಾಲಿಕರೇ ರೆಂಟ್ ಅಗ್ರಿಮೆಂಟ್ ಬಗ್ಗೆ ತಿಳಿಯಿರಿ! ಮಹತ್ವದ ಮಾಹಿತಿ
ಯಾರಿದು ಸಿಗುತ್ತೆ ಸಾಲ! (Who can get loan)
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ, ದೇಶದ ಕುಶಲಕರ್ಮಿಗಳಿಗೆ ಎರಡು ಲಕ್ಷ ರೂಪಾಯಿಗಳವರೆಗೆ ಕೇವಲ 5% ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Loan facility) ನೀಡಲಾಗುತ್ತದೆ. ಒಂದು ಲಕ್ಷದವರೆಗೆ ಈ ಸಾಲ ಪಡೆಯಬಹುದು. ಒಮ್ಮೆ ಸಾಲ ಮರುಪಾವತಿ ಮಾಡಿದ ನಂತರ ಮತ್ತೆ ಸಾಲ ಪಡೆದುಕೊಳ್ಳಲು ಅವಕಾಶ ಇರುತ್ತದೆ.
ಕುಶಲಕರ್ಮಿಗಳು ತಮ್ಮ ಸಾಂಪ್ರದಾಯಿಕ ಉದ್ಯಮವನ್ನು ಮುಂದುವರಿಸಲು ಅಗತ್ಯ ಇರುವ ಕೌಶಲ್ಯ ತರಬೇತಿ ನೀಡುವುದರ ಜೊತೆಗೆ ಇಂತಹ ಉದ್ಯಮಿಗಳು ಡಿಜಿಟಲ್ ತಂತ್ರಜ್ಞಾನವನ್ನು ತಿಳಿದುಕೊಂಡು ಅವುಗಳ ಮೂಲಕ ತಮ್ಮ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸಲು ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ.
ಈಗಾಗಲೇ ಈ ಯೋಜನೆಗೆ ಕೇಂದ್ರ ಸರ್ಕಾರ 13000 ಕೋಟಿಗಳನ್ನು ಮೀಸಲಿಟ್ಟಿದ್ದು, 30 ಲಕ್ಷ ಕುಟುಂಬಗಳು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆಗೆ ಎಷ್ಟು ಬಾರಿ ಅವಕಾಶ ಇದೆ ಗೊತ್ತಾ?
ಪಿಎಂ ವಿಶ್ವಕರ್ಮ ಯೋಜನೆಗೆ ನೋಂದಾಯಿಸಿಕೊಳ್ಳುವುದು ಹೇಗೆ? (How to register)
18 ವರ್ಷ ಮೇಲ್ಪಟ್ಟವರು ತಮ್ಮ ಕುಲಕಸುಬು ಹಾಗೂ ಸಾಂಪ್ರದಾಯಿಕ ಕುಶಲ ಕರ್ಮಿ ಕೆಲಸ ಮುಂದುವರಿಸಲು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಸಾಲ ಪಡೆಯಬಹುದು. ನೀವು ನಿಮ್ಮ ಹತ್ತಿರದ ಗ್ರಾಮ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಫಾರ್ಮ್ ಭರ್ತಿ ಮಾಡಿ ಸಬ್ಸಿಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ರೇಷನ್ ಕಾರ್ಡ್ (ration card) ಆಧಾರ್ ಕಾರ್ಡ್ (Aadhaar card) ಪಾನ್ ಕಾರ್ಡ್ ವಾಸ ಸ್ಥಳದ ವಿಳಾಸ ಪುರಾವೆ ಮೊದಲಾದ ಮಾಹಿತಿಯನ್ನು ನೀಡಬೇಕು.
https://www.pmvishwakarma.gov.in/ ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.
ಬ್ಯಾಂಕ್ ಖಾತೆಯಲ್ಲಿ ಇನ್ಮುಂದೆ ಇದಕ್ಕಿಂತ ಹೆಚ್ಚು ಹಣ ಇಡುವಂತಿಲ್ಲ; ಹೊಸ ನಿಯಮ
In this Scheme, you will get a loan of 2 lakh rupees, No guarantee is required
ಯಾರಿದು ಸಿಗುತ್ತೆ ಸಾಲ! (Who can get loan)



