Savings Scheme : ನಾವು ಭವಿಷ್ಯಕ್ಕಾಗಿ ಹಣ ಉಳಿತಾಯ (savings ) ಮಾಡಬೇಕು ಎಂದುಕೊಂಡರೆ ಸಾಕಾಗುವುದಿಲ್ಲ. ನಮ್ಮ ಕಡೆ ಇರುವ ಹಣವನ್ನು ಎಲ್ಲಿ ಹೇಗೆ ಹೂಡಿಕೆ (Investment ) ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂಬುದನ್ನು ನೋಡಬೇಕು. ಸ್ವಲ್ಪ ಜಾಣತನದಿಂದ ಯೋಚನೆ ಮಾಡಿ, ಹೂಡಿಕೆ ಮಾಡಿದ್ರೆ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ಗಳಿಸಿಕೊಳ್ಳಲು ಸಾಧ್ಯವಿದೆ.
ಇತ್ತೀಚಿನ ದಿನಗಳಲ್ಲಿ ಅಪಾಯ ಮುಕ್ತ ಹೂಡಿಕೆಯ (market riskless investment) ಬಗ್ಗೆ ಜನ ಹೆಚ್ಚು ಗಮನ ವಹಿಸಿದ್ದಾರೆ. ಅದರಲ್ಲೂ ಸುಮಾರು 30ರಿಂದ 40 ವರ್ಷದ ಆಸುಪಾಸಿನಲ್ಲಿ ನೀವು ಹಣ ಹೂಡಿಕೆ ಮಾಡಲು ಪ್ರಯತ್ನಿಸಿದರೆ ಅಪಾಯ ಮುಕ್ತ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯ. ಇದಕ್ಕೆ ಅತ್ಯುತ್ತಮ ವೇದಿಕೆ ಆಗಿದೆ ಭಾರತೀಯ ಅಂಚೆ ಕಚೇರಿ.
ಮನೆ ಬಾಡಿಗೆ ನೀಡೋ ಮಾಲಿಕರೇ ರೆಂಟ್ ಅಗ್ರಿಮೆಂಟ್ ಬಗ್ಗೆ ತಿಳಿಯಿರಿ! ಮಹತ್ವದ ಮಾಹಿತಿ
ಮಾಸಿಕ ಠೇವಣಿ ಯೋಜನೆ! (Post office monthly deposit scheme)
ಭಾರತೀಯ ಅಂಚೆ ಕಚೇರಿಯಲ್ಲಿ ಸುಮಾರು 12ಕ್ಕೂ ಅಧಿಕ ಉತ್ತಮ ಉಳಿತಾಯ ಯೋಜನೆಗಳು (savings schemes) ಲಭ್ಯ ಇವೆ. ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಮಾಸಿಕ ಠೇವಣಿ ಯೋಜನೆ ಹೆಚ್ಚು ಪ್ರಸಿದ್ಧಿ ಪಡೆದುಕೊಂಡಿದೆ. ಯಾಕಂದ್ರೆ ನೀವು ಕಡಿಮೆ ಹೂಡಿಕೆ ಮಾಡಿ ಉತ್ತಮ ಲಾಭವನ್ನು ಶೀಘ್ರವಾಗಿ ಪಡೆದುಕೊಳ್ಳಬಹುದಾದ ಯೋಜನೆ ಇದಾಗಿದೆ.
ಈ ಯೋಜನೆಯಲ್ಲಿ ಕೇವಲ 50 ರೂಪಾಯಿ ಉಳಿತಾಯ ಮಾಡಿ 35 ಲಕ್ಷ ನಿಮ್ಮದಾಗಿಸಿಕೊಳ್ಳಿ
ಅಂಚೆ ಕಚೇರಿಯ ಮಾಸಿಕ ಠೇವಣಿಯಲ್ಲಿ ಹೂಡಿಕೆ ಮಾಡುವುದು ಹೇಗೆ? (How to invest in monthly deposit)
*ನೀವು ಒಮ್ಮೆ ಹೂಡಿಕೆ ಆರಂಭಿಸಿ ಕೇವಲ ಐದು ವರ್ಷಗಳಲ್ಲಿ ಮಾಸಿಕ ಆದಾಯ ಪಡೆದುಕೊಳ್ಳುವಂತಹ ಯೋಜನೆ ಇದಾಗಿದೆ.
*ನೀವು ವೈಯಕ್ತಿಕವಾಗಿ ಅಥವಾ ಇಬ್ಬರು ಸೇರಿ ಜಂಟಿಯಾಗಿ ಮಾಸಿಕ ಠೇವಣಿ ಖಾತೆ ಆರಂಭಿಸಬಹುದು ಕಡಿಮೆ ವಯಸ್ಸಿನಲ್ಲಿ ಆರಂಭಿಸಿದರೆ ಹೆಚ್ಚು ಲಾಭ ಗಳಿಸಬಹುದು.
*ಕೇವಲ ಐದು ವರ್ಷಗಳಲ್ಲಿ ಮೆಚ್ಯೂರ್ಡ್ ಆಗುವ ಠೇವಣಿಗೆ 7.4% ವಾರ್ಷಿಕ ಬಡ್ಡಿ (interest rate) ನೀಡಲಾಗುವುದು. ಬಡ್ಡಿ ದರವನ್ನು ಪ್ರತಿ ತ್ರೈಮಾಸಿಕಕ್ಕೆ ಪರಿಷ್ಕರಿಸಲಾಗುತ್ತದೆ. ಈ ಯೋಜನೆಯಲ್ಲಿ ವೈಯಕ್ತಿಕವಾಗಿ ಹೂಡಿಕೆ ಆರಂಭಿಸಿದರೆ, 9,00,000 ಹಾಗೂ ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿಗಳವರೆಗೆ ಠೇವಣಿ ಇಡಬಹುದು.
ಬ್ಯಾಂಕ್ ಖಾತೆಯಲ್ಲಿ ಇನ್ಮುಂದೆ ಇದಕ್ಕಿಂತ ಹೆಚ್ಚು ಹಣ ಇಡುವಂತಿಲ್ಲ; ಹೊಸ ನಿಯಮ
9 ಲಕ್ಷ ರೂಪಾಯಿಗಳನ್ನು ನೀವು ಹೂಡಿಕೆ ಮಾಡಿದ್ದೀರಿ ಎಂದು ಭಾವಿಸಿ. ಐದು ವರ್ಷಗಳ ಬಳಿಕ ಪ್ರತಿ ತಿಂಗಳು 5,500 ಗಳನ್ನು ಅಂದರೆ ವಾರ್ಷಿಕವಾಗಿ 66,600ಗಳನ್ನು ಹಿಂಪಡೆಯಬಹುದು. ಬಡ್ಡಿ ಸೇರಿ 5 ವರ್ಷಗಳಲ್ಲಿ 3,33,000 ರೂಪಾಯಿಗಳನ್ನು ಗಳಿಸಿರುತ್ತೀರಿ. ಯೋಜನೆ ಮೆಚ್ಯೂರ್ ಆದ ನಂತರ ಅದೇ ಹಣವನ್ನು ನೀವು ಅಂಚೆ ಕಚೇರಿಯ ಆರ್ ಡಿ (RD) ಯಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಬಹುದು.
ಅಂಚೆ ಕಚೇರಿಯ ಮರುಕಳಿಸುವ ಠೇವಣಿ (RD) ಮೇಲೆಯೂ ಕೂಡ ಉತ್ತಮ ಬಡ್ಡಿ ದರ ನೀಡಲಾಗುವುದು. ಹಾಗಾಗಿ ನೀವು ಐದು ವರ್ಷಗಳಲ್ಲಿ ಲಕ್ಷಗಟ್ಟಲೆ ಹಣವನ್ನು ಉಳಿತಾಯ ಮಾಡಲು ಮಾಸಿಕ ಠೇವಣಿಯ ಜೊತೆಗೆ RD ಆರಂಭಿಸಿದರೆ ಇನ್ನಷ್ಟು ಪ್ರಯೋಜನ ಪಡೆಯಬಹುದು.
ಜಂಟಿ ಖಾತೆಯನ್ನು ಗಂಡ ಹೆಂಡತಿ ಮಾತ್ರ ಆರಂಭಿಸಬೇಕು ಎಂದೇನು ಇಲ್ಲ, ಯಾವುದೇ ಇಬ್ಬರು ವ್ಯಕ್ತಿ ಸಂಬಂಧಿಕರು (ತಂದೆ – ಮಕ್ಕಳು, ಸಹೋದರ – ಸಹೋದರಿ) ಸೇರಿ ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಬಹುದು. ಅಂಚೆ ಕಚೇರಿಯ ಯಾವುದೇ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸ್ಥಳೀಯ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ.
ಕಡಿಮೆ ಬಡ್ಡಿಗೆ ಪಡೆಯಿರಿ 10 ಲಕ್ಷ ತನಕ ಸಾಲ! ಇದು ಕೇಂದ್ರ ಸರ್ಕಾರದ ಯೋಜನೆ
Invest 5 thousand to get 5 lakh by this Savings Scheme
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.