ಕಡಿಮೆ ಬಡ್ಡಿಗೆ ಪಡೆಯಿರಿ 10 ಲಕ್ಷ ತನಕ ಸಾಲ! ಇದು ಕೇಂದ್ರ ಸರ್ಕಾರದ ಯೋಜನೆ

Loan Scheme :ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ (Loan Facility) ಪಡೆದುಕೊಂಡು ತಮ್ಮದೇ ಆಗಿರುವ ಉದ್ಯೋಗ ಆರಂಭಿಸಬಹುದು

Bengaluru, Karnataka, India
Edited By: Satish Raj Goravigere

Loan Scheme : ಸ್ವಂತ ಉದ್ಯಮ ಆರಂಭಿಸಬೇಕು ಎಂದುಕೊಂಡಿರುವವರಿಗೆ ಅತಿ ಕಡಿಮೆ ಬಡ್ಡಿ ದರ (less interest rate) ದಲ್ಲಿ ಸಾಲ ನೀಡುವ ಅತಿ ಉತ್ತಮ ಯೋಜನೆ ಒಂದನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ.

ಈ ಯೋಜನೆಯ ಅಡಿಯಲ್ಲಿ ಈಗಾಗಲೇ ಲಕ್ಷಾಂತರ ಯುವಕರು ಸಾಲ ಸೌಲಭ್ಯ (Loan Facility) ಪಡೆದುಕೊಂಡು ತಮ್ಮದೇ ಆಗಿರುವ ಉದ್ಯೋಗ ಆರಂಭಿಸಿ ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ.

Mudra Loan

ಮನೆ, ಆಸ್ತಿ, ಜಮೀನು ಖರೀದಿ ನಿಯಮದಲ್ಲಿ ಭಾರೀ ಬದಲಾವಣೆ! ಹೊಸ ನಿಯಮ

ಪ್ರಧಾನಮಂತ್ರಿ ಮುದ್ರಾ ಯೋಜನೆ! (Pradhanmantri mudra Yojana)

ಹೌದು, ಈಗಾಗಲೇ ನಿಮಗೆ ನಾವು ಯಾವ ಯೋಜನೆಯ ಬಗ್ಗೆ ಮಾತನಾಡುತ್ತಿದ್ದೇವೆ ಎನ್ನುವ ಅರಿವು ಆಗಿರಬಹುದು. ಯಾವುದೇ ಸ್ವಂತ ಉದ್ಯಮ (own business) ಆರಂಭಿಸಲು ಬಯಸುವ ಯುವಕ ಯುವತಿಯರಿಗೆ ಸಹಾಯವಾಗಲಿ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಮುದ್ರಾ ಯೋಜನೆ ಆರಂಭಿಸಿದೆ.

ಇದರಲ್ಲಿ 50,000 ದಿಂದ 10 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಪಡೆಯಬಹುದು. ಬಡ್ಡಿದರ ಕಡಿಮೆ ಇರುತ್ತದೆ ಹಾಗೂ ಆರಂಭಿಕ ಸಾಲಕ್ಕೆ ಯಾವುದೇ ಗ್ಯಾರಂಟಿ ಕೊಡುವ ಅಗತ್ಯವು ಇಲ್ಲ.

ಸ್ವಂತ ಮನೆ ಕಟ್ಟಿಕೊಳ್ಳಲು ಅತಿ ಕಡಿಮೆ ಬಡ್ಡಿಗೆ ಸಾಲ ನೀಡುತ್ತಿವೆ ಈ ಬ್ಯಾಂಕುಗಳು!

ಈ ಯೋಜನೆಯ ಅಡಿಯಲ್ಲಿ ಸಿಗಲಿದೆ 10 ಲಕ್ಷ ಸಾಲ (Get Rs 10 lakh loan)

Loan Scheme

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ, ಹೇಗಿದೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ; ಇಲ್ಲಿದೆ ಡೀಟೇಲ್ಸ್

ಮುದ್ರಾ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿ (pm Narendra Modi ji) ಅವರು 2015ರಲ್ಲಿ ಆರಂಭಿಸಿದ್ದಾರೆ. ಈಗಾಗಲೇ ಸಾಕಷ್ಟು ಯುವಕ ಯುವತಿಯರು ಸ್ವಂತ ಉದ್ಯಮ ಮಾಡಲು ಮುದ್ರಾ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ.

ಯಾವುದೇ ರಾಷ್ಟ್ರೀಕೃತ ಬ್ಯಾಂಕ್ (nationalised bank) ನಲ್ಲಿ ಮುದ್ರಾ ಯೋಜನೆಯ ಅಡಿ ಸಾಲ ನೀಡಲಾಗುತ್ತದೆ. ಈ ಯೋಜನೆ ಸಾಲವನ್ನು ಮೂರು ಹಂತಗಳಲ್ಲಿ ನೀಡಲಾಗುತ್ತದೆ.

ಶಿಶು ಸಾಲ – ಇದರಲ್ಲಿ 50,000ಗಳನ್ನು ಸಾಲವಾಗಿ ಪಡೆಯಬಹುದು ಇದಕ್ಕೆ ಯಾವುದೇ ಗ್ಯಾರಂಟಿ ಕೊಡುವ ಅಗತ್ಯ ಇಲ್ಲ.

ಕಿಶೋರ ಸಾಲ – 50,000 ದಿಂದ 5 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆಯಬಹುದು.

ತರುಣ ಸಾಲ – 5 ಲಕ್ಷಗಳಿಂದ 10 ಲಕ್ಷ ರೂಪಾಯಿಗಳ ವರೆಗೆ ಸಾಲ ಪಡೆಯಬಹುದು.

ಮನೆಯಲ್ಲಿಯೇ ಕುಳಿತು 50 ಸಾವಿರದಿಂದ 1 ಲಕ್ಷ ರೂಪಾಯಿ ಆದಾಯ ಗಳಿಸಿ; ಕೈತುಂಬಾ ಹಣ

ಬೇಕಾಗಿರುವ ಅರ್ಹತೆಗಳು ಮತ್ತು ದಾಖಲೆಗಳು! (Eligibilities and documents)

*ಭಾರತೀಯ ಪ್ರಜೆ ಆಗಿರಬೇಕು. 20 ರಿಂದ 70 ವರ್ಷ ವಯಸ್ಸಿನ ಒಳಗಿನವರಾಗಿರಬೇಕು.

*ಒದಗಿಸಬೇಕಾಗಿರುವ ದಾಖಲೆಗಳು – ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ಪೋರ್ಟ್, ವಿಳಾಸ ಪುರಾವೆ, ಯಾವ ಉದ್ಯಮ ಆರಂಭಿಸಲಿದ್ದೀರಿ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ. ಇಷ್ಟು ದಾಖಲೆಗಳನ್ನು ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ತೆಗೆದುಕೊಂಡು ಹೋಗಿ ಅರ್ಜಿ ಫಾರಂ ಭರ್ತಿ ಮಾಡಿ ಮುದ್ರಾ ಯೋಜನೆ ಸಾಲ ಪಡೆಯಬಹುದು.

ನಿಮ್ಮ ಮಗಳ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಿ, ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್

ಮುದ್ರಾ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ನೀವು ಆರಂಭಿಸಲು ಬಯಸುವ ಉದ್ಯೋಗದ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ನಿಮ್ಮ ಉದ್ಯೋಗಕ್ಕೆ 25% ನಷ್ಟು ಹಣವನ್ನು ನೀವು ಹೂಡಿಕೆ ಮಾಡಿದರೆ 75% ನಷ್ಟು ಹಣವನ್ನು ಸಾಲವಾಗಿ ಪಡೆಯಬಹುದು.

mudra.org.in ಈ ವೆಬ್ ಸೈಟ್ ನಲ್ಲಿ ಯಾವ ಹಂತದ ಸಾಲ ಪಡೆದುಕೊಳ್ಳಲು ಇಚ್ಚಿಸುತ್ತಿರೋ ಅದನ್ನು ಆಯ್ಕೆ ಮಾಡಿಕೊಂಡು ಅರ್ಜಿ ಫಾರಂ ಭರ್ತಿ ಮಾಡಿ ಹತ್ತಿರದ ಬ್ಯಾಂಕ್ ಗೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

Get a loan of up to 10 lakhs at low interest from This is central government scheme