ಸ್ವಂತ ಮನೆ ಕಟ್ಟಿಕೊಳ್ಳಲು ಅತಿ ಕಡಿಮೆ ಬಡ್ಡಿಗೆ ಸಾಲ ನೀಡುತ್ತಿವೆ ಈ ಬ್ಯಾಂಕುಗಳು!

Home Loan : ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವಂತೆ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ಬಡ್ಡಿ ದರದಲ್ಲಿ ಗೃಹ ಸಾಲವನ್ನು (Home Loan) ಪಡೆದುಕೊಳ್ಳಬಹುದು.

Home Loan : ಸಾಮಾನ್ಯವಾಗಿ ನಮ್ದೇ ಆಗಿರುವ ಒಂದು ಸೂರು (Own house) ಕಟ್ಟಿಕೊಳ್ಳಬೇಕು ಎಂದು ಕನಸು ಕಂಡರೂ ಸಹ ಇಂದಿನ ದುಬಾರಿ ದುನಿಯಾದಲ್ಲಿ ಆ ಕನಸು ಈಡೇರಿಸಿಕೊಳ್ಳಲು ಆರ್ಥಿಕ ಸಮಸ್ಯೆ (financial problems) ಎದುರಾಗುತ್ತದೆ.

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಮಾತೇ ಇದೆ. ಒಂದು ಮನೆ ನಿರ್ಮಾಣ ಮಾಡುವುದು ಅಂದ್ರೆ ಈಗ ಸುಲಭವಲ್ಲ. ಪ್ರತಿಯೊಂದು ಮನೆ ಕಟ್ಟುವ ಸಾಮಗ್ರಿಗಳ ದರವು ಕೂಡ ಹೆಚ್ಚಾಗಿದೆ, ಆದ್ರೂ ಮನೆ ನಿರ್ಮಾಣ ಮಾಡಿಕೊಳ್ಳಬೇಕು ಅಂದುಕೊಂಡಿದ್ದರೆ ಬ್ಯಾಂಕ್ ನಿಮ್ಮ ಸಹಾಯಕ್ಕೆ ಬರುತ್ತದೆ.

ಮನೆ ಬಾಡಿಗೆಗೆ ನೀಡುವ ಮನೆ ಮಾಲೀಕರಿಗೆ ಹೊಸ ನಿಯಮ! ಮಹತ್ವದ ಮಾಹಿತಿ

ಸ್ವಂತ ಮನೆ ಕಟ್ಟಿಕೊಳ್ಳಲು ಅತಿ ಕಡಿಮೆ ಬಡ್ಡಿಗೆ ಸಾಲ ನೀಡುತ್ತಿವೆ ಈ ಬ್ಯಾಂಕುಗಳು! - Kannada News

ಹೌದು, ಎಲ್ಲಾ ವರ್ಗದ ಜನರಿಗೂ ಅನುಕೂಲವಾಗುವಂತೆ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ಬಡ್ಡಿ ದರದಲ್ಲಿ ಗೃಹ ಸಾಲವನ್ನು (Home Loan) ಪಡೆದುಕೊಳ್ಳಬಹುದು. ಗೃಹ ಸಾಲದ ನೆರವಿನಿಂದ ಪಟ್ಟಣ ನಗರ ಅಥವಾ ಹಳ್ಳಿಗಳಲ್ಲಿಯೂ ಕೂಡ ಮನೆಯಲ್ಲಿ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿದೆ

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ವಸತಿ ಯೋಜನೆ (housing scheme) ಗಾಗಿಯೇ ಹೆಚ್ಚಿನ ಹಣವನ್ನು ಮೀಸಲಿಟ್ಟಿರುವುದರಿಂದ ಸಾಕಷ್ಟು ಜನ ಸಬ್ಸಿಡಿ ದರದಲ್ಲಿ ಗೃಹ ಸಾಲವನ್ನು (subsidy on home loan) ಪಡೆದುಕೊಳ್ಳುತ್ತಿದ್ದಾರೆ.

ನಾವು ಇಂದು ಈ ಲೇಖನದಲ್ಲಿ ಯಾವ ಟಾಪ್ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ನೀವು ಗೃಹ ಸಾಲವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸುತ್ತಿದ್ದೇವೆ. ಈ ಲೇಖನ ಓದಿ. ನಂತರ ನೀವು ಕೂಡ ಗೃಹ ಸಾಲ (Bank Home Loan) ಪಡೆದುಕೊಳ್ಳಲು ಈ ಬ್ಯಾಂಕುಗಳನ್ನು ನೇರವಾಗಿ ಸಂಪರ್ಕಿಸಬಹುದು.

ಮನೆಯಲ್ಲಿಯೇ ಕುಳಿತು 50 ಸಾವಿರದಿಂದ 1 ಲಕ್ಷ ರೂಪಾಯಿ ಆದಾಯ ಗಳಿಸಿ; ಕೈತುಂಬಾ ಹಣ

Home Loanಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank)

ಈ ಬ್ಯಾಂಕ್ ನಲ್ಲಿ ನೀವು ಗೃಹ ಸಾಲ ತೆಗೆದುಕೊಂಡರೆ ಬಡ್ಡಿದರ 8.49% ನಿಂದ ಆರಂಭವಾಗುತ್ತದೆ. ಸಾಲ ಮರುಪಾವತಿ ಮಾಡಲು 30 ವರ್ಷಗಳ ಅವಧಿ ಇರುತ್ತದೆ. ಎಲ್ಲ ರೀತಿಯ ಶುಲ್ಕಗಳು ಸೇರಿದಂತೆ ಸಂಸ್ಕರಣ ಶುಲ್ಕ 3 ರಿಂದ 5000 ವರೆಗೆ ಆಗಬಹುದು.

ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank)

ಈ ಬ್ಯಾಂಕ್ ನಲ್ಲಿ 20 ವರ್ಷಗಳ ಅವಧಿಗೆ 8.85% ಬಡ್ಡಿ ದರದಲ್ಲಿ ಆರಂಭವಾಗುವ ಗೃಹ ಸಾಲವನ್ನು ಪಡೆದುಕೊಳ್ಳಬಹುದು. ಸ್ವಯಂ ಉದ್ಯೋಗಿಗಳಿಗೆ 8.90% ನಿಂದ ಬಡ್ಡಿ ಆರಂಭವಾಗುತ್ತದೆ. ಈ ಬ್ಯಾಂಕ್ ನಲ್ಲಿ ಸಾಲ ಮರುಪಾವತಿ ಮಾಡಲು 20 ವರ್ಷಗಳ ಅವಧಿ ಇರುತ್ತದೆ. ಆಸ್ತಿ ಮೌಲ್ಯದ ಶೇಕಡಾ 90% ನಷ್ಟು ಹಣವನ್ನು ಸಾಲವಾಗಿ ಪಡೆಯಬಹುದು.

ನಿಮ್ಮ ಮಗಳ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಿ, ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್

ಎಸ್ ಬಿ ಐ ಬ್ಯಾಂಕ್ ನ ಬಡ್ಡಿ ದರ! (SBI bank)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹ ಸಾಲ ಪಡೆದುಕೊಂಡರೆ ವಾರ್ಷಿಕ ಬಡ್ಡಿ ದರ 9.15% ನಿಂದ ಆರಂಭವಾಗುತ್ತದೆ. ಸಾಲ ಮರುಪಾವತಿಗೆ 30 ವರ್ಷಗಳ ಅವಧಿ ಇರುತ್ತದೆ. 0.35% ನಷ್ಟು ಪ್ರಕ್ರಿಯೆ ಶುಲ್ಕ ವಿಧಿಸಲಾಗುವುದು. ಇಲ್ಲಿ ಗೃಹ ಸಾಲಕ್ಕೆ ಯಾವುದೇ ರೀತಿಯ ಹೆಚ್ಚು ಪಾವತಿಸುವ ಅಗತ್ಯವಿಲ್ಲ. ಎಸ್ ಬಿ ಐ ಗೃಹ ಸಾಲದ ಮೇಲೆ ಹೆಚ್ಚಿನ ಆಫರ್ ಕೂಡ ಸದ್ಯ ನೀಡುತ್ತಿದೆ.

ಸಿಟಿ ಬ್ಯಾಂಕ್ ಬಡ್ಡಿ ದರ (City bank)

8.45% ನಷ್ಟು ಬಡ್ಡಿ ದರದಿಂದ ಗೃಹ ಸಾಲ ಆರಂಭವಾಗುತ್ತದೆ. 10 ಕೋಟಿಯವರೆಗೂ ಕೂಡ ಇಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಲು ಸಾಧ್ಯವಿದೆ. ನಿಮ್ಮ ಆಸ್ತಿಯ ಒಟ್ಟು ವೆಚ್ಚದ 80% ನಷ್ಟು ಹಣವನ್ನು ಸಾಲವಾಗಿ ಪಡೆಯಬಹುದು. ಸಾಲ ಮರುಪಾವತಿ ಅವಧಿ 25 ವರ್ಷಗಳು.

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ, ಹೇಗಿದೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ; ಇಲ್ಲಿದೆ ಡೀಟೇಲ್ಸ್

ಯೂನಿಯನ್ ಬ್ಯಾಂಕ್ (Union Bank interest rate)

ಈ ಬ್ಯಾಂಕ್ ನಲ್ಲಿ ಗೃಹ ಸಾಲಕ್ಕೆ ವಾರ್ಷಿಕ ಬಡ್ಡಿ ದರ 8.70% ನಿಂದ ಆರಂಭವಾಗುತ್ತದೆ. ಮಂಜೂರಾದ ಸಾಲ ಮೊತ್ತದ 0.05% ನಷ್ಟು ಸಂಸ್ಕರಣ ಶುಲ್ಕ ಪಾವತಿಸಬೇಕು. ನೀವು ಯಾವುದೇ ಹೆಚ್ಚುವರಿ ತಂಡ ಪಾವತಿಸದೆ, ಸಾಲವನ್ನು ಪೂರ್ವ ಪಾವತಿ ಮಾಡಬಹುದು.
ಗೃಹ ಸಾಲದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.

These banks are Giving Home Loan at very low interest to build your own houses

Follow us On

FaceBook Google News