ಮನೆ ಬಾಡಿಗೆ ನೀಡೋ ಮಾಲಿಕರೇ ರೆಂಟ್ ಅಗ್ರಿಮೆಂಟ್ ಬಗ್ಗೆ ತಿಳಿಯಿರಿ! ಮಹತ್ವದ ಮಾಹಿತಿ
ನಾವು ವಾಸಿಸುವ ಸ್ಥಳವನ್ನು ಬಿಟ್ಟು ವಿದ್ಯಾಭ್ಯಾಸ (education) ಕ್ಕಾಗಿ ಅಥವಾ ಕೆಲಸಕ್ಕಾಗಿ (Job) ಬೇರೆ ಊರಿಗೆ ಹೋದಾಗ ಅಲ್ಲಿ ನೆಲೆ ಊರುವುದಕ್ಕೆ ಒಂದು ಸೂರು ಅತ್ಯಗತ್ಯ. ಹಾಗಂತಾ ಹೋದಲ್ಲೆಲ್ಲ ಸ್ವಂತ ಮನೆ (own house) ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಲ್ವೇ! ಅದಕ್ಕಾಗಿ ಬಾಡಿಗೆ ಮನೆ (Rent House) ಮಾಡಿಕೊಳ್ಳಬೇಕಾಗುತ್ತದೆ
ಹೌದು, ಸಾಮಾನ್ಯವಾಗಿ ಯಾವುದೇ ಊರಿಗೆ ಹೋದಾಗ ಅಲ್ಲಿ ಬಾಡಿಗೆ ಮನೆ ತೆಗೆದುಕೊಂಡು ಪ್ರತಿ ತಿಂಗಳು ರೆಂಟ್ ಕಟ್ಟಿಕೊಂಡು ವಾಸ ಮಾಡಲಾಗುತ್ತೆ. Rented ಮನೆಯಲ್ಲಿ ವಾಸ ಮಾಡುವಾಗ ಬಾಡಿಗೆದಾರ ಹಾಗೂ ಮನೆ ಮಾಲೀಕನ ನಡುವೆ ಕೆಲವು ಒಪ್ಪಂದಗಳು ಇರಬೇಕು. ಇಲ್ಲವಾದರೆ ಮನೆ ಸಂಬಂಧಿಸಿದೆ ಯಾವುದೇ ಸಮಸ್ಯೆ ಉಂಟಾದಲ್ಲಿ ಇಬ್ಬರೂ ಕೂಡ ಅದನ್ನು ಕಾನೂನಾತ್ಮಕವಾಗಿ ಎದುರಿಸಬೇಕಾಗುತ್ತದೆ.
ಇನ್ಮುಂದೆ 60 ವರ್ಷ ಮೇಲ್ಪಟ್ಟವರು ಈ ದಾಖಲೆ ಇಲ್ಲದೆ ಪಿಂಚಣಿ ಪಡೆಯಲು ಸಾಧ್ಯವಿಲ್ಲ
ರೆಂಟ್ ಅಗ್ರಿಮೆಂಟ್ ಕಡ್ಡಾಯ! (rent agreement)
ನೀವು ಯಾವುದೇ ಬಾಡಿಗೆ ಮನೆಗೆ ಹೋದಾಗ ರೆಂಟ್ ಅಗ್ರಿಮೆಂಟ್ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಯಾಕಂದ್ರೆ ಇದೇ ರೆಂಟ್ ಅಗ್ರಿಮೆಂಟ್ ಅನ್ನು ನೀವು ಯಾವುದೇ, ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು, ಡ್ರೈವಿಂಗ್ ಲೈಸೆನ್ಸ್ ಮೊದಲಾದ ಪರವಾನಿಗೆ ಚೀಟಿ ಪಡೆದುಕೊಳ್ಳಲು ವಿಳಾಸದ ಪ್ರೂಫ್ (address proof) ಆಗಿ ಬಳಸಿಕೊಳ್ಳಬಹುದು.
ಇನ್ನು ಬೇರೆ ಬೇರೆ ಸರ್ಕಾರದ ಯೋಜನೆಗಳಿಂದ ಹಿಡಿದು ಕೆಲಸಕ್ಕೂ ಕೂಡ ಅರ್ಜಿ ಹಾಕುವುದಿರಲಿ ರೆಂಟ್ ಅಗ್ರಿಮೆಂಟ್ ಎನ್ನುವ ವಿಳಾಸದ ಪ್ರೂಫ್ ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ನೀವು ಯಾವುದೇ ಬಾಡಿಗೆ ಮನೆಗೆ ಹೋದರೆ ತಪ್ಪದೆ ರೆಂಟ್ ಅಗ್ರಿಮೆಂಟ್ ಮಾಡಿಸಿಕೊಳ್ಳಿ.
ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆಗೆ ಎಷ್ಟು ಬಾರಿ ಅವಕಾಶ ಇದೆ ಗೊತ್ತಾ?
ರೆಂಟ್ ಅಗ್ರಿಮೆಂಟ್ ನಲ್ಲಿ ಏನಿರುತ್ತೆ?
ನೀವು ಎಷ್ಟು ಡೆಪಾಸಿಟ್ ಹಣವನ್ನು ಇಟ್ಟಿದ್ದೀರಿ, ತಿಂಗಳ ರೆಂಟ್ ಎಷ್ಟು, ನೀರಿನ ಬಿಲ್ಲು ಹಾಗೂ ಕರೆಂಟ್ ಬಿಲ್ ಯಾರು ಎಷ್ಟು ಪಾವತಿ ಮಾಡಬೇಕು? ಬಾಡಿಗೆ ಮನೆಯನ್ನು ಬಿಡುವುದಿದ್ದರೆ ಮುಂಚಿತವಾಗಿ ತಿಳಿಸಬೇಕು ಅಥವಾ ಬಾಡಿಗೆ ಮನೆಯನ್ನು ಬಿಡಿಸುವುದಿದ್ದರೆ ಮನೆಯ ಮಾಲೀಕರು ಮುಂಚಿತವಾಗಿ ತಿಳಿಸಬೇಕು, ಮನೆ ಖಾಲಿ ಮಾಡುವಾಗ ಮನೆಯ ಸ್ಥಿತಿಯನ್ನು ನೋಡಿ ಅದರ ಆಧಾರದ ಮೇಲೆ ಡಿಪೋಸಿಟ್ ಹಿಂತಿರುಗಿಸುವುದು, ಪೇಂಟಿಂಗ್ ಚಾರ್ಜ್ ಕೊಡುವುದು, ಮನೆಗೆ ಯಾವುದೇ ರೀತಿಯ ಹಾನಿ ಆಗಿದ್ದರೆ ಅದರ ಚಾರ್ಜ್ ಒದಗಿಸುವುದು ಹೀಗೆ ಪ್ರತಿಯೊಂದು ಬಾಡಿಗೆದಾರ ಮತ್ತು ಮನೆ ಮಾಲೀಕನ ನಡುವಿನ ಒಪ್ಪಂದವನ್ನು ರೆಂಟ್ ಅಗ್ರಿಮೆಂಟ್ ನಲ್ಲಿ ಲಿಖಿತ ರೂಪದಲ್ಲಿ ನಮೂದಿಸಲಾಗಿರುತ್ತದೆ.
ಈ ಯೋಜನೆಯಲ್ಲಿ ಕೇವಲ 50 ರೂಪಾಯಿ ಉಳಿತಾಯ ಮಾಡಿ 35 ಲಕ್ಷ ನಿಮ್ಮದಾಗಿಸಿಕೊಳ್ಳಿ
11 ತಿಂಗಳಿಗೆ ರೆಂಟ್ ಅಗ್ರಿಮೆಂಟ್ ಯಾಕೆ?
1908 ಆಕ್ಟ್ ಪ್ರಕಾರ, 11 ತಿಂಗಳಿಗಿಂತ ಹೆಚ್ಚಿನ ಸಮಯದ ರೆಂಟ್ ಅಗ್ರಿಮೆಂಟ್ (rent agreement) ಮಾಡಿಸಿದರೆ ಅದಕ್ಕೆ ಸ್ಟ್ಯಾಂಪ್ ಡ್ಯೂಟಿ ಚಾರ್ಜ್ (stamp duty charge) ಅಪ್ಲೈ ಆಗುತ್ತದೆ. ಇದನ್ನ ತಪ್ಪಿಸಿಕೊಳ್ಳುವ ಸಲುವಾಗಿ 11 ತಿಂಗಳ ರೆಂಟ್ ಅಗ್ರಿಮೆಂಟ್ ಮಾಡಿಕೊಳ್ಳಲು ಆರಂಭಿಸಲಾಗಿದೆ. ಇದನ್ನು ಪ್ರತಿ 11 ತಿಂಗಳಿಗೆ ರಿನಿವಲ್ ಮಾಡಲಾಗುತ್ತದೆ. ಬಾಡಿಗೆದಾರ ಮತ್ತು ಮನೆಯ ಮಾಲೀಕ ರೆಂಟ್ ಅಗ್ರಿಮೆಂಟ್ ಗೆ ಸಹಿ ಹಾಕಬೇಕು.
12 ವರ್ಷದ ಬಳಿಕ ಬಾಡಿಗೆದಾರನಿಗೆ ಆ ಮನೆ ಸೇರುತ್ತದೆ!
ಮನೆ ಮಾಲೀಕರು ರೆಂಟ್ ಅಗ್ರಿಮೆಂಟ್ ಅನ್ನು 11 ತಿಂಗಳುಗಳಿಗೆ ಮಾಡಿಸಿಕೊಳ್ಳಲು ಇದು ಕೂಡ ಒಂದು ಮುಖ್ಯವಾದ ಕಾರಣವಾಗಿದೆ. ಯಾವುದೇ ಬಾಡಿಗೆದಾರ ರೆಂಟ್ ಅಗ್ರಿಮೆಂಟ್ ಇಲ್ಲದೆ ಅಥವಾ ಯಾವುದೇ ಒಪ್ಪಂದ ಇಲ್ಲದೆ 12 ವರ್ಷಗಳ ಕಾಲ ನಿರಂತರವಾಗಿ ಒಂದೇ ಮನೆಯಲ್ಲಿ ವಾಸಿಸಿದರೆ 13ನೇ ವರ್ಷಕ್ಕೆ ಆತ ಆ ಮನೆಯನ್ನು ಸ್ವಾಧೀನ ಪಡಿಸಿಕೊಳ್ಳಲು ಕಾನೂನಾತ್ಮಕವಾಗಿ ಅವಕಾಶವಿದೆ.
ಬ್ಯಾಂಕ್ ಖಾತೆಯಲ್ಲಿ ಇನ್ಮುಂದೆ ಇದಕ್ಕಿಂತ ಹೆಚ್ಚು ಹಣ ಇಡುವಂತಿಲ್ಲ; ಹೊಸ ನಿಯಮ
ಹಾಗಾಗಿ ಮನೆಯ ಮಾಲೀಕರು ತಮ್ಮ ಸ್ವಂತ ಮನೆಯನ್ನು (own House) ಕಳೆದುಕೊಳ್ಳದೆ ಇರಲು ಸಹಾಯಕವಾಗಲಿ ಎಂದು 11 ತಿಂಗಳ ರೆಂಟ್ ಅಗ್ರಿಮೆಂಟ್ ಮಾಡಲಾಗುತ್ತದೆ.
Homeowners who rent houses know about Rent Agreement