ಇನ್ಮುಂದೆ ಜಮೀನು, ಭೂ ದಾಖಲೆಗಳಿಗಾಗಿ ಅಲೆದಾಡುವ ಅವಶ್ಯಕತೆ ಇಲ್ಲ! ಹೊಸ ಸೇವೆ
ಜಮೀನು (land) ಹೊಂದಿರುವ ಪ್ರತಿಯೊಬ್ಬರು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಇಲ್ಲದಿದ್ದರೆ ಆ ಜಮೀನನ್ನು ಯಾರೂ ಬೇಕಾದರೂ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
ನಿಮ್ಮ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಸಾಧ್ಯತೆಯೂ ಇರುತ್ತದೆ. ಈ ನಡುವೆ ಒಂದು ವೇಳೆ ನಿಮ್ಮ ಜಮೀನಿನ ದಾಖಲೆಗಳು (Property Documents) ಕಳೆದು ಹೋಗಿದ್ದರೆ ನೀವು ಕಂದಾಯ ಇಲಾಖೆ ಕಚೇರಿಗೆ ಹೋಗಿ ಪಡೆದುಕೊಳ್ಳಬಹುದು.

ಕಂದಾಯ ಇಲಾಖೆ ಕಚೇರಿ (revenue department) ಯಲ್ಲಿ ಯಾವ ಯಾವ ದಾಖಲೆಗಳು ಸಿಗುತ್ತವೆ, ಅದನ್ನು ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿ ಇಲ್ಲಿದೆ.
ನಿಮ್ಮ ಮನೆಗೆ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸಿಗಲಿದೆ ಸರ್ಕಾರದಿಂದ ಸಬ್ಸಿಡಿ!
ಭೂ ದಾಖಲೆಗಳಿಗೆ ಸಂಬಂಧಪಟ್ಟ ಮೂಲ ದಾಖಲಾತಿಗಳು ಯಾವುದೆಂದರೆ ದರಖಾಸ್ತು, ಅಲಿನೇಶನ್, ಭೂ ಸ್ವಾಧೀನ ಹಾಗೂ ಪೋಡಿ ದಾಖಲೆಗಳನ್ನು ಭೂ ಮಾಪಕರು ಅಳತೆ ಮಾಡಿದ ನಂತರ ತಹಶೀಲ್ದಾರರು ದೃಢೀಕರಿಸಿದ ನಕ್ಷೆಗಳನ್ನು ಭೂ ದಾಖಲೆಯೊಳಗೆ ಬರುತ್ತವೆ.
ಇಷ್ಟೇ ಅಲ್ಲದೆ ಹದ್ದು ಬಸ್ತು ಪ್ರಕರಣಗಳಲ್ಲಿ ಸರ್ವೇ ಅಧಿಕಾರಿಗಳು ತಯಾರಿಸಿದ ನಕ್ಷೆಗಳು, ಮರುಭೂಮಾಪನ,ಮೊದಲನೇ ಹಾಗೂ ಎರಡನೇ ಮರು ವರ್ಗಿಕರಣದ ದಾಖಲಾತಿಗಳು ಸರ್ವೇನಂಬರ್ಗಳಿಗೆ ಸಂಬಂಧಪಟ್ಟ ಉತಾರ್ಗಳು ಸಹ ಭೂ ದಾಖಲೆಗಳಲ್ಲಿ ಬರುತ್ತವೆ.
ಸಾರ್ವಜನಿಕರು ಇಲಾಖೆಗೆ ಸಲ್ಲಿಸಿದ ಅರ್ಜಿಗಳು ಮತ್ತು ಇಲಾಖಾ ಅಧಿಕಾರಿಗಳು ಜನರಿಗೆ ನೀಡಿದ ಉತ್ತರ ಟಿಪ್ಪಣಿಗಳು, ಮರು ಭೂಮಾಪನ ಪ್ರತಿಗಳು ಸಹ ಭೂ ದಾಖಲೆಗಳು ಎಂದು ಕರೆಸಿಕೊಳ್ಳುತ್ತವೆ.
ಸೈಟ್ ಖರೀದಿಗೂ ಸಿಗುತ್ತೆ ಸಾಲ? ಸಿಕ್ಕ ಸಾಲಕ್ಕೆ ಬಡ್ಡಿ ಎಷ್ಟು ಗೊತ್ತಾ? ಇಲ್ಲಿದೆ ಡೀಟೇಲ್ಸ್
ಹದ್ದು ಬಸ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ನೋಡುವುದಾದರೆ ಮರಗಳು, ಬಾವಿ, ಕಟ್ಟೆ ಇತರೆ ಚಿಹ್ನೆ ಮೂಡಿಸಿದ ನಕ್ಷೆಗಳು. ಮರುಭೂಮಾಪನ ನಕ್ಷೆಯ ಮೂಲಪ್ರತಿ, ಹಿಸ್ಸಾ ಸರ್ವೇ ಮತ್ತು ಮ್ಯೂಟೇಶನ್ ಪೊಡಿಯ ಅಳತೆಯ ಸಂದರ್ಭದಲ್ಲಿ ದಾಖಲಾದ ಹೆಸರುಗಳೊಂದಿಗೆ ಹಿಸ್ಸಾ ಸರ್ವೇಯ ಟಿಪ್ಪಣಿ.
ಹಿಸ್ಸಾ ಸರ್ವೇಯ ದಾಖಲಾತಿಗಳು !ಯಾವುದೆಂದರೆ ದರಖಾಸ್ತು, ಟಿಪ್ಪಣಿ, ಪಕ್ಕಾ ಮತ್ತು ಅಟ್ಲಾಸುಗಳು, ಅಲಿನೇಶನ್, ಭೂ ಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದ ಟಿಪ್ಪಣಿಗಳು ಸೇರುತ್ತವೆ.
5 ಸಾವಿರ ಹೂಡಿಕೆ ಮಾಡಿ 5 ಲಕ್ಷ ಪಡೆಯಿರಿ; ಉಳಿತಾಯ ಮಾಡೋಕೆ ಹೊಸ ಯೋಜನೆ
ನಗರ ಮಾಪನ ದಾಖಲಾತಿಗಳು!
ಪಿ.ಆರ್.ಕಾರ್ಡ್ಗಳು, ಪಿ.ಟಿ ಶೀಟುಗಳು, ನಗರ ಮಾಪನ ವಿಚಾರಣಾಧಿಕಾರಿಗಳು ವಿಚಾರಣೆ ನಂತರ ನೀಡಿದ ಹಿಂಬರಹ, ವಿಚಾರಣಾ ವಹಿಯ ನಕಲು, ಸ್ಥಳೀಯ ಕ್ಷೇತ್ರದ ನಕಾಶೆ, ಕ್ಷೇತ್ರ ಅಳತೆ ಪುಸ್ತಕ, ಭೂಮಾಪನಾ ಸಮಯದಲ್ಲಿ ನೀಡಿದ ಹೇಳಿಕೆಗಳು, ವಿಚಾರಣಾಧಿಕಾರಿಗಳ ಆದೇಶದ ನಕಲು, ವಿಚಾರಣಾಧಿಕಾರಿಗಳು ತೀರ್ಪುಗಳು.
ಜಮೀನಿನ ದಾಖಲೆ ಡೌನ್ಲೋಡ್ ಮಾಡಿಕೊಳ್ಳಿ (how to download land documents)
ರೈತರು (farmers ) ತಮ್ಮ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಈಗ ಆನ್ಲೈನ್ ಮೂಲಕವೂ ಪಡೆದುಕೊಳ್ಳಬಹುದು. ರೈತರು ತಮ್ಮ ದಾಖಲೆಗಳನ್ನು ಪಡೆದುಕೊಳ್ಳಲು ಡೌನ್ಲೋಡ್ ಸರ್ವೇ ಡಾಕ್ಯೂಮೆಂಟ್ ಈ ಲಿಂಕ್ಗೆ ಭೇಟಿ ನೀಡಬೇಕು. ಅಲ್ಲಿ ನಿಮ್ಮ ಜಮೀನಿನ ಸರ್ವೇ ನಂಬರ್, ಹಾಗೂ ಅಲ್ಲಿ ಕೇಳಲಾಗುವ ಮಾಹಿತಿ ಭರ್ತಿ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಮನೆ ಬಾಡಿಗೆ ನೀಡೋ ಮಾಲಿಕರೇ ರೆಂಟ್ ಅಗ್ರಿಮೆಂಟ್ ಬಗ್ಗೆ ತಿಳಿಯಿರಿ! ಮಹತ್ವದ ಮಾಹಿತಿ
All these documents are available in the revenue department office