ನಿಮ್ಮ ಮನೆಗೆ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸಿಗಲಿದೆ ಸರ್ಕಾರದಿಂದ ಸಬ್ಸಿಡಿ!

ಒಂದು ಕೋಟಿ ಮನೆಯ ಮೇಲ್ಚಾವಣಿ ಮೇಲೆ ಸೋಲಾರ್ ಪ್ಯಾನೆಲ್ (solar panel on the roof) ಅಳವಡಿಸಿದೆ ಎಂದು ಬಜೆಟ್ ನಲ್ಲಿ ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ತಿಳಿಸಲಾಗಿದೆ.

ನಿನ್ನೆ ಕೇಂದ್ರದ ಮಧ್ಯಂತರ ಬಜೆಟ್ (budget) ಘೋಷಣೆ ಆಗಿದೆ. ಈ ಬಾರಿಯ ಬಜೆಟ್ ನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳ ಬಗ್ಗೆ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಾತನಾಡಿದ್ದಾರೆ.

ವಸತಿ ಯೋಜನೆಗೆ ಒತ್ತು ನೀಡಿದ ಕೇಂದ್ರ ಸರ್ಕಾರ

ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು 2015ರಲ್ಲಿ ಆರಂಭಿಸಲಾಯಿತು. ಈ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಕುಟುಂಬದವರು ಕಂಡುಕೊಳ್ಳುವಂತೆ ಆಗಿದೆ.

ಕೇಂದ್ರ ಸರ್ಕಾರ ಮೂರು ಕೋಟಿ ಮನೆ ನಿರ್ಮಾಣ ಮಾಡಿಕೊಟ್ಟಿದೆ ಹಾಗೂ ಒಂದು ಕೋಟಿ ಮನೆಯ ಮೇಲ್ಚಾವಣಿ ಮೇಲೆ ಸೋಲಾರ್ ಪ್ಯಾನೆಲ್ (solar panel on the roof) ಅಳವಡಿಸಿದೆ ಎಂದು ಬಜೆಟ್ ನಲ್ಲಿ ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ತಿಳಿಸಲಾಗಿದೆ.

ನಿಮ್ಮ ಮನೆಗೆ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸಿಗಲಿದೆ ಸರ್ಕಾರದಿಂದ ಸಬ್ಸಿಡಿ! - Kannada News

ಹೊಸ ಮನೆ ಕಟ್ಟುವವರಿಗೆ ಕೇಂದ್ರದಿಂದ ಭರ್ಜರಿ ಸುದ್ದಿ! ಸಿಗಲಿದೆ ಆರ್ಥಿಕ ನೆರವು

ನೀವು ಅಳವಡಿಸಬಹುದು ಸೋಲಾರ್ ಪ್ಯಾನೆಲ್

ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ನೀವು ಕೂಡ ಸೋಲಾರ್ ಪ್ಯಾನಲ್ ಅಳವಡಿಸಬಹುದು. ಅದು ಅಲ್ಲದೆ ಹೀಗೆ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳುವುದಕ್ಕೆ ತಗಲುವ ವೆಚ್ಚಕ್ಕೆ 70% ನಷ್ಟು ಸರ್ಕಾರದಿಂದ ಸಬ್ಸಿಡಿ ಪಡೆಯಬಹುದಾಗಿದೆ.

ಎಷ್ಟು ಸಬ್ಸಿಡಿ ಸಿಗುತ್ತೆ ಗೊತ್ತಾ? (Government subsidy for solar panel)

solar panelನೀವು ನಿಮ್ಮ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಲು ಮೂರು ಕಿಲೋ ವ್ಯಾಟ್ ವರೆಗಿನ ಸೋಲಾರ್ ಪ್ಯಾನೆಲ್ ಅಳವಡಿಸಬಹುದು. ಮಧ್ಯಮ ವರ್ಗದವರು ಹಾಗೂ ಬಡವರು ಕೂಡ ಈ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಲು ಸರ್ಕಾರದಿಂದ ಸಬ್ಸಿಡಿ ಪಡೆದುಕೊಳ್ಳುತ್ತಾರೆ.

ವಿಶೇಷ ವರ್ಗದ ಜನರು ಅಂದರೆ ಬಡತನ ರೇಖೆಗಿಂತ ಕೆಳಗಿರುವವರು, ಪ್ರತಿ ಕಿಲೋ ವ್ಯಾಟ್ ಸೋಲಾರ್ ಗೆ 20,000ಗಳ ಸಬ್ಸಿಡಿ ಪಡೆಯಬಹುದು. ಹಾಗೂ ಸಾಮಾನ್ಯ ವರ್ಗದವರಿಗೆ ಪ್ರತಿ ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ಅಳವಡಿಕೆಗೆ 18,000 ಸಬ್ಸಿಡಿ ಸಿಗುತ್ತದೆ.

ಸೈಟ್ ಖರೀದಿಗೂ ಸಿಗುತ್ತೆ ಸಾಲ? ಸಿಕ್ಕ ಸಾಲಕ್ಕೆ ಬಡ್ಡಿ ಎಷ್ಟು ಗೊತ್ತಾ? ಇಲ್ಲಿದೆ ಡೀಟೇಲ್ಸ್

ಎಷ್ಟು ಕಿಲೋ ವ್ಯಾಟ್ ವರೆಗೆ ಸೋಲಾರ್ ಪ್ಯಾನೆಲ್ ಅಳವಡಿಸಬಹುದು?

3 ಕಿಲೋ ವ್ಯಾಟ್ ಗಿಂತ ಹೆಚ್ಚಿನ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಲು ಸಾಮಾನ್ಯ ವರ್ಗದವರಿಗೆ 9,000 ವರೆಗೆ ಹಾಗೂ ವಿಶೇಷ ವರ್ಗದವರಿಗೆ 10,000 ರೂ.ವರೆಗೆ ಸಬ್ಸಿಡಿ ನೀಡಲಾಗುವುದು. ಪ್ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ (president welfare association) ನಿಂದ ಸಹಾಯಧನವನ್ನು ನೀಡಲಾಗುವುದು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಬ್ಸಿಡಿ ಪಡೆದು ಶೇಕಡ 70% ನಷ್ಟು ರಿಯಾಯಿತಿಯಲ್ಲಿ ಸೋಲಾರ್ ಅಳವಡಿಸಬಹುದು.

ಸೋಲಾರ್ ಫಲಕ ಅಳವಡಿಸಲು ಒಂದು ಲಕ್ಷ ರೂಪಾಯಿಗಳ ಚಾರ್ಜ್ ಆದರೆ, ನೀವು 70,000ಗಳಷ್ಟು ಸಬ್ಸಿಡಿ ಪಡೆಯಬಹುದು. ಸೋಲಾರ್ ಫಲಕ ಅಳವಡಿಸಲು ಆರಂಭದಲ್ಲಿ ಕೇವಲ 30% ನಷ್ಟು ಹಣವನ್ನು ನೀವು ಹೂಡಿಕೆ ಮಾಡಿದರೆ ಐದು ವರ್ಷಗಳಲ್ಲಿ ಆ ಹಣವನ್ನು ಹಿಂಪಡೆಯಬಹುದು.

ಸೋಲಾರ್ ಫಲಕವನ್ನು ಸುಮಾರು 25 ವರ್ಷಗಳವರೆಗೆ ಬಳಕೆ ಮಾಡಬಹುದು. 20 ವರ್ಷಗಳ ವರೆಗೆ ನೀವು ಒಂದೇ ಒಂದು ರೂಪಾಯಿಗಳನ್ನು ವಿದ್ಯುತ್ ಬಿಲ್ ಆಗಿ ಪಾವತಿಸದೆ ಉಚಿತ ವಿದ್ಯುತ್ ಅನ್ನು ಸೋಲಾರ್ ಮೂಲಕ ಪಡೆದುಕೊಳ್ಳಬಹುದು.

ಸೋಲಾರ್ ಫಲಕ ಅಳವಡಿಸುವುದರಿಂದ ಗ್ರಾಹಕರಿಗೆ ಮಾತ್ರವಲ್ಲದೆ ವಿದ್ಯುತ್ ಸರಬರಾಜು ಕಂಪನಿಗಳಿಗೂ ಕೂಡ ಉಳಿತಾಯವಾಗಲಿದೆ.

ಮನೆ ಬಾಡಿಗೆ ನೀಡೋ ಮಾಲಿಕರೇ ರೆಂಟ್ ಅಗ್ರಿಮೆಂಟ್ ಬಗ್ಗೆ ತಿಳಿಯಿರಿ! ಮಹತ್ವದ ಮಾಹಿತಿ

You will get subsidy from the government for installation of solar panel at your home

Follow us On

FaceBook Google News

You will get subsidy from the government for installation of solar panel at your home