ಬಿಪಿಎಲ್ ಕಾರ್ಡ್ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್‌ಶಿಪ್! ಎಲ್ಲವೂ ಫ್ರೀ
ಬಿಪಿಎಲ್ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳಿಗೆ ಎಫ್‌ಎಇಎ ಸ್ಕಾಲರ್‌ಶಿಪ್ ಅವಕಾಶ ನೀಡಲಾಗಿದೆ. ಈ ಯೋಜನೆಯು ಪೂರಕ ಭತ್ಯೆ, ಮೆಸ್ ಶುಲ್ಕ, ಬೋಧನಾ ವೆಚ್ಚ ಸೇರಿದಂತೆ ಸಂಪೂರ್ಣ ನೆರವು ನೀಡಲಿದೆ.

- ಬಿಪಿಎಲ್ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅವಕಾಶ
- ಉಚಿತ ಶಿಕ್ಷಣ, ಹಾಸ್ಟೆಲ್ ಹಾಗೂ ಇತರ ವೆಚ್ಚಗಳ ಪರಿಹಾರ
- ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಜೂನ್ 30, 2025
Education Scholarship : ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶ. ಫೌಂಡೇಶನ್ ಫಾರ್ ಅಕಾಡೆಮಿಕ್ ಎಕ್ಸಲೆನ್ಸ್ ಅಂಡ್ ಆಕ್ಸೆಸ್ (FAEA) ನೀಡುತ್ತಿರುವ ಸ್ಕಾಲರ್‌ಶಿಪ್ ಯೋಜನೆಯು ಬಿಪಿಎಲ್ ಕಾರ್ಡ್ (Below Poverty Line) ಹೊಂದಿರುವ ಮತ್ತು ಇತರ ಹಿಂದುಳಿದ ವರ್ಗದ (SC/ST/OBC) ವಿದ್ಯಾರ್ಥಿಗಳ ಶಿಕ್ಷಣದ ಕನಸು ನನಸು ಮಾಡುವ ಆಶಾಕಿರಣವಾಗಿದೆ.
ಈ ಸ್ಕಾಲರ್‌ಶಿಪ್ (FAEA Scholarship 2025-26) ಅನ್ನು ಭಾರತದಲ್ಲಿನ ಯಾವುದೇ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯ 12ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅಥವಾ ಈಗ ಪ್ರಥಮ ವರ್ಷದ ಪದವಿಪೂರ್ವ ಕೋರ್ಸ್‌ಗಳಲ್ಲಿ ಕಲಿಯುತ್ತಿರುವವರು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಬಿಮಾ ಸಖಿ ಯೋಜನೆ: ಮಹಿಳೆಯರಿಗೆ ಪ್ರತಿ ತಿಂಗಳು ಸಿಗುತ್ತೆ ₹7000 ರೂಪಾಯಿ
ಕಲೆಯೂ ಆಗಿರಬಹುದು, ವಾಣಿಜ್ಯ, ವಿಜ್ಞಾನ, ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಆಗಿದ್ದರೂ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು www.b4s.in/nwmd/FAEA2 ಎಂಬ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು. ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲೇ ನಡೆಯುತ್ತದೆ.
ಅರ್ಹತೆ: ವಿದ್ಯಾರ್ಥಿಗಳು ಬಿಪಿಎಲ್ ಕಾರ್ಡ್ (BPL Ration Card) ಹೊಂದಿರುವವರಾಗಿರಬೇಕು ಮತ್ತು ಅವರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಸಮುದಾಯದಿಂದ ಬಂದಿರಬೇಕು.
ಇದನ್ನೂ ಓದಿ: ಈ ಬ್ಯಾಂಕ್‌ನಲ್ಲಿ ನಿಮ್ಮ ಅಕೌಂಟ್ ಇದ್ಯಾ? ಇದ್ರೆ ನಿಮಗೆ ಬಂಪರ್ ಗುಡ್ ನ್ಯೂಸ್
ಈ ಸ್ಕಾಲರ್‌ಶಿಪ್‌ನಡಿಯಲ್ಲಿ (scholarship benefits) ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ, ಹಾಸ್ಟೆಲ್ ಮತ್ತು ಮೆಸ್ ವೆಚ್ಚ, ನಿರ್ವಹಣಾ ಖರ್ಚು, ಪುಸ್ತಕ ಭತ್ಯೆ ಮುಂತಾದ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದು ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯವಾಗುತ್ತದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ಗ್ಯಾರೆಂಟಿ ಸ್ಕೀಮ್: ₹5 ಲಕ್ಷ ಹೂಡಿಕೆಗೆ ಪಕ್ಕಾ ₹2.25 ಲಕ್ಷ ಲಾಭ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 2025ರ ಜೂನ್ 30 ಎಂದು ಘೋಷಿಸಲಾಗಿದೆ. ಹೀಗಾಗಿ, ಅರ್ಹ ವಿದ್ಯಾರ್ಥಿಗಳು ತಕ್ಷಣವೇ ತಮ್ಮ ದಾಖಲೆಗಳನ್ನು ಸಿದ್ಧಪಡಿಸಿ ಅರ್ಜಿ ಸಲ್ಲಿಸಬೇಕು. ಈ ಯೋಜನೆಯಿಂದ ಸಾವಿರಾರು ವಿದ್ಯಾರ್ಥಿಗಳು ಈಗಾಗಲೇ ಲಾಭ ಪಡೆದುಕೊಂಡಿದ್ದಾರೆ.
ಈ ಸ್ಕಾಲರ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒಟ್ಟಾರೆ ಶೈಕ್ಷಣಿಕ ಕಲಿಕೆಗೆ ಬಲವನ್ನು ನೀಡುತ್ತೆ. (Education support) ಜೊತೆಗೆ, ಸಮಾಜದಲ್ಲಿ ಸಮಾನ ಅವಕಾಶಗಳನ್ನು ಸೃಷ್ಟಿಸುವತ್ತ ಎಫ್‌ಎಇಎ ಹೆಜ್ಜೆ ಹಾಕುತ್ತಿದೆ.
FAEA Education Scholarship for BPL Students




