ರೈತರಿಗೆ ಸರ್ಕಾರದ ಈ ಯೋಜನೆ ಅಡಿಯಲ್ಲಿ ಸಿಗಲಿದೆ ₹25,000 ಸಹಾಯಧನ!
ರೈತರಿಗೆ ಪಿ.ಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (PM Kisan Samman Nidhi Yojana) ಯ ಅಡಿಯಲ್ಲಿ ಪ್ರತಿ ವರ್ಷ 6,000 ರೂಪಾಯಿ ಸಿಗುತ್ತದೆ
ನಮ್ಮ ದೇಶ ಕೃಷಿ (Agriculture) ಯನ್ನು ಜೀವಾಳವಾಗಿಸಿಕೊಂಡಿದ್ದರೂ ಕೂಡ , ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಯನ್ನು ಉತ್ತೇಜಿಸುವುದು ಬಹಳ ಮುಖ್ಯವಾಗಿದೆ. ಯಾಕೆಂದರೆ ಸಾಮಾನ್ಯವಾಗಿ ಕೃಷಿ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ.
ಇದೇ ಕಾರಣಕ್ಕೆ ಕೃಷಿಯನ್ನು ಇನ್ನಷ್ಟು ಹೆಚ್ಚು ಜನ ಅಥವಾ ರೈತರು ಮುಂದುವರಿಸಿಕೊಂಡು ಹೋಗಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವಂತಹ ಕೆಲವು ಪ್ರಮುಖ ಸೌಲಭ್ಯಗಳನ್ನು ಕೂಡ ಒದಗಿಸುತ್ತಿವೆ.
ಕೇಂದ್ರ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ವಿತರಣೆ; ಈಗಲೇ ಅರ್ಜಿ ಸಲ್ಲಿಸಿ
ರೈತರಿಗಾಗಿ ಕೇಂದ್ರ ಸರ್ಕಾರ (Central government) ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಕಿಸಾನ್ ಆಶೀರ್ವಾದ ಸ್ಕೀಮ್ ಅನ್ನು ಪರಿಚಯಿಸಿವೆ. ಐದು ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವವರು ಕಿಸಾನ್ ಆಶೀರ್ವಾದ ಯೋಜನೆಯ ಅಡಿಯಲ್ಲಿ 25,000ಗಳ ವರೆಗೆ ಸಹಾಯಧನ ಪಡೆದುಕೊಳ್ಳಲು ಸಾಧ್ಯವಿದೆ.
ಏನಿದು ಕಿಸಾನ್ ಆಶೀರ್ವಾದ ಯೋಜನೆ? (Kisan Aashirwad scheme)
ಈಗಾಗಲೇ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಮೂಲಕ ಸರ್ಕಾರ ರೈತರಿಗೆ ಆರ್ಥಿಕ ಸಹಾಯಧನ (financial help) ಒದಗಿಸಿದೆ. ಇದೀಗ ಕಿಸಾನ್ ಆಶೀರ್ವಾದ ಸ್ಕೀಮ್ ಜಾರಿಗೆ ತರಲಾಗಿದ್ದು, ಪ್ರತಿ ಎಕರೆಗೆ 5000 ಗಳಂತೆ 5 ಏಕರಿಗಿಂತ ಕಡಿಮೆ ಇರುವವರು ಸಹಾಯಧನ ಪಡೆಯಬಹುದು.
ಕಿಸಾನ್ ಆಶೀರ್ವಾದ ಯೋಜನೆ ಅಡಿಯಲ್ಲಿ ಎಷ್ಟು ಸಹಾಯಧನ ಸಿಗಲಿದೆ ಗೊತ್ತಾ!
ಒಂದು ಎಕರೆ ಜಮೀನಿಗೆ – 5,000
ಎರಡು ಎಕರೆ ಜಮೀನಿಗೆ – 10,000
ಮೂರು ಎಕರೆ ಜಮೀನಿಗೆ – 15,000
ನಾಲ್ಕು ಎಕರೆ ಜಮೀನಿಗೆ – 20000
5 ಎಕರೆ ಜಮೀನಿಗೆ 25,000 ಪಡೆಯಬಹುದು.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಕಲಿಕಾ ಭಾಗ್ಯ ಯೋಜನೆ
ರೈತರಿಗೆ ಪಿ.ಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (PM Kisan Samman Nidhi Yojana) ಯ ಅಡಿಯಲ್ಲಿ ಪ್ರತಿ ವರ್ಷ 6,000 ರೂಪಾಯಿ ಸಿಗುತ್ತದೆ. ಇದಕ್ಕೆ 25,000ಗಳ ಆಶೀರ್ವಾದ ಯೋಜನೆಯ ಸಹಾಯಧನವು ಸೇರಿದ್ರೆ ಪ್ರತಿ ವರ್ಷ 31 ಸಾವಿರ ರೂಪಾಯಿಗಳನ್ನು ಸರ್ಕಾರದಿಂದ ರೈತರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಕಿಸಾನ್ ಆಶೀರ್ವಾದ ಯೋಜನೆಗೆ ಬೇಕಾಗಿರುವ ದಾಖಲೆಗಳು
*ರೈತರ ಭೂಮಿಯ ಪಹಣಿ ಪತ್ರ
*ಆಧಾರ್ ಕಾರ್ಡ್
*ಬ್ಯಾಂಕ ಖಾತೆಯ ವಿವರ (ಈ ಕೆ ವೈ ಸಿ ಕಡ್ಡಾಯ)
*ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
*ಪಾಸ್ ಪೋರ್ಟ್ ಅಳತೆಯ ಫೋಟೋ
ಹೊಸ ಯೋಜನೆ! ಇಂತಹ ಮಹಿಳೆಯರಿಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷಗಳ ಸಾಲ!
ಎಲ್ಲಿ ಅರ್ಜಿ ಸಲ್ಲಿಸಬಹುದು ಗೊತ್ತ?
ರೈತರು ಹತ್ತಿರದ ಕೃಷಿ ಇಲಾಖೆಗೆ (Agriculture department) ಹೋಗಿ ಸಂಬಂಧಪಟ್ಟ ದಾಖಲೆ ಹಾಗೂ ಮಾಹಿತಿಯನ್ನು ನೀಡಿ ಕಿಸಾನ್ ಆಶೀರ್ವಾದ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಸದ್ಯ ಕಿಸಾನ್ ಆಶೀರ್ವಾದ ಯೋಜನೆಯ ಪ್ರಯೋಜನವನ್ನು ಜಾರ್ಖಂಡ್ (Jharkhand) ರಾಜ್ಯದಲ್ಲಿರುವ 35 ಲಕ್ಷ ರೈತರು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆ ಜಾರ್ಖಂಡ್ ನಲ್ಲಿ ಸಕ್ಸಸ್ ಆದರೆ ರಾಷ್ಟ್ರ ವ್ಯಾಪಿ ವಿಸ್ತರಿಸಲಾಗುವುದು ಎನ್ನುವ ವರದಿ ಲಭ್ಯವಾಗಿದೆ.
Farmers will get 25,000 subsidy under this government scheme