Business News

ರೈತರಿಗಾಗಿ ಇದು ಅತ್ಯುತ್ತಮ ಯೋಜನೆ; ಸಿಗಲಿದೆ ಪ್ರತಿ ತಿಂಗಳು ₹3000 ಪಿಂಚಣಿ ಹಣ!

ದೇಶದ ರೈತ (farmers) ರ ಏಳ್ಗೆ ಹಾಗೂ ಅಭಿವೃದ್ಧಿ ಎನ್ನುವುದು ಸರ್ಕಾರದ ಪ್ರಮುಖ ಗುರಿ ಆಗಿರುತ್ತದೆ. ಯಾಕೆಂದ್ರೆ ರೈತರ ಅಭಿವೃದ್ಧಿಯಲ್ಲಿ ದೇಶದ ಬೆಳವಣಿಗೆ (country development) ಕೂಡ ಜೋಡಣೆಯಾಗಿದೆ ಎಂದರೆ ತಪ್ಪಾಗುವುದಿಲ್ಲ.

ಹಾಗಾಗಿ ರೈತರು ತಮ್ಮ ನಿವೃತ್ತಿಯ ನಂತರದ ಜೀವನವನ್ನು ಕೂಡ ಸುಗಮವಾಗಿ ಕಳೆಯುವಂತೆ ಮಾಡಲು ಸರ್ಕಾರ ಬೇರೆ ಬೇರೆ ಆರ್ಥಿಕ ಯೋಜನೆಗಳನ್ನು ಪರಿಚಯಿಸಿದೆ.

PM Kisan Yojana New Update on Deposit of Money to Bank Account

ಈ ಪೋಸ್ಟ್ ಆಫೀಸ್ ಸ್ಕೀಮ್ ಮೂಲಕ ಪ್ರತಿ ತಿಂಗಳು ಸಿಗುತ್ತೆ ₹9,250 ರೂಪಾಯಿ

ನಮಗೆಲ್ಲಾ ಗೊತ್ತಿರುವ ಹಾಗೆ 60 ವರ್ಷ ಮೇಲ್ಪಟ್ಟ ಸರಕಾರಿ ನೌಕರರಿಗೆ (Government employees) ಸುಲಭವಾಗಿ ಪಿಂಚಣಿ ಸಿಗುತ್ತದೆ. ಅದೇ ರೀತಿ ಬೇರೆ ಕೆಲವು ಖಾಸಗಿ ಕಂಪೆನಿಗಳು (private companies) ಕೂಡ ಪಿಂಚಣಿ ವ್ಯವಸ್ಥೆಯನ್ನು ಹೊಂದಿರುತ್ತವೆ. ಆದರೆ ಜೀವಮಾನವಿಡಿ ತಮ್ಮ ಜಮೀನಿನಲ್ಲಿ ದುಡಿಯುವ ರೈತರಿಗೆ ಪಿಂಚಣಿ (pension ) ಭಾಗ್ಯ ಇರುವುದಿಲ್ಲ. ಅಥವಾ ಪಿಂಚಣಿ ಪಡೆದುಕೊಳ್ಳುವುದಕ್ಕೆ ಯಾವುದಾದರೂ ಬ್ಯಾಂಕ್ ಅಥವಾ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ (Investment) ಮಾಡಬೇಕಾಗುತ್ತದೆ. ಇದನ್ನು ಗಮನಿಸಿರುವ ಸರ್ಕಾರ ರೈತರಿಗೆ 60 ವರ್ಷದ ನಂತರ ಮೂರು ಸಾವಿರ ರೂಪಾಯಿಗಳನ್ನು ಪಿಂಚಣಿಯಾಗಿ ಕೊಡಲು ನಿರ್ಧರಿಸಿದೆ.

ರಾಜ್ಯ ಕೃಷಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ 200 ಕೋಟಿ ರೂಪಾಯಿ ಮೀಸಲು!

ರಾಜ್ಯ ಕೃಷಿ ಅಭಿವೃದ್ಧಿ ಯೋಜನೆ ಮತ್ತು ಎರಡನೇ ವಿಶ್ವಬ್ಯಾಂಕ್ ಬೆಂಬಲಿತ ‘ಯುಪಿ ಸರ್ಕಾರದ ಯೋಜನೆ’ ಈ ಎರಡು ಯೋಜನೆಗಳನ್ನು ರೈತರ ಹಿತಾಸಕ್ತಿಗಾಗಿ ಜಾರಿಗೆ ತರಲಾಗಿದ್ದು, ಇನ್ನೂರು ಕೋಟಿಗಳನ್ನು ರೈತರಿಗಾಗಿ ಮೀಸಲಿಡಲಾಗಿದೆ.

ಈ ಹಿನ್ನೆಲೆಯಲ್ಲಿ ರೈತರಿಗೆ ಪ್ರತಿ ತಿಂಗಳು 60 ವರ್ಷ ಮೇಲ್ಪಟ್ಟ ನಂತರ ಮೂರು ಸಾವಿರ ರೂಪಾಯಿಗಳನ್ನು ನೀಡುವುದರ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನಿಸಲಾಗುತ್ತಿದೆ.

ಹಿರಿಯ ನಾಗರಿಕರಿಗೆ ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್! ಹೊಸ ಉಳಿತಾಯ ಯೋಜನೆ

Pension Schemeಇದು ಉತ್ತರ ಪ್ರದೇಶ ಸರ್ಕಾರದ ಕೊಡುಗೆ!

ಯೋಗಿ ನೇತೃತ್ವದ ಉತ್ತರ ಪ್ರದೇಶ (UP Government) ಸರ್ಕಾರ ಇತ್ತೀಚಿಗೆ ಘೋಷಣೆ ಮಾಡಿರುವ ಮಧ್ಯಂತರ ರಾಜ್ಯ ಬಜೆಟ್ (budget) ನಲ್ಲಿ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವಂತಹ ಕೆಲವು ಪ್ರಮುಖ ಯೋಜನೆಗಳಿಗೆ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಟ್ಟಿದೆ ಅವುಗಳಲ್ಲಿ ರೈತರಿಗಾಗಿ ಇರುವ ಪಿಂಚಣಿ ಯೋಜನೆ ಕೂಡ ಒಂದು.

ಈ 5 ಬ್ಯಾಂಕುಗಳಲ್ಲಿ ಅತಿ ಕಡಿಮೆ ಬಡ್ಡಿಯಲ್ಲಿ ಸಿಗುತ್ತಿದೆ ಪರ್ಸನಲ್ ಲೋನ್!

ಕೃಷಿಯನ್ನೇ ಅವಲಂಬಿಸಿಕೊಂಡಿರುವ ರೈತ, 60 ವರ್ಷದ ನಂತರ ಮೊದಲಿನಂತೆ ಕರೆಸಿ ಭೂಮಿಯಲ್ಲಿ ದುಡಿಯಲು ಸಾಧ್ಯವಿಲ್ಲ ಹೀಗೆ ಪ್ರತಿದಿನ ದುಡಿದರೆ ಮಾತ್ರ ರೈತರಿಗೆ ತಮ್ಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಹೀಗಾಗಿ ರೈತರಿಗೆ 60 ವರ್ಷ ಮೇಲ್ಪಟ್ಟ ನಂತರ ತಮ್ಮ ಕೃಷಿ ಚಟುವಟಿಕೆಯಲ್ಲಿ ಸರಿಯಾಗಿ ತೊಡಗಿಸಿಕೊಳ್ಳಲು ಆಗದೇ ಇದ್ದಾಗ ಆರ್ಥಿಕ ನೆರವು ಬೇಕಾಗುವುದು ಸಹಜ. ಇದಕ್ಕಾಗಿ ಸದ್ಯ ಯುಪಿ ಸರ್ಕಾರ ರೈತರಿಗೆ ಯಾವುದೇ ಹೂಡಿಕೆ ಇಲ್ಲದೆ ವೃದ್ಧಾಪ್ಯ ಪಿಂಚಣಿ (Pension Scheme) ನೀಡಲು ಮುಂದಾಗಿದೆ.

ಸದ್ಯ ಉತ್ತರ ಪ್ರದೇಶ ಸರ್ಕಾರ ರೈತರಿಗಾಗಿ ಘೋಷಣೆ ಮಾಡಿರುವ ಯೋಜನೆ ಕರ್ನಾಟಕ ರಾಜ್ಯ ಸರ್ಕಾರದಲ್ಲಿಯೂ ಬಂದರೆ ಇಲ್ಲಿನ ರೈತರಿಗೂ ಕೂಡ ಆರ್ಥಿಕ ನೆರವು ಸಿಕ್ಕಂತಾಗುತ್ತದೆ. ಅದರಿಂದ ರೈತರಿಗೆ ಅನುಕೂಲವಾಗುವ ಈ ಪಿಂಚಣಿ ಯೋಜನೆಯನ್ನು ರಾಜ್ಯ ಸರ್ಕಾರವು ಇಂಪ್ಲಿಮೆಂಟ್ ಮಾಡುತ್ತದೆಯೋ ಎನ್ನುವುದನ್ನು ಕಾದು ನೋಡಬೇಕು.

farmers Will get 3000 pension every month by this Scheme

Our Whatsapp Channel is Live Now 👇

Whatsapp Channel

Related Stories