ಈ ಪೋಸ್ಟ್ ಆಫೀಸ್ ಸ್ಕೀಮ್ ಮೂಲಕ ಪ್ರತಿ ತಿಂಗಳು ಸಿಗುತ್ತೆ ₹9,250 ರೂಪಾಯಿ

Post Office Scheme : ಈ ಯೋಜನೆಯಲ್ಲಿ ಹೂಡಿಕೆ ಮಾಡೋದ್ರಿಂದ ನೀವು ಪ್ರತಿ ತಿಂಗಳು ಗಳಿಸಬಹುದು ₹9,250

Post Office Scheme : ಇಂದಿನ ದಿನದಲ್ಲಿ ಪ್ರತಿಯೊಬ್ಬರೂ ದುಡಿಯುತ್ತಾರೆ. ಕೆಲವೊಬ್ಬರು ಸರ್ಕಾರಿ ಉದ್ಯೋಗಿ (government employee) ಗಳಾಗಿದ್ದರೆ, ಇನ್ನು ಕೆಲವರು ಖಾಸಗಿ ವಲಯದಲ್ಲಿ ದುಡಿಯುತ್ತಾರೆ. ಇನ್ನು ಕೆಲವು ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಾರೆ.

ಹೀಗೆ ಒಂದೆಲ್ಲಾ ಒಂದು ವಿಧದಲ್ಲಿ ಪ್ರತಿಯೊಬ್ಬರು ದುಡಿಯುತ್ತಾರೆ. ಆದಾಯ ಗಳಿಸುತ್ತಾರೆ. ಹೀಗೆ ಗಳಿಸಿದ ಆದಾಯದಲ್ಲಿ ಸ್ವಲ್ಪವನ್ನಾದರೂ ಉಳಿತಾಯ (savings) ಮಾಡಿ ಭವಿಷ್ಯಕ್ಕಾಗಿ ಒಳ್ಳೆಯ ಜಾಗದಲ್ಲಿ ಹೂಡಿಕೆ ಮಾಡುವುದು ಉತ್ತಮ.

ಹಿರಿಯ ನಾಗರಿಕರಿಗೆ ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್! ಹೊಸ ಉಳಿತಾಯ ಯೋಜನೆ

ಈ ಪೋಸ್ಟ್ ಆಫೀಸ್ ಸ್ಕೀಮ್ ಮೂಲಕ ಪ್ರತಿ ತಿಂಗಳು ಸಿಗುತ್ತೆ ₹9,250 ರೂಪಾಯಿ - Kannada News

ಷೇರು, ಮ್ಯೂಚುವಲ್ ಫಂಡ್ (mutual fund) ಇತ್ಯಾದಿಗಳಲ್ಲಿ ಹೂಡಿಕೆ (Investment ) ಮಾಡುವುದರಿಂದ ನಿಮ್ಮ ಹಣಕ್ಕೆ ನೀವೇ ಜವಾಬ್ದಾರರಾಗಿರುತ್ತೀರಿ. ಆದರೆ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ಭದ್ರವಾಗಿರುತ್ತದೆ.

ಯಾವುದೇ ಮಾರುಕಟ್ಟೆಯ ಅಪಾಯದ ಆತಂಕ ಇರುವುದಿಲ್ಲ. ಇದೀಗ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವವರಿಗಾಗಿ ಹೊಸ ಯೋಜನೆಯೊಂದನ್ನು ಪರಿಚಯಿಸಲಾಗಿದೆ. ಹಾಗಾದರೆ ಆ ಯೋಜನೆ ಯಾವುದು? ಏನು ಲಾಭ? ಎಷ್ಟು ಹೂಡಿಕೆ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.

ಮಂತ್ಲಿ ಇನ್ಕಂ ಸ್ಕೀಂ: (monthly income scheme)

ನೀವು ಪ್ರತಿ ತಿಂಗಳು ಸಂಬಳ ತೆಗೆದುಕೊಳ್ಳುವ ಉದ್ಯೋಗಿಗಳಾಗಿದ್ದಲ್ಲಿ ಅಂಚೆ ಕಚೇರಿ (post office) ಯಲ್ಲಿ ಪರಿಚಯಿಸಲಾದ ಮಂತ್ಲಿ ಇನ್ಕಂ ಸ್ಕೀಂ ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ.

ಈ ಯೋಜನೆ ಅಡಿಯಲ್ಲಿ ನೀವು ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ತಿಂಗಳು ಸಹ ಬಡ್ಡಿ ನೀಡಲಾಗುತ್ತದೆ. ಈ ತಿಂಗಳ ಆದಾಯ ಯೋಜನೆ ಅಡಿಯಲ್ಲಿ ನೀವು ಒಬ್ಬರೇ ಖಾತೆಯನ್ನು ತೆರೆಯಬಹುದು. ಇಲ್ಲವೇ ಗಂಡ ಹೆಂಡತಿ, ಅಣ್ಣ-ತಮ್ಮ, ಅಕ್ಕ-ತಮ್ಮ, ಅಕ್ಕ-ತಂಗಿ, ಅಣ್ಣ-ತಂಗಿ ಹೀಗೆ ಜೋಡಿಯಾಗಿಯೂ ಜಂಟಿ ಖಾತೆ ತೆರೆಯಬಹುದು.

ಈ ರೀತಿ ಜಂಟಿ ಖಾತೆ ( joint account) ತೆರೆಯುವುದರಿಂದ ನೀವು ಹೆಚ್ಚಿನ ಪ್ರಮಾಣದ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ನೀವು ಮನೆಯಲ್ಲಿಯೇ ಕುಳಿತು 5,55,000 ರೂ. ಪಡೆಯಬಹುದಾಗಿದೆ.

ಈ 5 ಬ್ಯಾಂಕುಗಳಲ್ಲಿ ಅತಿ ಕಡಿಮೆ ಬಡ್ಡಿಯಲ್ಲಿ ಸಿಗುತ್ತಿದೆ ಪರ್ಸನಲ್ ಲೋನ್!

Post office Schemeಮಂತ್ಲಿ ಇನ್ಕಂ ಸ್ಕೀಂ ಎನ್ನುವುದು ಮಾಸಿಕ ಉಳಿತಾಯ ಯೋಜನೆ ಆಗಿದೆ. ಇದರಲ್ಲಿ ನೀವು ದೊಡ್ಡ ಮೊತ್ತ ಠೇವಣಿ ಹೂಡಿಕೆ ಮಾಡುವುದರಿಂದ ಪ್ರತಿ ತಿಂಗಳು ಆದಾಯ ಗಳಿಸುತ್ತೀರಿ. ಈ ಖಾತೆಯಲ್ಲಿ ನೀವು ಗಳಿಸಿದ ಬಡ್ಡಿ (Interest) ಹಣವನ್ನು ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಹೂಡಿಕೆ ಮಾಡಿದ ಐದು ವರ್ಷಗಳ ನಂತರ ನೀವು ಠೇವಣಿ ಮೊತ್ತವನ್ನು ಹಿಂಪಡೆಯಬಹುದು.

ಮಂತ್ಲಿ ಇನ್ಕಂ ಸ್ಕೀಂ ಯೋಜನೆ ಅಡಿಯಲ್ಲಿ ಒಬ್ಬರೇ 9 ಲಕ್ಷ ರೂ.ಗಳವರೆಗೆ ಜಂಟಿ ಖಾತೆ ತೆರೆದರೆ 15 ಲಕ್ಷ ರೂ.ಗಳ ವರೆಗೆ ಹೂಡಿಕೆ ಮಾಡಬಹುದಾಗಿದೆ. ನೀವು ಹೇಗೆ ಹೆಚ್ಚೆಚ್ಚು ಹಣವನ್ನು ಹೂಡಿಕೆ ಮಾಡುತ್ತೀರೋ ಅದೇ ರೀತಿಯಲ್ಲಿ ಲಾಭ ಗಳಿಸುತ್ತೀರಿ.

ಹಸು, ಕುರಿ ಸಾಕಾಣಿಕೆ ಮಾಡೋರಿಗೆ ಸಿಗಲಿದೆ ಬಡ್ಡಿ ರಹಿತ 3 ಲಕ್ಷ ರೂಪಾಯಿ ಸಾಲ

ಪ್ರಸ್ತುತ ಮಂತ್ಲಿ ಇನ್ಕಂ ಸ್ಕೀಂ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳಿಗೆ ಶೇ. 7.4ರಷ್ಟು ಬಡ್ಡಿ ನೀಡಲಾಗುತ್ತದೆ. ನೀವು ಜಂಟಿ ಖಾತೆ ತೆರೆದು 15 ಲಕ್ಷ ರೂ. ಠೇವಣಿ ಮಾಡಿದಲ್ಲಿ ಪ್ರತಿ ತಿಂಗಳು ಶೇ.7.4ರ ಬಡ್ಡಿದರದಲ್ಲಿ 925೦ ರೂ.ಗಳನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಒಂದು ವರ್ಷಕ್ಕೆ 1,11,೦೦೦ ರೂ. ಗಳಿಸಬಹುದಾಗಿದೆ. ಒಟ್ಟಿನಲ್ಲಿ ಐದು ವರ್ಷಕ್ಕೆ 5,55,೦೦೦ ರೂ. ಗಳಿಸಬಹುದಾಗಿದೆ.

ಕಡಿಮೆ ಹೂಡಿಕೆ ಮಾಡಿ ಹೆಚ್ಚು ಆದಾಯ ಗಳಿಸಬಹುದಾದ ಅತ್ಯುತ್ತಮ ಉಳಿತಾಯ ಯೋಜನೆ ಇದಾಗಿದ್ದು, ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಮಾಹಿತಿಗಾಗಿ ಅಂಚೆ ಕಚೇರಿಯನ್ನು ಸಂಪರ್ಕಿಸಿ.

you get Rupees 9,250 per month In this post office scheme

Follow us On

FaceBook Google News

you get Rupees 9,250 per month In this post office scheme