ಲ್ಯಾಪ್‌ಟಾಪ್ ಕೇವಲ 8000 ರೂಪಾಯಿಗೆ, ಫ್ಲಿಪ್‌ಕಾರ್ಟ್‌ನಲ್ಲಿ ಬಂಪರ್ ಕೊಡುಗೆ - Flipkart Laptop Offer

ಫ್ಲಿಪ್‌ಕಾರ್ಟ್‌ನಲ್ಲಿ Lenovo Chromebook ಖರೀದಿಗೆ ಬಿಗ್ ಡೀಲ್! ₹8000ಕ್ಕೆ ಲ್ಯಾಪ್‌ಟಾಪ್ ಪಡೆಯಲು ಬಂಪರ್ ಅವಕಾಶ. ಇಷ್ಟು ಕಡಿಮೆ ದರದಲ್ಲಿ ಇದೇ ಮೊದಲ ಬಾರಿಗೆ ಲಭ್ಯ

  • ₹8000ಕ್ಕೆ Lenovo Chromebook ಖರೀದಿ ಅವಕಾಶ
  • ಫ್ಲಿಪ್‌ಕಾರ್ಟ್‌ನಲ್ಲಿ ಬ್ಯಾಂಕ್ ಹಾಗೂ ಎಕ್ಸ್‌ಚೇಂಜ್ ಡಿಸ್ಕೌಂಟ್ ಲಭ್ಯ
  • ವಿದ್ಯಾರ್ಥಿಗಳು, ವೆಬ್‌ಬ್ರೌಸಿಂಗ್, ಆನ್‌ಲೈನ್ ಕ್ಲಾಸ್‌ಗಳಿಗೆ ಸೂಕ್ತ ಲ್ಯಾಪ್‌ಟಾಪ್

Lenovo Laptop: ಲೆನೊವೊ ಎಂಬ ಪಾಪ್ಯುಲರ್ ಬ್ರ್ಯಾಂಡ್‌ನ Chromebook ಲ್ಯಾಪ್‌ಟಾಪ್ ಈಗ ಕೇವಲ ₹8000 ರೂಪಾಯಿಗೆ ಲಭ್ಯವಿದೆ. ಈ ಬಿಗ್ ಡೀಲ್ ಅನ್ನು ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಲಿಮಿಟೆಡ್ ಟೈಮ್ ಆಫರ್ ರೂಪದಲ್ಲಿ ನೀಡುತ್ತಿದೆ. ಡಿಸ್ಕೌಂಟ್‌ಗಳು ಮತ್ತು ಬ್ಯಾಂಕ್ ಆಫರ್‌ಗಳ ನಂತರ ಈ ಡಿವೈಸ್ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತಿದೆ.

Lenovo 100e Chromebook ಮಾದರಿ ಈಗ ₹8,990ಕ್ಕೆ ಲಿಸ್ಟ್ ಆಗಿದ್ದು, ನೀವು ಆಯ್ದ ಬ್ಯಾಂಕ್ ಕಾರ್ಡ್‌ಗಳಿಂದ ಪೇಮೆಂಟ್ ಮಾಡಿದರೆ ಹೆಚ್ಚುವರಿ 10% ರಿಯಾಯಿತಿ ಸಿಗುತ್ತದೆ. ಇದರ ನಂತರ ಫೈನಲ್ ಪ್ರೈಸ್ ₹8000ದ ಒಳಗೆ ಇಳಿಯುತ್ತದೆ. ಜೊತೆಗೆ, ಹಳೆ ಲ್ಯಾಪ್‌ಟಾಪ್ ಅಥವಾ ಡಿವೈಸ್ ಅನ್ನು ಎಕ್ಸ್‌ಚೇಂಜ್ ಮಾಡಿದರೆ ₹8,400ರಷ್ಟು ಹೆಚ್ಚುವರಿ ರಿಯಾಯಿತಿಯೂ ಲಭ್ಯವಿದೆ.

ಇದನ್ನೂ ಓದಿ: ಬರಿ ₹7,000ಕ್ಕೆ ಹೈಕ್ಲಾಸ್ LED ಟಿವಿಗಳು! ಡಿಸ್ಕೌಂಟ್‌ ಮೇಳ, ಆಫರ್ ಬಿಟ್ಟೋರು ಉಂಟಾ

ಈ Chromebook ಪ್ರೈಮರಿ ಲೆವಲ್ ಯೂಸರ್ಸ್‌ಗೆ ತಕ್ಕದ್ದಾಗಿದ್ದು, ಇಂಟರ್ನೆಟ್ ಬ್ರೌಸಿಂಗ್, ಸ್ಟೂಡೆಂಟ್ ವರ್ಕ್, Zoom ಮೀಟಿಂಗ್ ಅಥವಾ ಆನ್‌ಲೈನ್ ಕ್ಲಾಸ್‌ಗಳಿಗೆ ಸೂಕ್ತ ಆಯ್ಕೆ.

ಇದರಲ್ಲಿ 11.6 ಇಂಚಿನ anti-glare HD ಡಿಸ್ಪ್ಲೇ (60Hz refresh rate, 250 nits brightness), MediaTek Kompanio 530 ಪ್ರೊಸೆಸರ್, 4GB RAM, 32GB ಸ್ಟೋರೇಜ್ ಇದೆ.

Google ChromeOS‌ ನಲ್ಲಿ ಈ ಲ್ಯಾಪ್‌ಟಾಪ್ ಕಾರ್ಯನಿರ್ವಹಿಸುತ್ತಿದ್ದು, Google Gemini ಬೆಂಬಲ, ಮಿಲಿಟರಿ ಗ್ರೇಡ್ ಡ್ಯೂರಬಿಲಿಟಿ, 720p ಕ್ಯಾಮರಾ (privacy shutter) ಹಾಗೂ multi-touch ಟಚ್‌ಪ್ಯಾಡ್ ಸೇರಿವೆ. ಒಟ್ಟಾರೆ ಇದನ್ನು ಹೈ-ವ್ಯಾಲ್ಯೂ ಡಿವೈಸ್ ಎಂದು ಹೇಳಬಹುದು.

ಇದನ್ನೂ ಓದಿ: ಜಿಯೋ ಗ್ರಾಹಕರಿಗೆ ಖುಷಿ ಸುದ್ದಿ! ₹51 ರೂಪಾಯಿಗೆ 5G ಡೇಟಾ, ತಿಂಗಳ ವ್ಯಾಲಿಡಿಟಿ

Flipkart ನಲ್ಲಿ ಇದೇ ಮೊದಲ ಬಾರಿಗೆ Lenovo 100e Chromebook ಇಷ್ಟು ಕಡಿಮೆ ದರದಲ್ಲಿ ಲಭ್ಯವಾಗಿದ್ದು, ಬಜೆಟ್ ಲ್ಯಾಪ್‌ಟಾಪ್ ಹುಡುಕುತ್ತಿರುವವರಿಗೆ ಇದು ‘ಬಿಗ್ ಆಫರ್’ ಆಗಿದೆ!

Flipkart limited-time deal on the Lenovo Laptop

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories