Business News

3 ಕೋಟಿ ಬಡ ಜನರಿಗೆ ಉಚಿತ ಮನೆ ಭಾಗ್ಯ! ಪಿಎಮ್ ಆವಾಸ್ ಯೋಜನೆಗೆ ನೀವು ಸಹ ಅರ್ಜಿ ಸಲ್ಲಿಸಿ

Home Loan : ನಮ್ಮ ದೇಶದ ಜನರಿಗೆ ಸ್ವಂತ ಸೂರು (Own House) ಇರಬೇಕು ಎನ್ನುವ ಉದ್ದೇಶದಿಂದ ಪಿಎಮ್ ಮೋದಿ ಅವರು ಪಿಎಮ್ ಆವಾಸ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯು ಈಗಾಗಲೇ ಕೋಟ್ಯಾಂತರ ಜನರಿಗೆ ಸ್ವಂತ ಮನೆ ನಿರ್ಮಿಸಿ ಕೊಟ್ಟಿದೆ.

ಒಂದು ವೇಳೆ ನೀವು ಸ್ವಂತ ಮನೆ ಮಾಡಿಕೊಳ್ಳುವ ಕನಸು ಹೊಂದಿದ್ದರೆ ಪಿಎಮ್ ಆವಾಸ್ ಯೋಜನೆಯ (PM Awas Yojana) ಮೂಲಕ ಸಬ್ಸಿಡಿ ಸಾಲ (Loan) ಪಡೆದು, ನಿಮ್ಮ ಕನಸಿನ ಮನೆಯನ್ನು ಕಟ್ಟಿಕೊಳ್ಳಬಹುದು. ಇನ್ನು ತಡ ಮಾಡಬೇಡಿ..

Free housing Scheme for 3 crore poor people, apply for PM Awas Yojana

ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡೋಕೆ ಇವತ್ತೇ ಲಾಸ್ಟ್ ಡೇಟ್! ಕೊನೆಯ ಗಡುವು

ಯಾರಿಗೆಲ್ಲ ಸಿಗಲಿದೆ ಈ ಯೋಜನೆಯ ಪ್ರಯೋಜನ

ಹಳ್ಳಿಯಲ್ಲಿ ಮತ್ತು ಸಿಟಿಯಲ್ಲಿ ಎರಡು ಕಡೆ ವಾಸ ಮಾಡುವವರು ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು. ಪಿಎಮ್ ಆವಾಸ್ ಯೋಜನೆಯಲ್ಲಿ ಮನೆ ಕಟ್ಟುವವರಿಗೆ ಸಬ್ಸಿಡಿ ಸಾಲ (Subsidy Loan) ಸಿಗುತ್ತದೆ, ಸಬ್ಸಿಡಿ ಮೊತ್ತ ಎಷ್ಟಿರುತ್ತದೆ ಎನ್ನುವುದು ನಿಮ್ಮ ಮನೆಯ ವಿಸ್ತೀರ್ಣ ಹಾಗೂ ಯಾವ ಮಟ್ಟದಲ್ಲಿ ಮನೆ ಕಟ್ಟಿಸುತ್ತಿದ್ದೀರಿ ಎನ್ನುವುದರ ಮೇಲೆ ಡಿಪೆಂಡ್ ಆಗಿರುತ್ತದೆ. ಈಗಾಗಲೇ 4ಕೋಟಿಗಿಂತ ಹೆಚ್ಚಿನ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ನೀವು ಕೂಡ ಅಪ್ಲೈ ಮಾಡಿ..

PM Awas Yojanaಪಿಎಮ್ ಮೋದಿ ಅವರಿಂದ ಗುಡ್ ನ್ಯೂಸ್

ಪಿಎಮ್ ನರೇಂದ್ರ ಮೋದಿ ಅವರು ಇತ್ತೀಚೆಗೆ 3ನೇ ಬಾರಿ ಪಿಎಮ್ ಆಗಿ ಆಯ್ಕೆಯಾಗಿ, ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ಮೋದಿ ಅವರು ಪಿಎಮ್ ಆವಾಸ್ ಯೋಜನೆಯ ಅಡಿಯಲ್ಲಿ ಸುಮಾರು 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ಆವಾಸ್ ಯೋಜನೆಯಲ್ಲಿ ಈ ರೀತಿ ಇದ್ದು, ಅವು ಯಾವುವು ಎಂದರೆ.

1. ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣ (PMAY-G)
2. ಪ್ರಧಾನಮಂತ್ರಿ ಆವಾಸ್ ಯೋಜನೆ ನಗರ (PMAY-U)

ಚಿನ್ನಾಭರಣ ಪ್ರಿಯರಿಗೆ ಇಂದು ಕೊಂಚ ಸಮಾಧಾನ! ಇಳಿಕೆ ಕಂಡ ಗಗನ ಕುಸುಮ ಚಿನ್ನದ ಬೆಲೆ

ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ಅರ್ಹತೆಗಳು

*ಈ ಯೋಜನೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಯ ವಾರ್ಷಿಕ ಆದಾಯ 18 ಲಕ್ಷಕ್ಕಿಂತ ಕಡಿಮೆ ಇರಬೇಕು. ಅಂಥವರು ಅರ್ಜಿ ಸಲ್ಲಿಸಬಹುದು.

*ಜನರ ಆದಾಯವನ್ನು ಇಲ್ಲಿ 3 ರೀತಿಯಲ್ಲಿ ವಿಭಾಗಿಸಲಾಗಿದೆ. EWS ಅಂದರೆ ಅತ್ಯಂತ ಕಡಿಮೆ ಆದಾಯ ಹೊಂದಿರುವವರು, LIG ಅಂದರೆ ಕಡಿಮೆ ಆದಾಯ ಹೊಂದಿರುವವರು, MIG ಅಂದರೆ ಮಧ್ಯಮ ರೀತಿಯಲ್ಲಿ ಆದಾಯ ಹೊಂದಿರುವವರು. EWS ಗೆ ಸೇರುವವರ ಆದಾಯ 3 ಲಕ್ಷಗಳ ಒಳಗಿರುತ್ತದೆ, LIG ಗೆ ಸೇರುವವರ ಆದಾಯ 3 ರಿಂದ 6 ಲಕ್ಷಗಳ ಒಳಗೆ ಇರುತ್ತದೆ, MIG ಸೇರುವವರ ಆದಾಯ 6 ರಿಂದ 18 ಲಕ್ಷಗಳ ಒಳಗೆ ಇರುತ್ತದೆ.

ಚೆಕ್ ಬೌನ್ಸ್ ಕುರಿತು ಇದ್ದಕ್ಕಿದ್ದಂತೆ ಹೊಸ ರೂಲ್ಸ್! ಇಲ್ಲಿದೆ ಹೈಕೋರ್ಟ್ ಕೊಟ್ಟ ಬಿಗ್ ಅಪ್ಡೇಟ್

Home Loanಅರ್ಜಿ ಸಲ್ಲಿಕೆಗೆ ನಿಯಮಗಳು:

*ಅರ್ಜಿ ಸಲ್ಲಿಸುವ ವ್ಯಕ್ತಿ ನಮ್ಮ ದೇಶದವರೇ ಆಗಿರಬೇಕು ಹಾಗೆಯೇ ಅವರ ವಯಸ್ಸು 18 ವರ್ಷ ತುಂಬಿರಬೇಕು.

*ಅರ್ಜಿ ಹಾಕುವವರ ಬಳಿ ಇನ್ನೆಲ್ಲಿಯೂ ಸ್ವಂತ ಮನೆ ಇರಬಾರದು.

*ಅವರ ಮನೆಯವರಿಗೆ ಸರ್ಕಾರಿ ಕೆಲಸ ಇರಬಾರದು.

*ತಮ್ಮದೇ ಸ್ವಂತ ಭೂಮಿ ಇದ್ದರೆ, ಅಲ್ಲಿ ಮನೆ ಕಟ್ಟಿಸುವುದಕ್ಕೆ ಕೂಡ ಸಾಲ (Loan) ಪಡೆಯಬಹುದು.

*ಬಾಡಿಗೆ ಮನೆಯಲ್ಲಿ (Rent House) ವಾಸ ಮಾಡುತ್ತಿರುವವರು ಸಹ ಈ ಯೋಜನೆಯ ಮೂಲಕ ಸ್ವಂತ ಮನೆ (Own House) ಮಾಡಿಕೊಳ್ಳಬಹುದು.

*ಪಿಎಂ ಆವಾಸ್ ಯೋಜನೆಯ ಅಡಿಯಲ್ಲಿ ನೀವು ಅರ್ಜಿ ಹಾಕುವ ಬ್ಯಾಂಕ್ ಇಂದ ಕಡಿಮೆ ಬಡ್ಡಿದರದಲ್ಲಿ ಹೋಮ್ ಲೋನ್ (Home Loan) ಸಿಗುತ್ತದೆ. 20 ವರ್ಷಗಳಲ್ಲಿ ನೀವು ಸಾಲ ತೀರಿಸಬೇಕಾಗುತ್ತದೆ.

Free housing Scheme for 3 crore poor people, apply for PM Awas Yojana

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories