ಚೆಕ್ ಬೌನ್ಸ್ ಕುರಿತು ಇದ್ದಕ್ಕಿದ್ದಂತೆ ಹೊಸ ರೂಲ್ಸ್! ಇಲ್ಲಿದೆ ಹೈಕೋರ್ಟ್ ಕೊಟ್ಟ ಬಿಗ್ ಅಪ್ಡೇಟ್

Story Highlights

ಇದೀಗ ಚೆಕ್ ಬೌನ್ಸ್ (Cheque Bounce) ಬಗ್ಗೆ ಹೈಕೋರ್ಟ್ ಇಂದ ಹೊಸದೊಂದು ಆದೇಶ ಬಂದಿದ್ದು, ಇದು ಬ್ಯಾಂಕ್ ಗಳಿಗೆ ಹಾಗು ಗ್ರಾಹಕರಿಗೆ ಇಬ್ಬರಿಗೂ ನೆಮ್ಮದಿ ತರುವಂಥ ವಿಚಾರ ಆಗಿದೆ.

cheque bounce : ನಮ್ಮ ದೇಶದಲ್ಲಿ ವ್ಯವಹಾರಸ್ಥರು ಹಾಗೂ ಇನ್ನಿತರ ಸಾಕಷ್ಟು ಜನರು ಹಣದ ವ್ಯವಹಾರ ಮಾಡುವುದು ಚೆಕ್ ಮೂಲಕ. ಬ್ಯಾಂಕ್ ಗಳಲ್ಲಿ (Banks) ಪ್ರತಿದಿನ ಚೆಕ್ ವ್ಯವಹಾರಗಳು ನಡೆಯುತ್ತಲೇ ಇರುತ್ತದೆ. ಆದರೆ ಕೆಲವೊಮ್ಮೆ ಜನರು ನೀಡುವಂಥ ಚೆಕ್ ಗಳು ಬೌನ್ಸ್ ಆಗಿರುತ್ತದೆ.

ಇಂಥ ಚೆಕ್ ಬೌನ್ಸ್ ಕೇಸ್ ಗಳು ಪ್ರತಿ ದಿನ ನೂರಾರು ಬರುತ್ತಲೇ ಇರುತ್ತದೆ. ಎಲ್ಲಾ ಬ್ಯಾಂಕ್ ಗಳಿಗೂ ಇದು ಒಂದು ರೀತಿ ತಲೆನೋವಾಗಿ ಪರಿಣಮಿಸಿದೆ ಎಂದೇ ಹೇಳಬಹುದು.

ಹೊಸ ಯೋಜನೆ! ಕರೆಂಟ್ ಬಿಲ್ ಕಟ್ಟೋ ತಪತ್ರಯ ಬೇಡ ಅಂದ್ರೆ ನೀವು ಕೂಡ ಅರ್ಜಿ ಸಲ್ಲಿಸಿ

ಚೆಕ್ ಬೌನ್ಸ್ ಬ್ಯಾಂಕ್ ಗೆ ಮಾತ್ರವಲ್ಲದೇ ಜನರಿಗೂ ಕೂಡ ದೊಡ್ಡ ಸಮಸ್ಯೆಯೇ ಆಗಿದೆ. ಆದರೆ ಇದೀಗ ಚೆಕ್ ಬೌನ್ಸ್ (Cheque Bounce) ಬಗ್ಗೆ ಹೈಕೋರ್ಟ್ ಇಂದ ಹೊಸದೊಂದು ಆದೇಶ ಬಂದಿದ್ದು, ಇದು ಬ್ಯಾಂಕ್ ಗಳಿಗೆ ಹಾಗು ಗ್ರಾಹಕರಿಗೆ ಇಬ್ಬರಿಗೂ ನೆಮ್ಮದಿ ತರುವಂಥ ವಿಚಾರ ಆಗಿದೆ.

ಈ ಹೊಸ ರೂಲ್ಸ್ ಏನು? ಹೈಕೋರ್ಟ್ (High Court) ಇಂದ ಬಂದಿರುವ ಆದೇಶ ಏನು? ಇನ್ನುಮುಂದೆ ಚೆಕ್ ವ್ಯವಹಾರಗಳು ಯಾವ ರೀತಿ ನಡೆಯುತ್ತದೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ..

Cheque Bounceಅಲಹಾಬಾದ್ ಹೈಕೋರ್ಟ್ ಇಂದ ಹೊಸ ರೂಲ್ಸ್!

ಅಲಹಾಬಾದ್ ಹೈಕೋರ್ಟ್ ನಲ್ಲಿ ಈ ಪ್ರಕರಣಗಳಿಗೆ ಸಂಬಂಧಪಟ್ಟ ಹಾಗೆ ಹೊಸ ತೀರ್ಪು ನೀಡಲಾಗಿದ್ದು NI Section 138 ಪ್ರಕಾರ ಇನ್ನೊಂದು ಬ್ಯಾಂಕ್ ಜೊತೆಗೆ ಸೇರಿರುವ ಬ್ಯಾಂಕ್ ಇಂದ ಬರುವ ಚೆಕ್ ಗಳನ್ನು ತಮ್ಮ ಬ್ಯಾಂಕ್ ನಲ್ಲಿ ಪರಿಶೀಲನೆ ಮಾಡುವುದು ಅಪರಾಧ ಎಂದು ಗುರುತಿಸಲ್ಪಡುವುದಿಲ್ಲ ಎಂದು ತಿಳಿಸಲಾಗಿದೆ. ಒಂದು ವೇಳೆ ವ್ಯಕ್ತಿ ನೀಡಿದ ಚೆಕ್ ಬೌನ್ಸ್ ಆದರೆ NI Section 138 ಅನುಸಾರ ಆತನ ವಿರುದ್ಧ ಕಾನೂನಿನ ಕ್ರಮ ತೆಗೆದುಕೊಳ್ಳುವ ಹಾಗಿಲ್ಲ ಎಂದು ತೀರ್ಪು ನೀಡಲಾಗಿದೆ.

ಪಿಯುಸಿ ಓದುತ್ತಿರುವವರಿಗೆ ಸಿಗಲಿದೆ ₹10,000 ಸ್ಕಾಲರ್ಶಿಪ್! ವಿದ್ಯಾರ್ಥಿಗಳೆ ಇಂದೇ ಅರ್ಜಿ ಸಲ್ಲಿಸಿ

ಅರ್ಚನ ಸಿಂಗ್ ಗೌತಮ್ ಎನ್ನುವವರು ಒಂದು ದೂರನ್ನು ನೀಡಿದ್ದರು, ಇಂಡಿಯನ್ ಬ್ಯಾಂಕ್ ಜೊತೆಗೆ ವಿಲೀನ ಆಗಿರುವ ಮತ್ತೊಂದು ಬ್ಯಾಂಕ್ ಗೆ ಸಂಬಂಧಿಸಿದ ಚೆಕ್ ಬಗೆಗಿನ ಕೇಸ್ ಇದಾಗಿತ್ತು. ಈ ಕೇಸ್ ಗೆ ಜಡ್ಜ್ ಆಗಿರುವ ಅರುಣ್ ಸಿಂಗ್ ದೇಶವಾಲ್ ಅವರು ಈ ರೀತಿಯ ತೀರ್ಪು ನೀಡಿದ್ದಾರೆ.

ಕೇಸ್ ಹಾಕಿರುವವರು 2023ರ ಆಗಸ್ಟ್ 21ರಂದು ಚೆಕ್ ನೀಡಿದ್ದರು, ಚೆಕ್ ಪಡೆದ ವ್ಯಕ್ತಿ ಆಗಸ್ಟ್ 25ನೇ ತಾರೀಖಿನಂದು ಬ್ಯಾಂಕ್ ಗೆ ಚೆಕ್ ಹಾಕಿದಾಗ, ಚೆಕ್ ಪರಿಶೀಲನೆ ಮಾಡಿರುವ ಬ್ಯಾಂಕ್ ಆ ಚೆಕ್ ಅನ್ನು ಅಮಾನ್ಯ ಎಂದು ಹೇಳಿದ್ದು, ಚೆಕ್ ವಾಪಸ್ ನೀಡಿತು.

Bankಚೆಕ್ ಪಡೆದ ವ್ಯಕ್ತಿ NI Section 138 ಪ್ರಕಾರ ಚೆಕ್ ಕೊಟ್ಟ ವ್ಯಕ್ತಿಯ ಮೇಲೆ ಚೆಕ್ ಬೌನ್ಸ್ ದೂರು ದಾಖಲಿಸಿ, ಕೇಸ್ ಹಾಕಿದರು. ಕೋರ್ಟ್ ಇಂದ ಬಂದ ಸಮನ್ಸ್ ಅನ್ನು ಪ್ರಶ್ನಿಸಿ, ಚೆಕ್ ನೀಡಿದ ವ್ಯಕ್ತಿ ಹೈಕೋರ್ಟ್ ಗೆ ಹೋದರು. ಹೈಕೋರ್ಟ್ ನಲ್ಲಿ ಈ ಥರ ತೀರ್ಪು ನೀಡಲಾಯಿತು.

ಕೆನರಾ ಬ್ಯಾಂಕ್ ಅಕೌಂಟ್ ಇದ್ದು ನಿಮ್ಮ ಫಿಕ್ಸೆಡ್ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಅಲಹಾಬಾದ್ ಬ್ಯಾಂಕ್ ಇಂಡಿಯನ್ ಬ್ಯಾಂಕ್ ಜೊತೆಗೆ 2020ರಲ್ಲಿ ವಿಲೀನಗೊಂಡಿತು. 2021ರ ಸೆಪ್ಟೆಂಬರ್ ವರೆಗೆ ಮಾತ್ರ ಆ ಬ್ಯಾಂಕ್ ನ ಚೆಕ್ ಗಳು ವ್ಯಾಲಿಡ್ ಆಗಿದ್ದು, ಆ ದಿನಾಂಕದ ನಂತರ ಚೆಕ್ ಕೊಟ್ಟು ಬೌನ್ಸ್ ಆದರೆ ಚೆಕ್ ಬೌನ್ಸ್ ಕೇಸ್ ಆಗುವುದಿಲ್ಲ ಎಂದು ಕೋರ್ಟ್ ಆದೇಶ ನೀಡಿದೆ.

New rules on check bounce! Here is the big update given by RBI