ಹೊಸ ಯೋಜನೆ! ಕರೆಂಟ್ ಬಿಲ್ ಕಟ್ಟೋ ತಪತ್ರಯ ಬೇಡ ಅಂದ್ರೆ ನೀವು ಕೂಡ ಅರ್ಜಿ ಸಲ್ಲಿಸಿ

ಈ ಹೊಸ ಯೋಜನೆಗೆ ಕೇವಲ 3 ತಿಂಗಳಲ್ಲಿ 10 ಲಕ್ಷ ಜನ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ, ನೀವು ಕೂಡ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ ಪಡೆಯಿರಿ

Bengaluru, Karnataka, India
Edited By: Satish Raj Goravigere

ಪಿಎಮ್ ನರೇಂದ್ರ ಮೋದಿ ಅವರು ನಮ್ಮ ದೇಶ ಬೆಳೆಯಬೇಕು, ಟೆಕ್ನಾಲಜಿ ಮುಂದುವರಿಯಬೇಕು, ಎಲ್ಲಾ ಜನರಿಗೆ ಹೊಸ ಟೆಕ್ನಾಲಜಿ ತಲುಪಬೇಕು ಎಂದು ಬಹಳಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ.

ಅಂಥ ಯೋಜನೆಗಳಲ್ಲಿ ಸೂರ್ಯ ಘರ್ ಯೋಜನೆ (Surya Ghar Muft Yojana) ಕೂಡ ಒಂದು ಯೋಜನೆ ಆಗಿದೆ. ಪಿಎಮ್ ಮೋದಿ ಅವರು ಈ ಯೋಜನೆಯ ಬಗ್ಗೆ ತಿಳಿಸಿದ ನಂತರ, ಕೇವಲ 3 ತಿಂಗಳ ಅವಧಿಯಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.

Surya Ghar Muft Yojana Details, Get Solar Electricity Free

ಮಹಿಳೆಯರಿಗೆ 2000 ರೂಪಾಯಿ ಜೊತೆಗೆ ಇನ್ನೂ 1200 ರೂ. ಸಿಗುವ ಮತ್ತೊಂದು ಹೊಸ ಯೋಜನೆ

ಸೂರ್ಯ ಘರ್ ಯೋಜನೆ

ಈ ಯೋಜನೆಯ ಮೂಲಕ ನಿಮ್ಮ ಮನೆಗೆ ಸೋಲಾರ್ ರೂಫ್ ಟಾಪ್ ಪ್ಯಾನೆಲ್ ಅನ್ನು (Solar Panels) ಅಳವಡಿಸಲಾಗುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಯೋಜನೆ ಇದು ಎಂದರೆ ತಪ್ಪಲ್ಲ.

ಈ ಯೋಜನೆಯ ಅಡಿಯಲ್ಲಿ 1-2 ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸರ್ಕಾರದ ವತಿಯಿಂದ 30 ರಿಂದ 60 ಸಾವಿರದವರೆವು ಡಿಸ್ಕೌಂಟ್ ಸಿಗಲಿದೆ. 2-3 ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ₹78,000 ವರೆಗು ಸರ್ಕಾರದಿಂದ ಡಿಸ್ಕೌಂಟ್ ಸಿಗುತ್ತದೆ.

ಪಿಯುಸಿ ಓದುತ್ತಿರುವವರಿಗೆ ಸಿಗಲಿದೆ ₹10,000 ಸ್ಕಾಲರ್ಶಿಪ್! ವಿದ್ಯಾರ್ಥಿಗಳೆ ಇಂದೇ ಅರ್ಜಿ ಸಲ್ಲಿಸಿ

Surya Ghar Muft Yojanaರಾಜ್ಯದಲ್ಲಿ ಹೊಸ ಯೋಜನೆಗೆ ಜನಪ್ರಿಯತೆ

ನಮ್ಮ ರಾಜ್ಯದಲ್ಲಿ ಪಿಎಮ್ ಮೋದಿ ಅವರು ಸೂರ್ಯ ಘರ್ ಯೋಜನೆಗೆ ಚಾಲನೆ ನೀಡಿದ್ದಾರೆ. ಇತ್ತ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯನ್ನು (Gruha Jyothi Scheme) ಜಾರಿಗೆ ತಂದು ಉಚಿತ ವಿದ್ಯುತ್ (Free Electricity) ನೀಡುತ್ತಿದೆ. ಆದರೆ ಸಾಮಾನ್ಯ ವಿದ್ಯುತ್ ಬಳಕೆಗಿಂತ ಸೋಲಾರ್ ವಿದ್ಯುತ್ (Solar Electricity) ಬಳಕೆ ಮಾಡುವುದು ಉತ್ತಮ, ಪರಿಸರಕ್ಕೂ ಒಳ್ಳೆಯದು ಎನ್ನುವ ನಿಟ್ಟಿನಲ್ಲಿ ಈ ಯೋಜನೆಯ ಸೌಲಭ್ಯವನ್ನು ಎಲ್ಲರೂ ಪಡೆಯಬೇಕು ಎನ್ನುವ ಮಾತು ಕೇಳಿಬರುತ್ತಿದೆ.

ಒಂದೇ ಫೋನ್ ನಂಬರ್ ಎಷ್ಟು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಬಹುದು? ಇನ್ಮುಂದೆ ಹೊಸ ರೂಲ್ಸ್

ಖಾಸಗಿ ಮಾರಾಟಗಾರರ ಎಂಟ್ರಿ

ಹಾಗೆಯೇ ಈ ಯೋಜನೆಯನ್ನು ರಾಜ್ಯದ ಎಲ್ಲಾ ಜನರಿಗೆ ತಲುಪಿಸುವ ಯೋಜನೆ ಹೊಂದಿದ್ದಾರೆ ಪಿಎಮ್ ಮೋದಿ ಅವರು. ಸೂರ್ಯ ಘರ್ ಯೋಜನೆಗೆ ಮತ್ತೊಂದು ಹೆಸರು ಕೂಡ ಇದ್ದು, ಇದನ್ನು ಪ್ರಧಾನಮಂತ್ರಿ ಸೋಲಾರ್ ಯೋಜನೆ ಎಂದು ಕೂಡ ಹೇಳಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಹೆಚ್ಚು ಜನರು ಈ ಯೋಜನೆಯ ಸೌಲಭ್ಯ ಪಡೆಯಬೇಕು ಎಂದು ಖಾಸಗಿ ಮಾರಾಟಗಾರರು ಇದಕ್ಕಾಗಿ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ 229 ಖಾಸಗಿ ಮಾರಾಟಗಾರರು ಸೂರ್ಯ ಘರ್ ಯೋಜನೆಯಲ್ಲಿ ಬಂದಿದ್ದಾರೆ.

Solar electricity, Solar Panelನಮ್ಮ ರಾಜ್ಯದಲ್ಲಿ ಸೌರಶಕ್ತಿಯ ಬಳಕೆ ಜಾಸ್ತಿ ಆಗಬೇಕು ಎಂದು ಈ ಯೋಜನೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಕೂಡ ಮಾಡುತ್ತಿದೆ. ಸೋಲಾರ್ ವಿದ್ಯುತ್ ಬಳಕೆ ಮಾಡುವುದು ಸಾಮಾನ್ಯ ವಿದ್ಯುತ್ ಗಿಂತ ಹೆಚ್ಚು ಲಾಭದಾಯಕ, ಪರಿಸರ ಸ್ನೇಹಿ ಕೂಡ ಹೌದು. ಹಾಗೆಯೇ ಸರಿಯಾದ ಸಮಯಕ್ಕೆ ಬೇಕಾದಷ್ಟು ವಿದ್ಯುತ್ ಪೂರೈಕೆ ಮಾಡುವ ಶಕ್ತಿಯನ್ನು ಸಹ ಹೊಂದಿದೆ. ಈ ಎಲ್ಲಾ ಕಾರಣಗಳಿಂದ ಈ ಯೋಜನೆಯು ಮುಂದಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆಯುವುದು ಖಚಿತ ಆಗಿದೆ.

ಸ್ವಂತ ಉದ್ಯಮ ಶುರು ಮಾಡುವುದಕ್ಕೆ ಸಾಲ ಯೋಜನೆ! ಸರ್ಕಾರವೇ ನೀಡುತ್ತೆ ವ್ಯಾಪಾರ ಸಾಲ

Surya Ghar Muft Yojana Details, Get Solar Electricity Free