ರಾಜ್ಯದ ಮಹಿಳೆಯರು ಆರ್ಥಿಕವಾಗಿ ಸಬಲರಾಗಿರಬೇಕು ಎಂದು ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಪ್ರತಿ ತಿಂಗಳು ಮಹಿಳೆಯರ ಖಾತೆಗೆ (Bank Account) ₹2000 ರೂಪಾಯಿಗಳನ್ನು ಜಮೆ ಮಾಡಲಾಗುತ್ತಿದೆ.

ಆದರೆ ಇದೀಗ ಗೃಹಲಕ್ಷ್ಮಿ ಯೋಜನೆಯ ₹2000 ರೂಪಾಯಿಯ ಜೊತೆಗೆ ಮತ್ತೊಂದು ಯೋಜನೆಯ ಮೂಲಕ ಮಹಿಳೆಯರಿಗೆ ₹1200 ರೂಪಾಯಿ ಸಿಗಲಿದೆ. ಆರ್ಥಿಕವಾಗಿ ಕಷ್ಟದಲ್ಲಿರುವ ವೃದ್ಧ ಮಹಿಳೆಯರು ಮತ್ತು ಪುರುಷರು ಇಬ್ಬರಿಗೂ ಈ ಹಣ ಸಿಗಲಿದೆ..

Loan Scheme

ಪಿಯುಸಿ ಓದುತ್ತಿರುವವರಿಗೆ ಸಿಗಲಿದೆ ₹10,000 ಸ್ಕಾಲರ್ಶಿಪ್! ವಿದ್ಯಾರ್ಥಿಗಳೆ ಇಂದೇ ಅರ್ಜಿ ಸಲ್ಲಿಸಿ

ಸಂಧ್ಯಾ ಸುರಕ್ಷಾ ಯೋಜನೆ

ನಮ್ಮ ದೇಶದ ಹಿರಿಯ ಜೀವಿಗಳಿಗೆ ಸಹಾಯ ಆಗಲಿ ಎಂದು ಸಂಧ್ಯಾ ಸುರಕ್ಷಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದು 2007ರಲ್ಲಿ ಶುರುವಾದ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ವೃದ್ಧರಿಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶ ಹೊಂದಿದೆ ಸರ್ಕಾರ. ವೃದ್ಧರಿಗೆ ಪ್ರತಿ ತಿಂಗಳು ಪೆನ್ಶನ್ (Pension) ರೂಪದಲ್ಲಿ ಹಣ ಸಿಗಲಿದೆ. ಬಡತನದಲ್ಲಿರುವ ಹಲವು ಜನರಿಗೆ ಈ ಸೌಲಭ್ಯ ಸಿಗುತ್ತಿದೆ.

Pensionಏನೆಲ್ಲಾ ಸೌಲಭ್ಯ ಸಿಗಲಿದೆ?

ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಯಾವೆಲ್ಲಾ ಸೌಲಭ್ಯಗಳು ಸಿಗುತ್ತದೆ ಎಂದು ನೋಡುವುದಾದರೆ, ವೃದ್ಧರಿಗೆ ಪ್ರತಿ ತಿಂಗಳು ₹1200 ರೂಪಾಯಿ ಪೆನ್ಶನ್ ಸಿಗುತ್ತದೆ.. ಜೊತೆಗೆ ವೈದ್ಯಕೀಯ ಸೇವೆ, ಬಸ್ ಟಿಕೆಟ್ ದರದಲ್ಲಿ ರಿಯಾಯಿತಿ ಇದೆಲ್ಲವನ್ನು ಸಹ ಹಿರಿಯ ನಾಗರೀಕರು ಪಡೆದುಕೊಳ್ಳಬಹುದು. 65 ವರ್ಷ ಮೇಲ್ಪಟ್ಟವರು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ. ರೈತರು, ಕಾರ್ಮಿಕರು, ಹಾಗೂ ಇನ್ನಿತರ ಸಣ್ಣ ಕೆಲಸ ಮಾಡುವ ಬಡವರು ಈ ಯೋಜನೆಗೆ ಅರ್ಹರಾಗುತ್ತಾರೆ.

ಒಂದೇ ಫೋನ್ ನಂಬರ್ ಎಷ್ಟು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಬಹುದು? ಇನ್ಮುಂದೆ ಹೊಸ ರೂಲ್ಸ್

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

*ರೇಷನ್ ಕಾರ್ಡ್
*ಇನ್ಕಮ್ ಸರ್ಟಿಫಿಕೇಟ್
*ಏಜ್ ಪ್ರೂಫ್
*ವಾಸಸ್ಥಳ ದೃಢೀಕರಣ ಪತ್ರ
*ಎಲೆಕ್ಷನ್ ವೋಟರ್ ಐಡಿ
*ಬ್ಯಾಂಕ್ ಪಾಸ್ ಬುಕ್

ಸ್ವಂತ ಉದ್ಯಮ ಶುರು ಮಾಡುವುದಕ್ಕೆ ಸಾಲ ಯೋಜನೆ! ಸರ್ಕಾರವೇ ನೀಡುತ್ತೆ ವ್ಯಾಪಾರ ಸಾಲ

Pension Schemeಅರ್ಜಿ ಸಲ್ಲಿಸಲು ಅರ್ಹತೆ

ಅರ್ಜಿ ಹಾಕುವ ವ್ಯಕ್ತಿ ನಮ್ಮ ರಾಜ್ಯದವರಾಗಿದ್ದು ಅವರ ವಯಸ್ಸು 65 ವರ್ಷ ತುಂಬಿರಬೇಕು. ಹಾಗೆಯೇ ಗಂಡ ಹೆಂಡತಿಯ ವಾರ್ಷಕ ಆದಾಯ 20 ಸಾವಿರಕ್ಕಿಂತ ಕಡಿಮೆ ಇರಬೇಕು. ಇವರು ಬೇರೆ ಯಾವುದೇ ಸರ್ಕಾರದ ಯೋಜನೆ ಇಂದ ಅಥವಾ ಖಾಸಗಿ ಸಂಸ್ಥೆಗಳಿಂದ ಪೆನ್ಶನ್ (Pension) ಪಡೆಯುತ್ತಿರಬಾರದು. ಇದಲ್ಲವೂ ಅರ್ಹತೆಯ ಮಾನದಂಡ ಆಗಿದ್ದು, ವೃದ್ಧರು ಇದೆಲ್ಲವನ್ನು ನೋಡಿಕೊಂಡು ಅರ್ಜಿ ಸಲ್ಲಿಸಬೇಕು.

ಕೆನರಾ ಬ್ಯಾಂಕ್ ಅಕೌಂಟ್ ಇದ್ದು ನಿಮ್ಮ ಫಿಕ್ಸೆಡ್ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಅರ್ಜಿ ಸಲ್ಲಿಸುವುದು ಎಲ್ಲಿ?

ಈ ಯೋಜನೆಗೆ ಹಿರಿಯರು ಆಫ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ನಿಮ್ಮ ಹತ್ತಿರದ ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬೇಕು. ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲು ಸಹಾಯ ಆಗಲಿ ಎಂದು ಸಹಾಯವಾಣಿಗಳನ್ನು ಸಹ ತೆರೆಯಲಾಗಿದ್ದು, ಅವುಗಳ ಸಹಾಯವನ್ನು ಪಡೆಯಬಹುದು. ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಅಥವಾ ಪುರಸಭೆಯಲ್ಲಿ ಕೂಡ ಅರ್ಜಿ ಸಲ್ಲಿಸಬಹುದು.

Another new scheme where women get 1200 rupees