ಪಿಯುಸಿ ಓದುತ್ತಿರುವವರಿಗೆ ಸಿಗಲಿದೆ ₹10,000 ಸ್ಕಾಲರ್ಶಿಪ್! ವಿದ್ಯಾರ್ಥಿಗಳೆ ಇಂದೇ ಅರ್ಜಿ ಸಲ್ಲಿಸಿ
Education Scholarship : ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬಂದಿರುವ ಈ ಸ್ಕಾಲರ್ಶಿಪ್ ನ ಹೆಸರು ವಿದ್ಯಾಧನ್ ಸ್ಕಾಲರ್ಶಿಪ್. ಇದನ್ನು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ (Higher Education) ಸಹಾಯ ಆಗಲಿ ಎಂದು ನೀಡಲಾಗುತ್ತದೆ.
Education Scholarship : ರಾಜ್ಯದಲ್ಲಿ ಬಡತನದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಾಕಷ್ಟಿದ್ದಾರೆ. ಅವರಲ್ಲಿ ಹಲವರಿಗೆ ಹೆಚ್ಚು ಓದಿ ಒಳ್ಳೆಯ ಸ್ಥಾನಕ್ಕೆ ತಲುಪಬೇಕು ಎನ್ನುವ ಆಸೆ ಕೂಡ ಇದೆ. ಆದರೆ ಆರ್ಥಿಕ ಸಮಸ್ಯೆಗಳ ಕಾರಣ ಹಲವರಿಗೆ ಓದಲು ಸಾಧ್ಯ ಆಗುವುದಿಲ್ಲ.
ಅಂಥವರಿಗೆ ಸರ್ಕಾರವೇ ಸ್ಕಾಲರ್ಶಿಪ್ ಮೂಲಕ ಓದಲು ಸಹಾಯ ಮಾಡುತ್ತದೆ. ಇದೀಗ ಪಿಯುಸಿ ವಿದ್ಯಾರ್ಥಿಗಳಿಗೆ ಇಂಥದ್ದೇ ಒಂದು ಗುಡ್ ನ್ಯೂಸ್ ಇದ್ದು, ಈ ಸ್ಕಾಲರ್ಶಿಪ್ ಮೂಲಕ ವಿದ್ಯಾರ್ಥಿಗಳಿಗೆ ₹10,000 ರೂಪಾಯಿ ಸಿಗುತ್ತದೆ.
ಒಂದೇ ಫೋನ್ ನಂಬರ್ ಎಷ್ಟು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಬಹುದು? ಇನ್ಮುಂದೆ ಹೊಸ ರೂಲ್ಸ್
ಯಾವ ಸ್ಕಾಲರ್ಶಿಪ್ ಇದು?
ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬಂದಿರುವ ಈ ಸ್ಕಾಲರ್ಶಿಪ್ ನ ಹೆಸರು ವಿದ್ಯಾಧನ್ ಸ್ಕಾಲರ್ಶಿಪ್. ಇದನ್ನು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ (Higher Education) ಸಹಾಯ ಆಗಲಿ ಎಂದು ನೀಡಲಾಗುತ್ತದೆ. ಪಿಯುಸಿ ಓದುತ್ತಿರುವವರಿಗೆ ಈಗ ಈ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಿ, ಸಹಾಯ ಪಡೆಯುವ ಅವಕಾಶ ಬಂದಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ? ಅರ್ಹತೆ ಏನು? ಎಲ್ಲವನ್ನು ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ನೋಡಿ..
ವಿದ್ಯಾಧನ್ ಸ್ಕಾಲರ್ಶಿಪ್ ಅರ್ಹತೆ
*ಸರ್ಕಾರದ ಮಾನ್ಯತೆ ಪಡೆದಿರುವ ಕಾಲೇಜಿನಲ್ಲಿ ವಿದ್ಯಾರ್ಥಿಯು ಪ್ರಥಮ ಅಥವಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರಬೇಕು.
*ವಿದ್ಯಾರ್ಥಿಯು ಕರ್ನಾಟಕಕ್ಕೆ ಸೇರಿದವರೇ ಆಗಿರಬೇಕು.
*10ನೇ ತರಗತಿಯಲ್ಲಿ 90% ಗಿಂತ ಜಾಸ್ತಿ ಮಾರ್ಕ್ಸ್ ಪಡೆದಿರಬೇಕು
*ಒಂದು ವೇಳೆ ವಿದ್ಯಾರ್ಥಿ ವಿಕಲಚೇತನರಾದರೆ, 75% ಮಾರ್ಕ್ಸ್ ಬಂದಿರಬೇಕು
*ವಿದ್ಯಾರ್ಥಿಯ ಫ್ಯಾಮಿಲಿ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
ಸ್ವಂತ ಉದ್ಯಮ ಶುರು ಮಾಡುವುದಕ್ಕೆ ಸಾಲ ಯೋಜನೆ! ಸರ್ಕಾರವೇ ನೀಡುತ್ತೆ ವ್ಯಾಪಾರ ಸಾಲ
ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಎರಡು ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು 10ನೇ ತರಗತಿ ಮಾರ್ಕ್ಸ್ ಕಾರ್ಡ್ ಕೊಟ್ಟು ಈ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಬಹುದು. ಇವರು ನೀಡುವ ಎಲ್ಲಾ ಮಾಹಿತಿಗಳು ಸರಿ ಇದ್ದರೆ, ವಿದ್ಯಾರ್ಥಿಯ ಉನ್ನತ ಶಿಕ್ಷಣಕ್ಕೆ ₹10,000 ರೂಪಾಯಿ ಧನಸಹಾಯ ಸಿಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ..
ವಿದ್ಯಾರ್ಥಿ ವೇತನಕ್ಕೆ ಅಗತ್ಯವಿರುವ ದಾಖಲೆಗಳು
*ವಿದ್ಯಾರ್ಥಿಯ ಬ್ಯಾಂಕ್ ಅಕೌಂಟ್ ಡೀಟೇಲ್ಸ್
*ಆಧಾರ್ ಕಾರ್ಡ್
*ಇನ್ಕಮ್ ಸರ್ಟಿಫಿಕೇಟ್
*10ನೇ ತರಗತಿ ಮಾರ್ಕ್ಸ್ ಕಾರ್ಡ್
*ಒಂದು ವೇಳೆ ವಿಕಲಚೇತನ ವಿದ್ಯಾರ್ಥಿ ಆದರೆ, ಅಂಗವಿಕಲ ಪ್ರಮಾಣಪತ್ರ.
ಕೆನರಾ ಬ್ಯಾಂಕ್ ಅಕೌಂಟ್ ಇದ್ದು ನಿಮ್ಮ ಫಿಕ್ಸೆಡ್ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಈ ಯೋಜನೆಗೆ ಅರ್ಜಿ ಸಲ್ಲಿಸುವವರು, ಅಧಿಕೃತ ಲಿಂಕ್ ಗೆ ಭೇಟಿ ನೀಡಬೇಕು. https://www.vidyadhan.org/web/index.php ಇದು ಅಧಿಕೃತ ಲಿಂಕ್ ಆಗಿದ್ದು, ಅಪ್ಲಿಕೇಶನ್ ನಲ್ಲಿ ಕೇಳುವ ಎಲ್ಲ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬೇಕು. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮುಗಿಸಬೇಕು. ನೀವು ನೀಡಿರುವ ಎಲ್ಲಾ ಮಾಹಿತಿ ಸರಿ ಇದ್ದರೆ, ಸ್ಕಾಲರ್ಶಿಪ್ ಸಿಗುತ್ತದೆ.
Those studying PUC will get 10,000 Education scholarship, Apply Today