ಒಂದೇ ಫೋನ್ ನಂಬರ್ ಎಷ್ಟು ಬ್ಯಾಂಕ್ ಅಕೌಂಟ್ ಗೆ ಲಿಂಕ್ ಮಾಡಬಹುದು? ಇನ್ಮುಂದೆ ಹೊಸ ರೂಲ್ಸ್

ಒಂದು ವೇಳೆ ಬೇರೆ ಬ್ಯಾಂಕ್ ಇಂದ ಹೋಮ್ ಲೋನ್ (Home Loan) ಪಡೆದಿದ್ದರೆ ಅಲ್ಲಿಯೂ ಒಂದು ಅಕೌಂಟ್, ಹೀಗೆ ಒಬ್ಬ ವ್ಯಕ್ತಿಯ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಗಳಿರುತ್ತದೆ.

Bengaluru, Karnataka, India
Edited By: Satish Raj Goravigere

Bank Account : ಈಗ ಎಲ್ಲರ ಬಳಿ ಸ್ಮಾರ್ಟ್ ಫೋನ್ ಇದ್ದೇ ಇದೆ. ಹಾಗೆಯೇ ನಮ್ಮ ದೇಶದಲ್ಲಿ ಎಲ್ಲಾ ಥರದ ವ್ಯವಹಾರಗಳು ಕೂಡ ಡಿಜಿಟಲೈಸ್ ಆಗುತ್ತಿದೆ, ಹಾಗಾಗಿ ಮೊಬೈಲ್ ಎನ್ನುವುದು ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ ಎಂದರೆ ತಪ್ಪಲ್ಲ. ಈಗ ನಾವು ನಮ್ಮ ಫೋನ್ ನಂಬರ್ ಅನ್ನು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್ ಇದೆಲ್ಲದಕ್ಕೂ ಲಿಂಕ್ ಮಾಡಬೇಕಾಗುತ್ತದೆ. ಫೋನ್ ನಂಬರ್ ಲಿಂಕ್ (Mobile Number) ಮಾಡುವುದು ಕಡ್ಡಾಯವು ಆಗಿದೆ.

ಸ್ವಂತ ಉದ್ಯಮ ಶುರು ಮಾಡುವುದಕ್ಕೆ ಸಾಲ ಯೋಜನೆ! ಸರ್ಕಾರವೇ ನೀಡುತ್ತೆ ವ್ಯಾಪಾರ ಸಾಲ

Bank account

ಹಲವರ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್!

ಆದರೆ ಕೆಲವರು ಒಂದೇ ಫೋನ್ ನಂಬರ್ ಅನ್ನು ಹೆಚ್ಚು ಬ್ಯಾಂಕ್ ಖಾತೆಗಳಿಗೆ (Bank Account) ಲಿಂಕ್ ಮಾಡಿರುತ್ತಾರೆ. ಕೆಲವೊಮ್ಮೆ ಪರಿಸ್ಥಿತಿ ಕೂಡ ಹಾಗೆ ಇರುತ್ತದೆ, ಸಂಬಳ ಪಡೆಯುವುದೇ ಒಂದು ಬ್ಯಾಂಕ್ ಅಕೌಂಟ್ ಇಂದ, ಒಂದು ವೇಳೆ ಬೇರೆ ಬ್ಯಾಂಕ್ ಇಂದ ಹೋಮ್ ಲೋನ್ (Home Loan) ಪಡೆದಿದ್ದರೆ ಅಲ್ಲಿಯೂ ಒಂದು ಅಕೌಂಟ್, ಹೀಗೆ ಒಬ್ಬ ವ್ಯಕ್ತಿಯ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಗಳಿರುತ್ತದೆ. ಆ ವ್ಯಕ್ತಿ ಒಂದೇ ಫೋನ್ ನಂಬರ್ ಅನ್ನು ಲಿಂಕ್ ಮಾಡಿರುತ್ತಾನೆ.

Bank Account
Image Source: DNA

ಒಂದೇ ಫೋನ್ ನಂಬರ್ ಲಿಂಕ್

ಆದರೆ ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ RBI ಹೊಸ ಆದೇಶ ನೀಡಿದೆ. ಹೌದು, ಫೋನ್ ನಂಬರ್ ಅನ್ನು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಗಳಿಗೆ ಲಿಂಕ್ ಮಾಡಿರುವ ಎಲ್ಲರಿಗೂ RBI ಇಂದ ಒಂದು ಹೊಸ ಸಂದೇಶ ನೀಡಿದೆ. ಆ ಹೊಸ ರೂಲ್ಸ್ ಏನು?

ಕೆನರಾ ಬ್ಯಾಂಕ್ ಅಕೌಂಟ್ ಇದ್ದು ನಿಮ್ಮ ಫಿಕ್ಸೆಡ್ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

RBI ಹೊಸ ರೂಲ್ಸ್

ಇತ್ತೀಚಿನ ದಿನಗಳಲ್ಲಿ ನಮಗೆಲ್ಲ ಗೊತ್ತಿರುವ ಹಾಗೆ ಸೈಬರ್ ಫ್ರಾಡ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಿಮ್ಮ ಅಕೌಂಟ್ ಅನ್ನು ಆಕ್ಸೆಸ್ ಮಾಡಿ, ನಿಮ್ಮ ಹಣ ದೋಚುವ ಖದೀಮರು ಸಾಕಷ್ಟು ಜನರಿದ್ದಾರೆ. ಹಾಗಾಗಿ RBI ಜನರ ಸುರಕ್ಷತೆಯನ್ನು ಗಮನದಲ್ಲಿ ಇಟ್ಟುಕೊಂಡು ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಈಗಲೂ ಸಹ ಒಂದೇ ಫೋನ್ ನಂಬರ್ ಅನ್ನು ಹೆಚ್ಚಿನ ಬ್ಯಾಂಕ್ ಅಕೌಂಟ್ ಗಳಿಗೆ ಲಿಂಕ್ ಮಾಡಿರುವ ಎಲ್ಲರಿಗೂ ಹೊಸ ರೂಲ್ಸ್ ಒಂದನ್ನು ಜಾರಿಗೆ ತರಲಾಗಿದೆ.

Reserve Bank Of Indiaಈ ನಿಯಮ ಕಡ್ಡಾಯ

RBI ಈಗ ಜನರ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಹಾಗೆ ಹೊಸದೊಂದ್ ನಿಯಮವನ್ನು ಜಾರಿಗೆ ತಂದಿದೆ. ಇದು ಎಲ್ಲಾ ಜನರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಜಾರಿಗೆ ತಂದಿರುವ ನಿಯಮ ಆಗಿದ್ದು, ಎಲ್ಲರೂ ತಪ್ಪದೇ ಪಾಲಿಸಬೇಕು.

ಈಗ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಹಾಗೂ ಫೋನ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಆಗಿದೆ. ಕೆಲವೊಮ್ಮೆ ಹೆಚ್ಚು ಬ್ಯಾಂಕ್ ಗಳಿಗೆ ಒಂದೇ ಫೋನ್ ನಂಬರ್ ಲಿಂಕ್ ಮಾಡಿರುತ್ತೇವೆ.. ಹಾಗಿದ್ದಾಗ ಈ ಒಂದು ನಿಯಮವನ್ನು ನೀವು ಪಾಲಿಸಬೇಕು..

ಮಹಿಳೆಯರ ಸ್ವಂತ ವ್ಯಾಪಾರಕ್ಕೆ ಸಿಗಲಿದೆ 5 ಲಕ್ಷ ಸಾಲ! ಬಂಪರ್ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

ಒಂದೇ ಫೋನ್ ನಂಬರ್ ಅನ್ನು ಹೆಚ್ಚು ಬ್ಯಾಂಕ್ ಅಕೌಂಟ್ ಗೆ ಕೊಡುವುದು ತಪ್ಪಲ್ಲ. ಆದರೆ ಆ ರೀತಿ ಆದಾಗ KYC ಮಾಡಿಸುವುದು ಕಡ್ಡಾಯ ಆಗಿದೆ. ಒಂದು ವೇಳೆ ನಿಮ್ಮ ಫೋನ್ ನಂಬರ್ ಅನ್ನು ಹೆಚ್ಚು ಬ್ಯಾಂಕ್ ಅಕೌಂಟ್ ಗಳಿಗೆ ಲಿಂಕ್ ಮಾಡಿದ್ದರೆ, ಆಗ ನಿಮ್ಮ kyc ಅಪ್ಡೇಟ್ ಮಾಡಬೇಕಾಗುತ್ತದೆ. ಜಾಯಿಂಟ್ ಅಕೌಂಟ್ ಓಪನ್ ಮಾಡುವಾಗ, kyc ಫಾರ್ಮ್ ನಲ್ಲಿ ಇನ್ನೊಂದು ಫೋನ್ ನಂಬರ್ ಅಪ್ಡೇಟ್ ಮಾಡಬೇಕು ಎಂದು ತಿಳಿಸಬೇಕೆಂದು RBI ಆದೇಶ ನೀಡಿದೆ.

How many bank accounts can a single phone number be linked to